5-ಸ್ಟಾರ್ ಸೇಫ್ಟಿ, 34 Km ಮೈಲೇಜ್.. 6.84 ಲಕ್ಷ, ಆದರೂ ಈ ಪ್ರಖ್ಯಾತ ಕಾರನ್ನು ಖರೀದಿಸಲು ಗ್ರಾಹಕರಿಂದ ಹಿಂದೇಟು!

ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಜನಪ್ರಿಯ ಸೆಡಾನ್ ಎಂದೇ ಹೆಸರುವಾಸಿಯಾಗಿದ್ದು, ಗ್ರಾಹಕರ ನೆಚ್ಚಿನ ಕಾರಾಗಿದೆ. ಇತ್ತೀಚೆಗೆ, ಎಲ್ಲ ವಾಹನ ತಯಾರಕ ಕಂಪನಿಗಳು ಈ ಮಾರ್ಚ್ ತಿಂಗಳ ಕಾರು ಮಾರಾಟದ ಅಂಕಿಅಂಶಗಳ ವರದಿಯನ್ನು ಪ್ರಕಟಿಸಿವೆ. ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ ಕಾರುಗಳ ಪಟ್ಟಿಯಲ್ಲಿ ಇದೇ 'ಡಿಜೈರ್' ಸೆಡಾನ್ ಎಂಟನೇ ಸ್ಥಾನದಲ್ಲಿದೆ. ಆದರೂ ಮಾರಾಟ ಪ್ರಮಾಣ ಮಾತ್ರ ಒಂದಷ್ಟು ಕುಸಿತವಾಗಿದೆ.

ಕಳೆದ ತಿಂಗಳು (ಮಾರ್ಚ್-2025) ಮಾರುತಿ ಸುಜುಕಿ ಇಂಡಿಯಾ ಬರೋಬ್ಬರಿ 15,460 ಯುನಿಟ್ ಡಿಜೈರ್ ಸೆಡಾನ್‌ಗಳನ್ನು ಮಾರಾಟಗೊಳಿಸಿದೆ. 2024ರ ಇದೇ ಅವಧಿಯಲ್ಲಿ 15,894 ಯುನಿಟ್‌ಗಳನ್ನು ಮಾರಲಾಗಿತ್ತು. ಅದಕ್ಕೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ (YoY) ಶೇಕಡ -3% ಇಳಿಕೆಯಾಗಿದೆ.

Maruti Suzuki Dzire Sedan Sales Decrease In March 2025 Details

ಸದ್ಯಕ್ಕೆ ಮಾರಾಟ ಪ್ರಮಾಣ ಸ್ವಲ್ಪ ಮಟ್ಟಿಗೆ ಮಾತ್ರ ಇಳಿಕೆಯಾಗಿದ್ದು, ಕಂಪನಿಯು ಕೂಡ ಅದರ ಹಿಂದಿರುವ ಸ್ಪಷ್ಟ ಕಾರಣವನ್ನು ಬಹಿರಂಗಪಡಿಸಿಲ್ಲ. ಮುಂಬರುವ ದಿನಗಳಲ್ಲಿ ಮಾರಾಟ ಪ್ರಮಾಣ ಸುಧಾರಿಸಿಕೊಳ್ಳುವ ನಿರೀಕ್ಷೆಯಿದೆ. ಆದರೂ ಈ ವರ್ಷದ ಫೆಬ್ರವರಿಯಲ್ಲಿ 14,694 ಯುನಿಟ್ ಹಾಗೂ ಜನವರಿಯಲ್ಲಿ 15,383 ಯುನಿಟ್ ಡಿಜೈರ್‌ ಕಾರುಗಳನ್ನು ಯಶಸ್ವಿಯಾಗಿ ಮಾರಾಟ ಮಾಡಲಾಗಿತ್ತು.

