ಕೇವಲ 7 ಲಕ್ಷ ಬೆಲೆ... 28.51 ಕಿ.ಮೀ ಮೈಲೇಜ್: ಫುಲ್ ಡಿಮ್ಯಾಂಡ್... 4 ಲಕ್ಷ ಕಾರುಗಳು ಉಡೀಸ್!

ಏಪ್ರಿಲ್ 2023 ರಲ್ಲಿ ಬಿಡುಗಡೆಯಾಗಿ ಕೇವಲ 32 ತಿಂಗಳಲ್ಲಿ 4,00,000 ದೇಶೀಯ ಮಾರಾಟವನ್ನು ಮೀರಿದ ಮೊದಲ ನೆಕ್ಸಾ ಎಸ್‌ಯುವಿ ಎಂಬ ಹೆಗ್ಗಳಿಕೆಗೆ 'ಮಾರುತಿ ಸುಜುಕಿ ಫ್ರಾಂಕ್ಸ್' ಪಾತ್ರವಾಗಿದೆ. ಇದುವರೆಗೆ ಮಾರಾಟದಲ್ಲಿ ದಾಖಲೆ ನಿರ್ಮಿಸಿದ್ದ ಬಲೆನೊ ಮತ್ತು ಗ್ರ್ಯಾಂಡ್ ವಿಟಾರಾದಂತಹ ಮಾಡಲ್‌ಗಳನ್ನು ಮೀರಿಸಿದೆ. ಬಿಡುಗಡೆಯಾದಾಗಿನಿಂದ 2025 ರ ನವೆಂಬರ್ ಅಂತ್ಯದವರೆಗೆ, ಫ್ರಾಂಕ್ಸ್ ಒಟ್ಟು 4,09,817 ಯುನಿಟ್‌ ಕಾರುಗಳನ್ನು ಮಾರಾಟ ಮಾಡಿದೆ ಎಂದು ಪ್ರಮುಖ ಆಟೋ ಸುದ್ದಿಸಂಸ್ಥೆ 'ಆಟೋ ಕಾರ್ ಪ್ರೊಫೆಷನಲ್' ವರದಿ ಮಾಡಿದೆ.

ಇದರೊಂದಿಗೆ, ಪ್ರೀಮಿಯಂ ಬಲೆನೊ ಆಧಾರಿತ ಕಾಂಪ್ಯಾಕ್ಟ್ SUV ಈ ಮಾರಾಟದ ಮೈಲಿಗಲ್ಲನ್ನು ಸಾಧಿಸಿದ ಮೊದಲ ನೆಕ್ಸಾ-ಮಾರುಕಟ್ಟೆ SUV ಆಗಿದೆ. ಬಿಡುಗಡೆಯಾದ ಕೇವಲ 10 ತಿಂಗಳಲ್ಲಿ 1,00,000 ಯುನಿಟ್‌ಗಳನ್ನು, 14 ತಿಂಗಳಲ್ಲಿ 1,50,000 ಯುನಿಟ್‌ಗಳನ್ನು, 17 ತಿಂಗಳಲ್ಲಿ 2,00,000 ಯುನಿಟ್‌ಗಳನ್ನು, 23 ತಿಂಗಳಲ್ಲಿ 3,00,000 ಯೂನಿಟ್ ಕಾರುಗಳು ಮಾರಾಟವಾಗಿವೆ. ಈಗ 4,00,000 ಮಾರಾಟದ ಮೈಲಿಗಲ್ಲನ್ನು 32 ತಿಂಗಳಲ್ಲಿ ದಾಟಿದೆ.

maruti-suzuki-fronx-becomes-first-nexa-suv-to-cross-4-lakh-sales

ಇನ್ನು ಕಳೆದ ಎಂಟು ತಿಂಗಳಲ್ಲಿ ಬರೋಬ್ಬರಿ 1,00,000 ಯುನಿಟ್‌ ವಾಹನಗಳು ಮಾರಾಟವಾಗಿವೆ. 20 ಕ್ಕೂ ಹೆಚ್ಚು ಮಾಡಲ್‌ಗಳನ್ನು ಹೊಂದಿರುವ ಅತ್ಯಂತ ಸ್ಪರ್ಧಾತ್ಮಕ ಕಾಂಪ್ಯಾಕ್ಟ್ ಎಸ್‌ಯುವಿ ಮಾರುಕಟ್ಟೆಯಲ್ಲಿ ಫ್ರಾಂಕ್ಸ್‌ನ ಬಲವಾದ ಬೇಡಿಕೆಯನ್ನು ದೃಢಪಡಿಸುತ್ತದೆ. ಎನ್‌ಸಿಆರ್, ದೆಹಲಿ, ಮುಂಬೈ, ಕೊಚ್ಚಿ ಮತ್ತು ಬೆಂಗಳೂರಿನಂತಹ ಶ್ರೇಣಿ 1 ಮತ್ತು ಶ್ರೇಣಿ 2 ನಗರಗಳಲ್ಲಿ ಗ್ರಾಹಕರಿಗೆ ಜನಪ್ರಿಯವಾಗಿ ಆಯ್ಕೆಯಾಗಿದೆ.

