ಮಾರುತಿ ಎಲೆಕ್ಟ್ರಿಕ್ ಕಾರಿನ ಬಗ್ಗೆ ಬಹುದೊಡ್ಡ ಘೋಷಣೆ: ಒಮ್ಮೆಗೆ 500 ಕಿ.ಮೀ ಓಡಿಸಬಹುದು

ಮಾರುತಿ ಸುಜುಕಿ ಕೊನೆಗೂ ತನ್ನ ಮೊದಲ ಎಲೆಕ್ಟ್ರಿಕ್ SUV ಆಗಿರುವ ಇ-ವಿಟಾರಾ (e VITARA) ವನ್ನು ಭಾರತದಲ್ಲಿ ಅತಿ ಶೀಘ್ರದಲ್ಲೆ ಬಿಡುಗಡೆ ಮಾಡುವುದಾಗಿ ಹೇಳಿದೆ. ಇ-ವಿಟಾರಾ ಬಿಡುಗಡೆಗೂ ಮುನ್ನ ತನ್ನ ಇವಿ ಚಾರ್ಜಿಂಗ್ ಮೂಲಸೌಕರ್ಯವನ್ನು ವಿಸ್ತರಿಸುವುದಾಗಿ ಘೋಷಿಸಿದೆ. ಇ-ವಿಟಾರಾ ಖರೀದಿದಾರರಿಗಾಗಿ 250 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದೆ. ಕಂಪನಿಯು ದೇಶದ ಅತಿದೊಡ್ಡ ಚಾರ್ಜಿಂಗ್ ಮೂಲಸೌಕರ್ಯವನ್ನು ನಿರ್ಮಿಸುವತ್ತ ಕೆಲಸ ಮಾಡುತ್ತಿರುವದಾಗಿ ಹೇಳಿದೆ. 2030ರ ವೇಳೆಗೆ, ವಿಶಾಲವಾದ, ರಾಷ್ಟ್ರವ್ಯಾಪಿ ಚಾರ್ಜಿಂಗ್ ನೆಟ್‌ವರ್ಕ್ ಮೂಲಕ ಗ್ರಾಹಕರಿಗೆ ಅನುಕೂಲಕರವಾಗಿಸುವ ಗುರಿಯನ್ನು ಮಾರುತಿ ಹೊಂದಿದೆ.

ಈ ಮೂಲಸೌಕರ್ಯಕ್ಕೆ ಪೂರಕವಾಗಿ, ಮಾರುತಿ ತನ್ನ ಹೊಸ 'ಇ ಫಾರ್ ಮಿ' ಅಪ್ಲಿಕೇಶನ್ ಅನ್ನು ಪರಿಚಯಿಸುತ್ತಿದೆ, ಇದನ್ನು ಎಲಕ್ಟ್ರಿಕ್ ವಾಹನಗಳ ಮಾಲೀಕತ್ವವನ್ನು ಸರಳಗೊಳಿಸಲು ವಿನ್ಯಾಸಗೊಳಿಸಲಾಗಿದೆ. ಈ ಅಪ್ಲಿಕೇಶನ್ ಬಳಕೆದಾರರಿಗೆ ಹತ್ತಿರದ ಚಾರ್ಜಿಂಗ್ ಕೇಂದ್ರಗಳನ್ನು ಪತ್ತೆಹಚ್ಚಲು, ಡಿಜಿಟಲ್ ಪಾವತಿಗಳನ್ನು ಮಾಡಲು ಮತ್ತು ಸೇವಾ ಅಪಾಯಿಂಟ್‌ಮೆಂಟ್‌ಗಳನ್ನು ಸುಲಭವಾಗಿ ನಿಗದಿಪಡಿಸಲು ಅನುವು ಮಾಡಿಕೊಡುತ್ತದೆ. ಇದರ ಜೊತೆಗೆ, ಮಾರುತಿ ಈಗಾಗಲೇ ಭಾರತದಾದ್ಯಂತ 1,500 ವಿದ್ಯುತ್ ವಾಹನ-ಸಿದ್ಧ ಸೇವಾ ಕಾರ್ಯಾಗಾರಗಳನ್ನು ಸಿದ್ಧಪಡಿಸಿದೆ.

maruti-suzuki-e-vitara-ev-infrastructure-roadmap-revealed

ಇ-ವಿಟಾರಾ 49 kWh ಮತ್ತು 61 kWh ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ. 49 kWh ರೂಪಾಂತರವು 2WD ಮಾದರಿಯಾಗಿದ್ದು, ಒಂದೇ eAxle ಮೋಟಾರ್ 142 bh ಪವರ್ ಮತ್ತು 189 Nm ಟಾರ್ಕ್ ಉತ್ಪಾದಿಸುತ್ತದೆ. ದೊಡ್ಡ 61 kWh ಬ್ಯಾಟರಿಯನ್ನು 2WD ಮತ್ತು 4WD ಎರಡೂ ಮಾಡಲ್‌ಗಳಲ್ಲಿ ಪಡೆಯಬಹುದು. 2WD ಆವೃತ್ತಿಯು 172 bh ಪವರ್ ಮತ್ತು 189 Nm ಟಾರ್ಕ್ ನೀಡುತ್ತದೆ.

