ಅತ್ಯಂತ ಆಕರ್ಷಕ ಕಾರು... 23 ಕಿ.ಮೀ ಮೈಲೇಜ್, 1 ಲಕ್ಷ ಡಿಸ್ಕೌಂಟ್: ಆದ್ರೆ ಯಾರೂ ಖರೀದಿಸುತ್ತಿಲ್ಲ!
ಮಾರುತಿ ಸುಜುಕಿ ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿದ್ದು, ಭಾರತದಲ್ಲಿ ಪ್ರಸ್ತುತ ಕಂಪನಿಯು 17 ಕಾರುಗಳನ್ನು ಮಾರಾಟ ಮಾಡುತ್ತಿದೆ. ಅಗ್ಗದ ಬೆಲೆಗೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ಕಂಪನಿಯು ತನ್ನ ಕಾರುಗಳನ್ನು ಮಾಡುತ್ತದೆ. ಇದರಲ್ಲಿ ಪ್ರೀಮಿಯಂ ಕಾರುಗಳನ್ನು ನೆಕ್ಸಾ ಮೂಲಕ ಮಾರಾಟ ಮಾಡಿದರೆ, ಬಡ ಹಾಗೂ ಮಧ್ಯಮ ವರ್ಗದವರಿಗಾಗಿ ಅರೆನಾ ಮೂಲಕ ಕಾರುಗಳನ್ನು ಮಾರಾಟ ಮಾಡುತ್ತದೆ. ಕಂಪನಿ ನೀಡುವ ಕೆಲವು ಕಾರುಗಳು ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿವೆ. ಅಂತಹ ಕಾರುಗಳಲ್ಲಿ ಮಾರುತಿಯ ಪ್ರೀಮಿಯಂ ಕಾರಾಗಿರುವ ಇನ್ವಿಕ್ಟೋ ಕೂಡ ಒಂದು.
ಕಂಪನಿಯ ತೀರಾ ಅತಿ ಕಡಿಮೆ ಮಾರಾಟವಾದ ಕಾರಾಗಿ ಇನ್ವಿಕ್ಟೋ ಕಳಪೆ ಪ್ರದರ್ಶನ ನೀಡಿದೆ. ಪ್ರತಿ ಬಾರಿ ಕಡಿಮೆ ಮಾರಾಟವಾಗುತ್ತಿದ್ದ ಕಂಪನಿಯ ಮತ್ತೆರಡು ಕಾರುಗಳಾದ ಜಿಮ್ನಿ ಮತ್ತು ಸಿಯಾಜ್ ಗಿಂತ ಈ ಬಾರಿ ಮಾರುತಿ ಇನ್ವಿಕ್ಟೋ ಕಾರುಗಳು ಕಡಿಮೆ ಮಾರಾಟವಾಗಿವೆ. ಕಳೆದ ತಿಂಗಳು ಇನ್ವಿಕ್ಟೋದ ಕೇವಲ 201 ಯುನಿಟ್ ಕಾರುಗಳು ಮಾತ್ರ ಮಾರಾಟವಾಗಿವೆ.

ಅಂದ ಹಾಗೆ ಮಾರುತಿ ಇನ್ವಿಕ್ಟೋ ನವೆಂಬರ್ 2024 ರಲ್ಲಿ 434 ಕಾರುಗಳು, ಡಿಸೆಂಬರ್ 2024 ರಲ್ಲಿ 825 ಕಾರುಗಳು, ಜನವರಿ 2025 ರಲ್ಲಿ 556 ಕಾರುಗಳು, ಫೆಬ್ರವರಿ 2025 ರಲ್ಲಿ 380 ಕಾರುಗಳು, ಮಾರ್ಚ್ 2025 ರಲ್ಲಿ 294 ಕಾರುಗಳು ಹಾಗೂ ಏಪ್ರಿಲ್ 2025 ರಲ್ಲಿ ಕೇವಲ 201 ಕಾರುಗಳು ಮಾರಾಟವಾಗುವ ಮೂಲಕ ಕಾರು ಸಂಪೂರ್ಣ ಕುಸಿತವನ್ನು ಅನುಭವಿಸಿದೆ.
ಆಫರ್: ಇನ್ವಿಕ್ಟೋದ ಆಲ್ಫಾ ರೂಪಾಂತರವು 25,000 ರೂ.ಗಳ ನಗದು ರಿಯಾಯಿತಿಯೊಂದಿಗೆ ಬರುತ್ತದೆ. ಇನ್ವಿಕ್ಟೋ 1.15 ಲಕ್ಷ ರೂ.ಗಳ ಸ್ಕ್ರ್ಯಾಪೇಜ್ ಬೋನಸ್ ಅಥವಾ 1 ಲಕ್ಷ ರೂ. ವಿನಿಮಯ ಬೋನಸ್‌ನೊಂದಿಗೆ ಬರುತ್ತದೆ. ರಾಜ್ಯ ಅಥವಾ ನಗರವನ್ನು ಅವಲಂಬಿಸಿ ರಿಯಾಯಿತಿಗಳು ಬದಲಾಗಬಹುದು. ಇದು ಕಳೆದ ಏಪ್ರಿಲ್ ತಿಂಗಳಿನಲ್ಲಿ ಲಭ್ಯವಿದ್ದ ಆಫರ್‌ಗಳಾಗಿವೆ.

