ಕಾಮನ್ ಪೀಪಲ್ ಜೈ ಅಂದ್ರು.. 34 Km ಮೈಲೇಜ್, 4 ಲಕ್ಷದ ಮಾರುತಿ ಆಲ್ಟೊಗೆ ಎಲ್ಲಿಲ್ಲದ ಬೇಡಿಕೆ.. ಕಾಯುವಿಕೆ ಅವಧಿ ಎಷ್ಟಿದೆ?

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10), ಮಧ್ಯಮ ವರ್ಗದ ಜನರ ನೆಚ್ಚಿನ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ಉತ್ತಮವಾದ ವಿನ್ಯಾಸ ಹಾಗೂ ಹತ್ತಾರು ಆಕರ್ಷಕವಾದ ವೈಶಿಷ್ಟ್ಯಗಳನ್ನು ಹೊಂದಿದ್ದು, ದಶಕಗಳಿಂದಲೂ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಇದು ಉತ್ತಮವಾದ ಕಾರ್ಯಕ್ಷಮತೆಗೂ ಹೆಸರುವಾಸಿಯಾಗಿದೆ. ಸದ್ಯ, ದೇಶದ ವಿವಿಧ ನಗರಗಳಲ್ಲಿ ಈ ಆಗಸ್ಟ್ ತಿಂಗಳು 'ಆಲ್ಟೊ ಕೆ10' ಹೊಂದಿರುವ ಕಾಯುವಿಕೆ ಅವಧಿ (Waiting period) ಕುರಿತಂತೆ 'ಕಾರ್‌ದೆಕೋ' ವರದಿ ಪ್ರಕಟಿಸಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ನವ ದೆಹಲಿ, ಬೆಂಗಳೂರು, ಮುಂಬೈ, ಜೈಪುರ, ಲಕ್ನೋ, ಕೊಲ್ಕತ್ತಾ, ಚಂಡೀಗಢ, ಫರಿದಾಬಾದ್ ಹಾಗೂ ನೋಯ್ಡಾದಲ್ಲಿ ಹೊಸ 'ಮಾರುತಿ ಸುಜುಕಿ ಆಲ್ಟೊ ಕೆ10' ಕಾರನ್ನು 1 ತಿಂಗಳ ಅವಧಿಯಲ್ಲಿ ವಿತರಣೆ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಹೈದರಾಬಾದ್, ಇಂದೋರ್ ಮತ್ತು ಕೊಯಮತ್ತೂರಿನಲ್ಲಿ 1.5 ತಿಂಗಳಲ್ಲಿ ಗ್ರಾಹಕರಿಗೆ ತಲುಪಿಸಲಾಗುತ್ತದೆ.

Maruti Suzuki Alto K10 August 2025 Waiting Period Revealed Details

ಪುಣೆ, ಗಾಜಿಯಾಬಾದ್, ಚೆನ್ನೈ, ಅಹಮದಾಬಾದ್ ಹಾಗೂ ಗುರುಗ್ರಾಮದಲ್ಲಿ ಇದೇ 'ಆಲ್ಟೊ ಕೆ10' ಹ್ಯಾಚ್‌ಬ್ಯಾಕ್ 2 ತಿಂಗಳ ಕಾಯುವಿಕೆ ಅವಧಿಯನ್ನು ಹೊಂದಿದೆ. ಥಾಣೆ ಮತ್ತು ಸೂರತ್ ನಗರಗಳಲ್ಲಿ ಈ ಕಾರನ್ನು ತಕ್ಷಣ ಬೇಕಾದರೂ ಮನೆಗೆ ತರಲು ಸಾಧ್ಯವಾಗಲಿದೆ.

