Maruti: ಮಾರುತಿ ಕಾರುಗಳ ಗುಣಮಟ್ಟದ ಬಗ್ಗೆ ಯಾರೂ ಮಾತನಾಡುವಂತಿಲ್ಲ: ಶಾಕ್ ಕೊಟ್ಟ ಕಂಪನಿ!
ಮಾರುತಿ ಸುಜುಕಿ ಕಾರುಗಳು ಸದ್ಯ ದೇಶದಲ್ಲಿ ಇತರ ಬ್ರಾಂಡ್‌ಗಳಿಗೆ ಹೋಲಿಸಿದರೆ ಅತ್ಯಂತ ಅಗ್ಗದ ಬೆಲೆಗೆ ಸಿಗುವ ಕಾರುಗಳಾಗಿವೆ. ಉತ್ತಮ ಫೀಚರ್ಸ್, ಮೈಲೇಜ್, ಸರ್ವಿಸ್ ಸೇರಿದಂತೆ ಎಲ್ಲಾ ರೀತಿಯಲ್ಲೂ ಉತ್ತಮವೆನಿಸಿಕೊಂಡಿರುವ ಕಂಪನಿಯು ನಿರ್ಮಾಣ ಗುಣಮಟ್ಟದಲ್ಲಿ ಮಾತ್ರ ಹಿಂದುಳಿದಿತ್ತು. ಅಪಘಾತವಾದರೆ ಮಾರುತಿ ಕಾರುಗಳಲ್ಲಿನ ಪ್ರಯಾಣಿಕರು ಜೀವ ಕಳೆದುಕೊಳ್ಳುತ್ತಾರೆ ಎಂಬ ಮಾತುಗಳು ಜೋರಾಗಿ ಕೇಳಿಬರುತ್ತಿದ್ದವು. ಜನರ ಈ ನಂಬಿಕೆಯನ್ನು ತೊಡೆದುಹಾಕಲು ಇತ್ತೀಚೆಗೆ ತನ್ನ ಡಿಜೈರ್ ಮೂಲಕ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದ ಕಂಪನಿಯು, ಈಗ ತನ್ನ ಇತರ ಕಾರುಗಳನ್ನು ಕೂಡ ಸುರಕ್ಷಿತವಾಗಿಸಲು ಮುಂದಾಗಿದೆ.
ಮಾರುತಿ ಸುಜುಕಿ ಕಂಪನಿಯು 2025ರ ವರ್ಷಕ್ಕೆ ಬ್ರೆಝಾವನ್ನು ಹೆಚ್ಚುವರಿ ಸುರಕ್ಷತಾ ಮತ್ತು ಅನುಕೂಲಕರ ವೈಶಿಷ್ಟ್ಯಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ನವೀಕರಿಸಿದೆ. ಹೊಸ ಮಾರುತಿ ಸುಜುಕಿ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಬ್ರೆಝಾ ಈಗ ಆರು ಏರ್ ಬ್ಯಾಗ್‌ಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ನೀಡಲಾಗುವುದು. ಈ ಹಿಂದೆ ZXI+ ಟ್ರಿಮ್‌ಗೆ ಮಾತ್ರ ಆರು ಏರ್ ಬ್ಯಾಗ್‌ಗಳನ್ನು ನೀಡಲಾಗುತ್ತಿತ್ತು.

