ದೇಶದಲ್ಲಿ 3 ಕೋಟಿ Maruti Car ಮಾರಾಟ: ಕ್ಯೂ ನಿಂತ ಗ್ರಾಹಕರು.. ಆಲ್ಟೊ, ವ್ಯಾಗನ್ಆರ್ & ಸ್ವಿಫ್ಟ್‌ಗೆ ಫುಲ್ ಡಿಮ್ಯಾಂಡ್!

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (Maruti Suzuki India Limited) ಪ್ರಮುಖ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯವಾಗಿ ಎಸ್-ಪ್ರೆಸ್ಸೊ, ಆಲ್ಟೊ, ವ್ಯಾಗನ್ಆರ್, ಸ್ವಿಫ್ಟ್‌, ಡಿಜೈರ್, ಬ್ರೆಝಾ, ಬಲೆನೊ, ಜಿಮ್ನಿ, ಸೆಲೆರಿಯೊ, ಎರ್ಟಿಗಾ, ಇಕೋ ಹಾಗೂ ಗ್ರ್ಯಾಂಡ್ ವಿಟಾರಾ ಸೇರಿದಂತೆ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸದ್ಯ, ಒಟ್ಟಾರೆ ಕಾರು ಮಾರಾಟದಲ್ಲಿ ಕಂಪನಿಯು ಹೊಸ ಇತಿಹಾಸ ಬರೆದಿದೆ.

1983ರ ಡಿಸೆಂಬರ್‌ನಲ್ಲಿ 'ಮಾರುತಿ 800' ಬಿಡುಗಡೆಯೊಂದಿಗೆ ಭಾರತದ ವಾಹನ ಮಾರುಕಟ್ಟೆಗೆ ಕಂಪನಿಯು ಚೊಚ್ಚಲ ಬಾರಿಗೆ ಪ್ರವೇಶಿಸಿತ್ತು. ಅಲ್ಲಿಂದ 2025ರ ನವೆಂಬರ್‌ವರೆಗೆ ಬರೋಬ್ಬರಿ 3 ಕೋಟಿ ಕಾರುಗಳನ್ನು ಮಾರಾಟ ಮಾಡಿದೆ. ಈ ಮೂಲಕ ಐತಿಹಾಸಿಕ ಮೈಲಿಗಲ್ಲೊಂದನ್ನು ಸಾಧಿಸಿದೆ. ಜೊತೆಗೆ ಇಷ್ಟೊಂದು ಸಂಖ್ಯೆಯಲ್ಲಿ ಕಾರುಗಳನ್ನು ಮಾರಾಟಗೊಳಿಸಿದ ದೇಶದ ಮೊದಲ ಕಂಪನಿಯಾಗಿಯೂ 'ಮಾರುತಿ ಸುಜುಕಿ' ಹೊರಹೊಮ್ಮಿದೆ.

Maruti Suzuki Sales 3 Crore Cars Alto WagonR And Swift Best Selling Models Details

42 ವರ್ಷಗಳ ಈ ಸುದೀರ್ಘ ಪ್ರಯಾಣದಲ್ಲಿ 2012ರ ಫೆಬ್ರವರಿವರೆಗೆ ಸರಿ ಸುಮಾರು 28 ವರ್ಷಗಳನ್ನು ತೆಗದುಕೊಂಡು 1 ಕೋಟಿ ಕಾರುಗಳನ್ನು ಮಾರಾಟ ಮಾಡಿತ್ತು. 2019ರ ಜುಲೈವರೆಗೆ 7 ವರ್ಷ 5 ತಿಂಗಳಲ್ಲಿ 2 ಕೋಟಿ ಕಾರುಗಳನ್ನು ಮಾರಿತ್ತು. ಅದೇ ರೀತಿಯಲ್ಲಿ ಈವರೆಗೆ 6 ವರ್ಷ 4 ತಿಂಗಳಲ್ಲಿ 3 ಕೋಟಿ ಕಾರುಗಳನ್ನು ಮಾರಾಟಗೊಳಿಸಿದೆ.

