27 ಕಿ.ಮೀ ಮೈಲೇಜ್, 6 ಲಕ್ಷ ಬೆಲೆಯ 7-ಸೀಟರ್ ಕಾರು: ಆದರೆ ಯಾರೂ ಖರೀದಿಸುತ್ತಿಲ್ಲ ಯಾಕೆ?

ಭಾರತದಲ್ಲಿ ಬಹುತೇಕರ ಕಾರು ಖರೀದಿಸುವ ಕನಸನ್ನು ನನಸು ಮಾಡಿರುವ ಮಾರುತಿ ಸುಜುಕಿ, ತನ್ನ ಅಗ್ಗದ ಬೆಲೆಯ ಕಾರುಗಳನ್ನು ನೀಡುವ ಮೂಲಕ ಕಾರು ಮಾರಾಟದಲ್ಲಿ ನಂ.1 ಸ್ಥಾನದಲ್ಲಿ ಮುಂದುವರಿಯುತ್ತಿದೆ. ಕಂಪನಿ ನೀಡುವ ಬೆಸ್ಟ್‌ ಫ್ಯಾಮಿಲಿ ಕಾರುಗಳಲ್ಲಿ, 2010 ರಲ್ಲಿ ಬಿಡುಗಡೆಯಾದ ಮಾರುತಿ ಸುಜುಕಿ ಇಕೋ ಸದ್ಯ ಬಡವರ ಕಾರಾಗಿ ಗುರ್ತಿಸಿಕೊಂಡಿದೆ. ಬಜೆಟ್ ಸ್ನೇಹಿ 5/7 ಸೀಟರ್ ಆಯ್ಕೆಯಲ್ಲಿ ದೊರೆಯುವ ಈ ಕಾರಿನ ಮಾರಾಟವು ನಿರಾಶಾದಾಯಕವಾಗಿದೆ. ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದರು ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿದೆ.

ಮಾರುತಿ ಇಕೋ ಕಳೆದ ತಿಂಗಳ ಮಾರಾಟದ ಅಂಕಿಅಂಶಗಳು ದುರ್ಬಲವಾಗಿದ್ದು, ಕೇವಲ 11,438 ಯುನಿಟ್ ಕಾರುಗಳು ಮಾತ್ರ ಮಾರಾಟವಾಗಿವೆ. ಕಳೆದ ವರ್ಷ ಏಪ್ರಿಲ್‌ನಲ್ಲಿ (2024) 12,060 ಯುನಿಟ್ ಕಾರುಗಳು ಮಾರಾಟವಾಗಿದ್ದವು. ಬಜೆಟ್ ಸ್ನೇಹಿ ಆಯ್ಕೆಯಾಗಿರುವ ಮಾರುತಿ ಸುಜುಕಿ ಇಕೋ ಮಾರಾಟದಲ್ಲಿ ಕುಸಿತ ಕಂಡಿದೆ. ಪ್ರಸ್ತುತ, ಮಾರುತಿ ಇಕೋ ದೇಶದ ಅಗ್ಗದ 7 ಸೀಟರ್ ಕಾರಾಗಿದ್ದರು ಕಳಪೆ ಮಾರಾಟಕ್ಕೆ ಕಾರಣವೇನಾಗಿರಬಹುದು?

maruti-suzuki-eeco-sales-report-2025-april

ಇದರ ಎಕ್ಸ್ ಶೋರೂಂ ಬೆಲೆಯು ರೂ.5.44 ಲಕ್ಷದಿಂದ ಆರಂಭವಾಗುತ್ತದೆ. ಇದನ್ನು ಕಳೆದ ಕೆಲ ತಿಂಗಳುಗಳಿಂದ ನವೀಕರಿಸಲಾಗಿಲ್ಲ, ಗ್ರಾಹಕರು ಸದಾ ಹೊಸತನವನ್ನು ಬಯಸುವುದರಿಂದ ಇದು ಪ್ರಮುಖ ಕಾರಣವಾಗಿರಬಹುದು ಎಂಬುದು ನಮ್ಮ ಅನಿಸಿಕೆ. ಇತ್ತೀಚೆಗೆ ಕಾರಿನ ಸುರಕ್ಷತೆ ಹೆಚ್ಚಿಸಿ ಸ್ಟ್ಯಾಂಡರ್ಡ್ ಆಗಿ 6 ಏರ್ ಬ್ಯಾಗ್‌ಗಳನ್ನು ನೀಡಲಾಗುತ್ತಿದೆ. ಈ ನವೀಕರಣವು ಮುಂದಿನ ತಿಂಗಳಲ್ಲಿ ಮಾರಾಟ ಹೆಚ್ಚಿಸುವ ಸಾಧ್ಯತೆ ಇದೆ.

