Maruti Suzuki: ಮಾರುತಿಯಿಂದ ಹೊಸ ದರ ಪಟ್ಟಿ ಘೋಷಣೆ.. ರೂ.1.12 ಲಕ್ಷ ಬೆಲೆ ಇಳಿಕೆ, ಯಾವುದಕ್ಕೆ ಎಷ್ಟು?
ಸೆ.22ರಂದು ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಅಧಿಕೃತವಾಗಿ ಜಾರಿಯಾಗಿವೆ. ಇದರ ಸಂಪೂರ್ಣ ಲಾಭವನ್ನು ಮಾರುತಿ ಸುಜುಕಿ ಇಂಡಿಯಾ (Maruti Suzuki India), ತನ್ನ ಗ್ರಾಹಕರಿಗೆ ವರ್ಗಾಯಿಸುತ್ತಿದೆ. ಕಂಪನಿಯು ನೆಕ್ಸಾ (NEXA) ಡೀಲರ್‌ಶಿಪ್ ಮಾರಾಟಗೊಳಿಸುವ ವಿವಿಧ ಹ್ಯಾಚ್‌ಬ್ಯಾಕ್, ಎಸ್‌ಯುವಿ ಹಾಗೂ ಎಂಪಿವಿಗಳ ಬೆಲೆಯನ್ನು ರೂ.52,000 ರಿಂದ ರೂ.1.12 ಲಕ್ಷವರೆಗೆ ಇಳಿಸಿದೆ. ಬನ್ನಿ, ಯಾವ ಕಾರಿನ 'ಎಕ್ಸ್-ಶೋರೂಂ' ದರ ಎಷ್ಟಾಗಿದೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ಮಾರುತಿ ಸುಜುಕಿ ಇಗ್ನಿಸ್:
ಇದು ಪ್ರಮಖ ಹ್ಯಾಚ್‌ಬ್ಯಾಕ್ ಆಗಿದೆ. ರೂ.71,300 ವರೆಗೆ ಬೆಲೆ ಇಳಿಕೆಯಾಗಿದೆ. ಕನಿಷ್ಠ ರೂ.5.35 ಲಕ್ಷ ಹಾಗೂ ಗರಿಷ್ಠ ರೂ.7.55 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 1.2-ಲೀಟರ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 20 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 5 ಆಸನಗಳನ್ನು ಪಡೆದಿದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಮಾರುತಿ ಸುಜುಕಿ ಬಲೆನೊ:
ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ದರವು ರೂ. 86,100 ವರೆಗೆ ಕಡಿಮೆಯಾಗಿದೆ. ರೂ.5.99 ಲಕ್ಷದಿಂದ ರೂ.9.10 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 1.2-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 22 ರಿಂದ 30 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 5 ಆಸನಗಳನ್ನು ತನ್ನದಾಗಿಸಿಕೊಂಡಿದೆ.
