33 ಕಿ.ಮೀ ಮೈಲೇಜ್.. ರೂ.6.25 ಲಕ್ಷ, ಹೊಸ Maruti Dzire ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, ಇಎಂಐ ಏನು?
ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಜನಮೆಚ್ಚಿದ ಸೆಡಾನ್ ಆಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತದೆ. ಜಿಎಸ್‌ಟಿ ಪರಿಷ್ಕರಣೆಗೊಂಡಿದ್ದು, ಈ ಕಾರಿನ ದರವು ರೂ.87,700 ವರೆಗೆ ಇಳಿಕೆಯಾಗಿದೆ. ಕನಿಷ್ಠ ರೂ.6.25 ಲಕ್ಷ ಹಾಗೂ ಗರಿಷ್ಠ ರೂ.9.32 ಲಕ್ಷ ಎಕ್ಸ್-ಶೋರೂಂ ದರವನ್ನು ಪಡೆದಿದೆ. ನೀವು ಹೊಸ ಕಾರೊಂದನ್ನು ಕೊಂಡುಕೊಳ್ಳಲು ಆಲೋಚಿಸಿದ್ದೀರಾ.. ಹಾಗಾದರೆ 'ಡಿಜೈರ್' ಅತ್ಯುತ್ತಮ ಆಯ್ಕೆಯಾಗಿದೆ. ನಾವಿಲ್ಲಿ ಇದೇ ಸೆಡಾನ್‌ನ ಆನ್-ರೋಡ್ ಬೆಲೆ (On-Road Price) ಮತ್ತು ಇಎಂಐ (EMI) ಆಯ್ಕೆಯ ಕುರಿತಂತೆ ಪ್ರಮುಖ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.
ಈ ಸೆಡಾನ್ ವಿವಿಧ ರೂಪದಲ್ಲಿ ಲಭ್ಯವಿದೆ. ಇದರ ಎಲ್ಎಕ್ಸ್ಐ (ಪೆಟ್ರೋಲ್) ರೂಪಾಂತರ ರೂ.7.49 ಲಕ್ಷವರೆಗೆ ಆನ್-ರೋಡ್ ದರವನ್ನು ಪಡೆದಿದೆ. ರೂ.1 ಲಕ್ಷ ಡೌನ್-ಪೇಮೆಂಟ್ ಕಟ್ಟಿ ತೆಗೆದುಕೊಂಡರೆ, ರೂ.6.49 ಲಕ್ಷವರೆಗೆ ಸಾಲವಿರುತ್ತದೆ. ಶೇಕಡ 8% ಬಡ್ಡಿ ಹಾಕಿ, 5 ವರ್ಷಕ್ಕೆ ತಿಂಗಳಿಗೆ ರೂ.13,000 ವರೆಗೆ ಇಎಂಐ ಪಾವತಿಸಬೇಕು.

ಇನ್ನೊಂದು ವಿಎಕ್ಸ್ಐ (ಪೆಟ್ರೋಲ್) ರೂಪಾಂತರ, ರೂ.8.57 ಲಕ್ಷವರೆಗೆ ಆನ್-ರೋಡ್ ಬೆಲೆಯನ್ನು ಒಳಗೊಂಡಿದೆ. ರೂ.1 ಲಕ್ಷ ಡೌನ್-ಪೇಮೆಂಟ್ ಪಾವತಿಸಿ ಮನೆಗೆ ತಂದರೆ, ರೂ.7.57 ಲಕ್ಷವರೆಗೆ ಸಾಲ ಬಾಕಿಯಿರುತ್ತದೆ. ಶೇಕಡ 8% ಬಡ್ಡಿ ದರದಲ್ಲಿ 5 ವರ್ಷಗಳಿಗೆ ಮಾಸಿಕ ರೂ.15,000 ವರೆಗೆ ಇಎಂಐ ಕಟ್ಟಬೇಕು.
ಮತ್ತೊಂದು ಝಡ್ಎಕ್ಸ್ಐ (ಪೆಟ್ರೋಲ್) ರೂಪಾಂತರ, ರೂ.9.75 ಲಕ್ಷವರೆಗೆ ಆನ್-ರೋಡ್ ದರವನ್ನು ಹೊಂದಿದೆ. ರೂ.1 ಲಕ್ಷ ಡೌನ್-ಪೇಮೆಂಟ್ ಕಟ್ಟಿ ಖರೀದಿ ಮಾಡಿದರೆ, ರೂ.8.75 ಲಕ್ಷವರೆಗೆ ಸಾಲವಿರುತ್ತದೆ. ಶೇಕಡ 8% ಬಡ್ಡಿ ಹಾಕಿ, 5 ವರ್ಷಕ್ಕೆ ತಿಂಗಳಿಗೆ ರೂ.17,750 ವರೆಗೆ ಇಎಂಐ ಪಾವತಿ ಮಾಡಬೇಕು.

