Maruti: ಬೆಲೆ ಇಷ್ಟೇನಾ? 33 ಕಿ.ಮೀ ಮೈಲೇಜ್, ಸನ್‌ರೂಫ್! ಮಾರುತಿ ಕಾರಿಗೆ ಮುಗಿಬಿದ್ದ ಜನ!

ಹೊಸ ತಲೆಮಾರಿನ ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಕಾಂಪ್ಯಾಕ್ಟ್ ಸೆಡಾನ್ ಆಗಿದ್ದರೂ ಆಧುನಿಕ ವಿನ್ಯಾಸದೊಂದಿಗೆ ವಿಕಸನಗೊಂಡಿದೆ. ಇದು ಉತ್ತಮ ಸವಾರಿ ಗುಣಮಟ್ಟ, ಆರಾಮದಾಯಕ ವೈಶಿಷ್ಟ್ಯಗಳು, ಐದು ಜನರಿಗೆ ಒಳಾಂಗಣ ಸ್ಥಳಾವಕಾಶ ಮತ್ತು ಸಿಎನ್‌ಜಿ ಹೊಂದಾಣಿಕೆಗೆ ಹೆಸರುವಾಸಿಯಾಗಿದೆ. ಇವೆಲ್ಲಕ್ಕಿಂತ ಮಖ್ಯವಾಗಿ ಸುರಕ್ಷತೆಯಲ್ಲೂ ಹೊಸ ದಾಖಲೆ ನಿರ್ಮಿಸಿ ಎಲ್ಲರನ್ನು ಅಚ್ಚರಿಗೊಳಿಸಿದೆ. ಈ ವರೆಗೆ ಯಾವುದೇ ಮಾರುತಿ ಕಾರಿಗೆ ಸಿಗದ 5-ಸ್ಟಾರ್ ಸೇಫ್ಟಿಯನ್ನು ದಕ್ಕಿಸಿಕೊಳ್ಳುವ ಮೂಲಕ ಮಾರುತಿ ಸುಜುಕಿ ಡಿಜೈರ್ ಡಿಜೈರ್ ಭಾರತದ ಸೆಡಾನ್ ವಿಭಾಗದಲ್ಲಿ ಅಚ್ಚುಮೆಚ್ಚಿನ ಕಾರಾಗಿ ಮುಂದುವರೆದಿದೆ.

ಅಂದಹಾಗೆ ಕಳೆದ ತಿಂಗಳು ಫೆಬ್ರವರಿಯಲ್ಲಿ ಗ್ರಾಹಕರು ಮುಗಿಬಿದ್ದು ಈ ಕಾರನ್ನು ಖರೀದಿಸಿದ್ದಾರೆ. ಫೆಬ್ರವರಿ 2025 ರಲ್ಲಿ ಬರೋಬ್ಬರಿ 14,694 ಯೂನಿಟ್ ಕಾರುಗಳು ಮಾರಾಟವಾಗಿವೆ. ಇದರ ಅಗ್ಗದ ಬೆಲೆ, ಆಕರ್ಷಕ ಮೈಲೇಜ್ ಭಾರತದಲ್ಲಿ ಗ್ರಾಹಕರನ್ನು ಹೆಚ್ಚಾಗಿ ಸೆಳೆಯಲು ಕಾರಣವೆಂದು ಹೇಳಬಹುದು. ಅಲ್ಲದೇ ಕಂಪನಿಯು ಈ ಬಾರಿ ಹೆಚ್ಚಿನ ಸುರಕ್ಷತೆ ಒದಗಿಸಿರುವುದು ಮಾರಾಟ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

maruti-suzuki-dzire-february-2025-sales-report

ಹೊಸ ಡಿಜೈರ್ ವಿಶೇಷತೆಗಳು: ಭಾರತದಲ್ಲಿ ಆರಂಭಿಕ ಬೆಲೆಯು ರೂ. 6.84 ಲಕ್ಷದಿಂದ 10.19 ಲಕ್ಷ (ಎರಡೂ ಬೆಲೆಗಳು, ಎಕ್ಸ್ ಶೋ ರೂಂ)ದವರೆಗೆ ಇದೆ. ಮಾರುತಿ ಸುಜುಕಿ ಡಿಜೈರ್ ಒಳಭಾಗದಲ್ಲಿ ಡ್ಯುಯಲ್-ಟೋನ್ ಬೀಜ್ (ಮೇಲಿನ ವಿಭಾಗ, ಡ್ಯಾಶ್ ಮತ್ತು ಸೀಟುಗಳು) ಮತ್ತು ಬ್ಲಾಕ್ (ಡ್ಯಾಶ್, ಡೋರ್ ಕಾರ್ಡ್‌ಗಳು ಮತ್ತು ಕೆಳಗಿನ ವಿಭಾಗಗಳು) ಥೀಮ್ ನೀಡಿದೆ.

