Maruti: ಸೇಫ್ಟಿಯಲ್ಲಿ ಟಾಟಾಗೆ ಸವಾಲು... ಕಳಪೆ ಕಾರು ಎಂದವರಿಗೆ ಮಾರುತಿ ಸರಿಯಾದ ಉತ್ತರ!

ಮಾರುತಿ ಸುಜುಕಿ (Maruti Suzuki) ತನ್ನ ಎಲ್ಲಾ ಕಾರುಗಳ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನಹರಿಸುತ್ತಿದೆ. ಸಾಲಾಗಿ ಎಲ್ಲಾ ಕಾರುಗಳಲ್ಲಿ 6 ಏರ್ ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ) ನೀಡುವ ಮೂಲಕ ಪ್ರಯಾಣಿಕರನ್ನು ಮತ್ತಷ್ಟು ಸುರಕ್ಷಿತವಾಗಿಸಲು ಸಜ್ಜಾಗಿದೆ. ಈಗಾಗಲೇ ಗ್ರ್ಯಾಂಡ್ ವಿಟಾರಾ, ಆಲ್ಟೋ ಕೆ10 ಮತ್ತು ಸೆಲೆರಿಯೊ ಕಾರುಗಳಲ್ಲಿ 6 ಏರ್ ಬ್ಯಾಗ್‌ಗಳನ್ನು ನೀಡಿ ಎಲ್ಲರನ್ನು ಅಚ್ಚರಿಗೊಳಿಸಿ, ಇದೀಗ ಮಾರುತಿ ಇಕೋದಲ್ಲೂ 6 ಏರ್ ಬ್ಯಾಗ್ ನೀಡಿ (ಸ್ಟ್ಯಾಂಡರ್ಡ್ ಆಗಿ) ಎಲ್ಲರು ಹುಬ್ಬೇರಿಸುವಂತೆ ಮಾಡಿದೆ.

ಮಾರುತಿ ಇಕೋ ಈಗ ತನ್ನ ಎಲ್ಲಾ ವೇರಿಯೆಂಟ್‌ಗಳಲ್ಲಿ 6 ಏರ್ ಬ್ಯಾಗ್‌ಗಳೊಂದಿಗೆ ಬರುತ್ತದೆ. ಈ ಅಪ್‌ಡೇಟ್‌ಗಿಂತ ಮೊದಲು ಈ ದೊಡ್ಡ ಎಂಪಿವಿ 2 ಏರ್ ಬ್ಯಾಗ್‌ಗಳನ್ನು ಮಾತ್ರ ಹೊಂದಿತ್ತು (ಸ್ಟ್ಯಾಂಡರ್ಡ್ ಆಗಿ). ಜೊತೆಗೆ ಹೊಸ ಅಪ್‌ಡೇಟ್‌ ಭಾಗವಾಗಿ ಮಾರುತಿ ಸುಜುಕಿ ಈ ಹಿಂದೆ ಇದ್ದ ಸೀಟಿಂಗ್ ಆಯ್ಕೆಗಳನ್ನು ಈಗ ಬದಲಿಸಿದೆ. ಫಾರ್ವರ್ಡ್ ಫೇಸಿಂಗ್ ಸೀಟುಗಳೊಂದಿಗೆ ಹೊಸ 6-ಸೀಟರ್ ಆವೃತ್ತಿಯನ್ನು ನೀಡುತ್ತಿರುವುದರಿಂದ ಆಸನ ಆಯ್ಕೆಗಳನ್ನು ಮರುಹೊಂದಿಸಲಾಗಿದೆ.

maruti-suzuki-eeco-updated-with-6-airbags-and-captain-seats

ಇದರಿಂದಾಗಿ ಬೆಲೆಗಳು ಕೂಡ ಬದಲಾಗುವ ಕಾರಣ ಹೊಸ ಬೆಲೆಗಳ ಬಗ್ಗೆ ಇನ್ನೂ ಮಾಹಿತಿ ಹಂಚಿಕೊಂಡಿಲ್ಲ. ಈ ಹಿಂದೆ ಇದ್ದ ಬೆಲೆಗಳನ್ನು ನೋಡುವುದಾದ್ರೆ, ಮಾರುತಿ ಸುಜುಕಿ ಇಕೋ 5-ಸೀಟರ್ ಸ್ಟ್ಯಾಂಡರ್ಡ್ (ಒ) ಪೆಟ್ರೋಲ್ ವೇರಿಯೆಂಟ್ ಬೆಲೆಯು 5.44 ಲಕ್ಷ ರೂ. ಇದ್ದರೇ, 5-ಸೀಟರ್ ಎಸಿ(ಒ) ಪೆಟ್ರೋಲ್ ಬೆಲೆಯು 5.80 ಲಕ್ಷ ರೂ. ಇದೆ. 5-ಸೀಟರ್ ಎಸಿ(ಒ) ಸಿಎನ್‌ಜಿ ವೇರಿಯೆಂಟ್ ಬೆಲೆಯು 6.70 ಲಕ್ಷ ರೂ. ಇದೆ.

ಉಳಿದಂತೆ ಹೊಸದಾಗಿ ಪರಿಚಯಿಸಿರುವ 6-ಸೀಟರ್ ಸ್ಟ್ಯಾಂಡರ್ಡ್ (ಒ) ಪೆಟ್ರೋಲ್ ವೇರಿಯೆಂಟ್ ಬೆಲೆಯನ್ನು ಇನ್ನು ನಿಗದಿಪಡಿಸಿಲ್ಲ. ಹೊಸ ವೇರಿಯೆಂಟ್ ಪರಿಚಯಿಸಿ ಈ ಹಿಂದೆ ಇದ್ದ 7-ಸೀಟರ್ ಸ್ಟ್ಯಾಂಡರ್ಡ್ (ಒ) ಪೆಟ್ರೋಲ್ ವೇರಿಯೆಂಟ್ ಅನ್ನು ನಿಲ್ಲಿಸಲಾಗಿದೆ. ಇದರ ಬೆಲೆಯು ಎಕ್ಸ್‌ ಶೋರೂಂ ದರದಂತೆ 5.73 ಲಕ್ಷ ರೂ. ಇತ್ತು.

maruti-suzuki-eeco-updated-with-6-airbags-and-captain-seats

7-ಸೀಟರ್ ಸ್ಥಾನದಲ್ಲಿ, ಇಕೋವನ್ನು ಈಗ 5-ಸೀಟರ್ ಅಥವಾ 6-ಸೀಟರ್ ನಡುವೆ ಆಯ್ಕೆಯೊಂದಿಗೆ ನೀಡಲಾಗುತ್ತದೆ. 6-ಸೀಟರ್ ಆವೃತ್ತಿಯು ಮಧ್ಯಮ ಸಾಲಿನ ಪ್ರಯಾಣಿಕರಿಗಾಗಿ ಕ್ಯಾಪ್ಟನ್ ಸೀಟುಗಳನ್ನು ಹೊಂದಿದೆ. ಮಾರುತಿ ಇಕೋ ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ. ಆದರೆ ಇದನ್ನು ಸಬ್ -4 ಮೀ ರೆನಾಲ್ಟ್ ಟ್ರೈಬರ್ ಎಂಪಿವಿಗೆ ಕೈಗೆಟುಕುವ ಆಯ್ಕೆ ಎಂದು ಪರಿಗಣಿಸಬಹುದು.

ಮಾರುತಿ ಸುಜುಕಿ ಇಕೋ ಸುರಕ್ಷತೆ ವಿಷಯಕ್ಕೆ ಬಂದರೆ 6 ಏರ್ ಬ್ಯಾಗ್ ಗಳು, ಮುಂಭಾಗದ ಆಸನಗಳಿಗೆ ಸೀಟ್ ಬೆಲ್ಟ್ ರಿಮೈಂಡರ್ ಗಳು, ಇಬಿಡಿಯೊಂದಿಗೆ ಎಬಿಎಸ್, ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್ ಬೆಲ್ಟ್ ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ) ಅನ್ನು ಹೊಂದಿದೆ.

ಮಾರುತಿ ಇಕೋದಲ್ಲಿರುವ ಇತರ ವೈಶಿಷ್ಟ್ಯಗಳಲ್ಲಿ ಹೀಟರ್‌ನೊಂದಿಗೆ ಮ್ಯಾನುವಲ್ ಎಸಿ, ಮ್ಯಾನುವಲ್ ವಿಂಡೋಗಳು ಮತ್ತು ಕ್ಯಾಬಿನ್ ಲೈಟ್‌ಗಳು, ಮೊನೊಟೋನ್ ಮಲ್ಟಿ-ಇನ್ಫರ್ಮೇಷನ್ ಡಿಸ್ಪ್ಲೇ (ಎಂಐಡಿ) ಹೊಂದಿರುವ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇದರಲ್ಲಿವೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಆಯ್ಕೆಯನ್ನು ಸಹ ಹೊಂದಿದೆ. ಸಿಎನ್‌ಜಿ 5 ಸೀಟರ್ ಇಕೋ ಮಾತ್ರ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, April 10, 2025, 15:33 [IST]
English summary
Maruti suzuki eeco updated with 6 airbags and captain seats
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+