ಬಡವರಿಗೆ ಪರ್ಫೆಕ್ಟ್ ಕಾರಿದು.. 33 ಕಿ.ಮೀ ಮೈಲೇಜ್, 3.50 ಲಕ್ಷ.. ಈ 5 ನಗರಗಳಲ್ಲಿ ಆನ್-ರೋಡ್ ದರವೆಷ್ಟು, EMI ಏನು?

ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಆಗಿದೆ. ಇದು ಆಕರ್ಷಕವಾಗಿರುವ ವಿನ್ಯಾಸವನ್ನು ಒಳಗೊಂಡಿದ್ದು, ಕಣ್ಮನ ಸೆಳೆಯುವ ವಿವಿಧ ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿದೆ. ಕನಿಷ್ಠ ರೂ.3.50 ಲಕ್ಷ ಹಾಗೂ ಗರಿಷ್ಠ ರೂ.5.25 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ನೀವು ನೂತನ ಕಾರೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, 'ಎಸ್-ಪ್ರೆಸ್ಸೊ' ಅತ್ಯುತ್ತಮ ಆಯ್ಕೆಯಾಗಲಿದೆ. ಇಲ್ಲಿ ದೇಶದ 5 ಪ್ರಮುಖ ನಗರಗಳಲ್ಲಿ ಈ ಹ್ಯಾಚ್‌ಬ್ಯಾಕ್‌ನ ಸ್ಟ್ಯಾಂಡರ್ಡ್ ಮಾಡೆಲ್ ಹೊಂದಿರುವ ಆನ್-ರೋಡ್ ಬೆಲೆ ಹಾಗೂ ಇಎಂಐ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

ಬೆಂಗಳೂರಿನಲ್ಲಿ 'ಮಾರುತಿ ಎಸ್-ಪ್ರೆಸ್ಸೊ' ರೂ.4.16 ಲಕ್ಷ ಆನ್-ರೋಡ್ ದರವನ್ನು ಪಡೆದಿದೆ. ರೂ.50,000 ಡೌನ್-ಪೇಮೆಂಟ್ ಪಾವತಿಸಿ ಕೊಂಡುಕೊಂಡರೆ, ರೂ.3.66 ಲಕ್ಷವರೆಗೆ ಸಾಲವಿರುತ್ತದೆ. ಶೇಕಡ 8% ಬಡ್ಡಿ ದರದಲ್ಲಿ 5 ವರ್ಷದ ಅವಧಿಗೆ ಮಾಸಿಕ ರೂ.7,500 ವರೆಗೆ ಇಎಂಐ ಕಟ್ಟಬೇಕು.

Maruti Suzuki S-Presso On Road Price And Emi In Top 5 Cities

ಮುಂಬೈನಲ್ಲಿ ಹೊಸ 'ಎಸ್-ಪ್ರೆಸ್ಸೊ' ಕಾರು ರೂ.4.09 ಲಕ್ಷ ಆನ್-ರೋಡ್ ಬೆಲೆಯನ್ನು ಒಳಗೊಂಡಿದೆ. ರೂ.50,000 ಡೌನ್-ಪೇಮೆಂಟ್ ಕಟ್ಟಿ ಮನೆಗೆ ತಂದರೆ, ರೂ.3.59 ಲಕ್ಷವರೆಗೆ ಸಾಲ ಬಾಕಿಯಿರುತ್ತದೆ. ಶೇಕಡ 8% ಬಡ್ಡಿ ಹಾಕಿ 5 ವರ್ಷಕ್ಕೆ ತಿಂಗಳಿಗೆ ರೂ.7,300 ವರೆಗೆ ಇಎಂಐ ಪಾವತಿ ಮಾಡಬೇಕು.

ನವದೆಹಲಿಯಲ್ಲಿ ಈ 'ಮಾರುತಿ ಎಸ್-ಪ್ರೆಸ್ಸೊ' ಹ್ಯಾಚ್‌ಬ್ಯಾಕ್ ರೂ.4.08 ಲಕ್ಷ ಆನ್-ರೋಡ್ ದರವನ್ನು ಹೊಂದಿದೆ. ರೂ.50,000 ಡೌನ್-ಪೇಮೆಂಟ್ ಪಾವತಿಸಿ ಖರೀದಿ ಮಾಡಿದರೆ, ರೂ.3,58 ಲಕ್ಷವರೆಗೆ ಸಾಲವಿರುತ್ತದೆ. ಶೇಕಡ 8% ಬಡ್ಡಿ ದರದಲ್ಲಿ 5 ವರ್ಷಗಳಿಗೆ ಮಾಸಿಕ ರೂ.7,300 ವರೆಗೆ ಇಎಂಐ ಕಟ್ಟಬೇಕು.

