Maruti Fronx: 7.5 ಲಕ್ಷದ ಕಾರಿಗೆ ಫುಲ್ ಡಿಮ್ಯಾಂಡ್: 3 ಲಕ್ಷ ಕಾರುಗಳು ಡೆಲಿವರಿ: ಮುಗಿಬಿದ್ದ ಜನ!

ಭಾರತದ ಪ್ರಮುಖ ಕಾರು ತಯಾರಕ ಕಂಪನಿಯಾಗಿರುವ ಮಾರುತಿ ಸುಜುಕಿ, ತನ್ನ ಕೈಗೆಟುಕುವ ಕಾರುಗಳಿಂದಲೇ ಭಾರೀ ಜನಪ್ರಿಯತೆ ಗಳಿಸಿದೆ. ಸದ್ಯ ಮಾರುತಿಗೆ ಫ್ರಾಂಕ್ಸ್ ಎಂಬ ಕಾರು ಭಾರೀ ಲಾಭವನ್ನು ತಂದುಕೊಡುತ್ತಿದೆ. ಯಾವ ಮಟ್ಟಿಗೆ ಅಂದರೆ ಕೇವಲ ಎರಡು ವರ್ಷಗಳಲ್ಲಿ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಕಾರುಗಳು ಮಾರಾಟವಾಗಿವೆ. ಅಷ್ಟಕ್ಕೂ ಆ ಕಾರು ಯಾವುದು ಗೊತ್ತಾ? 'ಮಾರುತಿ ಸುಜುಕಿ ಫ್ರಾಂಕ್ಸ್' (Maruti Suzuki Fronx), ಕೈಗೆಟುಕುವ ಬೆಲೆಯಲ್ಲಿ ಆಕರ್ಷಕ ಡಿಸೈನ್, ಅತ್ಯುತ್ತಮ ಫೀಚರ್ಸ್, ಅಧಿಕ ಮೈಲೇಜ್‌ನೊಂದಿಗೆ ಸದ್ಯ ದೇಶದಲ್ಲಿ ಉತ್ತಮ ಮಾರಾಟ ಕಾಣುತ್ತಿರುವ ಕಾರಾಗಿ ಜನಪ್ರಿಯತೆ ಪಡೆದುಕೊಂಡು ಮುನ್ನುಗ್ಗುತ್ತಿದೆ.

ಮಾರುತಿ ಸುಜುಕಿ ಬಹಿರಂಗಪಡಿಸಿರುವ ಮಾಹಿತಿಯ ಪ್ರಕಾರ, ಕೇವಲ 10 ತಿಂಗಳುಗಳಲ್ಲಿ ಭಾರತದಲ್ಲಿ 1 ಲಕ್ಷ ಯುನಿಟ್ ಕಾರುಗಳು ಮತ್ತು 18 ತಿಂಗಳುಗಳಲ್ಲಿ 2 ಲಕ್ಷ ಯುನಿಟ್ ಕಾರುಗಳ ಮಾರಾಟವನ್ನು ತಲುಪಿದ ಅತ್ಯಂತ ವೇಗದ ಕಾರಾಗಿದೆ. ಕೇವಲ ಎರಡು ವರ್ಷಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಯುನಿಟ್ ಕಾರುಗಳ ಮಾರಾಟವನ್ನು ಸಾಧಿಸಿದೆ. ಈ ಮಟ್ಟದ ಮಾರಾಟಕ್ಕೆ ಅದರ ಅಗ್ಗದ ಬೆಲೆಯು ಪ್ರಮುಖ ಕಾರಣವಾಗಿದೆ.

maruti-suzuki-fronx-achieves-3-lakh-sales-milestone-in-two-years

ಮಾರುತಿ ಸುಜುಕಿ ಫ್ರಾಂಕ್ಸ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ಬೇಸ್‌ ವೇರಿಯೆಂಟ್ ಬೆಲೆಯು ರೂ. 7,52,000 ದಿಂದ ಟಾಪ್ ವೇರಿಯೆಂಟ್ ಬೆಲೆಯು ರೂ. 13,04,000 ಗಳಾಗಿದೆ. ಈ ಅಗ್ಗದ ಬೆಲೆಯಿಂದಾಗಿ ಮಾರುತಿ 2023-24ರ ಆರ್ಥಿಕ ವರ್ಷದಲ್ಲಿ 1,34,735 ಕಾರುಗಳನ್ನು ಮಾರಾಟ ಮಾಡಿದೆ. ವರ್ಷ ಕಳೆದಂತೆ ಕಾರಿಗೆ ಬೇಡಿಕೆ ಹೆಚ್ಚಾಗಿ 2024-25ರ ಆರ್ಥಿಕ ವರ್ಷದಲ್ಲಿ 1,66,216 ಕಾರುಗಳು ಮಾರಾಟವಾಗಿವೆ.