ಮಾರುತಿ ಸುಜುಕಿ ಫ್ರಾಂಕ್ಸ್ ವಿಶೇಷತೆಗಳು: ಮಾರುತಿ ಫ್ರಾಂಕ್ಸ್ ಬೇಸ್‌ ವೇರಿಯೆಂಟ್ ಬೆಲೆ ರೂ.6.85 ಲಕ್ಷ(ಎಕ್ಸ್‌ ಶೋರೂಂ)ದಿಂದ ಪ್ರಾರಂಭವಾಗುತ್ತದೆ. ಟಾಪ್ ವೇರಿಯೆಂಟ್ ಬೆಲೆ ರೂ.11.98 ಲಕ್ಷ(ಎಕ್ಸ್‌ ಶೋರೂಂ)ವಿದೆ. ಕಾರಿನಲ್ಲಿ 9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, ಹೆಡ್ಸ್-ಅಪ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್ ಮತ್ತು ಆಟೋ ಕ್ಲೇಮೇಟ್ ಕಂಟ್ರೋಲ್‌ನಂತಹ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 308 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ನೀಡಲಾಗಿದೆ.

maruti-suzuki-fronx-becomes-first-nexa-suv-to-cross-4-lakh-sales

ಪೆಟ್ರೋಲ್ ಹಾಗೂ ಸಿಎನ್‌ಜಿ ಆಯ್ಕೆಯಲ್ಲಿ ಸಿಗ್ಮಾ, ಡೆಲ್ಟಾ ಪ್ಲಸ್ (ಒ) ಸೇರಿದಂತೆ ಒಟ್ಟು 16 ವಿವಿಧ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಸುರಕ್ಷತೆ ವಿಷಯಕ್ಕೆ ಬಂದರೆ ಈ ಎಸ್‌ಯುವಿ 6 ಏರ್‌ಬ್ಯಾಗ್‌, ಹಿಲ್ ಹೋಲ್ಡ್ ಅಸಿಸ್ಟ್, 360-ಡಿಗ್ರಿ ಕ್ಯಾಮೆರಾ, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿಯು 1.2-ಲೀಟರ್ ಪೆಟ್ರೋಲ್, 1-ಲೀಟರ್ ಟರ್ಬೊ ಪೆಟ್ರೋಲ್ ಹಾಗೂ ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯಲ್ಲಿ ಲಭ್ಯವಿದೆ. ವೇರಿಯೆಂಟ್‌ಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಪೆಟ್ರೋಲ್ ಆವೃತ್ತಿಗಳು 20.1 ರಿಂದ 22.89 ಕಿ.ಮೀ ಮೈಲೇಜ್ ಹಾಗೂ ಸಿಎನ್‌ಜಿ ಮಾದರಿಗಳು 28.51 ಕಿ.ಮೀ/ಕೆ.ಜಿ ಮೈಲೇಜ್ ನೀಡುತ್ತವೆ.

maruti-suzuki-fronx-becomes-first-nexa-suv-to-cross-4-lakh-sales

ಫ್ರಾಂಕ್ಸ್ ಎಸ್‌ಯುವಿಗೆ ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್ ಕಾರುಗಳು ಪ್ರಮುಖ ಪ್ರತಿಸ್ಪರ್ಧಿಗಳಾಗಿವೆ. ಒಟ್ಟಾರೆ ಈ ಪ್ರಮುಖಾಂಶಗಳೊಂದಿಗೆ ಇದು ಮಾರುತಿ ಸುಜುಕಿ ನೆಕ್ಸಾ ಲೈನಪ್‌ನಲ್ಲಿ ಸಿಗುವ ಸಣ್ಣ ಪ್ರೀಮಿಯಂ ಕಾರಾಗಿದೆ. ಮಾರುತಿ ಸುಜುಕಿ ಲೈನ್‌ಅಪ್‌ನಲ್ಲಿಯೇ ಅತ್ಯಂತ ಸ್ಟೈಲಿಷ್ ಎಸ್‌ಯುವಿ ಎಂಬ ಖ್ಯಾತಿ ಪಡೆದಿರುವ ಫ್ರಾಂಕ್ಸ್ ಎಸ್‌ಯುವಿ ಉತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, December 11, 2025, 18:09 [IST]
English summary
Maruti suzuki fronx becomes first nexa suv to cross 4 lakh sales
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+