Maruti Suzuki S-Presso On Road Price And Emi In Top 5 Cities

ಹೈದರಾಬಾದ್‌ನಲ್ಲಿ ನೂತನ 'ಎಸ್-ಪ್ರೆಸ್ಸೊ' ರೂ.4.30 ಲಕ್ಷ ಆನ್-ರೋಡ್ ಬೆಲೆಯನ್ನು ಪಡೆದಿದೆ. ರೂ.50,000 ಡೌನ್-ಪೇಮೆಂಟ್ ಕಟ್ಟಿ ತೆಗೆದುಕೊಂಡರೆ, ರೂ.3.80 ಲಕ್ಷವರೆಗೆ ಸಾಲ ಬಾಕಿಯಿರುತ್ತದೆ. ಶೇಕಡ 8% ಬಡ್ಡಿ ಹಾಕಿ 5 ವರ್ಷಕ್ಕೆ ತಿಂಗಳಿಗೆ ರೂ.7,700 ವರೆಗೆ ಇಎಂಐ ಪಾವತಿಸಬೇಕು.

ಚೆನ್ನೈನಲ್ಲಿ ಇದೇ 'ಮಾರುತಿ ಎಸ್-ಪ್ರೆಸ್ಸೊ' ಕಾರು ರೂ.4.12 ಲಕ್ಷ ಆನ್-ರೋಡ್ ದರವನ್ನು ಒಳಗೊಂಡಿದೆ. ರೂ.50,000 ಡೌನ್-ಪೇಮೆಂಟ್ ಪಾವತಿಸಿ ಕೊಂಡುಕೊಂಡರೆ, ರೂ.3.62 ಲಕ್ಷವರೆಗೆ ಸಾಲವಿರುತ್ತದೆ. ಶೇಕಡ 8% ಬಡ್ಡಿ ದರದಲ್ಲಿ 5 ವರ್ಷಗಳಿಗೆ ಮಾಸಿಕ ರೂ.7,400 ವರೆಗೆ ಇಎಂಐ ಕಟ್ಟಬೇಕು.

'ಎಸ್-ಪ್ರೆಸ್ಸೊ' ವಿಶೇಷತೆಗಳೇನು:

ಈ ಕಾರು ಉತ್ತಮವಾದ ವಿನ್ಯಾಸವನ್ನು ಒಳಗೊಂಡಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಪಡೆದಿದೆ. ಮೆಟಾಲಿಕ್ ಗ್ರಾನೈಟ್ ಗ್ರೇ, ಸಾಲಿಡ್ ಫೈರ್ ರೆಡ್, ಬ್ಲೂಯಿಶ್ ಬ್ಲ್ಯಾಕ್ ಮತ್ತು ಮೆಟಾಲಿಕ್ ಸಿಲ್ಕಿ ಸಿಲ್ವರ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 180 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ & 2,380 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ.

ಹೊಸ 'ಎಸ್-ಪ್ರೆಸ್ಸೊ' ಬೆಲೆಗೆ ತಕ್ಕಂತೆ ಬಲಿಷ್ಠವಾದ ಪವರ್‌ಟ್ರೇನ್‌ನ್ನು ತನ್ನದಾಗಿಸಿಕೊಂಡಿದೆ. 1-ಲೀ. ಪೆಟ್ರೋಲ್ ಹಾಗೂ 1-ಲೀ. ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. ಯಾವ ಬೈಕ್‌ಗೂ ಕಮ್ಮಿಯಿಲ್ಲದ ರೀತಿಯಲ್ಲಿ 24 ರಿಂದ 33 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. 148 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. 5.2 ಸೆಕೆಂಡುಗಳನ್ನು 0 ರಿಂದ 60 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ಇದರ ಕ್ಯಾಬಿನ್ ವಿನ್ಯಾಸವು ಚೆನ್ನಾಗಿದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. ಜಾಸ್ತಿ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 270 ಲೀ.ನಷ್ಟು ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (7 ಇಂಚು), ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಯುಎಸ್‌ಬಿ ಕನೆಕ್ಟಿವಿಟಿ ಮತ್ತು ಕೀಲೆಸ್ ಎಂಟ್ರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ 2 ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ) ಹಾಗೂ ಆಟೋ ಡೋರ್‌ನ್ನು ಡೋರ್‌ನ್ನು ಹೊಂದಿದೆ.

More from DriveSpark

Article Published On: Saturday, October 25, 2025, 20:38 [IST]
English summary
Maruti suzuki s presso on road price and emi in top 5 cities
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+