Maruti: ಹೊಸ ಮಾರುತಿ ಎಸ್‌ಯುವಿ ಬಿಡುಗಡೆಗೆ ಸಜ್ಜು: ಹೈಬ್ರಿಡ್ ಅವತಾರ... ಸೆಪ್ಟೆಂಬರ್ 3ಕ್ಕೆ ಸರ್ವ ಸಿದ್ಧ

ಹೊಸ ಮಧ್ಯಮ ಗಾತ್ರದ ಕಾಂಪ್ಯಾಕ್ಟ್ SUV ಆದ ಮಾರುತಿ ಸುಜುಕಿ ಎಸ್ಕುಡೊ (Maruti Suzuki Escudo) ಸೆಪ್ಟೆಂಬರ್ 3, 2025 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ಇದು ಮಾರುತಿಯ ಅರೆನಾ ಡೀಲರ್‌ಶಿಪ್‌ಗಳ ಮೂಲಕ ಲಭ್ಯವಿರುವ SUV ಶ್ರೇಣಿಯಲ್ಲಿ ಮಾರುತಿ ಬ್ರೆಝಾ ಮತ್ತು ಗ್ರ್ಯಾಂಡ್ ವಿಟಾರಾ ನಡುವೆ ಸ್ಥಾನ ಪಡೆಯಲಿದೆ. ಎಸ್ಕುಡೊ ಸುಮಾರು ರೂ. 9.75 ಲಕ್ಷದಿಂದ ರೂ. 12 ಲಕ್ಷ (ಎಕ್ಸ್ - ಶೋರೂಂ) ಬೆಲೆಯಲ್ಲಿ ಬಿಗುಗಡೆಯಾಗುವ ನಿರೀಕ್ಷೆಯಿದೆ. ಈ ಮುಂಬರುವ ಬಹುನಿರೀಕ್ಷಿತ ಮಾರುತಿ ಕಾರಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಮುಖ ವೈಶಿಷ್ಟ್ಯಗಳು ಮತ್ತು ವಿಶೇಷಣಗಳು

ಪವರ್‌ಟ್ರೇನ್ ವಿಷಯಕ್ಕೆ ಬಂದರೆ ಇದು 1.5L K15C ಪೆಟ್ರೋಲ್ ಮೈಲ್ಡ್ - ಹೈಬ್ರಿಡ್ ಎಂಜಿನ್‌ ಮೂಲಕ 103 bhp ಪವರ್ ಹಾಗೂ 1.5L ಅಟ್ಕಿನ್ಸನ್ - ಸೈಕಲ್ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ಮೂಲಕ 115 bhp ಪವರ್‌ ಹೊರಹಾಕುತ್ತದೆ ಎಂದು ಮೂಲಗಳು ತಿಳಿಸಿವೆ. ಹಾಗೆಯೇ ಮಾರುತಿ ಕಂಪನಿಯು ಈ ಕಾರನ್ನು CNG ವೇರಿಯೆಂಟ್‌ನಲ್ಲೂ ಪರಿಚಯಿಸಲಿದೆ ಎಂದು ತಿಳಿದುಬಂದಿದೆ.

maruti-suzuki-compact-suv-escudo-will-launch-sep-3rd

ಹೊಸ ಮಾರುತಿ ಸುಜುಕಿ ಎಸ್ಕುಡೊ 5 - ಸ್ಪೀಡ್ ಮ್ಯಾನುವಲ್, 6 - ಸ್ಪೀಡ್ ಆಟೋಮ್ಯಾಟಿಕ್ ಮತ್ತು ಹೈಬ್ರಿಡ್ ಮಾಡಲ್‌ಗಳಿಗೆ ಇ - ಸಿವಿಟಿ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಪರಿಚಯಿಸಲಿದೆ. ಇದು ಲೆವೆಲ್ - 2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಮತ್ತು ಇಮ್ಮರ್ಸಿವ್ ಡಾಲ್ಬಿ ಅಟ್ಮಾಸ್ ಆಡಿಯೊ ತಂತ್ರಜ್ಞಾನವನ್ನು ನೀಡುವ ಮಾರುತಿಯ ಮೊದಲ ಮಾಡಲ್ ಆಗಲಿದೆ.

ಹೆಚ್ಚುವರಿ ವೈಶಿಷ್ಟ್ಯಗಳಲ್ಲಿ 9 - ಇಂಚಿನ ಟಚ್ ‌ಸ್ಕ್ರೀನ್ ಇನ್ಫೋಟೈನ್ ‌ಮೆಂಟ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ/ಆಪಲ್ ಕಾರ್‌ಪ್ಲೇ, ಪನೋರಮಿಕ್ ಸನ್‌ರೂಫ್, 7 - ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೆಡ್ - ಅಪ್ ಡಿಸ್ಪ್ಲೇ, 360 - ಡಿಗ್ರಿ ಕ್ಯಾಮೆರಾ, ಹಿಲ್ ಹೋಲ್ಡ್‌ನೊಂದಿಗೆ ESP, ಬಹು ಏರ್‌ಬ್ಯಾಗ್‌ಗಳು ಮತ್ತು ಹಗುರವಾದ ಆಫ್ - ರೋಡಿಂಗ್‌ಗಾಗಿ 4WD ಸಿಸ್ಟಮ್ ನೀಡಲಿದೆ.

