7-ಸೀಟರ್.. 2 ಕುಟುಂಬ ಹೋಗಬಹುದು, 26 Km ಮೈಲೇಜ್.. 9 ಲಕ್ಷ ಬೆಲೆ, ಈ ಮಾರುತಿ ಕಾರಿಗೆ ಫುಲ್ ಡಿಮ್ಯಾಂಡ್!

ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಜನಪ್ರಿಯ ಫ್ಯಾಮಿಲಿ ಎಂಪಿವಿಯಾಗಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇದರೊಂದಿಗೆ ವಿಶಾಲವಾದ ಒಳಾಂಗಣ ಮತ್ತು ಉತ್ತಮವಾದ ಇಂಧನ ದಕ್ಷತೆಗೂ ಹೆಸರುವಾಸಿಯಾಗಿದೆ. ಹೀಗಾಗಿ ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಜುಲೈನಲ್ಲಿಯೂ 'ಎರ್ಟಿಗಾ' ಕಾರುಗಳು ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದ್ದು, ಒಟ್ಟು 16,604 ಯುನಿಟ್‌ಗಳನ್ನು ಖರೀದಿದಾರರು ಕೊಂಡುಕೊಂಡಿದ್ದಾರೆ.

ಇದೇ ವರ್ಷದ ಮೊದಲ 6 ತಿಂಗಳಲ್ಲೂ 'ಮಾರುತಿ ಸುಜುಕಿ ಎರ್ಟಿಗಾ' ಎಂಪಿವಿ ಮಾರಾಟದಲ್ಲಿ ಸ್ಪರ್ಧಾತ್ಮಕವಾದ ಪ್ರಗತಿ ಕಾಣಲಾಗಿದೆ. ಬರೋಬ್ಬರಿ 77,743 ಯುನಿಟ್‌ಗಳನ್ನು ಮಾರಲಾಗಿದೆ. ಈ ಅಂಕಿ ಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾಸಿಕ ಸರಾಸರಿ 12,957 ಯುನಿಟ್‌ಗಳು ಮಾರಾಟವಾಗಿವೆ.

Maruti Suzuki Ertiga Mpv July 2025 Sales Details

ಮಾರುತಿ ಸುಜುಕಿ ಎರ್ಟಿಗಾ ವಿಶೇಷತೆಗಳೇನು:

ಈ ಎಂಪಿವಿಯು ಅಗ್ಗದ ದರದಲ್ಲಿ ಗ್ರಾಹಕರ ಖರೀದಿಗೆ ದೊರೆಯಲಿದ್ದು, ತುಂಬಾ ಕುಟುಂಬಗಳಿಗೆ ಅತ್ಯುತ್ತಮಯು ಆಯ್ಕೆಯಾಗಿದೆ. ರೂ. 9.11 ಲಕ್ಷದಿಂದ ರೂ.13.40 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ ಹಾಗೂ ಝಡ್ಎಕ್ಸ್ಐ (ಒ) ಒಳಗೊಂಡಂತೆ ಹಲವು ರೂಪಾಂತರಗಳೊಂದಿಗೂ (ವೇರಿಯೆಂಟ್) ದೊರೆಯುತ್ತದೆ.

ಇದು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಫ್ಲೋಟಿಂಗ್ ಟೈಪ್ ರೂಫ್ ಡಿಸೈನ್ ಮತ್ತು 3ಡಿ ಒರಿಗಮಿ ಸ್ಟೈಲ್ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಪಡೆದಿದೆ. ಪರ್ಲ್ ಆರ್ಕ್ಟಿಕ್ ವೈಟ್, ಸ್ಪ್ಲೆಂಡಿಡ್ ಸಿಲ್ವರ್, ಮೆಟಾಲಿಕ್ ಮ್ಯಾಗ್ಮಾ ಗ್ರೇ, ಪರ್ಲ್ ಮೆಟಾಲಿಕ್ ಆಬರ್ನ್ ರೆಡ್, ಪರ್ಲ್ ಮೆಟಾಲಿಕ್ ಆಕ್ಸ್‌ಫರ್ಡ್ ಬ್ಲೂ, ಪರ್ಲ್ ಮೆಟಾಲಿಕ್ ಡಿಗ್ನಿಟಿ ಬ್ರೌನ್ ಹಾಗೂ ಪರ್ಲ್ ಮಿಡ್‌ನೈಟ್ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

Maruti Suzuki Ertiga Mpv July 2025 Sales Details

ನೂತನ ಎರ್ಟಿಗಾ ಶಕ್ತಿಯುತವಾದ ಎರಡು ಪವರ್‌ಟ್ರೇನ್‌ನ್ನು ಹೊಂದಿದೆ. ಇದರ 1.5-ಲೀಟರ್ ಪೆಟ್ರೋಲ್ ಎಂಜಿನ್, 102 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 139 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

ಮತ್ತೊಂದು 1.5-ಲೀಟರ್ ಪೆಟ್ರೋಲ್/ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 87 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 121 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕೇವಲ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಮಾತ್ರ ಒಳಗೊಂಡಿದೆ. ಈ ಕಾರು 20 ರಿಂದ 26 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.

ಇದು 4,395 ಎಂಎಂ ಉದ್ದ, 1,735 ಅಗಲ ಮತ್ತು 1,690 ಎಂಎಂ ಎತ್ತರವು ಸಹ ಇದೆ. 185 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,740 ವೀಲ್‌ಬೇಸ್‌ನ್ನು ಹೊಂದಿದೆ. 7 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 209 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿದೆ. 45 ಲೀಟರ್‌ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ.

ಹೊಸ ಎರ್ಟಿಗಾ ಎಂಪಿವಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪ್ಯಾಡಲ್ ಶಿಫ್ಟರ್ಸ್, ಕೀಲೆಸ್ ಎಂಟ್ರಿ, ಎಂಜಿನ್ ಸ್ಟಾರ್ಟ್/ ಸ್ಟಾಪ್ ಬಟನ್ ಮತ್ತು ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ರೇರ್ ಪಾರ್ಕಿಂಗ್ ಸೇನಾರ್ಸ್ ಮತ್ತು ಹಿಲ್ - ಹೋಲ್ಡ್ ಅಸಿಸ್ಟ್‌ನ್ನು ಪಡೆದಿದೆ.

Article Published On: Wednesday, August 6, 2025, 10:44 [IST]
English summary
Maruti suzuki ertiga mpv july 2025 sales details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+