61 kWh ರೂಪಾಂತರವು ಸಿಂಗಲ್ ಚಾರ್ಜ್‌ನಲ್ಲಿ 500 ಕಿ.ಮೀ ವರೆಗೆ ರೇಂಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ಈ ನಮ್ಯತೆಯು ಗ್ರಾಹಕರಿಗೆ ದಕ್ಷತೆ ಮತ್ತು ಕಾರ್ಯಕ್ಷಮತೆಯ ನಡುವೆ ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ, ದೊಡ್ಡ ಬ್ಯಾಟರಿ ರೂಪಾಂತರವು ಶ್ರೇಣಿಯಲ್ಲಿ ಹೆಚ್ಚು ಪ್ರೀಮಿಯಂ ಆಯ್ಕೆಯಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

maruti-suzuki-e-vitara-ev-infrastructure-roadmap-revealed

ಇ-ವಿಟಾರಾ ವಿಶೇಷತೆಗಳು

ಇ-ವಿಟಾರಾದ ವಿನ್ಯಾಸ ವಿಷಯಕ್ಕೆ ಬಂದರೆ LED ಹೆಡ್‌ಲ್ಯಾಂಪ್‌ಗಳೊಂದಿಗೆ LED DRL ಗಳು ಮತ್ತು ಫ್ಯೂಚರಿಸ್ಟಿಕ್ ಫ್ರಂಟ್ & ರಿಯರ್ ಫ್ಯಾಸಿಯಾದಂತಹ ಸಿಗ್ನೇಚರ್ ಅಂಶಗಳನ್ನು ಒಳಗೊಂಡಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿ HEARTECT-e ಪ್ಲಾಟ್‌ಫಾರ್ಮ್, ಪವರ್‌ಟ್ರೇನ್, ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಹೊಂದಿದ್ದು, ತನ್ನ ವಿಭಾಗದಲ್ಲಿಯೇ ಅತ್ಯುತ್ತಮ ಹೈಟೆಕ್ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.

ಇ-ವಿಟಾರಾದ ಇಂಟೀರಿಯರ್ ವಿಷಯಕ್ಕೆ ಬಂದರೆ ಸೌಕರ್ಯ, ಅನುಕೂಲತೆ ಮತ್ತು ಅತ್ಯಾಧುನಿಕ ಸಂಪರ್ಕವನ್ನು ಒಳಗೊಂಡಿದೆ. ಇದರ ಡಿಜಿಟಲ್ ಕಾಕ್‌ಪಿಟ್, ಸಾಫ್ಟ್-ಟಚ್ ಪ್ರೀಮಿಯಂ ಡ್ಯುಯಲ್-ಟೋನ್ ಒಳಾಂಗಣ, ಕ್ವಾಡ್ರುಪಲ್ ವರ್ಟಿಕಲ್ ಎಸಿ ವೆಂಟ್‌ಗಳು, ಪ್ಲಶ್ ಡೋರ್ ಆರ್ಮ್‌ರೆಸ್ಟ್ ಹಾಗೂ ಹೊಸ ಬೆಸ್ಪೋಕ್ ಸ್ಟೀರಿಂಗ್ ವೀಲ್ ಒಟ್ಟಾರೆ ಐಷಾರಾಮಿ ಅನುಭವ ನೀಡುತ್ತವೆ.

