33 Km ಮೈಲೇಜ್.. 5-ಸೀಟರ್.. ಬೆಲೆ ಮೊದಲೇ ಅಗ್ಗ.. ಈ ಮಾರುತಿ ಕಾರಿನ ನೂತನ ದರವಷ್ಟು?
ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಜನಾಕರ್ಷಣೆಯ ಸೆಡಾನ್ ಆಗಿದೆ. ಅತ್ಯಾಧುನಿಕವಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸೆ.22 ರಿಂದ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಜಾರಿಗೊಂಡಿವೆ. ಇದರ ಸಂಪೂರ್ಣ ಲಾಭವು 'ಡಿಜೈರ್' ಕಾರಿಗೂ ದೊರೆಯುತ್ತಿತ್ತು. ರೂ.87,700 ವರೆಗೆ ಬೆಲೆ ಇಳಿಕೆಯಾಗಿದೆ. ನಾವಿಲ್ಲಿ ಈ ಸೆಡಾನ್‌ನ ಪ್ರತಿಯೊಂದು ರೂಪಾಂತರಗಳ (ವೇರಿಯೆಂಟ್) ಹೊಸ 'ಎಕ್ಸ್-ಶೋರೂಂ' ದರ ಎಷ್ಟಾಗಿದೆ ಎಂಬುದರ ಕುರಿತಂತೆ ಸಂಪೂರ್ಣವಾಗಿ ವಿವರಿಸಿದ್ದೇವೆ.
ನೂತನ 'ಮಾರುತಿ ಡಿಜೈರ್' ಹಲವು ವಿಧದಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಇದರ ಎಲ್ಎಕ್ಸ್ಐ ಮ್ಯಾನುವಲ್ ಟ್ರಾಸ್ಮಿಷನ್ (ಪೆಟ್ರೋಲ್) ರೂಪಾಂತರ ರೂ.6,25,600, ವಿಎಕ್ಸ್ಐ ಮ್ಯಾನುವಲ್ ಟ್ರಾಸ್ಮಿಷನ್ (ಪೆಟ್ರೋಲ್) ರೂಪಾಂತರ ರೂ.7,17,100, ವಿಎಕ್ಸ್ಐ ಆಟೋಮೆಟಿಕ್ ಟ್ರಾಸ್ಮಿಷನ್ (ಪೆಟ್ರೋಲ್) ರೂಪಾಂತರ ರೂ.7,62,100 ಹಾಗೂ ವಿಎಕ್ಸ್ಐ (ಸಿಎನ್‌ಜಿ) ರೂಪಾಂತರ ರೂ.8,03 100 ಎಕ್ಸ್-ಶೋರೂಂ ಬೆಲೆಯನ್ನು ಒಳಗೊಂಡಿದೆ.

ಇದೇ ಕಾರಿನ ಜಡ್ಎಕ್ಸ್ಐ ಮ್ಯಾನುವಲ್ ಟ್ರಾಸ್ಮಿಷನ್ (ಪೆಟ್ರೋಲ್) ರೂಪಾಂತರ ರೂ.8,17,700, ಜಡ್ಎಕ್ಸ್ಐ ಪ್ಲಸ್ ಮ್ಯಾನುವಲ್ ಟ್ರಾಸ್ಮಿಷನ್ (ಪೆಟ್ರೋಲ್) ರೂ.8,86,300, ಜಡ್ಎಕ್ಸ್ಐ (ಸಿಎನ್‌ಜಿ) ರೂಪಾಂತರ ರೂ.9,03,700 ಮತ್ತು ಜಡ್ಎಕ್ಸ್ಐ ಪ್ಲಸ್ (ಪೆಟ್ರೋಲ್) ರೂಪಾಂತರ ರೂ.9,31,300 ಎಕ್ಸ್-ಶೋರೂಂ ದರವನ್ನು ಪಡೆದಿದೆ.
ಮಾರುತಿ ಸುಜುಕಿ ಡಿಜೈರ್ ವಿಶೇಷತೆಗಳೇನು?
ಈ ಕಾರು ಅತ್ಯುತ್ತಮವಾದ ವಿನ್ಯಾಸವನ್ನು ಹೊಂದಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಉತ್ತಮವಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು ಹಾಗೂ ಡುಯಲ್ ಟೋನ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಸ್ಪ್ಲೆಂಡಿಡ್ ಸಿಲ್ವರ್, ಆರ್ಕ್ಟಿಕ್ ವೈಟ್, ಮ್ಯಾಗ್ಮಾ ಗ್ರೇ, ಗ್ಯಾಲಂಟ್ ರೆಡ್ ಮತ್ತು ಅಲ್ಲುರಿಂಗ್ ಬ್ಲೂ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ನೂತನ ಡಿಜೈರ್ ಹೆಚ್ಚು ವಿಶಾಲ ಗಾತ್ರದಲ್ಲಿದೆ. 3,995 ಎಂಎಂ ಉದ್ದ, 1,735 ಎಂಎಂ ಅಗಲ ಮತ್ತು 1,515 ಎಂಎಂ ಎತ್ತರವಿದೆ. 163 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,450 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 1020 ಕೆಜಿ ತೂಕವಿದೆ.
ಇದು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ತನ್ನದಾಗಿಸಿಕೊಂಡಿದೆ. 1.2-ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮೆಟೆಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 24 ರಿಂದ 33 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 37 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ.
ಈ ಕಾರು 5 ಆಸನಗಳನ್ನು ಹೊಂದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಸಂಚರಿಸಬಹುದು. ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು 382 ಲೀಟರ್‌ನಷ್ಟು ಬೂಟ್ ಸ್ಪೇನ್‌ನ್ನು ಒಳಗೊಂಡಿದೆ. 160 ಕೆಎಂಪಿಹೆಚ್ ಸ್ಪೀಡ್‌ನ್ನು ಪಡೆದಿದೆ. ಕೇವಲ 12 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.
ಹೊಸ ಡಿಜೈರ್ ಕ್ಯಾಬಿನ್ ವಿನ್ಯಾಸವು ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಪಡೆದಿದೆ. 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್/ ಸ್ಟಾಪ್ ಬಟನ್, ವೈರ್‌ಲೆಸ್ ಫೋನ್ ಚಾರ್ಜರ್, ಸನ್‌ರೂಫ್ ಮತ್ತು ಆಟೋ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.
ಈ ಕಾರು ಸುರಕ್ಷತೆಗೂ ಹೆಸರುವಾಸಿಯಾಗಿದ್ದು, ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸಲಿದೆ. ಅದಕ್ಕಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಕ್ರೂಸ್ ಕಂಟ್ರೋಲ್, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹೈ ಸ್ಪೀಡ್ ಅಲರ್ಟ್ ಸಿಸ್ಟಮ್ ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.


Click it and Unblock the Notifications