ಇದೇ ಕಾರಿನ ವಿಎಕ್ಸ್ಐ (ಸಿಎನ್‌ಜಿ) ರೂಪಾಂತರ, ರೂ.9.58 ಲಕ್ಷವರೆಗೆ ಆನ್-ರೋಡ್ ಬೆಲೆಯನ್ನು ಒಳಗೊಂಡಿದೆ. ರೂ.1 ಲಕ್ಷ ಡೌನ್-ಪೇಮೆಂಟ್ ಪಾವತಿಸಿ ಕೊಂಡುಕೊಂಡರೆ, ರೂ.8.58 ಲಕ್ಷವರೆಗೆ ಸಾಲ ಬಾಕಿಯಿರುತ್ತದೆ. ಶೇಕಡ 8% ಬಡ್ಡಿ ದರದಲ್ಲಿ 5 ವರ್ಷಗಳಿಗೆ ಮಾಸಿಕ ರೂ.17,300 ವರೆಗೆ ಇಎಂಐ ಕಟ್ಟಬೇಕು.
ಮಾರುತಿ ಡಿಜೈರ್ ವಿಶೇಷತೆಗಳೇನು:
ಈ ಸೆಡಾನ್ ತುಂಬಾ ಚೆನ್ನಾಗಿರುವ ವಿನ್ಯಾಸ ಹೊಂದಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಅದಕ್ಕಾಗಿ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು ಹಾಗೂ ಡುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಸ್ಪ್ಲೆಂಡಿಡ್ ಸಿಲ್ವರ್, ಆರ್ಕ್ಟಿಕ್ ವೈಟ್, ಮ್ಯಾಗ್ಮಾ ಗ್ರೇ ಮತ್ತು ಗ್ಯಾಲಂಟ್ ರೆಡ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ನೂತನ ಡಿಜೈರ್ 5 ಆಸನಗಳನ್ನು ತನ್ನದಾಗಿಸಿಕೊಂಡಿದೆ. ಪ್ರಯಾಣಿಕರು ಆರಾಮಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 382 ಲೀಟರ್‌ನಷ್ಟು ಬೂಟ್ ಸ್ಪೇನ್‌ನ್ನು ಒಳಗೊಂಡಿದೆ. 163 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,450 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ. 7 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ.
ಇದು 1.2-ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 24 ರಿಂದ 33 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ವೈರ್‌ಲೆಸ್ ಫೋನ್ ಚಾರ್ಜರ್, ಕ್ರೂಸ್ ಕಂಟ್ರೋಲ್, ಆಟೋ ಎಸಿ ಮತ್ತು ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.
ನಿಮ್ಮ ಗಮನಕ್ಕೆ.. ಇಲ್ಲಿ ಹೊಸ 'ಡಿಜೈರ್' ಕಾರಿನ ಕೆಲವೇ ರೂಪಾಂತರಗಳ (ವೇರಿಯೆಂಟ್) ಆನ್-ರೋಡ್ ಬೆಲೆ ಮತ್ತು ಇಎಂಐ ಆಯ್ಕೆಯ ಕುರಿತಂತೆ ಮಾತ್ರ ವಿವರಿಸಿದ್ದೇವೆ. ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.


Click it and Unblock the Notifications