ಆದರೂ ಮಾರುತಿ ಇನ್ವಿಕ್ಟೋ ಕಾರನ್ನು ಯಾರೂ ಖರೀದಿಸುತ್ತಿಲ್ಲ, ಇದಕ್ಕೆ ಮುಖ್ಯ ಕಾರಣವೆಂದರೆ ಮಾರುತಿ ಇನ್ವಿಕ್ಟೋ ಕಾರಿನ ಬೆಲೆಯಾಗಿದೆ. ಇದರ ಆರಂಭಿಕ ಬೆಲೆಯು ರೂ. 25.51 ಲಕ್ಷದಿಂದ ರೂ. 29.22 ಲಕ್ಷಗಳಾಗಿದೆ (ಎಕ್ಸ್ ಶೋರೂಂ ಬೆಲೆಗಳು). ಇದೆ ಬೆಲೆಯಲ್ಲಿ ಇತರ ಕಂಪನಿಗಳ ಕಾರುಗಳು ಇನ್ನೂ ಹೆಚ್ಚಿನ ಫೀಚರ್ಸ್ ಹಾಗೂ ಹೆಚ್ಚಿನ ಸೌಕರ್ಯ ಒದಗಿಸುವ ಕಾರುಗಳನ್ನು ನೀಡುವುದು ಕಾರಾಣವಾಗಿರಬಹುದು.
ಇನ್ವಿಕ್ಟೋ ವಿಶೇಷತೆಗಳು: ಈ ಮಾರುತಿ ಸುಜುಕಿ ಇನ್ವಿಕ್ಟೋ, 2-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 186 PS ಗರಿಷ್ಠ ಪವರ್ ಹಾಗೂ 206 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇ-ಸಿವಿಟಿ (e-CVT) ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿದಾರರಿಗೆ ದೊರೆಯುತ್ತದೆ. ಮೈಲೇಜ್ ವಿಚಾರವಾಗಿ ಹೇಳುವುದಾದರೆ, 23.24 kmpl ಮೈಲೇಜ್ ಪಡೆದಿದೆ.

10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 50+ ಕನೆಕ್ಟ್ದ್ ಕಾರ್ ಟೆಕ್ ಫೀಚರ್ಸ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 7-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ರೂಫ್ ಆಂಬಿಯೆಂಟ್ ಲೈಟಿಂಗ್, ಸನ್‌ರೂಫ್, ವೈರ್‌ಲೆಸ್ ಚಾರ್ಜಿಂಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಈ ಮಾರುತಿ ಸುಜುಕಿ ಇನ್ವಿಕ್ಟೋ (Maruti Suzuki Invicto) ಎಂಪಿವಿ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚು ಅತ್ಯಾಧುನಿಕವಾಗಿದೆ. 6 ಏರ್‌ಬ್ಯಾಗ್ಸ್, VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) 360 ಡಿಗ್ರಿ ಕ್ಯಾಮೆರಾ, ಫ್ರಂಟ್ & ರೇರ್ ಪಾರ್ಕಿಂಗ್ ಸೆನ್ಸರ್ಸ್ ಹೊಂದಿದೆ. ಈ ಕಾರಿಗೆ ಕಿಯಾ ಕ್ಯಾರೆನ್ಸ್ ಪ್ರಬಲ ಎದುರಾಳಿಯಾಗಿದೆ.


Click it and Unblock the Notifications