maruti-suzuki-e-vitara-ev-infrastructure-roadmap-revealed

ಹೆಚ್ಚು ವಿಶಾಲವಾದ ಕ್ಯಾಬಿನ್, ಮುಂದಿನ ಸಾಲಿನ ವೆಂಟಿಲೇಟೆಡ್ ಸೀಟ್‌ಗಳು ಮತ್ತು 10-ವೇ ಪವರ್ ಅಡ್ಜಸ್ಟಬಲ್ ಟ್ರೈವರ್ ಸೀಟ್, ಹಿಂಭಾಗದ ಸೀಟ್‌ಗಳಲ್ಲಿ ಪ್ರಯಾಣಿಕರಿಗೆ ಸ್ಲೈಡಿಂಗ್ ಮತ್ತು ಒರಗಿಕೊಳ್ಳುವ ಸೌಕರ್ಯವನ್ನು ನೀಡಲಾಗಿದೆ. IR ಕಟ್ ತಂತ್ರಜ್ಞಾನದೊಂದಿಗೆ ಅಕೌಸ್ಟಿಕ್ ವಿಂಡ್‌ಶೀಲ್ಡ್, ಕ್ಯಾಬಿನ್ ಅನ್ನು ಪ್ರಶಾಂತವಾಗಿರಿಸುತ್ತದೆ. ಹೊಸ ಫ್ರಂಟ್ ಮ್ಯಾಕ್‌ಫರ್ಸನ್ ಸ್ಟ್ರಟ್ ಸಸ್ಪೆನ್ಷನ್ ಜೊತೆಗೆ ಹಿಂಭಾಗದ ಮಲ್ಟಿ-ಲಿಂಕ್ ಸಸ್ಪೆನ್ಷನ್ ಸೆಟಪ್‌ನೊಂದಿಗೆ ಸುಗಮ ಸವಾರಿಯನ್ನು ಒದಗಿಸುತ್ತದೆ.

ಸೇಫ್ಟಿ ವಿಚಾರಕ್ಕೆ ಬಂದರೆ 7 ಏರ್‌ಬ್ಯಾಗ್‌ಗಳು, ಆಲ್ ವೀಲ್ ಡಿಸ್ಕ್ ಬ್ರೇಕ್‌ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ (EPB), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360 ವ್ಯೂ ಕ್ಯಾಮೆರಾ, SOS ಬಟನ್‌ನೊಂದಿಗೆ ತುರ್ತು ಕರೆ, ಅಕೌಸ್ಟಿಕ್ ವೆಹಿಕಲ್ ಅಲಾರ್ಮ್ ಸಿಸ್ಟಮ್ (AVAS) ಅನ್ನು ಒದಗಿಸಲಾಗಿದೆ. ಇವಿಷ್ಟೇ ಅಲ್ಲದೇ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS ಲೆವೆಲ್ 2) ನೊಂದಿಗೆ ಸಜ್ಜುಗೊಂಡಿದೆ.

ಈ ಅತ್ಯಾಧುನಿಕ ADAS ವ್ಯವಸ್ಥೆಯು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಹೈ ಬೀಮ್ ಸಿಸ್ಟಮ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸೇರಿದಂತೆ ಇತರವುಗಳನ್ನು ಒಳಗೊಂಡಿದೆ. ಜೊತೆಗೆ ಕಾರಿನಲ್ಲಿ ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಮೋಡ್‌ಗಳನ್ನು ಒದಗಿಸಲಾಗಿದೆ. ಅಲ್ಲದೇ ಸ್ನೋ ಮೋಡ್‌ನೊಂದಿಗೂ ಬರುತ್ತದೆ, ಇದು ಹಿಮ ಮತ್ತು ಜಾರು ಮೇಲ್ಮೈಗಳಲ್ಲಿ ಎಳೆತವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಇದರ HEARTECT-e ಪ್ಲಾಟ್‌ಫಾರ್ಮ್, ಪರ್ಫಾಮೆನ್ಸ್, ದಕ್ಷತೆ, ನಾವೀನ್ಯತೆಯನ್ನು ಸಂಯೋಜಿಸುವ ಒಂದು ನೆಲಮಟ್ಟದ ವಿನ್ಯಾಸವಾಗಿದೆ. ಇದು 120 ಲಿಥಿಯಂ-ಐಯಾನ್ ಆಧಾರಿತ ಸೆಲ್‌ಗಳನ್ನು ಹೊಂದಿರುವ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. -30°C ನಿಂದ 60°C ವರೆಗಿನ ತೀವ್ರ ತಾಪಮಾನದಲ್ಲಿ ಅಸಾಧಾರಣ ರೇಂಜ್ ಮತ್ತು ವಿಶ್ವಾಸಾರ್ಹತೆಯನ್ನು ನೀಡುತ್ತದೆ. ಈ ದೃಢವಾದ ಪ್ಲಾಟ್‌ಫಾರ್ಮ್ 50% ಕ್ಕಿಂತ ಹೆಚ್ಚು ಹೈ-ಟೆನ್ಸೈಲ್ ಸ್ಟೀಲ್ ಅನ್ನು ಹೊಂದಿದೆ ಎಂದು ಮಾರುತಿ ಸುಜುಕಿ ತಿಳಿಸಿದೆ.

More from DriveSpark

Article Published On: Tuesday, December 2, 2025, 21:28 [IST]
English summary
Maruti suzuki e vitara ev infrastructure roadmap revealed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+