ಬಡವರಿಗೆ ಪರ್ಫೆಕ್ಟ್ ಕಾರಿದು.. ಬೆಲೆಯೂ ಕಮ್ಮಿ, 27 ಕಿ.ಮೀ ಮೈಲೇಜ್.. 6-ಸೀಟರ್, ಹೊಸ ದರವೆಷ್ಟು?

ಮಾರುತಿ ಸುಜುಕಿ ಇಕೋ (Maruti Suzuki Eeco) ಜಗಮೆಚ್ಚಿದ ಎಂಪಿವಿಯಾಗಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸೆ.22 ರಿಂದ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಜಾರಿಗೊಂಡಿವೆ. ಇದರ ಸಂಪೂರ್ಣ ಲಾಭವು 'ಇಕೋ' ಕಾರಿಗೂ ಲಭ್ಯವಾಗುತ್ತಿದ್ದು, ರೂ.68,000 ವರೆಗೆ ಬೆಲೆ ಇಳಿಕೆಯಾಗಿದೆ. ನಾವಿಲ್ಲಿ ಈ ಎಂಪಿವಿಯ ಪ್ರತಿಯೊಂದು ರೂಪಾಂತರಗಳ (ವೇರಿಯೆಂಟ್) ಹೊಸ ಎಕ್ಸ್-ಶೋರೂಂ ದರವು ಎಷ್ಟಾಗಿದೆ ಎಂಬುದರ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.

ನೂತನ 'ಮಾರುತಿ ಇಕೋ' ಎಂಪಿವಿ ವಿವಿಧ ರೂಪದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. ಸ್ಟ್ಯಾಂಡರ್ಡ್ 5 ಸೀಟರ್ ರೂಪಾಂತರ ರೂ.5,20,900, ಸ್ಟ್ಯಾಂಡರ್ಡ್ 6 ಸೀಟರ್ ರೂಪಾಂತರ ರೂ.5,47,400, ಎಸಿ 5 ಸೀಟರ್ ರೂಪಾಂತರ ರೂ.5,53,800 ಹಾಗೂ ಎಸಿ ಸಿಎನ್‌ಜಿ 5 ಸೀಟರ್ ರೂಪಾಂತರ ರೂ.6,35,800 (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

Maruti Suzuki Eeco Mpv Variants Wise New Price details

ಮಾರುತಿ ಸುಜುಕಿ ಇಕೋ ವಿಶೇಷತೆಗಳೇನು:

ಈ ಎಂಪಿವಿಯು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಬ್ಲ್ಯಾಕ್ ಔಟ್ ಬಂಪರ್‌, ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್‌ಲೈಟ್‌ಗಳನ್ನು ಒಳಗೊಂಡಿದೆ. ಮೆಟಾಲಿಕ್ ಗ್ಲಿಸ್ಟೆನಿಂಗ್ ಗ್ರೇ, ಬ್ಲ್ಯೂಯಿಸ್ ಬ್ಲ್ಯಾಕ್, ಸಾಲಿಡ್ ವೈಟ್, ಮೆಟಾಲಿಕ್ ಬ್ರಿಸ್ಕ್ ಬ್ಲೂ ಹಾಗೂ ಮೆಟಾಲಿಕ್ ಸಿಲ್ಕಿ ಸಿಲ್ವರ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

ಇದು ಹೆಚ್ಚು ವಿಶಾಲ ಗಾತ್ರದಲ್ಲಿದೆ. 3675 ಎಂಎಂ ಉದ್ದ, 1475 ಎಂಎಂ ಅಗಲ ಹಾಗೂ 1825 ಎಂಎಂ ಎತ್ತರವಿದೆ. ಜೊತೆಗಿದು 160 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2350 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ. 1050 ಕೆಜಿ ತೂಕವಿದೆ.

Maruti Suzuki Eeco Mpv Variants Wise New Price details

ಹೊಸ ಮಾರುತಿ ಸುಜುಕಿ ಇಕೋ ಎಂಪಿವಿ ಶಕ್ತಿಶಾಲಿಯಾದ 2 ಪವರ್‌ಟ್ರೇನ್‌ನ್ನು ತನ್ನದಾಗಿಸಿಕೊಂಡಿದೆ. 1.2 ಲೀಟರ್ ಜಿ12ಬಿ ಪೆಟ್ರೋಲ್ ಹಾಗೂ 1.2 ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ ಕೇವಲ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಮಾತ್ರ ಹೊಂದಿದೆ.

ಈ ಕಾರು ಉತ್ತಮ ಇಂಧನ ದಕ್ಷತೆಯನ್ನು ಒಳಗೊಂಡಿದೆ. 19 ರಿಂದ 27 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 40 ಲೀಟರ್‌ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಮತ್ತು 65 ಕೆಜಿಯಷ್ಟು ಸಿಎನ್‌ಜಿ ಟ್ಯಾಂಕ್‍ನ್ನು ಹೊಂದಿದೆ. 140 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. 15.6 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.

ಇದು 5/6 ಆಸನಗಳನ್ನು ಒಳಗೊಂಡಿದೆ. ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಹೆಚ್ಚಿನ ಲಗೇಜ್ ಸಾಧ್ಯವಾಗುವಂತೆ 275 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿದೆ. ಸೆಮಿ ಡಿಜಿಟಲ್ ಸ್ಪೀಡೋಮೀಟರ್, ಬೇಸಿಕ್ ಆಡಿಯೊ ಸಿಸ್ಟಮ್, ಮ್ಯಾನುವಲ್ ಎಸಿ, 12ವಿ - ಚಾರ್ಜಿಂಗ್ ಸಾಕೆಟ್ ಮತ್ತು ರೇರ್ ಪಾರ್ಕಿಂಗ್ ಸೆನ್ಸಾರ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಈ ಕಾರು ಸುರಕ್ಷತೆಗೂ ಹೆಸರುವಾಸಿಯಾಗಿದ್ದು, ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಪಾರ್ಕಿಂಗ್ ಸೆನ್ಸರ್‌ಗಳು, ಚೈಲ್ಡ್ ಲಾಕ್‌ಗಳು ಹಾಗೂ ಸೀಟ್‌ಬೆಲ್ಟ್ ರಿಮೈಂಡರ್‌ನ್ನು ಒಳಗೊಂಡಿದೆ.

ಒಟ್ಟಾರೆಯಾಗಿ ನೂತನ 'ಮಾರುತಿ ಸುಜುಕಿ ಇಕೋ' ಎಂಪಿವಿ ಬೆಲೆ ಇಳಿಕೆಯಾಗಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಈ ದಸರಾ ಹಾಗೂ ಮುಂಬರುವ ದೀಪಾವಳಿ ಹಬ್ಬದ ಸಂದರ್ಭದಲ್ಲಿ 'ಇಕೋ' ಕಾರು ಮತ್ತಷ್ಟು ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುವ ನಿರೀಕ್ಷೆಯಿದೆ.

More from DriveSpark

Article Published On: Sunday, September 28, 2025, 10:22 [IST]
English summary
Maruti suzuki eeco mpv variants wise new price details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+