ಮಾರಾಟಕ್ಕೆ ಲಭ್ಯವಿರುವ ಕಡಿಮೆ ಬೆಲೆಯ ಟಾಪ್ 6 ಬೆಸ್ಟ್ ಮೈಲೇಜ್ ಕಾರುಗಳು!

ಕಾರುಗಳ ಮೈಲೇಜ್ ಬಗ್ಗೆ ಮಾತನಾಡಿದ್ರೆ ಮೊದಲು ಮಾರುತಿ ಸುಜುಕಿ ಕಾರುಗಳೆ ನೆನಪಾಗುತ್ತವೆ. ಕಂಪನಿಯ ಹೆಚ್ಚಿನ ಕಾರುಗಳು 24 ಕಿ.ಮೀ.ಗಿಂತ ಹೆಚ್ಚು ಮೈಲೇಜ್ ನೀಡುತ್ತವೆ. ಹೆಚ್ಚಿನ ಮಾರುತಿ ಕಾರುಗಳು ಈಗ ಆಟೋ ಐಡಿಲ್ ಸ್ಟಾರ್ಟ್-ಸ್ಟಾಪ್ ಅನ್ನು ಹೊಂದಿರುವ ಕಾರಣ ಇದು ಹೆಚ್ಚಿನ ಮೈಲೇಜ್ ಪಡೆಯಲು ಸಹಕರಿಸುತ್ತದೆ. ಈ ಲೇಖನದಲ್ಲಿ ಮಾರುತಿ ಸುಜುಕಿ ನೀಡುವ ಸ್ಟ್ರಾಂಗ್-ಹೈಬ್ರಿಡ್ ಎಸ್‌ಯುವಿ ಸೇರಿದಂತೆ ಒಂದಷ್ಟು ಬೆಸ್ಟ್ ಮೈಲೇಜ್ ಹ್ಯಾಚ್‌ಬ್ಯಾಕ್‌ಗಳ ಬಗ್ಗೆ ತಿಳಿಸಿದ್ದೇವೆ. ಯಾವ ಮಾರುತಿ ಕಾರು ಹೆಚ್ಚು ಮೈಲೇಜ್ ನೀಡುತ್ತದೆ ಎಂದು ತಿಳಿದುಕೊಳ್ಳಲು ಬಯಸಿದರೆ, ವಿವರವಾದ ಪಟ್ಟಿ ಇಲ್ಲಿದೆ.

ಮಾರುತಿ ಗ್ರ್ಯಾಂಡ್ ವಿಟಾರಾ: ಮಾರುತಿ ಗ್ರ್ಯಾಂಡ್ ವಿಟಾರಾ ಇಲ್ಲಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಕಾರಾಗಿದೆ. ಬರೋಬ್ಬರಿ 27.97 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕ್ಲೈಮ್ ಮಾಡಲಾಗಿದೆ, ಇದು ಟೊಯೊಟಾದಿಂದ ಪೆಟ್ರೋಲ್ ಚಾಲಿತ 1.5-ಲೀಟರ್, 3 ಸಿಲಿಂಡರ್, ಸ್ಟ್ರಾಂಗ್-ಹೈಬ್ರಿಡ್ ಪವರ್ ಟ್ರೇನ್ ಪಡೆದಿದೆ. ಇದು ಆಟೋ ಚಾರ್ಜಿಂಗ್ ತಂತ್ರಜ್ಞಾನವನ್ನು ಸಹ ಹೊಂದಿದೆ. ಈ ತಂತ್ರಜ್ಞಾನದೊಂದಿಗೆ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಕಾರನ್ನು ಚಾಲನೆ ಮಾಡಬಹುದು.

maruti-suzuki-best-mileage-cars-in-india

ಮಾರುತಿ ವ್ಯಾಗನ್ ಆರ್: 1.2-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಸೆಲೆರಿಯೊ ಮತ್ತು ಎಸ್-ಪ್ರೆಸ್ಸೊದಲ್ಲಿ ನೀವು ಪಡೆಯುವ ಅದೇ ಎಂಜಿನ್ ಅನ್ನು ವ್ಯಾಗನ್ ಆರ್ ನಲ್ಲೂ ನೋಡಬಹುದು. ಎರಡೂ ಎಂಜಿನ್ ಗಳು ಒಂದೇ ರೀತಿಯ ದಕ್ಷತೆಯನ್ನು ನೀಡುತ್ತವೆ. ಎರಡೂ ಎಂಜಿನ್‌ಗಳನ್ನು ಎಎಂಟಿಯೊಂದಿಗೆ ಹೊಂದಬಹುದು, 23.56 ಕಿ.ಮೀ.ನಿಂದ 25.19 ಕಿ.ಮೀ. ಮೈಲೇಜ್ ನೀಡುತ್ತದೆ.

2022 ಮಾರುತಿ ಆಲ್ಟೋ ಕೆ10: ಹೊಸ ಆಲ್ಟೋ ಕೆ10, 1-ಲೀಟರ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ಪಡೆದಿದೆ. ಆದರೆ ಇದು ಆಟೋ ಐಡಿಲ್ ಸ್ಟಾರ್ಟ್-ಸ್ಟಾಪ್ ವೈಶಿಷ್ಟ್ಯವನ್ನು ಕಳೆದುಕೊಂಡಿದೆ. ಇದು ಈ ಪಟ್ಟಿಯಲ್ಲಿ ಹಿಂದೆ ಬೀಳಲು ಒಂದು ಕಾರಣವಾಗಿರಬಹುದು, ಆದರೂ 24.39 ಕಿ.ಮೀ.ನಿಂದ 24.50 ಕಿ.ಮೀ. ಮೈಲೇಜ್ ನೀಡುತ್ತದೆ.

maruti-suzuki-best-mileage-cars-in-india

ಮಾರುತಿ ಸೆಲೆರಿಯೊ: ಮಾರುತಿ ಸುಜುಕಿ ಸೆಲೆರಿಯೋ ಸಾಧಾರಣ 1-ಲೀಟರ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ಹೊಂದಿದೆ. ಆಟೋ ಐಡಲ್ ಸ್ಟಾರ್ಟ್-ಸ್ಟಾಪ್ ಅನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿದ್ದು, ಇದು 26.68 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಗ್ರ್ಯಾಂಡ್ ವಿಟಾರಾ ಹೊರತುಪಡಿಸಿ ಇಲ್ಲಿರುವ ಎಲ್ಲಾ ಕಾರುಗಳು 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಟ್ರಾನ್ಸ್ ಮಿಷನ್‌ ಆಯ್ಕೆಗಳನ್ನು ಹೊಂದಿವೆ.

ಮಾರುತಿ ಎಸ್-ಪ್ರೆಸ್ಸೊ: ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಡ್ಯುಯಲ್ ಜೆಟ್ ಎಂಜಿನ್ ಮತ್ತು ಐಡಿಲ್ ಸ್ಟಾರ್ಟ್-ಸ್ಟಾಪ್ ವೈಶಿಷ್ಟ್ಯದೊಂದಿಗೆ ಬರುತ್ತದೆ. ಇದು ಮೊದಲಿಗಿಂತ ಶೇಕಡಾ 17 ರಷ್ಟು ಹೆಚ್ಚು ಪರಿಣಾಮಕಾರಿಯಾಗಿದ್ದು, 25.30 ಕಿ.ಮೀ. ಮೈಲೇಜ್ ನೀಡುತ್ತದೆ. ಈ ಕಾರು ಎಂಜಿನ್ ನವೀಕರಣದೊಂದಿಗೆ 1-ಲೀಟರ್ ಎಂಜಿನ್ ಮಾದರಿಗಳ ಪವರ್ ಅಂಕಿಅಂಶಗಳು 1 ಪಿಎಸ್ ಮತ್ತು 1 ಎನ್ಎಂ ಟಾರ್ಕ್ ಕಡಿಮೆಯಾಗಿದೆ.

maruti-suzuki-best-mileage-cars-in-india

ಮಾರುತಿ ಬಲೆನೊ: ಮಾರುತಿ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಸೆಗ್ಮೆಂಟಿನಲ್ಲಿ ಅತ್ಯಂತ ಹೆಚ್ಚಿನ ಮೈಲೇಜ್ ನೀಡುವ ಕಾರಾಗಿದೆ. ಈ ಹ್ಯಾಚ್ ಬ್ಯಾಕ್ 22.94 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಬಲೆನೊ ಅದರ ರಿಬ್ಯಾಡ್ಜ್ ಆವೃತ್ತಿ ಟೊಯೊಟಾ ಗ್ಲಾಂಝಾ ಕೂಡ ಇದೇ ರೀತಿಯ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, January 6, 2025, 12:03 [IST]
English summary
Maruti suzuki best mileage cars in india
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+