Maruti: ಫುಲ್ ಡಿಮ್ಯಾಂಡ್.. ಅಗ್ಗದ ಮಾರುತಿ ಕಾರುಗಳಿಗೆ ಭಾರತೀಯರೊಂದಿಗೆ ಮನಸೋತ ವಿದೇಶಿಗರು!

ಭಾರತದ ನಂಬರ್ 1 ಕಾರು ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ ಇಂಡಿಯಾ (Maruti Suzuki India) ಗುರುತಿಸಿಕೊಂಡಿದೆ. ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ಹಲವು ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದ್ದು, ಗ್ರಾಹಕರು ಕೂಡ ತಾಮುಂದು - ನಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸದ್ಯ, ಮಾರುತಿ ಸುಜುಕಿಯು 2025ರ ಹಣಕಾಸು ವರ್ಷದಲ್ಲಿ ಭರ್ಜರಿಯಾಗಿ ಕಾರುಗಳನ್ನು ಮಾರಾಟ ಮಾಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ದೇಶೀಯ ಮಾರುಕಟ್ಟೆಯಲ್ಲಿ 2025ರ ಹಣಕಾಸು ವರ್ಷದಲ್ಲಿ (2024-25 - FY25) ಮಾರುತಿ ಸುಜುಕಿ ಇಂಡಿಯಾ, ಸರಿ ಸುಮಾರು 17,60,767 ಯುನಿಟ್ ಪ್ರಯಾಣಿಕ ವಾಹನಗಳು ಅಂದರೆ ಕಾರುಗಳನ್ನು ಮಾರಾಟ ಮಾಡಿದೆ. ಅದೇ 2024ರ ಹಣಕಾಸು ವರ್ಷದಲ್ಲಿ (2023-24 - FY24) ಮಾರಾಟಗೊಳಿಸಿದ 17,59,881 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ ಶೇಕಡ 0.05% ಬೆಳವಣಿಗೆಯಾಗಿದೆ.

Maruti Suzuki Achieved Highest Domestic Car Sales And Exports In FY25 Details

ಮಾರುತಿ ಸುಜುಕಿಯು ನಾನಾ ದೇಶಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳನ್ನು (ವಿಶೇಷವಾಗಿ ಕಾರುಗಳು) ರಫ್ತು ಮಾಡಿದೆ. 2025ರ ಹಣಕಾಸು ವರ್ಷದಲ್ಲಿ 3,32,585 ಯುನಿಟ್‌ಗಳನ್ನು ರವಾನಿಸಿದೆ. 2024 ಹಣಕಾಸು ವರ್ಷದಲ್ಲಿ 2,83,067 ಯುನಿಟ್‌ಗಳನ್ನು ರಫ್ತು ಮಾಡಿತ್ತು. ಅದಕ್ಕೆ ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ ಶೇಕಡ 17.49% ಪ್ರಗತಿಯಾಗಿದೆ.

ದೇಶೀಯವಾಗಿ ಮಾರುತಿ ಸುಜುಕಿಯು ನೆಕ್ಸಾ ಹಾಗೂ ಅರೆನಾ ಡೀಲರ್‌ಶಿಪ್‌ ಮೂಲಕ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ನೆಕ್ಸಾ ಶೋರೂಂನಲ್ಲಿ ಇಗ್ನಿಸ್, ಬಲೆನೊ, ಸಿಯಾಜ್, ಫ್ರಾಂಕ್ಸ್, ಗ್ರ್ಯಾಂಡ್ ವಿಟಾರಾ, ಜಿಮ್ನಿ, ಎಕ್ಸ್‌ಎಲ್6 ಮತ್ತು ಇನ್ವಿಕ್ಟೊ ಕಾರುಗಳು ಗ್ರಾಹಕರ ಖರೀದಿ ಲಭ್ಯವಿವೆ. ಇವುಗಳು ಪ್ರೀಮಿಯಂ ಮಾಡೆಲ್‌ಗಳಾಗಿವೆ.

Maruti Suzuki Achieved Highest Domestic Car Sales And Exports In FY25 Details

ಅರೆನಾ ಶೋರೂಂನಲ್ಲಿ ಮಾರುತಿ ಸುಜುಕಿಯ ಆಲ್ಟೊ ಕೆ10, ಎಸ್-ಪ್ರೆಸ್ಸೊ, ಸೆಲೆರಿಯೊ, ಇಕೋ ವ್ಯಾನ್, ವ್ಯಾಗನ್ಆರ್, ಸ್ವಿಫ್ಟ್, ಡಿಜೈರ್, ಬ್ರೆಝಾ ಹಾಗೂ ಎರ್ಟಿಗಾ ಕಾರುಗಳನ್ನು ಖರೀದಿದಾರರು ಕೊಂಡುಕೊಳ್ಳಬಹುದು. ಇವುಗಳು ಮಧ್ಯಮ ವರ್ಗದ ಗ್ರಾಹಕರಿಗೆ ಹೇಳಿ ಮಾಡಿಸಿದ ರೀತಿಯಲ್ಲಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತವೆ.

ಮೊದಲ ಎಲೆಕ್ಟ್ರಿಕ್ ಕಾರು ಬಿಡುಗಡೆಗೂ ಮಾರುತಿ ಸುಜುಕಿ ಸಿದ್ಧತೆ...

ಎಲ್ಲವು ಅಂದುಕೊಂಡಂತೆ ನಡೆದರೆ ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರು ಇ-ವಿಟಾರಾ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದೊಂದು ಎಲೆಕ್ಟ್ರಿಕ್ ಎಸ್‌ಯುವಿಯಾಗಿದ್ದು, ರೂ.17 ಲಕ್ಷ (ಎಕ್ಸ್-ಶೋರೂಂ) ದರದಲ್ಲಿ ಖರೀದಿಗೆ ದೊರೆಯುವ ನಿರೀಕ್ಷೆಯಿದೆ. 5 ಆಸನಗಳನ್ನು ಹೊಂದಿದ್ದು, ಡೆಲ್ಟಾ, ಜಿಟಾ ಹಾಗೂ ಆಲ್ಫಾ ಎಂಬ 3 ರೂಪಾಂತರಗಳನ್ನು (ವೇರಿಯೆಂಟ್) ಒಳಗೊಂಡಿದೆ.

Maruti Suzuki Achieved Highest Domestic Car Sales And Exports In FY25 Details

ಈ ಮಾರುತಿ ಸುಜುಕಿ ಇ-ವಿಟಾರಾ ಎಸ್‌ಯುವಿ 49 ಕೆಡಬ್ಲ್ಯೂಹೆಚ್ ಮತ್ತು 61 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಪಡೆದಿದ್ದು, ಭರ್ತಿ ಚಾರ್ಜ್‌ನಲ್ಲಿ 500 ಕಿ.ಮೀ ಕ್ರಮಿಸುವ ಸಾಧ್ಯತೆಯಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋ ಎಸಿ, ಆಂಬಿಯೆಂಟ್ ಲೈಟಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಹಾಗೂ ಪನೋರಮಿಕ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 7-ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, April 2, 2025, 11:39 [IST]
English summary
Maruti suzuki achieved highest domestic car sales and exports in fy25 details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+