ಮಾರುತಿ ಇಕೋ 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 81 ಬಿಹೆಚ್ ಪವರ್ ಮತ್ತು 104 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸಿಎನ್‌ಜಿ ಆಯ್ಕೆಯೂ ಲಭ್ಯವಿದೆ. ಇದು ಪೆಟ್ರೋಲ್ ನಲ್ಲಿ ಪ್ರತಿ ಲೀಟರ್‌ಗೆ 20 ಕಿ.ಮೀ ಮತ್ತು ಸಿಎನ್‌ಜಿಯಲ್ಲಿ 27 ಕಿ.ಮೀ / ಕೆಜಿ ಮೈಲೇಜ್ ನೀಡುತ್ತದೆ. ಇದು 5 ಮತ್ತು 7 ಸೀಟರ್ ಆಯ್ಕೆಗಳಲ್ಲಿ ಬರುತ್ತದೆ.

maruti-suzuki-eeco-sales-report-2025-april

ಕೈಗೆಟುಕುವ 7 ಆಸನಗಳ ಕಾರುಗಳಿಗೆ ಭಾರತದಲ್ಲಿ ಬೇಡಿಕೆ ಹೆಚ್ಚುತ್ತಿದೆ, ಇದು ಕುಟುಂಬಗಳು ಮತ್ತು ಸಣ್ಣ ಉದ್ಯಮಗಳಿಗೆ ಅನುಕೂಲಕರ ಆಯ್ಕೆಯಾಗಿದೆ. ಸುರಕ್ಷತಾ ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌ಗಳು, ಫ್ರಂಟ್ ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ಅಲರ್ಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿದೆ.

ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ ಸೆಮಿ-ಡಿಜಿಟಲ್ ಸ್ಪೀಡೋಮೀಟರ್, ರಿಕ್ಲೈನಿಂಗ್ ಫ್ರಂಟ್ ಸೀಟ್‌ಗಳು, ಮ್ಯಾನುವಲ್ ಎಸಿ ಮತ್ತು 12 ವಿ ಚಾರ್ಜಿಂಗ್ ಸಾಕೆಟ್ ಪ್ರಮುಖ ವೈಶಿಷ್ಟ್ಯಗಳಾಗಿವೆ. ಮೆಟಾಲಿಕ್ ಗ್ಲಿಸಿಂಗ್ ಗ್ರೇ, ಬ್ಲೂಯಿಶ್ ಬ್ಲ್ಯಾಕ್, ಮೆಟಾಲಿಕ್ ಬ್ರಿಸ್ಕ್ ಬ್ಲೂ, ಮೆಟಾಲಿಕ್ ಸಿಲ್ಕಿ ಸಿಲ್ವರ್, ಸಾಲಿಡ್ ವೈಟ್ ಎಂಬ ಮೊನೊಟೋನ್ ಬಣ್ಣಗಳ ಆಯ್ಕೆಗಳೊಂದಿಗೆ ಬರುತ್ತದೆ.

maruti-suzuki-eeco-sales-report-2025-april

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಕೈಗೆಟುಕುವ ಬೆಲೆ, ಇಂಧನ ದಕ್ಷತೆ ಮತ್ತು ಬಹುಮುಖತೆಯನ್ನು ಬಯಸುವವರಿಗೆ ಮಾರುತಿ ಸುಜುಕಿ ಇಕೋ ಸೂಕ್ತವಾಗಿದ್ದು, ಸದ್ಯ ತನ್ನ ವಿಭಾಗದಲ್ಲಿ ಮಾರುತಿ ಇಕೋ ಯಾವುದೇ ನೇರ ಪ್ರತಿಸ್ಪರ್ಧಿ ಕಾರುಗಳನ್ನು ಹೊಂದಿಲ್ಲ. ವಾರಂತ್ಯ ಹಾಗೂ ರಜಾದಿನಗಳಲ್ಲಿ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 275 ರಿಂದ 540 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಕೂಡ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, May 5, 2025, 10:10 [IST]
English summary
Maruti suzuki eeco sales report 2025 april
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+