Maruti Suzuki: 28.51 ಕಿ.ಮೀ ಮೈಲೇಜ್.. 7.52 ಲಕ್ಷ, 5-ಸೀಟರ್.. ಈ ಪ್ರಖ್ಯಾತ ಕಾರಿಗೆ ಮುಗಿಬಿದ್ದ ಗ್ರಾಹಕರು!
ಭಾರತದ ಕಾರು ಮಾರುಕಟ್ಟೆಯಲ್ಲಿ ಹ್ಯಾಚ್‌ಬ್ಯಾಕ್ ಹಾಗೂ ಸೆಡಾನ್‌ಗಳಿಗೆ ಹೋಲಿಕೆ ಮಾಡಿದರೆ, ಎಸ್‌ಯುವಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಇವುಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಹೊಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿಯೂ ಗ್ರಾಹಕರು ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಅದರಲ್ಲೂ ಮಾರುತಿ ಸುಜುಕಿ (Maruti Suzuki) ಮಾರಾಟಗೊಳಿಸುವ 'ಫ್ಯಾಂಕ್ಸ್' ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಈ ವರ್ಷಾರಂಭದ ಮೊದಲ ತಿಂಗಳೇ ಉತ್ತಮ ಸಂಖ್ಯೆಯಲ್ಲಿ ಕೂಡ ಮಾರಾಟವಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಕಳೆದ ತಿಂಗಳು (ಜನವರಿ - 2025) ಮಾರುತಿ ಸುಜುಕಿ ಬರೋಬ್ಬರಿ 15,192 ಯುನಿಟ್ ಫ್ಯಾಂಕ್ಸ್ (Fronx) ಎಸ್‌ಯುವಿಗಳನ್ನು ಮಾರಾಟಗೊಳಿಸಿದೆ. 2024ರ ಇದೇ ಅವಧಿಯಲ್ಲಿ ಮಾರಲ್ಪಟ್ಟ 13,643 ಯುನಿಟ್‌ಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ (YoY) ಶೇಕಡ 11% ಪ್ರಗತಿ ಸಾಧಿಸಿದೆ. ಈ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ಅತಿ ಸಂಖ್ಯೆಯಲ್ಲಿ ಮಾರಾಟಗೊಂಡ ಟಾಪ್ 10 ಎಸ್‌ಯುವಿಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

ಮೊದಲ ಸ್ಥಾನದಲ್ಲಿ ಹ್ಯುಂಡೈ ಕ್ರೆಟಾ (18,522 ಯುನಿಟ್), ಎರಡನೇ ಸ್ಥಾನದಲ್ಲಿ ಟಾಟಾ ಪಂಚ್ (16,231 ಯುನಿಟ್), ಮೂರನೇ ಸ್ಥಾನದಲ್ಲಿ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (15,784 ಯುನಿಟ್), ನಾಲ್ಕನೇ ಸ್ಥಾನದಲ್ಲಿ ಮಹೀಂದ್ರಾ ಸ್ಕಾರ್ಪಿಯೋ (15,442 ಯುನಿಟ್) ಹಾಗೂ ಐದನೇ ಸ್ಥಾನದಲ್ಲಿ ಟಾಟಾ ನೆಕ್ಸಾನ್ (15,397 ಯುನಿಟ್) ಇದೆ.
ಏಳನೇ ಸ್ಥಾನದಲ್ಲಿ ಮಾರುತಿ ಸುಜುಕಿ ಬ್ರೆಝಾ (14,747 ಯುನಿಟ್), ಎಂಟನೇ ಸ್ಥಾನದಲ್ಲಿ ಹುಂಡೈ ವೆನ್ಯೂ (11,106 ಯುನಿಟ್), ಒಂಬತ್ತನೇ ಸ್ಥಾನದಲ್ಲಿ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ (8,454 ಯುನಿಟ್) ಮತ್ತು ಹತ್ತನೇ ಸ್ಥಾನವನ್ನು ಮಹೀಂದ್ರಾ ಎಕ್ಸ್‌ಯುವಿ 700 (8,399 ಯುನಿಟ್) ತನ್ನದಾಗಿಸಿಕೊಂಡಿದೆ.

ಮಾರುತಿ ಸುಜುಕಿ ಫ್ಯಾಂಕ್ಸ್ (Maruti Suzuki Fronx) ವಿಶೇಷತೆಗಳೇನು: ಈ ಎಸ್‌ಯುವಿ ಕನಿಷ್ಠ ರೂ.7.52 ಲಕ್ಷ ಹಾಗೂ ಗರಿಷ್ಠ ರೂ.13.04 ಲಕ್ಷ ಎಕ್ಸ್-ಶೋರೂಂ ಬೆಲೆಯನ್ನು ಹೊಂದಿದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. ಪ್ರವಾಸದ ವೇಳೆಯಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು 308 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಹೊಂದಿದೆ.
ಈ ಕಾರು, 1-ಲೀ. ಟರ್ಬೊ ಪೆಟ್ರೋಲ್, 1.2-ಲೀ. ಡುಯಲ್ಜೆಟ್ ಪೆಟ್ರೋಲ್ ಮತ್ತು 1.2-ಲೀ. ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಮತ್ತು 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 20.1 ರಿಂದ 28.51 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ನೂತನ ಎಸ್‌ಯುವಿ 9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಕ್ರೂಸ್ ಕಂಟ್ರೋಲ್, ಆಟೋ ಕ್ಲೇಮೇಟ್ ಕಂಟ್ರೋಲ್, ಹೆಡ್ಸ್-ಅಪ್ ಡಿಸ್ಪ್ಲೇ ಮತ್ತು ಕ್ರೂಸ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications