ಬಡವರ ಅಂಬಾರಿ.. ಬೆಲೆಯೂ ಕಮ್ಮಿ, 21 ಕಿ.ಮೀ ಮೈಲೇಜ್.. 5-ಸೀಟರ್, ಈ ಚಿನ್ನದಂತಹ ಕಾರಿನ ಹೊಸ ದರವೆಷ್ಟು?
ಮಾರುತಿ ಸುಜುಕಿ ಇಗ್ನಿಸ್ (Maruti Suzuki Ignis) ಮಧ್ಯಮ ವರ್ಗದ ಗ್ರಾಹಕರ ನೆಚ್ಚಿನ ಕಾರಾಗಿ ಹೊರಹೊಮ್ಮಿದೆ. ಸೆಪ್ಟೆಂಬರ್ 22 ರಿಂದ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (GST) ದರಗಳು ಅಧಿಕೃತವಾಗಿ ಜಾರಿಯಾಗಿದೆ. ಇದರ ಸಂಪೂರ್ಣ ಪ್ರಯೋಜವು 'ಇಗ್ನಿಸ್' ಕಾರಿಗೂ ಲಭ್ಯವಿದೆ. ರೂ.71,300 ವರೆಗೆ ಬೆಲೆ ಇಳಿಕೆಯಾಗಿದೆ. ನಾವಿಲ್ಲಿ ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಪ್ರತಿಯೊಂದು ರೂಪಾಂತರಗಳ (ವೇರಿಯೆಂಟ್) ಹೊಸ 'ಎಕ್ಸ್-ಶೋರೂಂ' ದರ ಎಷ್ಟಾಗಿದೆ ಎಂಬುದರ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.
ನೂತನ 'ಮಾರುತಿ ಇಗ್ನಿಸ್' ಹ್ಯಾಚ್‌ಬ್ಯಾಕ್ ಹಲವು ವಿಧದಲ್ಲಿ ಗ್ರಾಹಕರ ಖರೀದಿ ಲಭ್ಯವಿದೆ. ಇದರ ಸಿಗ್ಮಾ (ಮ್ಯಾನುವಲ್ ಟ್ರಾಸ್ಮಿಷನ್) ರೂಪಾಂತರ ರೂ.5,35 ಲಕ್ಷ, ಡೆಲ್ಟಾ (ಮ್ಯಾನುವಲ್ ಟ್ರಾಸ್ಮಿಷನ್) ರೂಪಾಂತರ ರೂ.5.84 ಲಕ್ಷ, ಮತ್ತು ಡೆಲ್ಟಾ (ಆಟೋಮೆಟಿಕ್ ಟ್ರಾಸ್ಮಿಷನ್) ಡುಯಲ್-ಟೋನ್ ರೂಪಾಂತರ ರೂ.6.29 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ.

ಅದೇ ರೀತಿಯಲ್ಲಿ ಉಳಿದ ರೂಪಾಂತರಗಳು (ವೇರಿಯೆಂಟ್) ಸಹ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತವೆ. ಜಿಟಾ (ಮ್ಯಾನುವಲ್ ಟ್ರಾಸ್ಮಿಷನ್) ಡುಯಲ್-ಟೋನ್ ರೂಪಾಂತರ ರೂ.6.50 ಲಕ್ಷ ಜಿಟಾ (ಆಟೋಮೆಟಿಕ್ ಟ್ರಾಸ್ಮಿಷನ್) ಡುಯಲ್-ಟೋನ್ ರೂಪಾಂತರ ರೂ.6.95 ಲಕ್ಷ ಆಲ್ಫಾ (ಮ್ಯಾನುವಲ್ ಟ್ರಾಸ್ಮಿಷನ್) ಡುಯಲ್-ಟೋನ್ ರೂಪಾಂತರ ರೂ.7.10 ಲಕ್ಷ ಹಾಗೂ ಆಲ್ಫಾ (ಅಟೋಮೆಟಿಕ್ ಟ್ರಾಸ್ಮಿಷನ್) ಡುಯಲ್-ಟೋನ್ ರೂಪಾಂತರ ರೂ.7.55 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.
ಮಾರುತಿ ಸುಜುಕಿ ಇಗ್ನಿಸ್ ವಿಶೇಷತೆಗಳೇನು:
ಈ ಕಾರು ಉತ್ತಮವಾದ ವಿನ್ಯಾಸವನ್ನು ಒಳಗೊಂಡಿದ್ದು, ನೋಡುಗರನ್ನು ಆಕರ್ಷಿಸಬಲ್ಲದು. ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು & 15 ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ನೆಕ್ಸಾ ಬ್ಲ್ಯೂ, ಲ್ಯೂಸೆಂಟ್ ಆರೆಂಜ್, ಸಿಲ್ಕಿ ಸಿಲ್ವರ್, ಪರ್ಲ್ ಆರ್ಕ್ಟಿಕ್ ವೈಟ್, ಪರ್ಲ್ ಮಿಡ್‌ನೈಟ್ ಬ್ಲ್ಯಾಕ್ ಹಾಗೂ ಬ್ಲೂಯಿಶ್ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ. 180 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,435 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ. ಸರಿ ಸುಮಾರು 865 ಕೆಜಿ ತೂಕವಿದೆ.

ಇದು 5-ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಓಡಾಟ ನಡೆಸಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 260 - ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.
ನೂತನ 'ಇಗ್ನಿಸ್' ಹ್ಯಾಚ್‌ಬ್ಯಾಕ್ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. 1.2-ಲೀ. ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಟ್ರಾಸ್ಮಿಷನ್ & 5-ಸ್ಪೀಡ್ ಆಟೋಮೆಟಿಕ್ ಟ್ರಾಸ್ಮಿಷನ್ (ಗೇರ್‌ಬಾಕ್ಸ್) ಆಯ್ಕೆಯನ್ನು ತನ್ನದಾಗಿಸಿಕೊಂಡಿದೆ. 21 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 175 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಕೇವಲ 13 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ಈ ಕಾರಿನ ಕ್ಯಾಬಿನ್ ವಿನ್ಯಾಸವು ತುಂಬಾ ಅಚ್ಚುಕಟ್ಟಾಗಿದೆ. ಅದಕ್ಕೆ ತಕ್ಕಂತೆ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಸ್ಟಾರ್ಟ್/ ಸ್ಟಾಪ್ ಬಟನ್, ಕೀಲೆಸ್ ಎಂಟ್ರಿ ಮತ್ತು ಪವರ್ ವಿಂಡೋಗಳನ್ನು ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. 32 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‍ನ್ನು ಹೊಂದಿದೆ.
ಇದು ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಸೆಂಟ್ರಲ್ ಲಾಕಿಂಗ್ ಸಿಸ್ಟಮ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿದೆ. 'ಇಗ್ನಿಸ್' ಹ್ಯಾಚ್‌ಬ್ಯಾಕ್‌ಗೆ ಟಾಟಾ ಟಿಯಾಗೊ ಹಾಗೂ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರುಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.


Click it and Unblock the Notifications








