Maruti Suzuki: ಕಳಪೆ ಗುಣಮಟ್ಟದ ಕಾರೆಂದು ಟೀಕಿಸಿದ್ದವರಿಗೆ ಸರಿಯಾಗಿ ಉತ್ತರ ಕೊಟ್ಟ ಮಾರುತಿ!

ಕೊನೆಗೂ ಮಾರುತಿ ಸುಜುಕಿಯ ಸ್ಟೈಲಿಷ್ ಹ್ಯಾಚ್‌ಬ್ಯಾಕ್ 'ಬಲೆನೊ' ಸುರಕ್ಷತೆಯ ಬಗ್ಗೆ ಹಲವರಿಗಿದ್ದ ಗೊಂದಲಗಳನ್ನು ಕಂಪನಿ ತೊಡೆದುಹಾಕಿದೆ. ಕಳಪೆ ಗುಣಮಟ್ಟದ ಕಾರು ಎಂದವರ ಬಾಯನ್ನು ಮುಚ್ಚಿಸಿ, ಈ ಕಾರು ಸುರಕ್ಷಿತವಾಗಿದೆ ಎಂದು ಕಂಪನಿ ಸಾಭೀತುಪಡಿಸಿದೆ. ಕಳೆದ ಹಲವು ವರ್ಷಗಳಿಂದ ಮಾರುತಿ ಸುಜುಕಿ ಬಲೆನೊ (Maruti Suzuki Baleno) ಸುರಕ್ಷತೆಯನ್ನು ಪರೀಕ್ಷೆ ಮಾಡಲು ಹಿಂಜರಿಯುತ್ತಿದ್ದ ಮಾರುತಿ ಸುಜುಕಿ, ಕೊನೆಗೂ BNCAP (ಭಾರತ್ ಹೊಸ ಕಾರು ಮೌಲ್ಯಮಾಪನ ಕಾರ್ಯಕ್ರಮ) ನಲ್ಲಿ ಪರೀಕ್ಷಿಸಿ ಎಲ್ಲರನ್ನು ಅಚ್ಚರಿಗೊಳಿಸುವ ಸುರಕ್ಷತಾ ರೇಟಿಂಗ್ ಪಡೆದುಕೊಂಡು ಹೊರಬಂದಿದೆ.

ಭಾರತ್ NCAP ಕ್ರ್ಯಾಶ್ ಪರೀಕ್ಷೆಗಳಲ್ಲಿ ಮಾರುತಿ ಬಲೆನೊ - 2 ಏರ್‌ಬ್ಯಾಗ್‌ಗಳೊಂದಿಗೆ ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ (AOP) 4 - ಸ್ಟಾರ್ ಮತ್ತು ಮಕ್ಕಳ ಪ್ರಯಾಣಿಕರ ರಕ್ಷಣೆಯಲ್ಲಿ (COP) 3 - ಸ್ಟಾರ್ ಅಂಕಗಳನ್ನು ಗಳಿಸಿದೆ. ಮಾರುತಿ ಕಾರುಗಳು ಗುಣಮಟ್ಟದಲ್ಲಿ ಹಿಂದುಳಿದಿವೆ ಎಂದು ಮೊದಲಿನಿಂದ ಟೀಕಿಸುತ್ತಿದ್ದವರನ್ನು ಈ ಪರೀಕ್ಷೆಯ ಮೂಲಕ ಕಂಪನಿ ಅಚ್ಚರಿಗೊಳಿಸಿದೆ.

maruti-suzuki-baleno-earned-4-star-rating-in-bncap

ಮಾರುತಿ ಬಲೆನೊ ಕಾರು ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗಲು ಅದರ ಕೈಗೆಟುಕುವ ಬೆಲೆ ಹಾಗೂ ಮೈಲೇಜ್ ಕಾರಣವಾಗಿದೆ. ಇದೀಗ ಸೇಫ್ಟಿ ಕೂಡ ಉತ್ತಮವಾಗಿದ್ದು, ಮಾರಾಟದಲ್ಲಿ ಏರಿಕೆ ಕಾಣುವ ಸಾರ್ಧಯತೆ ಇದೆ. ಈ ಕಾರಿಗೆ ಮಾರುಕಟ್ಟೆಯಲ್ಲಿ ಪ್ರಮುಖ ಪ್ರತಿಸ್ಪರ್ಧಿಗಳಾಗಿ ಹ್ಯುಂಡೈ ಐ20, ಟಾಟಾ ಆಲ್ಟ್ರೋಜ್, ಟೊಯೊಟಾ ಗ್ಲಾಂಝಾ ಮತ್ತು ಸಿಟ್ರೋನ್ ಸಿ3 ಕಾರುಗಳು ಪೈಪೋಟಿ ನೀಡುತ್ತವೆ.