| ಕಾರಿನ ಹೆಸರು | ಹೊಸ ಎಕ್ಸ್-ಶೋರೂಂ ದರವೆಷ್ಟು? |
| ಇಗ್ನಿಸ್ | ರೂ.5.35 ಲಕ್ಷದಿಂದ ರೂ.7.55 ಲಕ್ಷ |
| ಬಲೆನೊ | ರೂ.5.99 ಲಕ್ಷದಿಂದ ರೂ.9.10 ಲಕ್ಷ |
| ಫ್ರಾಂಕ್ಸ್ | ರೂ.6.85 ಲಕ್ಷದಿಂದ ರೂ.11.98 ಲಕ್ಷ |
| ಗ್ರ್ಯಾಂಡ್ ವಿಟಾರಾ | ರೂ.10.77 ಲಕ್ಷದಿಂದ ರೂ.19.72 ಲಕ್ಷ |
| ಜಿಮ್ನಿ | ರೂ.12.32 ಲಕ್ಷದಿಂದ ರೂ.14.45 ಲಕ್ಷ |
| ಎಕ್ಸ್ಎಲ್6 | ರೂ.11.52 ಲಕ್ಷದಿಂದ ರೂ.14.48 ಲಕ್ಷ |
| ಇನ್ವಿಕ್ಟೋ | ರೂ.24.97 ಲಕ್ಷದಿಂದ ರೂ.28.70 ಲಕ್ಷ |
ಮಾರುತಿ ಸುಜುಕಿ ಫ್ರಾಂಕ್ಸ್:
ಇದೊಂದು ಎಸ್‌ಯುವಿಯಾಗಿದೆ. ರೂ.1.12 ಲಕ್ಷವರೆಗೆ ಬೆಲೆ ಇಳಿಕೆಯಾಗಿದೆ. ಕನಿಷ್ಠ ರೂ.6.85 ಲಕ್ಷ ಮತ್ತು ಗರಿಷ್ಠ ರೂ.11.98 ಲಕ್ಷ (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ. 1-ಲೀಟರ್ ಟರ್ಬೊ ಚಾರ್ಜ್ಡ್ ಪೆಟ್ರೋಲ್, 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 1.2-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. 20 ರಿಂದ 28 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 5 ಆಸನಗಳು ಇದ್ದು, 9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ:
ಈ ಎಸ್‌ಯುವಿಯ ದರವು ರೂ.1.7 ಲಕ್ಷವರೆಗೆ ಕಡಿಮೆಯಾಗಿದೆ. ರೂ.10.77 ಲಕ್ಷದಿಂದ ರೂ.19.72 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 1.5-ಲೀಟರ್ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಮತ್ತು ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 19 ರಿಂದ 27 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದೆ.
ಮಾರುತಿ ಸುಜುಕಿ ಜಿಮ್ನಿ:
ಇದು ಆಫ್-ರೋಡ್ ಎಸ್‌ಯುವಿಯಾಗಿದೆ. ರೂ.51,900 ವರೆಗೆ ಬೆಲೆ ಇಳಿಕೆಯಾಗಿದೆ. ಕನಿಷ್ಠ ರೂ.12.32 ಲಕ್ಷ ಹಾಗೂ ಗರಿಷ್ಠ ರೂ.14.45 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 1.5-ಲೀಟರ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 16 ರಿಂದ 17 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 4 ಆಸನಗಳನ್ನು ಒಳಗೊಂಡಿದೆ. 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.

ಮಾರುತಿ ಸುಜುಕಿ ಎಕ್ಸ್ಎಲ್6:
ಈ ಎಂಪಿವಿಯ ದರವು ರೂ.52,000 ವರೆಗೆ ಕಡಿಮೆಯಾಗಿದೆ. ರೂ.11.52 ಲಕ್ಷದಿಂದ ರೂ.14.48 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 1.5-ಲೀಟರ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 20.97 ರಿಂದ 26.32 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 6 ಆಸನಗಳನ್ನು ಹೊಂದಿದೆ.
ಮಾರುತಿ ಸುಜುಕಿ ಇನ್ವಿಕ್ಟೋ:
ಇದೊಂದು ಎಂಪಿವಿಯಾಗಿದೆ. ರೂ.61,700 ವರೆಗೆ ಬೆಲೆ ಇಳಿಕೆಯಾಗಿದೆ. ಕನಿಷ್ಠ ರೂ.24.97 ಲಕ್ಷ ಮತ್ತು ಗರಿಷ್ಠ ರೂ.28.70 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 2-ಲೀಟರ್ ಸ್ಟ್ರಾಂಗ್ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಎಂಜಿನ್‌ನ್ನು ಹೊಂದಿದೆ. 23 ಕಿ.ಮೀ ವರೆಗೂ ಮೈಲೇಜ್ ಮೈಲೇಜ್ ನೀಡುತ್ತದೆ. 6 ಆಸನಗಳನ್ನು ತನ್ನದಾಗಿಸಿಕೊಂಡಿದೆ. 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.


Click it and Unblock the Notifications








