Waiting Period: 6.66 ಲಕ್ಷ ಬೆಲೆ.. ಈ ಜನಪ್ರಿಯ ಕಾರನ್ನು ತಕ್ಷಣ ಮನೆಗೆ ತರಬಹುದು.. ಇವುಗಳಿಗಾಗಿ ಸ್ವಲ್ಪ ಕಾಯಲೇಬೇಕು!

ಭಾರತದ ಕಾರು ಮಾರುಕಟ್ಟೆಯಲ್ಲಿ ಎಸ್‌ಯುವಿಗಳು ದೊಡ್ಡಮಟ್ಟದ ಜನಪ್ರಿಯತೆ ಗಳಿಸಿವೆ. ಅವುಗಳಿಗೆ ಸವಾಲೆಸೆಯುವ ರೀತಿಯಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳು ಕೂಡ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಮಾರುತಿ ಸುಜುಕಿ ಬಲೆನೊ (Maruti Suzuki Baleno), ಟಾಟಾ ಆಲ್ಟ್ರೋಜ್ (Tata Altroz) ಹಾಗೂ ಟೊಯೊಟಾ ಗ್ಲಾನ್ಜಾ (Toyota Glanza) ಮಾಡೆಲ್‌ಗಳು ಅತ್ಯುತ್ತಮ ಹ್ಯಾಚ್‌ಬ್ಯಾಕ್‌ಗಳಾಗಿ ಹೊರಹೊಮ್ಮಿವೆ. ಇವುಗಳು ಈ ಜನವರಿಯಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಒಂದಷ್ಟು ಕಾಯುವಿಕೆ ಅವಧಿಯನ್ನು (Waiting Period) ಹೊಂದಿವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಮಾರುತಿ ಸುಜುಕಿ ಬಲೆನೊ: ಇದೊಂದು ಜನಪ್ರಿಯ ಹ್ಯಾಚ್‌ಬ್ಯಾಕ್‌ ಆಗಿದ್ದು, ಬೆಂಗಳೂರಿನಲ್ಲಿ ಗ್ರಾಹಕರು ಈ ಕಾರನ್ನು ತಕ್ಷಣ ಮನೆಗೆ ತರಬಹುದು. ಆದರೆ, ನವದೆಹಲಿಯಲ್ಲಿ 15 ದಿನದಿಂದ 1 ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿದೆ. ಚಂಡೀಗಢದಲ್ಲಿ 1 ವಾರದಲ್ಲಿ ವಿತರಣೆಯಾದರೆ, ಪಾಟ್ನಾದಲ್ಲಿ 1 ತಿಂಗಳು ಹಾಗೂ ಇಂದೋರ್‌ನಲ್ಲಿ 1 ರಿಂದ 1.5 ತಿಂಗಳೊಳಗೆ ಡೆಲಿವರಿಯಾಗುತ್ತದೆ.

Maruti Suzuki Baleno Tata Altroz And Toyota Glanza January 2025 Waiting Period Reveled

ನೂತನ ಮಾರುತಿ ಬಲೆನೊ ಹ್ಯಾಚ್‌ಬ್ಯಾಕ್‌, ರೂ.6.66 ಲಕ್ಷದಿಂದ ರೂ.9.83 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. 1.2-ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಆಯ್ಕೆಯನ್ನು ಪಡೆದಿದ್ದು, 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 22.35 ರಿಂದ 30.61 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ಈ ಬಲೆನೊ ಕಾರಿನಲ್ಲಿ 5 ಮಂದಿ ಸುಲಭವಾಗಿ ಓಡಾಟ ನಡೆಸಬಹುದು. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಮತ್ತು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಅನ್ನು ಹೊಂದಿದೆ.

Maruti Suzuki Baleno Tata Altroz And Toyota Glanza January 2025 Waiting Period Reveled

ಟಾಟಾ ಆಲ್ಟ್ರೋಜ್: ಇದು ಸಹ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಎಂದೇ ಹೆಸರುವಾಸಿಯಾಗಿದೆ. ಬೆಂಗಳೂರಿನಲ್ಲಿ 15 ದಿನದಿಂದ 1 ತಿಂಗಳು ಕಾಯುವಿಕೆ ಅವಧಿಯನ್ನು ಒಳಗೊಂಡಿದೆ. ಈ ಕಾರು ನವದೆಹಲಿಯಲ್ಲಿ 1.5 ತಿಂಗಳು, ಮುಂಬೈನಲ್ಲಿ 1 ತಿಂಗಳು, ಕೊಯಮತ್ತೂರಿನಲ್ಲಿ 2 ತಿಂಗಳು ಹಾಗೂ ನೋಯ್ಡಾದಲ್ಲಿ 1 ರಿಂದ 2 ತಿಂಗಳೊಳಗೆ ಗ್ರಾಹಕರ ಮನೆ ಸೇರಲಿದೆ.

ನೂತನ ಟಾಟಾ ಆಲ್ಟ್ರೋಜ್ ಕಾರು, ರೂ.6.65 ಲಕ್ಷದಿಂದ ರೂ.11.30 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿದೆ. ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್‌ಜಿ ಎಂಜಿನ್‌ನ್ನು ಪಡೆದಿದ್ದು, 19.33 ರಿಂದ 26.20 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇದರಲ್ಲಿಯೂ 5 ಜನರು ಓಡಾಟ ನಡೆಸಬಹುದು. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.

Maruti Suzuki Baleno Tata Altroz And Toyota Glanza January 2025 Waiting Period Reveled

ಟೊಯೊಟಾ ಗ್ಲಾನ್ಜಾ: ಇದೊಂದು ಪ್ರಖ್ಯಾತ ಹ್ಯಾಚ್‌ಬ್ಯಾಕ್‌ ಆಗಿದ್ದು, ಬೆಂಗಳೂರಿನಲ್ಲಿ ಕೊಂಚ ಹೆಚ್ಚಿನ ಕಾಯುವಿಕೆ ಅವಧಿಯನ್ನು ಹೊಂದಿದೆ. ಈ ಕಾರು ಬುಕ್ಕಿಂಗ್ ಮಾಡಿದ 2 ತಿಂಗಳೊಳಗೆ ಖರೀದಿದಾರರ ಕೈಸೇರಲಿದೆ. ಅದೇ ನವದೆಹಲಿಯಲ್ಲಿ 3 ತಿಂಗಳು, ಮುಂಬೈನಲ್ಲಿ 1 ತಿಂಗಳು, ಹೈದರಾಬಾದ್‌ನಲ್ಲಿ 2 ತಿಂಗಳು ಮತ್ತು ಕೊಯಮತ್ತೂರಿನಲ್ಲಿ 2 ರಿಂದ 3 ತಿಂಗಳು ಕಾಯುವಿಕೆ ಅವಧಿಯನ್ನು ಒಳಗೊಂಡಿದೆ.

ಹೊಸ ಟೊಯೊಟಾ ಗ್ಲಾನ್ಜಾ ಕಾರು, ರೂ.6.86 ಲಕ್ಷದಿಂದ ರೂ.10 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಪಡೆದಿದೆ. ಈ ಕಾರು ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ನ್ನು ಹೊಂದಿದ್ದು, 22.35 ರಿಂದ 30.61 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಮತ್ತು ಆಟೋ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.

ನಿಮ್ಮ ಗಮನಕ್ಕೆ.. ಈ ಕಾರುಗಳ ಕಾಯುವಿಕೆ ಅವಧಿಯು ನಗರದಿಂದ ನಗರಕ್ಕೆ ಬೇರೆಯಾಗಬಹುದು. ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.

Article Published On: Thursday, January 16, 2025, 12:29 [IST]
English summary
Maruti suzuki baleno tata altroz and toyota glanza january 2025 waiting period reveled
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+