ವಾರ್ಷಿಕವಾಗಿ ಶೇ23.36 ರಷ್ಟು ಬೆಳವಣಿಗೆ ಸಾಧಿಸುವ ಮೂಲಕ ಎರಡು ವರ್ಷಗಳಲ್ಲಿ ಒಟ್ಟು 3,00,951 ಕಾರುಗಳು ಮಾರಾಟವಾಗಿವೆ. ಇನ್ನು ಭಾರತದಲ್ಲಿ ಮಾರುತಿ ಸುಜುಕಿ ಫ್ರಾಂಕ್ಸ್ ಕಾರಿಗೆ ಪ್ರಮುಖ ಪ್ರತಿ ಸ್ಪರ್ಧಿಗಳಾಗಿ ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಕಿಯಾ ಸೊನೆಟ್, ಕಿಯಾ ಸೈರಸ್ ಮತ್ತು ಸ್ಕೋಡಾ ಕೈಲಾಕ್ ಕಾರುಗಳು ಪೈಪೋಟಿ ನೀಡುತ್ತವೆ.

maruti-suzuki-fronx-achieves-3-lakh-sales-milestone-in-two-years

ಫ್ರಾಂಕ್ಸ್ ವಿಶೇಷತೆಗಳು: ಈ ಕಾರಿನಲ್ಲಿ 9-ಇಂಚಿನ ಎಚ್‌ಡಿ ಸ್ಮಾರ್ಟ್ ಪ್ಲೇ ಪ್ರೊ+ ಇನ್ಫೋಟೈನ್ ಮೆಂಟ್ ಸಿಸ್ಟಂ, ವೈರ್ ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಅರ್ಕಾಮಿಸ್ ಸರೌಂಡ್ ಸೌಂಡ್ ಸಿಸ್ಟಮ್, 360 ಡಿಗ್ರಿ ವ್ಯೂ ಕ್ಯಾಮೆರಾ ಮತ್ತು ವೈರ್ ಲೆಸ್ ಚಾರ್ಜರ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ನೊಂದಿಗೆ ಹೆಡ್-ಅಪ್ ಡಿಸ್ ಪ್ಲೇ ಹೊಂದಿದೆ.

ಸುರಕ್ಷತೆಯ ವಿಚಾರಕ್ಕೆ ಬಂದರೆ, ಆರು ಏರ್ ಬ್ಯಾಗ್‌ಗಳು, ಹಿಲ್ - ಹೋಲ್ಡ್ ಅಸಿಸ್ಟ್ ಮತ್ತು ರೋಲ್ ಓವರ್ ತಗ್ಗಿಸುವಿಕೆಯೊಂದಿಗೆ ಇಎಸ್‌ಪಿ, 3-ಪಾಯಿಂಟ್ ಇಎಲ್ ಆರ್ ಸೀಟ್ ಬೆಲ್ಟ್ ಗಳು, ಇಬಿಡಿ ಮತ್ತು ಬ್ರೇಕ್ ಅಸಿಸ್ಟ್ ನೊಂದಿಗೆ ಎಬಿಎಸ್ ಮತ್ತು ಐಸೊಫಿಕ್ಸ್ ಚೈಲ್ಡ್ ಸೀಟ್ ಮೌಂಟ್‌ಗಳಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

maruti-suzuki-fronx-achieves-3-lakh-sales-milestone-in-two-years

ಫ್ರಾಂಕ್ಸ್ ಎಂಜಿನ್ ವಿಷಯಕ್ಕೆ ಬಂದರೆ 1.2-ಲೀಟರ್ ಡ್ಯುಯಲ್-ಜೆಟ್ ಡ್ಯುಯಲ್-ವಿವಿಟಿ ಪೆಟ್ರೋಲ್ ಮತ್ತು 1.0-ಲೀಟರ್ ಟರ್ಬೊ ಬೂಸ್ಟರ್ ಜೆಟ್ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. 1.2-ಲೀಟರ್ ಎಂಜಿನ್ 5-ಸ್ಪೀಡ್ ಎಂಟಿ ಅಥವಾ 5-ಸ್ಪೀಡ್ ಎಎಂಟಿಯೊಂದಿಗೆ ಬರುತ್ತದೆ. 1.0-ಲೀಟರ್ ಎಂಜಿನ್ 5-ಸ್ಪೀಡ್ ಎಂಟಿ ಮತ್ತು 6-ಸ್ಪೀಡ್ ಎಟಿ ಆಯ್ಕೆಗಳನ್ನು ಹೊಂದಿದೆ.

1.2-ಲೀಟರ್ ಎಂಜಿನ್ 5-ಸ್ಪೀಡ್ ಎಂಟಿಯೊಂದಿಗೆ ಸಿಎನ್‌ಜಿ ಆಯ್ಕೆಯನ್ನು ಸಹ ಹೊಂದಿದೆ. 1.0 ಎಂಟಿಗೆ 21.5 ಕಿ.ಮೀ, 1.0 ಎಟಿಗೆ 20.01 ಕಿ.ಮೀ, 1.2 ಎಂಟಿಗೆ 21.79 ಕಿ.ಮೀ, 1.2 ಎಎಂಟಿಗೆ 22.89 ಕಿ.ಮೀ, ಮತ್ತು 1.2 ಎಂಟಿ ಸಿಎನ್‌ಜಿಯಲ್ಲಿ 28.51 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿದೆ.

Article Published On: Friday, April 4, 2025, 12:52 [IST]
English summary
Maruti suzuki fronx achieves 3 lakh sales milestone in two years
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+