ಬಲೆನೊ ಸುರಕ್ಷತಾ ಫೀಚರ್ಸ್: ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಆರು ಏರ್‌ಬ್ಯಾಗ್‌ಗಳು, ಹಿಲ್-ಹೋಲ್ಡ್ ಅಸಿಸ್ಟ್, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾ, ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್ ಬೆಲ್ಟ್ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್ ಪಿ), ಐಎಸ್ ಒಫಿಕ್ಸ್ ಆಂಕೋರೇಜ್‌ಗನ್ನು ಒಳಗೊಂಡಿದೆ.

maruti-suzuki-baleno-earned-4-star-rating-in-bncap

ಭಾರತದಲ್ಲಿ ಬಲೆನೊ ಬೇಸ್‌ ವೇರಿಯೆಂಟ್ ರೂ.6.70 ಲಕ್ಷ ಹಾಗೂ ಟಾಪ್ ವೇರಿಯೆಂಟ್ ರೂ.9.92 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಬಲೆನೊ ಸಿಗ್ಮಾ, ಡೆಲ್ಟಾ, ಝೀಟಾ ಮತ್ತು ಆಲ್ಫಾ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಹಾಗೆಯೇ ಬಲೆನೋ ನಿಮಗೆ ಸಿಎನ್‌ಜಿ ಆಯ್ಕೆಯಲ್ಲೂ ಖರೀದಿಗೆ ಸಿಗುತ್ತದೆ.

ಮಾರುತಿ ಸುಜುಕಿ ಬಲೆನೊ 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 90 ಪಿಎಸ್ ಪವರ್ ಹಾಗೂ 113 ಎನ್ಎಂ ಟಾರ್ಕ್ ಹೊರಹಾಕುತ್ತದೆ. ಅದೇ ಎಂಜಿನ್ ಸಿಎನ್‌ಜಿ ಆವೃತ್ತಿಯು 77.5 ಪಿಎಸ್ ಪವರ್ ಮತ್ತು 98.5 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಪೆಟ್ರೋಲ್ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಎಂಟಿಯೊಂದಿಗೆ ಲಭ್ಯವಿದೆ. ಸಿಎನ್‌ಜಿ ಕೇವಲ 5-ಸ್ಪೀಡ್ ಮ್ಯಾನುವಲ್ ನೊಂದಿಗೆ ಮಾತ್ರ ಲಭ್ಯವಿದೆ.

maruti-suzuki-baleno-earned-4-star-rating-in-bncap

ಮಾರುತಿ ಸುಜುಕಿ ಬಲೆನೋ 1.2 - ಲೀಟರ್ ಸಿಎನ್‌ಜಿ ಮ್ಯಾನುವಲ್ ಕಾರು ಒಂದು ಕೆ.ಜಿ ಸಿಎನ್‌ಜಿನಲ್ಲಿ 30 ಕಿ.ಮೀ ಮೈಲೇಜ್, 1.2 - ಲೀಟರ್ ಆಟೋಮ್ಯಾಟಿಕ್ ಕಾರಿನಲ್ಲಿ 22.94 ಕಿ.ಮೀ. ಮೈಲೇಜ್ ಹಾಗೂ 1.2 - ಲೀಟರ್ ಮ್ಯಾನುವಲ್ ಕಾರಿನಲ್ಲಿ 22.35 ಕಿ.ಮೀ. ಮೈಲೇಜ್ ನೀಡುವುದಾಗಿ ಕಂಪನಿ ಹೇಳಿದೆ.

ಬಲೆನೊದಲ್ಲಿ ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಿರುವ 9 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ, ನಾಲ್ಕು ಸ್ಪೀಕರ್‌ಗಳು ಮತ್ತು ಎರಡು ಟ್ವೀಟರ್‌ಗಳನ್ನು ಹೊಂದಿರುವ ಅರ್ಕಾಮಿಸ್-ಟ್ಯೂನ್ಡ್ ಸೌಂಡ್ ಸಿಸ್ಟಮ್, ಹೆಡ್ಸ್-ಅಪ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಪುಶ್-ಬಟನ್ ಸ್ಟಾರ್ಟ್ / ಸ್ಟಾಪ್ ಮತ್ತು ಕೀಲೆಸ್ ಎಂಟ್ರಿ ಪ್ರಮುಖ ವೈಶಿಷ್ಟ್ಯಗಳಾಗಿವೆ.

Article Published On: Thursday, June 12, 2025, 13:41 [IST]
English summary
Maruti suzuki baleno earned 4 star rating in bncap
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+