Maruti: ಅಗ್ಗದ ಮಾರುತಿ ಪ್ರೀಮಿಯಂ ಕಾರಿಗೆ ಮನಸೋತ ಗ್ರಾಹಕರು: ಜನವರಿಯಲ್ಲಿ ಮುಗಿಬಿದ್ದು ಖರೀದಿ!
ಮಾರುತಿ ಸುಜುಕಿ (Maruti Suzuki) ಕಾರುಗಳ ಅಬ್ಬರ ಜೋರಾಗಿದೆ, ಸ್ವತಃ ಕಂಪನಿಯೇ ಕಳೆದ ಜನವರಿ ತಿಂಗಳ ಮಾರಾಟ ಅಂಕಿ ಅಂಶಗಳನ್ನು ಪ್ರಕಟಿಸಿದೆ. ಎಂದಿನಂತೆ ವ್ಯಾಗನ್ ಆರ್ ಕಾರು ಭಾರತದ ಅತಿಹೆಚ್ಚು ಮಾರಾಟವಾದ ಕಾರಾಗಿ ಮತ್ತೊಮ್ಮೆ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಇತ್ತೀಚಿಗೆ ಕಂಪನಿ ನೀಡಿರುವ ಮಾಹಿತಿಯ ಆಧಾರದ ಮೇಲೆ, 2025 ರ ಜನವರಿ ತಿಂಗಳಲ್ಲಿ ಒಟ್ಟು 1,73,599 ಯುನಿಟ್ ಕಾರುಗಳು ಮಾರಾಟವಾಗಿವೆ. ಕಳೆದ ವರ್ಷ (2024) ಜನವರಿಯಲ್ಲಿ ಮಾರಾಟವಾದ 1,66,802 ಕಾರುಗಳಿಗೆ ಹೋಲಿಸಿದರೆ ಶೇಕಡಾ 4 ರಷ್ಟು ಬೆಳವಣಿಗೆಯನ್ನು ಈ ವರ್ಷ ಕಂಪನಿ ಸಾಧಿಸಿದೆ.
ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ವ್ಯಾಗನ್ ಆರ್, ಬಲೆನೊ, ಸ್ವಿಫ್ಟ್, ಸೆಲೆರಿಯೊ, ಇಗ್ನಿಸ್ ಮತ್ತು ಡಿಜೈರ್‌ನಂತಹ ಮಾದರಿಗಳು ಬೇಡಿಕೆಯಲ್ಲಿ ಹೆಚ್ಚಳವನ್ನು ಸಾಧಿಸಿದ್ದು, 82,241 ಯುನಿಟ್ ಕಾರುಗಳು ಮಾರಾಟವಾಗುವ ಮೂಲಕ ಶೇ7 ರಷ್ಟು ಬೆಳವಣಿಗೆಯನ್ನು ತೋರಿಸಿದೆ. ಮುಖ್ಯವಾಗಿ ಮಾರುತಿ ಬಲೆನೋ, ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ತೋರಿಸಿದೆ. ಈ ಮಾರಾಟದಲ್ಲಿ ಹೆಚ್ಚಿನ ಪಾಲು ವ್ಯಾಗನ್ ಆರ್ ಹಾಗೂ ಬಲೆನೊ ಕಾರುಗಳಾದ್ದಾಗಿದೆ.

ಬಲೆನೊ ವಿಶೇಷತೆಗಳು: ಮಾರುತಿ ಸುಜುಕಿ ಬಲೆನೊ (Maruti Suzuki baleno) ಕಾರಿನ ಬೆಲೆಯು ರೂ. 6.66 ಲಕ್ಷದಿಂದ ಆರಂಭವಾಗಿ ರೂ. 9.83 ಲಕ್ಷಗಳವರೆಗೆ ಇದೆ. ಸಿಎನ್‌ಜಿ ವೇರಿಯೆಂಟ್‌ಗಳ ಬೆಲೆಗಳು 8.40 ಲಕ್ಷ ರೂ.ಗಳಿಂದ ಪ್ರಾರಂಭವಾದರೆ, ಪೆಟ್ರೋಲ್ - ಆಟೋಮ್ಯಾಟಿಕ್ ರೂಪಾಂತರಗಳು 7.95 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತವೆ (ಎಲ್ಲಾ ಬೆಲೆಗಳು ಎಕ್ಸ್ ಶೋರೂಂ).
ಮಾರುತಿ ಬಲೆನೊವನ್ನು ಸಿಎನ್‌ಜಿ ಮತ್ತು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಇದು 1.2 - ಲೀಟರ್ ನ್ಯಾಚುರಲಿ-ಆಸ್ಪಿರೇಟೆಡ್ ಎಂಜಿನ್ ನೊಂದಿಗೆ ನೀಡಲಾಗುತ್ತದೆ. ಸಿಎನ್‌ಜಿ ಎಂಜಿನ್ 77.5 ಪಿಎಸ್ ಪವರ್ ಮತ್ತು 98.5 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 5 - ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್‌ನೊಂದಿಗೆ ಪ್ರತ್ಯೇಕವಾಗಿ ಜೋಡಿಸಲಾಗಿದೆ.

ಪೆಟ್ರೋಲ್ ಎಂಜಿನ್ 90 ಪಿಎಸ್ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು 5 - ಸ್ಪೀಡ್ ಮ್ಯಾನುವಲ್ ಅಥವಾ 5 - ಸ್ಪೀಡ್ ಎಎಂಟಿ (ಸ್ವಯಂಚಾಲಿತ ಮ್ಯಾನುವಲ್ ಟ್ರಾನ್ಸ್ಮಿಷನ್) ನೊಂದಿಗೆ ಬರುತ್ತದೆ. ಮಾರುತಿ ಬಲೆನೊ ಕಾರು ಟೊಯೊಟಾ ಗ್ಲಾಂಝಾ ಮತ್ತು ಸಿಟ್ರನ್ ಸಿ 3 ಕ್ರಾಸ್, ಹ್ಯುಂಡೈ ಐ20, ಟಾಟಾ ಆಲ್ಟ್ರೋಜ್‌ನಂತಹ ಕಾರುಗಳಿಗೆ ಪೈಪೋಟಿ ನೀಡುತ್ತದೆ.
ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಈ ಹ್ಯಾಚ್ ಬ್ಯಾಕ್ ಆರು ಏರ್ ಬ್ಯಾಗ್‌ಗಳು, ಎಲ್ಲಾ ಪ್ರಯಾಣಿಕರಿಗೆ 3 - ಪಾಯಿಂಟ್ ಸೀಟ್ ಬೆಲ್ಟ್, ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್‌ಗಳು, 360 - ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ), ಹಿಲ್ - ಹೋಲ್ಡ್ ಅಸಿಸ್ಟ್ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಹೊಂದಿದೆ.

ಮಾರುತಿ ಬಲೆನೊ ಫೀಚರ್ಸ್ ಬಗ್ಗೆ ಹೇಳುವುದಾದ್ರೆ, ಹೆಡ್ಸ್ - ಅಪ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪುಶ್ - ಬಟನ್ ಸ್ಟಾರ್ಟ್ / ಸ್ಟಾಪ್ ಮತ್ತು ಕೀಲೆಸ್ ಎಂಟ್ರಿ, 9 ಇಂಚಿನ ಟಚ್ ಸ್ಕ್ರೀನ್ ಮತ್ತು 6 ಸ್ಪೀಕರ್ ಅರ್ಕಮಿಸ್ ಟ್ಯೂನ್ಡ್ ಸೌಂಡ್ ಸಿಸ್ಟಮ್ ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications