Maruti Suzuki: ಸದ್ದಿಲ್ಲದೇ ಮಾರುತಿ ಸುಜುಕಿಯಿಂದ ಮತ್ತೊಮ್ಮೆ ಆಘಾತ.. ಏನು?

ಭಾರತದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ (Maruti Suzuki) ಹೊರಹೊಮ್ಮಿದೆ. ದೇಶೀಯ ಮಾರುಕಟ್ಟೆಯಲ್ಲಿ ಅರೆನಾ ಹಾಗೂ ನೆಕ್ಸಾ ಡೀಲರ್‌ಶಿಪ್ ಮೂಲಕ ಕೈಗೆಟುಕುವ ಬೆಲೆಯಲ್ಲಿ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇದೀಗ ವರ್ಷದೊಳಗೆ ಎರಡನೇ ಬಾರಿಗೆ ಕಂಪನಿಯು ಹೊಸದಾಗಿ ಕಾರು ಕೊಳ್ಳುವ ಗ್ರಾಹಕರಿಗೆ ದೊಡ್ಡ ಆಘಾತ ನೀಡಲು ಮುಂದಾಗಿದೆ. ಬನ್ನಿ.. ಆ ಬಗ್ಗೆ ಸಂಕ್ಷಿಪ್ತವಾದ ವಿವರವನ್ನು ತಿಳಿಯೋಣ.

ಮಾರುತಿ ಸುಜುಕಿ ಇಂಡಿಯಾ, ಏಪ್ರಿಲ್ 1, 2025 ರಿಂದ ಅಧಿಕೃತವಾಗಿ ಜಾರಿಗೆ ಬರುವಂತೆ ಎಲ್ಲ ವಾಹನಗಳ (ಕಾರುಗಳು) ದರವನ್ನು ಶೇಕಡ 4% ವರೆಗೆ ಹೆಚ್ಚಿಸಲಿದೆ. ಈ ಬಗ್ಗೆ ಸೋಮವಾರ ಘೋಷಣೆ ಮಾಡಿದೆ. ತಯಾರಿಕಾ ಹಾಗೂ ಮಾರಾಟ ವೆಚ್ಚಗಳು ಅಧಿಕಗೊಂಡಿದ್ದು, ಅದನ್ನು ಸರಿದೂಗಿಸಲು ಕಂಪನಿಯು ಬೆಲೆ ಏರಿಕೆಯಂತಹ ತೀರ್ಮಾನಕ್ಕೆ ಬಂದಿದೆ ಎಂದು ವರದಿಯಾಗಿದೆ.

Maruti Suzuki Cars Price Hike Details

ಈ ದರ ಏರಿಕೆಯು ಕಾರುಗಳ ಮಾಡೆಲ್‌ಗಳನ್ನು ಅವಲಂಭಿಸಿ ಬೇರೆ-ಬೇರೆಯಾಗಿರಲಿದೆ ಎಂದು ಮಾರುತಿ ಸುಜುಕಿ ತಿಳಿಸಿದೆ. ಇದೇ ಫೆಬ್ರವರಿ 1ಕ್ಕೆ ಅನ್ವಯವಾಗುವಂತೆಯೂ ಕಂಪನಿಯು ಎಲ್ಲ ಕಾರುಗಳ ಬೆಲೆಯನ್ನು ರೂ.1,500 ದಿಂದ ರೂ.32,500 ವರೆಗೆ ಏರಿಕೆ ಮಾಡಿತ್ತು. ಇದರಿಂದ ಎಕ್ಸ್-ಶೋರೂಂ ಬೆಲೆಯಲ್ಲಿ ಕೊಂಚ ಮಟ್ಟಿಗೆ ವ್ಯತ್ಯಯವಾಗಿತ್ತು.

ದರ ಏರಿಕೆಯ ಹೊರತಾಗಿಯೂ ಮಾರುತಿ ಸುಜುಕಿ ಆರಂಭಿಕ ಶ್ರೇಣಿ (ಎಂಟ್ರಿ ಲೆವೆಲ್) ಹ್ಯಾಚ್‌ಬ್ಯಾಕ್‌ಗಳನ್ನು ನವೀಕರಿಸಿ ಕೂಡ ಮಾರಾಟಕ್ಕೆ ತರುತ್ತಿದೆ. ವಿಶೇಷವಾಗಿ ಮಧ್ಯಮ ವರ್ಗದ ಜನರ ಮೆಚ್ಚಿನ ಆಲ್ಟೊ ಕೆ10 ಕಾರು, 6 ಏರ್‌ಬ್ಯಾಗ್‌ ಆಯ್ಕೆಯಲ್ಲಿ ಬಿಡುಗಡೆಗೊಂಡಿತ್ತು. ಇದರೊಟ್ಟಿಗೆ ಈ ಹ್ಯಾಚ್‌ಬ್ಯಾಕ್‌ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು 3-ಪಾಯಿಂಟ್ ಸೀಟ್ ಬೆಲ್ಟ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

Maruti Suzuki Cars Price Hike Details

ಈ ಮಾರುತಿ ಸುಜುಕಿ ಆಲ್ಟೊ ಕೆ10 ಕಾರು ಕನಿಷ್ಠ ರೂ.4.23 ಲಕ್ಷ ಹಾಗೂ ಗರಿಷ್ಠ ರೂ.6.21 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 1-ಲೀ.ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನು ಪಡೆದಿದ್ದು, 24.39 ರಿಂದ 33.85 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಕೀಲೆಸ್ ಎಂಟ್ರಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಆಲ್ಟೊ ಕೆ10 ಮಾತ್ರವಲ್ಲದೆ, ಮಾರುತಿ ಸುಜುಕಿ ಸೆಲೆರಿಯೊ ಸಹ 6-ಏರ್‌ಬ್ಯಾಗ್‌ನೊಂದಿಗೆ ಗ್ರಾಹಕರ ಖರೀದಿಗೆ ಸಿಗುತ್ತದೆ. ಇದು ರೂ.5.64 ಲಕ್ಷದಿಂದ ರೂ.7.37 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 1-ಲೀ. ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ ಆಯ್ಕೆಯನ್ನು ಹೊಂದಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇದರಲ್ಲಿ 5 ಜನರು ಪ್ರಯಾಣಿಸಬಹುದು.

Maruti Suzuki Cars Price Hike Details

ಮಾರುತಿ ಸುಜುಕಿ ಮಾರಾಟ ವಿವರ: ಕಳೆದ ತಿಂಗಳು (ಫೆಬ್ರವರಿ - 2025) ಕೂಡ ದೇಶೀಯ ಕಾರು ಮಾರುಕಟ್ಟೆಯಲ್ಲಿ ಕಂಪನಿಯು ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದು, ಬರೋಬ್ಬರಿ 1,60,791 ಯುನಿಟ್‌ ಕಾರುಗಳನ್ನು ಮಾರಾಟಗೊಳಿಸಿದೆ. 2024ರ ಇದೇ ಅವಧಿಯಲ್ಲಿ ಮಾರಲ್ಪಟ್ಟ 1,60,272 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ (YoY) ಕನಿಷ್ಠ ಮಟ್ಟದ ಅಂದರೆ, ಶೇಕಡ 0.32% ಬೆಳವಣಿಗೆಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, March 18, 2025, 13:09 [IST]
English summary
Maruti suzuki cars price hike details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+