27 Km ಮೈಲೇಜ್.. 7-ಸೀಟರ್, 5 ಲಕ್ಷ.. 6 ಏರ್‌ಬ್ಯಾಗ್‌ಗಳು, ಈ ಬಡವರ ಕಾರಿನ ಸೇಲ್ಸ್ ಕುಸಿತ!

ಮಾರುತಿ ಸುಜುಕಿ ಇಕೋ (Maruti Suzuki Eeco) ಪ್ರಮುಖ ವ್ಯಾನ್ ಆಗಿ ಹೊರಹೊಮ್ಮಿದೆ. ಇದು ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದ್ದು, ಕಡಿಮೆ ಬೆಲೆಯಲ್ಲಿ ಕೂಡ ಸಿಗುತ್ತದೆ. ಅದರ ಹೊರತಾಗಿಯೂ ಇದೇ ಜೂನ್‌ನಲ್ಲಿ ಈ ಕಾರಿನ ಮಾರಾಟ ಸಂಖ್ಯೆ ಒಂದಷ್ಟು ಕುಸಿತವಾಗಿದೆ. ಒಟ್ಟು 9,340 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 13.29% ಕುಸಿತವಾಗಿದೆ. 2024ರ ಜೂನ್‌ ತಿಂಗಳಲ್ಲಿ 10,771 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು.

ಇದೇ ವರ್ಷದ ಮೊದಲ 5 ತಿಂಗಳಲ್ಲೂ 'ಮಾರುತಿ ಇಕೋ' ವ್ಯಾನ್ ಸ್ಪರ್ಧಾತ್ಮಕ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಜನವರಿಯಿಂದ ಮೇ ವರೆಗೆ ಬರೋಬ್ಬರಿ 56,917 ಯುನಿಟ್‌ಗಳನ್ನು ಮಾರಲಾಗಿದೆ. ಈ ಸಂಖ್ಯೆಯನ್ನು ಲೆಕ್ಕ ಹಾಕಿದಾಗ ಪ್ರತಿ ತಿಂಗಳು ಸರಾಸರಿ 11,383 ಯುನಿಟ್‌ಗಳನ್ನು ಮಾರಲಾಗಿದೆ.

Maruti Suzuki Eeco June 2025 Sales Details

ಮಾರುತಿ ಸುಜುಕಿ ಇಕೋ ವ್ಯಾನ್‌ ವಿಶೇಷತೆಗಳೇನು:

ಇದೊಂದು ವ್ಯಾನ್ ಆಗಿದ್ದು, ಒಂದು ತುಂಬು ಕುಟುಂಬ ಸುಲಭವಾಗಿ ಓಡಾಟ ನಡೆಸಬಹುದು. ಅದಕ್ಕೆ ತಕ್ಕಂತೆ ಅಗ್ಗದ ದರದಲ್ಲೂ ಲಭ್ಯವಿದ್ದು, ಮಧ್ಯಮ ವರ್ಗದ ಗ್ರಾಹಕರು ಸುಲಭವಾಗಿ ಖರೀದಿ ಮಾಡಬಹುದಾಗಿದ್ದು, ರೂ.5.69 ಲಕ್ಷದಿಂದ ರೂ.6.95 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ.

ಈ ಕಾರು ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಇದು ನೋಡುಗರನ್ನು ಸೆಳೆಯುತ್ತದೆ. ಮೆಟಾಲಿಕ್ ಪ್ಯಾಶನ್ ರೆಡ್, ಸೆರುಲಿಯನ್ ಬ್ಲ್ಯೂ, ಸಾಲಿಡ್ ವೈಟ್, ಪರ್ಲ್ ಮಿಡ್‌ನೈಟ್ ಬ್ಲ್ಯಾಕ್ ಮತ್ತು ಮೆಟಾಲಿಕ್ ಸಿಲ್ಕಿ ಸಿಲ್ವರ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 3675 ಎಂಎಂ ಉದ್ದ, 1475 ಎಂಎಂ ಅಗಲ ಹಾಗೂ 1825 ಎಂಎಂ ಎತ್ತರವು ಇದೆ. 160 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2350 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.

Maruti Suzuki Eeco June 2025 Sales Details

ಹೊಸ ಮಾರುತಿ ಇಕೋ ವ್ಯಾನ್ ಶಕ್ತಿಯುತವಾದ ಎರಡು ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದೆ. 1.2-ಲೀಟರ್ ಸಾಮರ್ಥ್ಯದ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 81 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 104.4 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.

ಮತ್ತೊಂದು ಸಿಎನ್‌ಜಿ ಚಾಲಿತ ಮಾಡೆಲ್ ಸಹ ಇದೇ ಎಂಜಿನ್‌ನ್ನು ಪಡೆದಿದೆ. ಆದರೆ, 72 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 95 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸಲಷ್ಟೇ ಶಕ್ತವಾಗಿದೆ. ಕೇವಲ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಯಾವ ಬೈಕ್‌ಗೂ ಕಮ್ಮಿಯಿಲ್ಲದ ರೀತಿಯಲ್ಲಿ 19.71 ರಿಂದ 26.78 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ.

Maruti Suzuki Eeco June 2025 Sales Details

ಇದರಲ್ಲಿ 5/ 7 ಆಸನಗಳಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಓಡಾಟ ನಡೆಸಬಹುದು. ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 275 ಲೀಟರ್‌ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. 40 ಲೀಟರ್‌ನಷ್ಟು ಪೆಟ್ರೋಲ್ ಟ್ಯಾಂಕ್ ಹಾಗೂ 65 ಕೆಜಿಯ ಸಿಎನ್‌ಜಿ ಟ್ಯಾಂಕ್‍ನ್ನು ಪಡೆದಿದೆ.

ಈ ಕಾರು ಸೆಮಿ ಡಿಜಿಟಲ್ ಸ್ಪೀಡೋಮೀಟರ್, ಮ್ಯಾನುವಲ್ ಎಸಿ, 12ವಿ ಚಾರ್ಜಿಂಗ್ ಸಾಕೆಟ್, ಸ್ಲೈಡಿಂಗ್ ಡ್ರೈವರ್ ಸೀಟ್, ರೇಕ್ಲಿನಿಂಗ್ ಫ್ರಂಟ್ ಸೀಟ್‌ಗಳು, ಬೇಸಿಕ್ ಆಡಿಯೊ ಸಿಸ್ಟಮ್, ಯುಎಸ್‌‍ಬಿ ಕನೆಕ್ಟಿವಿಟಿ ಹಾಗೂ ರೇರ್ ಪಾರ್ಕಿಂಗ್ ಸೆನ್ಸಾರ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 6 ಏರ್‌ಬ್ಯಾಗ್‌ಗಳು, ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸಮ್) ಹಾಗೂ ಫ್ರಂಟ್ ಸೀಟ್‌ಬೆಲ್ಟ್ ರಿಮೈಂಡರ್‌ನ್ನು ಪಡೆದಿದೆ.

Article Published On: Tuesday, July 15, 2025, 8:30 [IST]
English summary
Maruti suzuki eeco june 2025 sales details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+