ಮಾರುತಿ ಸುಜುಕಿ 4 ದಶಕಗಳಿಂದ ಹತ್ತಾರು ಕಾರುಗಳನ್ನು ಮಾರಾಟ ಮಾಡುತ್ತಿದೆ. ಬಹುಮುಖ್ಯವಾಗಿ 47 ಲಕ್ಷ ಯುನಿಟ್ ಮಾರಾಟದೊಂದಿಗೆ 'ಆಲ್ಟೊ' ಮೊದಲ ಸ್ಥಾನದಲ್ಲಿದೆ. 34 ಲಕ್ಷ ಯುನಿಟ್‌ನೊಂದಿಗೆ 'ವ್ಯಾಗನ್ಆರ್' ಎರಡನೇ ಸ್ಥಾನದಲ್ಲಿದೆ. 32 ಲಕ್ಷ ಯುನಿಟ್‌ ಮಾರಾಟವಾಗುವುದರೊಂದಿಗೆ 'ಸ್ವಿಫ್ಟ್' ಮೂರನೇ ಸ್ಥಾನದಲ್ಲಿದೆ.

Maruti Suzuki Sales 3 Crore Cars Alto WagonR And Swift Best Selling Models Details

ಈ ಬಗ್ಗೆ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಹಿಸಾಶಿ ಟಕೇಯುಚಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. 'ಭಾರತದಲ್ಲಿ 3 ಕೋಟಿ ಗ್ರಾಹಕರು ಕಾರು ಖರೀದಿಸುವ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಇದಕ್ಕಾಗಿ ಮಾರುತಿ ಸುಜುಕಿ ಮೇಲೆ ನಂಬಿಕೆ ಇಟ್ಟಿದ್ದಾರೆ. ಆದರೂ 1,000 ಜನರಿಗೆ 33 ಕಾರುಗಳು ಮಾತ್ರವಿದ್ದು, ನಮ್ಮ ಪ್ರಯಾಣವು ಇನ್ನೂ ಮುಗಿದಿಲ್ಲ ಎಂದು ತಿಳಿಸಿದೆ. ಸಾಧ್ಯವಾದಷ್ಟು ಜನರು ಹೊಸ ಕಾರು ತೆಗೆದುಕೊಳ್ಳುವಂತೆ ಮಾಡಲು ಪ್ರಯತ್ನಿಸುತ್ತಿವೆ' ಎಂದು ಹೇಳಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ವಿಶೇಷತೆಗಳೇನು:

ಇದೊಂದು ಎಸ್‌ಯುವಿಯಾಗಿದೆ. ರೂ.10.50 ಲಕ್ಷದಿಂದ ರೂ.19.99 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಸಿಜ್ಲಿಂಗ್ ರೆಡ್, ಮಿಸ್ಟಿಕ್ ಗ್ರೀನ್, ಬ್ಲ್ಯೂಯಿಸ್ ಬ್ಲ್ಯಾಕ್, ಮ್ಯಾಗ್ಮಾ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್ ಹಾಗೂ ಪರ್ಲ್ ಆರ್ಕ್ಟಿಕ್ ವೈಟ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

Maruti Suzuki Sales 3 Crore Cars Alto WagonR And Swift Best Selling Models Details

ಈ ಕಾರು 1.5-ಲೀಟರ್ ಮೈಲ್ಡ್ ಹೈಬ್ರಿಡ್ ಪೆಟ್ರೋಲ್, 1.5-ಲೀಟರ್ ಸ್ಟ್ರಾಂಗ್ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಮತ್ತು 1.5-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 21 ರಿಂದ 29 ಕಿ.ಮೀವರಗೆ ಮೈಲೇಜ್ ನೀಡುತ್ತದೆ. 5 ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಸಂಚಾರ ಮಾಡಬಹುದು. 180 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. 210 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,600 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ.

Maruti Suzuki Sales 3 Crore Cars Alto WagonR And Swift Best Selling Models Details

ನೂತನ 'ವಿಕ್ಟೋರಿಸ್' ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (10.1 ಇಂಚು), ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪನೋರಮಿಕ್ ಸನ್‌ರೂಫ್, 64-ಕಲರ್ ಆಂಬಿಯೆಂಟ್ ಲೈಟಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಹಾಗೂ ವೈರ್‌ಲೆಸ್ ಫೋನ್ ಚಾರ್ಜರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

More from DriveSpark

Article Published On: Wednesday, November 5, 2025, 16:42 [IST]
English summary
Maruti suzuki sales 3 crore cars alto wagonr and swift best selling models details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+