2024ರ ಕೊನೆಯ ಮೂರು ತಿಂಗಳು ಸಹ ಈ 'ಮಾರುತಿ ಸುಜುಕಿ ಡಿಜೈರ್' ಸೆಡಾನ್‌ಗಳನ್ನು ಭಾರೀ ಸಂಖ್ಯೆಯಲ್ಲಿ ಮಾರಾಟಗೊಳಿಸಲಾಗಿತ್ತು. ಡಿಸೆಂಬರ್‌ನಲ್ಲಿ 16,573 ಯುನಿಟ್, ನವೆಂಬರ್‌ನಲ್ಲಿ 11,779 ಯುನಿಟ್ ಮತ್ತು ಅಕ್ಟೋಬರ್‌ ತಿಂಗಳಲ್ಲಿ 12,698 ಯುನಿಟ್‌ಗಳನ್ನು ಮಾರಾಟಗೊಳಿಸಲು ಕಂಪನಿಗೆ ಸಾಧ್ಯವಾಗಿತ್ತು. ಈ ಅಂಕಿ ಸಂಖ್ಯೆಯನ್ನು ಗಮನಿಸಿದಾಗ ಪ್ರತಿ ತಿಂಗಳು ಸರಿ ಸುಮಾರು 13,000 ಯುನಿಟ್‌ ಡಿಜೈರ್ ಕಾರುಗಳು ಮಾರಾಟವಾಗಿವೆ.

Maruti Suzuki Dzire Sedan Sales Decrease In March 2025 Details

ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಾರುತಿ ಸುಜುಕಿ ಡಿಜೈರ್ ಸೆಡಾನ್, ಕನಿಷ್ಠ ರೂ.6.84 ಲಕ್ಷ ಹಾಗೂ ಗರಿಷ್ಠ ರೂ.10.19 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಒಳಗೊಂಡಿದೆ. ಇದರಲ್ಲಿ 5 ಆಸನಗಳಿದ್ದು, ಪ್ರಯಾಣಿಕರು ಸುಲಭವಾಗಿ ಸಂಚರಿಸಬಹುದು. ವಾರಾಂತ್ಯ ಹಾಗೂ ರಜಾದಿನಗಲ್ಲಿ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು 382 ಲೀ. ಸಾಮರ್ಥ್ಯದ ಬೂಟ್ ಸ್ಪೇನ್‌ನ್ನು ಹೊಂದಿದೆ.

ಈ ಡಿಜೈರ್ ಕಾರು 1.2-ಲೀ. ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ ಆಯ್ಕೆಯನ್ನು ಪಡೆದಿದ್ದು, 5-ಸ್ಪೀಡ್ ಮ್ಯಾನುವಲ್/ ಆಟೋಮೆಟೆಕ್
ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಇದರ ಪೆಟ್ರೋಲ್ ಮಾಡೆಲ್‌ಗಳು 24.79 ರಿಂದ 25.71 ಕೆಎಂಪಿಎಲ್ ಮತ್ತು ಸಿಎನ್‌ಜಿ ಮಾಡೆಲ್‌ಗಳು 33.73 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತವೆ.

Maruti Suzuki Dzire Sedan Sales Decrease In March 2025 Details

ನೂತನ ಮಾರುತಿ ಸುಜುಕಿ ಡಿಜೈರ್ ಕಾರು ಪರ್ಲ್ ಆರ್ಕ್ಟಿಕ್ ವೈಟ್, ಮ್ಯಾಗ್ಮಾ ಗ್ರೇ ಮತ್ತು ಬ್ಲ್ಯೂಯಿಷ್ ಬ್ಲ್ಯಾಕ್ ಸೇರಿದಂತೆ ಹಲವು ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಖರೀದಿಗೆ ಸಿಗುತ್ತದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್, ಕ್ರೂಸ್ ಕಂಟ್ರೋಲ್, ಸನ್‌ರೂಫ್ ಹಾಗೂ ಆಟೋ ಎಸಿಯಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) & 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ತನ್ನದಾಗಿಸಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, April 9, 2025, 14:08 [IST]
English summary
Maruti suzuki dzire sedan sales decrease in march 2025 details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+