ಡ್ಯಾಶ್‌ಬೋರ್ಡ್‌ನ ಮೇಲೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಂಪರ್ಕದೊಂದಿಗೆ ದೊಡ್ಡ 9 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ನೀಡಲಾಗಿದ್ದು, ಇದು Arkayms ಸೌಂಡ್ ಸಿಸ್ಟಮ್‌ಗೆ ಸಂಪರ್ಕ ಹೊಂದಿದೆ. ಇನ್ಫೋಟೈನ್‌ಮೆಂಟ್ ಸ್ಕ್ರೀನ್ 360 - ಡಿಗ್ರಿ ಕ್ಯಾಮೆರಾದ ಪ್ರದರ್ಶನವಾಗಿಯೂ ಕಾರ್ಯನಿರ್ವಹಿಸುತ್ತದೆ.

maruti-suzuki-dzire-february-2025-sales-report

ಹೊಸ ಡಿಜೈರ್‌ನ ಕ್ಯಾಬಿನ್ ಹಿಂಭಾಗದ ಎಸಿ ವೆಂಟ್‌ಗಳು, ಮಲ್ಟಿ ಯುಎಸ್‌ಬಿ ಪೋರ್ಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಈ ವಿಭಾಗದಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ಸಿಂಗಲ್ ಪೇನ್ ಸನ್‌ ರೂಫ್ ‌ನೊಂದಿಗೆ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಮ್‌ ನಂತಹ ವೈಶಿಷ್ಟ್ಯಗಳೊಂದಿಗೆ ತುಂಬಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಗ್ಲೋಬಲ್ ಎನ್‌ಸಿಎಪಿಯಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ಹಲವಾರು ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಪ್ಯಾಕ್ ಮಾಡಲ್ಪಟ್ಟಿದ್ದು, ಡಿಜೈರ್‌ನಲ್ಲಿರುವ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಆರು ಏರ್‌ಬ್ಯಾಗ್‌ಗಳು, ESP, ಹಿಲ್ ಹೋಲ್ಡ್ ಅಸಿಸ್ಟ್, EBD ಜೊತೆಗೆ ABS, ಬ್ರೇಕ್ ಅಸಿಸ್ಟ್, ಪ್ರತಿ ಸೀಟಿಗೆ ಮೂರು-ಪಾಯಿಂಟ್ ಸೀಟ್ ಬೆಲ್ಟ್‌ಗಳು ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಸೇರಿವೆ.

Take a Poll

ಎಂಜಿನ್ ವಿಷಯಕ್ಕೆ ಬಂದರೆ ಡಿಜೈರ್ Z12E ಎಂಜಿನ್ ಅನ್ನು ಹೊಂದಿದೆ, ಡಿಜೈರ್ ಹಿಂದಿನ K ಸರಣಿಯಿಂದ ಹೊಸ Z12E ಎಂಜಿನ್‌ಗೆ ಬದಲಾಯಿಸಿದ ಕಾರಣ ಪವರ್ ಮತ್ತು ಟಾರ್ಕ್‌ನಲ್ಲಿ ಕುಸಿತ ಕಂಡಿದೆ. ಒಂದು ಸಿಲಿಂಡರ್ ಕಡಿಮೆಯಾದರೂ ಪರ್ಫಾಮೆನ್ಸ್ ನಲ್ಲಿ(8bhp ಮತ್ತು 1.5Nm) ಡಿಜೈರ್ ಮೇಲೆ ಸ್ವಲ್ಪವೂ ಪರಿಣಾಮ ಬೀರಿಲ್ಲ. CNG ಆಯ್ಕೆಯಲ್ಲೂ ಖರೀದಿಗೆ ನೀಡುತ್ತಿರುವುದು ಖುಷಿಯ ವಿಚಾರ.

ಪೆಟ್ರೋಲ್ ಡಿಜೈರ್ ಅನ್ನು 5-ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. CNG ರೂಪಾಂತರವು ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಮಾತ್ರ ಲಭ್ಯವಿದೆ. ಡಿಜೈರ್‌ನ ಪೆಟ್ರೋಲ್ ಮ್ಯಾನುವಲ್ ಆವೃತ್ತಿಯು 24.79 km/l ಮೈಲೇಜ್ ಮತ್ತು AMT ನಲ್ಲಿ 25.71 km/l ಮೈಲೇಜ್ ಅನ್ನು ಹಿಂದಿರುಗಿಸುತ್ತದೆ. CNG ರೂಪಾಂತರವು 33.73 km/kg ಮೈಲೇಜ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, March 20, 2025, 16:44 [IST]
English summary
Maruti suzuki dzire february 2025 sales report
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+