ಮಾರುತಿ ಸುಜುಕಿ ಆಲ್ಟೊ ಕೆ10 ವಿಶೇಷತೆಗಳೇನು:

ಇದೊಂದು ಪುಟ್ಟ ಹ್ಯಾಚ್‌ಬ್ಯಾಕ್ ಆಗಿದೆ. ಸ್ಪರ್ಧಾತ್ಮಕ ಬೆಲೆಯಲ್ಲಿಯೂ ದೊರೆಯಲಿದ್ದು, ಮಧ್ಯಮ ವರ್ಗದ ಗ್ರಾಹಕರು ಸುಲಭವಾಗಿ ಕೊಂಡುಕೊಳ್ಳಬಹುದು. ಅದಕ್ಕೆ ತಕ್ಕಂತೆ ರೂ.4.23 ಲಕ್ಷದಿಂದ ರೂ.6.21 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಎಲ್ಎಕ್ಸ್ಐ, ವಿಎಕ್ಸ್ಐ ಹಾಗೂ ವಿಎಕ್ಸ್ಐ ಪ್ಲಸ್ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.

Maruti Suzuki Alto K10 August 2025 Waiting Period Revealed Details

ಈ ಕಾರು ಹೊರಭಾಗದಲ್ಲಿ ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಒಳ್ಳೆಯ ಹೆಡ್‌ಲೈಟ್‌ಗಳು ಹಾಗೂ ಡಿಆರ್‌ಎಲ್‌ಗಳನ್ನು ಪಡೆದಿದೆ. 3530 ಎಂಎಂ ಉದ್ದ, 1490 ಅಗಲ ಮತ್ತು 1520 ಎತ್ತರ ಕೂಡ ಇದೆ. 167 ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2380 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. 741 ಕೆಜಿ ತೂಕವು ಇದೆ.

ನೂತನ ಆಲ್ಟೊ 5 ಆಸನಗಳನ್ನು ಒಳಗೊಂಡಿದೆ. ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು 214 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ. ಮೆಟಾಲಿಕ್ ಸಿಜ್ಲಿಂಗ್ ರೆಡ್, ಮೆಟಾಲಿಕ್ ಸಿಲ್ಕಿ ಸಿಲ್ವರ್, ಮೆಟಾಲಿಕ್ ಗ್ರಾನೈಟ್ ಗ್ರೇ, ಮೆಟಾಲಿಕ್ ಸ್ಪೀಡಿ ಬ್ಲೂ & ಪ್ರೀಮಿಯಂ ಅರ್ಥ್ ಗೋಲ್ಡ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

Maruti Suzuki Alto K10 August 2025 Waiting Period Revealed Details

ಇದು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ ಪಡೆದಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ & 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿದೆ. 24.90 ರಿಂದ 33.85 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 27 ಲೀಟರ್‌ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‍ನ್ನು ಒಳಗೊಂಡಿದೆ.

ಈ ಕಾರು ಕ್ಯಾಬಿನ್ ವಿನ್ಯಾಸವು ಚೆನ್ನಾಗಿದೆ. 7-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಬ್ಲೂಟೂತ್ ಕನೆಕ್ಟಿವಿಟಿ, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕೀಲೆಸ್ ಎಂಟ್ರಿ, 4 ಸ್ಪೀಕರ್‌ ಮ್ಯೂಸಿಕ್ ಸಿಸ್ಟಮ್, ಸೆಂಟ್ರಲ್ ಲಾಕಿಂಗ್, ಪವರ್ ಸ್ಟೀರಿಂಗ್, ಅಡ್ಜಸ್ಟೇಬಲ್ ಹೆಡ್‌ರೆಸ್ಟ್‌ಗಳು ಹಾಗೂ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಹೊಸ ಆಲ್ಟೊ ಕೆ10 ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ರೇರ್ ಡೋರ್ ಚೈಲ್ಡ್ ಲಾಕ್, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು ಹಾಗೂ 3-ಪಾಯಿಂಟ್ ಸೀಟ್ ಬೆಲ್ಟ್‌ಗಳನ್ನು ಪಡೆದಿದೆ.

Article Published On: Friday, August 8, 2025, 13:43 [IST]
English summary
Maruti suzuki alto k10 august 2025 waiting period revealed details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+