maruti-suzuki-compact-suv-escudo-will-launch-sep-3rd

ಈ SUV ಗ್ರ್ಯಾಂಡ್ ವಿಟಾರಾದೊಂದಿಗೆ ತನ್ನ ಪ್ಲಾಟ್‌ಫಾರ್ಮ್ ಅನ್ನು ಹಂಚಿಕೊಳ್ಳುವ ನಿರೀಕ್ಷೆಯಿದೆ. ಅರೆನಾ ಗ್ರಾಹಕರ ನೆಲೆಗೆ ಅನುಗುಣವಾಗಿ ವಿಭಿನ್ನ ಶೈಲಿ ಮತ್ತು ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಬ್ರೆಝಾದಿಂದ ಅಪ್‌ಗ್ರೇಡ್ ಬಯಸುವ ಹಾಗೂ ಗ್ರ್ಯಾಂಡ್ ವಿಟಾರಾಗಿಂತ ಹೆಚ್ಚಿನದನ್ನು ಬಯಸುವ ಖರೀದಿದಾರರನ್ನು ಗುರಿಯಾಗಿಸಿಕೊಂಡು ಈ ಕಾರನ್ನು ಮಾರುಕಟ್ಟೆಗೆ ತರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಎಸ್ಕುಡೊ ಸ್ಪರ್ಧಾತ್ಮಕ ಬೆಲೆಯಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳು ಮತ್ತು ಇಂಧನ - ಸಮರ್ಥ ಪವರ್‌ಟ್ರೇನ್ ಆಯ್ಕೆಗಳ ಮಿಶ್ರಣವನ್ನು ನೀಡಲಿದೆ. ಒಟ್ಟಾರೆ ಈ ಹಿಂದೆ ಮಾರುತಿ ಎಸ್ಕುಡೊ ಬಿಡುಗಡೆ ದಿನಾಂಕ ಸೆಪ್ಟೆಂಬರ್ 3, 2025 ಕ್ಕೆ ನಿಗದಿಯಾಗಿದೆ. ಹೊಸ ಮಾರುತಿ ಎಸ್‌ಯುವಿ 2025 ರ ವೇಳೆಗೆ ಮಾರುತಿ ಶ್ರೇಣಿಯಲ್ಲಿ ಬ್ರೆಝಾ ಮೇಲೆ ಮತ್ತು ಗ್ರ್ಯಾಂಡ್ ವಿಟಾರಾ ಕೆಳಗೆ ಇರುತ್ತದೆ.

ಮಾರುತಿ ಸುಜುಕಿ ಮಾರ್ಚ್ 2024 ರಲ್ಲಿಯೇ ಭಾರತದಲ್ಲಿ ಎಸ್ಕುಡೊ ಹೆಸರನ್ನು ನೋಂದಾಯಿಸಿದೆ. ಇದೀಗ ಅರೆನಾ ಡೀಲರ್‌ ಶಿಪ್‌ಗಳು ಈ ವರ್ಷದ ಸೆಪ್ಟೆಂಬರ್‌ನಿಂದ ಗ್ರಾಹಕರಿಗೆ ಎಸ್ಕುಡೊವನ್ನು ಪರಿಚಯಿಸಲಿದೆ ಎಂದು ಪ್ರಮುಖ ಆಟೋ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಇದು ಅರೆನಾ ಔಟ್‌ಲೆಟ್‌ಗಳಲ್ಲಿ ಮಾರಾಟವಾಗುವ ಅತ್ಯಂತ ದುಬಾರಿ ಮಾರುತಿ ಮಾದರಿಗಳಾದ ಮಾರುತಿ ಎರ್ಟಿಗಾ ಮತ್ತು ಮಾರುತಿ ಬ್ರೆಝಾ ಜೊತೆಗೆ ಸ್ಥಾನ ಪಡೆಯಲಿದೆ.

ಮಾರುತಿ ಎಸ್ಕುಡೊ ಸಿಎನ್‌ಜಿ ಕೂಡ ಕೆಲಸದಲ್ಲಿದೆ, ಪೆಟ್ರೋಲ್ ಮಾಡಲ್‌ ಬಿಡುಗಡೆಯಾದ ಕೆಲ ತಿಂಗಳುಗಳ ನಂತರ ಇದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಎಸ್ಕುಡೊ ಹುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಟೊಯೋಟಾ ಹೈರೈಡರ್‌ಗಳ ವಿರುದ್ಧ ಪೈಪೋಟಿ ನೀಡಲಿದೆ. ಎಸ್ಕುಡೊ ಜೊತೆಗೆ, ಮಾರುತಿ ಈ ವರ್ಷದ ಕೊನೆಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಇ-ವಿಟಾರಾವನ್ನು ಸಹ ಸಿದ್ಧಪಡಿಸುತ್ತಿದೆ.

Article Published On: Monday, September 1, 2025, 10:20 [IST]
English summary
Maruti suzuki compact suv escudo will launch sep 3rd
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+