ಹೊಸ ಬ್ರೆಝಾ ಬೆಲೆಗಳು ಪ್ರಸ್ತುತ 8.54 ಲಕ್ಷ ರೂ.ಗಳಿಂದ 14.14 ಲಕ್ಷ ರೂ.ಗಳವರೆಗೆ (ಎಕ್ಸ್ ಶೋರೂಂ) ಇವೆ. ಈ ಎಸ್‌ಯುವಿ ಫೆಬ್ರವರಿ 2025 ರ ಆರಂಭದಲ್ಲಿ 20,000 ರೂ.ಗಳವರೆಗೆ ಬೆಲೆ ಏರಿಕೆಯನ್ನು ಪಡೆದಿದೆ. 6 ಏರ್ ಬ್ಯಾಗ್‌ಗಳ ಹೊರತಾಗಿ, ಬ್ರೆಝಾ ಈಗ ಎಲ್ಲಾ ಪ್ರಯಾಣಿಕರಿಗೆ ಮೂರು-ಪಾಯಿಂಟ್ ಸೀಟ್ ಬೆಲ್ಟ್ ಗಳನ್ನು ಸಹ ನೀಡುತ್ತದೆ.
ಹಾಗೆಯೇ ಬ್ರೆಝಾ ಈಗ ಮುಂಭಾಗದ ಸೀಟ್ ಬೆಲ್ಟ್‌ಗಳಿಗೆ ಎತ್ತರ ಹೊಂದಾಣಿಕೆ, ಹಿಂಭಾಗದ ಸೆಂಟರ್ ಆರ್ಮ್ ರೆಸ್ಟ್ - ಕಪ್ ಹೋಲ್ಡರ್‌ಗಳಿಂದ ತುಂಬಿದೆ. ಸರಿಹೊಂದಿಸಬಹುದಾದ ಹಿಂಭಾಗದ ಹೆಡ್ ರೆಸ್ಟ್‌ಗಳು ಮತ್ತು ಹಿಂಭಾಗದ ಸೀಟ್ ಬ್ಯಾಕ್ ರೆಸ್ಟ್ ಗಾಗಿ 60:40 ಸ್ಪ್ಲಿಟ್ ಫೋಲ್ಡಿಂಗ್ ಫಂಕ್ಷನ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ. ಇವೆಲ್ಲವು ಅಪ್‌ಡೇಟ್‌ನ ಭಾಗವಾಗಿ ಲಭ್ಯವಾಗಿವೆ.

ಈ ಹಿಂದೆ ಎಲ್ಲಾ ಫೀಚರ್‌ಗಳು ಎಸ್‌ಯುವಿಯ ಟಾಪ್ ವೇರಿಯೆಂಟ್‌ಗಳಲ್ಲಿ ಮಾತ್ರ ಲಭ್ಯವಿದ್ದವು. ಈಗ ಎಲ್ಲಾ ವೇರಿಯೆಂಟ್‌ಗಳಲ್ಲಿಯೂ ಸ್ಟ್ಯಾಂಡರ್ಡ್ ಆಗಿ ಲಭ್ಯವಿದೆ. ಹೊಸ ಮಾರುತಿ ಸುಜುಕಿ ಬ್ರೆಝಾ ಕಾರು ಕಿಯಾ ಸೊನೆಟ್, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ, ಕಿಯಾ ಸೈರಸ್ ಮತ್ತು ಹ್ಯುಂಡೈ ವೆನ್ಯೂ ಕಾರುಗಳಿಗೆ ಪೈಪೋಟಿ ನೀಡುತ್ತದೆ.
ಉಳಿದಂತೆ ಎಂಜಿನ್ ವಿಷಯದಲ್ಲಿ ಮಾರುತಿ ಬ್ರೆಝಾದಲ್ಲಿ ಯಾವುದೇ ನವೀಕರಣ ಮಾಡಿಲ್ಲ. ಬ್ರೆಝಾವನ್ನು ಅದೇ 5 - ಸ್ಪೀಡ್ ಮ್ಯಾನುವಲ್ ಅಥವಾ 6 - ಸ್ಪೀಡ್ ಆಟೋಮ್ಯಾಟಿಕ್ ನೊಂದಿಗೆ ಜೋಡಿಸಲಾದ K-15 ಪೆಟ್ರೋಲ್ ಎಂಜಿನ್ ನೊಂದಿಗೆ ನೀಡಲಾಗುತ್ತದೆ. ಆಟೋಮ್ಯಾಟಿಕ್ ವೇರಿಯೆಂಟ್ಗಳು ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನವನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತವೆ.

ZXI ಮತ್ತು ZXI + ಟ್ರಿಮ್‌ಗಳು ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಬರುತ್ತವೆ. ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾದ ಟಾಪ್ ZXI+ ಟ್ರಿಮ್ ಹೊರತುಪಡಿಸಿ ಉಳಿದೆಲ್ಲದರಲ್ಲೂ ಫ್ಯಾಕ್ಟರಿ ಅಳವಡಿಸಿದ ಸಿಎನ್‌ಜಿ ಕಿಟ್ ಆಯ್ಕೆಯನ್ನು ಖರೀದಿದಾರರು ಪಡೆಯಬಹುದು. ಹೊಸ ಬ್ರೆಝಾ ಅಪ್‌ಡೇಟ್‌ಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications