26.11 ಕಿ.ಮೀ ಮೈಲೇಜ್, 7-ಸೀಟರ್.. ಮಾರುತಿಯ ಈ ಫ್ಯಾಮಿಲಿ ಕಾರು ತೆಗೆದುಕೊಳ್ಳಬೇಕೇ.. ಈ ವಿಚಾರದ ಬಗ್ಗೆ ಗೊತ್ತಿರಲಿ!
ಮಾರುತಿ ಸುಜುಕಿ ಇಂಡಿಯಾ (Maruti Suzuki India), ಅರೆನಾ ಮತ್ತು ನೆಕ್ಸಾ ಡೀಲರ್‌ಶಿಪ್ ಮೂಲಕ ಮಾರಾಟಗೊಳಿಸುವ ಎಲ್ಲ ಕಾರುಗಳ ಬೆಲೆಯನ್ನು ಫೆಬ್ರವರಿ 1ಕ್ಕೆ ಅನ್ವಯವಾಗುವಂತೆ ಏರಿಕೆ ಮಾಡಿದೆ. ನೂತನ ದರಗಳು ರೂ.1,500 ರಿಂದ ರೂ.32,500 ವರೆಗೆ ಹೆಚ್ಚಳಗೊಂಡಿದೆ. ತಯಾರಿಕಾ ವೆಚ್ಚಗಳು ಅಧಿಕಗೊಂಡ ಹಿನ್ನೆಲೆ, ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ. ಈ ದರ ಏರಿಕೆ ಬಿಸಿ ಜನಪ್ರಿಯ ಎರ್ಟಿಗಾ (Ertiga) ಎಂಪಿವಿಗೂ ತಟ್ಟಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ನೂತನ ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಎಂಪಿವಿಯ ಆರಂಭಿಕ ಶ್ರೇಣಿ ರೂಪಾಂತರ (ಎಂಟ್ರಿ-ಲೆವೆಲ್ ವೇರಿಯೆಂಟ್) ಎಲ್ಎಕ್ಸ್ಐ (ಒ) ರೂ.15,000 ಬೆಲೆ ಏರಿಕೆಯನ್ನು ಪಡೆದುಕೊಂಡಿದೆ. ಇದರೊಂದಿಗೆ ಉಳಿದ ರೂಪಾಂತರಗಳ ದರ ರೂ.10,000 ಹೆಚ್ಚಳಗೊಂಡಿದೆ. ಸದ್ಯ, ನೂತನ ಎರ್ಟಿಗಾ ರೂ.8.84 ಲಕ್ಷದಿಂದ ರೂ.13.13 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

ಮಾರುತಿ ಸುಜುಕಿ ಎರ್ಟಿಗಾ ವಿಶೇಷತೆಗಳೇನು: ಈ ಕಾರು ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ ಮತ್ತು ಝಡ್ಎಕ್ಸ್ಐ ಪ್ಲಸ್ ಎಂಬ ಆಕರ್ಷಕ ರೂಪಾಂತರಗಳ (ವೇರಿಯೆಂಟ್) ಆಯ್ಕೆಯನ್ನು ಹೊಂದಿದೆ. ಜೊತೆಗೆ ಮೆಟಾಲಿಕ್ ಮ್ಯಾಗ್ಮಾ ಗ್ರೇ, ಪರ್ಲ್ ಮಿಡ್‌ನೈಟ್ ಬ್ಲ್ಯಾಕ್, ಪರ್ಲ್ ಆರ್ಕ್ಟಿಕ್ ವೈಟ್, ಡಿಗ್ನಿಟಿ ಬ್ರೌನ್, ಪರ್ಲ್ ಮೆಟಾಲಿಕ್ ಆಕ್ಸ್‌ಫರ್ಡ್ ಬ್ಲೂ ಹಾಗೂ ಸ್ಪ್ಲೆಂಡಿಡ್ ಸಿಲ್ವರ್ ಒಳಗೊಂಡಂತೆ ವಿವಿಧ ಬಣ್ಣಗಳೊಂದಿಗೂ ದೊರೆಯುತ್ತದೆ.
ನೂತನ ಮಾರುತಿ ಎರ್ಟಿಗಾ ಎಂಪಿವಿ ಶಕ್ತಿಯುತವಾದ 1.5-ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 5-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದಿದೆ. ಇದು ಯಾವ ಬೈಕ್‌ಗೂ ಕಡಿಮೆಯಿಲ್ಲದ ರೀತಿಯಲ್ಲಿ 20.3 ರಿಂದ 26.11 ಕೆಎಂಪಿಎಲ್‌ವರೆಗೂ ಮೈಲೇಜ್ ನೀಡುತ್ತದೆ.

ಈ ಎರ್ಟಿಗಾ ಫ್ಯಾಮಿಲಿ ಕಾರಾಗಿರುವುದರಿಂದ 7 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಸಂಚಾರ ನಡೆಸಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು 209 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ತನ್ನದಾಗಿಸಿಕೊಂಡಿದೆ.
ಹೊಸ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಪ್ಯಾಡಲ್ ಶಿಫ್ಟರ್, ಕ್ರೂಸ್ ಕಂಟ್ರೋಲ್ ಹಾಗೂ ಆಟೋ ಎಸಿ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ 4 ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ರೇರ್ ಪಾರ್ಕಿಂಗ್ ಸೇನಾರ್ಸ್ & ಹಿಲ್-ಹೋಲ್ಡ್ ಅಸಿಸ್ಟ್ ಅನ್ನು ಹೊಂದಿದೆ.
ಮಾರುತಿ ಸುಜುಕಿ ಎರ್ಟಿಗಾ ಮಾರಾಟ ವಿವರ: ಕಳೆದ ತಿಂಗಳು (ಜನವರಿ - 2025) ಈ ಎಂಪಿವಿಯ 14,248 ಯುನಿಟ್‌ಗಳನ್ನು ಕಂಪನಿಯು ಮಾರಾಟಗೊಳಿಸಿದೆ. 2024 ಇದೇ ಅವಧಿಯಲ್ಲಿ ಮಾರಲ್ಪಟ್ಟ 14,632 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ ಸ್ವಲ್ಪ ಅಂದರೆ ಶೇಕಡ -3% ಕುಸಿತವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications