27 Km ಮೈಲೇಜ್.. 7-ಸೀಟರ್, 5 ಲಕ್ಷ.. 2 ಕುಟುಂಬಕ್ಕೆ ಬೆಸ್ಟ್, ಈ Maruti Car ಬೇಕು ಎನ್ನುತ್ತಿದ್ದಾರೆ ಗ್ರಾಹಕರು!

ಮಾರುತಿ ಸುಜುಕಿ ಇಕೋ (Maruti Suzuki Eeco) ಪ್ರಮುಖ ವ್ಯಾನ್ ಆಗಿದೆ. ಇದು ಅತ್ಯಂತ ಕಡಿಮೆ ಬೆಲೆಗೆ ಖರೀದಿಗೆ ದೊರೆಯುವ ಫ್ಯಾಮಿಲಿ ಕಾರಾಗಿದ್ದು, ಗ್ರಾಹಕರು ಕೂಡ ತಾಮುಂದು - ನಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಈ 'ಮೇ' ತಿಂಗಳು ಇದೇ 'ಇಕೋ' ವ್ಯಾನ್ ಭಾರೀ ಸಂಖ್ಯೆಯಲ್ಲಿ ಮಾರಾಟವಾಗಿದ್ದು, ಕಂಪನಿಯ ಒಟ್ಟಾರೆ ಪ್ರಗತಿಗೂ ಉತ್ತಮವಾದ ಕೊಡುಗೆ ನೀಡಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಕಳೆದ ತಿಂಗಳು (ಮೇ - 2025) ಮಾರುತಿ ಸುಜುಕಿಯು, ಸರಿ ಸುಮಾರು 2,327 ಯುನಿಟ್‌ 'ಇಕೋ' ವ್ಯಾನ್‌ನ್ನು ಮಾರಾಟ ಮಾಡಿದೆ. ಅದೇ ರೀತಿಯಲ್ಲಿ ಈ ವರ್ಷದ ಮೊದಲ 4 ತಿಂಗಳಲ್ಲೂ 'ಇಕೋ' ವ್ಯಾನ್‌ಗಳನ್ನು ಭಾರೀ ಸಂಖ್ಯೆಯಲ್ಲಿ ಮಾರಾಟಗೊಳಿಸಲಾಗಿದೆ. ಏಪ್ರಿಲ್‌ನಲ್ಲಿ 11,438 ಯುನಿಟ್, ಮಾರ್ಚ್‌ನಲ್ಲಿ 10,409 ಯುನಿಟ್, ಫೆಬ್ರವರಿಯಲ್ಲಿ 11,493 ಯುನಿಟ್ ಮತ್ತು ಜನವರಿಯಲ್ಲಿ 11,250 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು.

Maruti Suzuki Eeco May 2025 Sales Details

ಈ ಅಂಕಿಸಂಖ್ಯೆಯನ್ನು ಲೆಕ್ಕ ಹಾಕಿದಾಗ ಪ್ರತಿ ತಿಂಗಳು 11,000 ಯುನಿಟ್ 'ಮಾರುತಿ ಸುಜುಕಿ ಇಕೋ' ವ್ಯಾನ್‌ಗಳು ಮಾರಾಟಗೊಂಡಿವೆ. ಅದಕ್ಕೆ ನಾನಾ ಕಾರಣಗಳಿದ್ದು, ಇದು ಅಗ್ಗದ ದರದಲ್ಲಿ ಸಿಗುವ ಫ್ಯಾಮಿಲಿ ಕಾರು ಆಗಿದೆ. ಜೊತೆಗೆ ಸುರಕ್ಷತೆಗೂ ಹೆಸರುವಾಸಿದ್ದು, ಖರೀದಿದಾರರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ.

ಮಾರುತಿ ಸುಜುಕಿ ಇಕೋ ವಿಶೇಷತೆಗಳೇನು..

ಈ ಕಾರನ್ನು ಸಾಮಾನ್ಯ ವರ್ಗದ ಜನರು ಸುಲಭವಾಗಿ ತೆಗೆದುಕೊಳ್ಳಬಹುದು. ಇದು ಕನಿಷ್ಠ ರೂ.5.70 ಲಕ್ಷ ಮತ್ತು ಗರಿಷ್ಠ ರೂ.6.96 ಲಕ್ಷ (ಎಕ್ಸ್-ಶೋರೂಂ - ಬೆಂಗಳೂರು) ಬೆಲೆಯನ್ನು ಪಡೆದಿದೆ. 5/ 7 ಆಸನಗಳನ್ನು ಒಳಗೊಂಡಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚರಿಸಬಹುದು.

Maruti Suzuki Eeco May 2025 Sales Details

ಇದು ಹೆಚ್ಚು ಬಲಿಷ್ಠವಾದ ಎರಡು ಪವರ್‌ಟ್ರೇನ್‌ ಆಯ್ಕೆಯನ್ನು ಒಳಗೊಂಡಿದೆ. 1.2 - ಲೀಟರ್ ಸಾಮರ್ಥ್ಯದ ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. 5 - ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಪಡೆದಿದೆ. ಸಾಮಾನ್ಯ ಬೈಕ್‌ಗಳಂತೆ 19 ರಿಂದ 27 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ನೂತನ ವ್ಯಾನ್ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು 275 ರಿಂದ 540 ಲೀ.ನಷ್ಟು ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. ಸೆಮಿ ಡಿಜಿಟಲ್ ಸ್ಪೀಡೋಮೀಟರ್, ಮ್ಯಾನುವಲ್ ಎಸಿ ಹಾಗೂ 12ವಿ ಚಾರ್ಜಿಂಗ್ ಸಾಕೆಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಫ್ರಂಟ್ - ಸೀಟ್‌ಬೆಲ್ಟ್ ರಿಮೈಂಡರ್ ಮತ್ತು ರೇರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿದೆ.

Maruti Suzuki Eeco May 2025 Sales Details

ಮಾರುತಿ ಸುಜುಕಿ ಒಟ್ಟಾರೆ ಮಾರಾಟ ಹೇಗಿದೆ..

ಈ ಮೇನಲ್ಲಿ ಮಾರುತಿ ಸುಜುಕಿಯು ಉತ್ತಮ ಸಂಖ್ಯೆಯಲ್ಲಿ ಕಾರುಗಳನ್ನು ಮಾರಾಟಗೊಳಿಸಿದೆ. ಬರೋಬ್ಬರಿ 1,80,077 ಯುನಿಟ್‌ ಕಾರುಗಳನ್ನು ಗ್ರಾಹಕರು ಖರೀದಿ ಮಾಡಿದ್ದಾರೆ. 2024ರ ಮೇ ತಿಂಗಳಲ್ಲಿ 1,74,551 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಅದಕ್ಕೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ ಶೇಕಡ 3% ಬೆಳವಣಿಗೆಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, June 4, 2025, 8:21 [IST]
English summary
Maruti suzuki eeco may 2025 sales details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+