Maruti suzuki: 26.11 ಕಿ.ಮೀ ಮೈಲೇಜ್: ಕೈಗೆಟುಕುವ 7-ಸೀಟರ್ ಕಾರಿಗೆ ಫುಲ್ ಡಿಮ್ಯಾಂಡ್!

ಭಾರತದಲ್ಲಿ ದೊಡ್ಡ ಫ್ಯಾಮಿಲಿಗಳಿಗೆ ಸರಿಹೊಂದುವ 7-ಸೀಟರ್ ಕಾರುಗಳು ತುಂಬಾ ಫೇಮಸ್ ಆಗಿವೆ. ಗ್ರಾಹಕರು ಈ ಎಂಪಿವಿಗಳನ್ನು ಮುಗಿಬಿದ್ದು ಖರೀದಿಸುತ್ತಾರೆ, ಅದರಲ್ಲೂ ಮಾರುತಿ ಸುಜುಕಿ ಕಂಪನಿ ನೀಡುವ ಪ್ರಮುಖ ಎರ್ಟಿಗಾ ಕಾರು ದೇಶದಲ್ಲೇ ಅತೀ ಹೆಚ್ಚು ಮಾರಾಟವಾಗುವ 7-ಸೀಟರ್ ಕಾರಾಗಿ ಗುರ್ತಿಸಿಕೊಂಡಿದೆ. ಈ ಕಾರು ಬಿಡುಗಡೆಯಾದಾಗಿನಿಂದಲೂ ಮಾರಾಟದಲ್ಲಿ ಕಂಪನಿಗೆ ಉತ್ತಮ ಲಾಭ ತಂದುಕೊಡುತ್ತಿದೆ. ಮುಖ್ಯವಾಗಿ ಮಧ್ಯಮ ವರ್ಗಕ್ಕೆ ಕೈಗೆಟುಕುವ ಕಾರಾಗಿ ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತಿದೆ. 2025 ಮೇ ತಿಂಗಳಲ್ಲೂ ಭರ್ಜರಿ ಕಾರುಗಳು ಮಾರಾಟವಾಗಿ ದೇಶದಲ್ಲಿ ಕಂಪನಿಯ ಅಸ್ತಿತ್ವವನ್ನು ಬಲಪಡಿಸಿದೆ.

ಕುಟುಂಬಗಳು ಮತ್ತು ಫ್ಲೀಟ್ ನಿರ್ವಾಹಕರಲ್ಲಿ ಅಚ್ಚುಮೆಚ್ಚಿನ ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga), 2025 ಮೇ ತಿಂಗಳಲ್ಲಿ ಬರೋಬ್ಬರಿ 16,140 ಯುನಿಟ್‌ ಕಾರುಗಳು ಮಾರಾಟವಾಗಿವೆ. ಅಲ್ಲದೇ MPV ವಿಭಾಗದಲ್ಲಿ ತನ್ನ ಭದ್ರಕೋಟೆಯನ್ನು ಬಲಪಡಿಸಿಕೊಂಡು ಎರ್ಟಿಗಾ ಮುನ್ನುಗ್ಗುತ್ತಿದೆ. ಅಷ್ಟಕ್ಕು ಮಾರುತಿ ಸುಜುಕಿ ಎರ್ಟಿಗಾ ಕಾರಿಗೆ ಈ ಮಟ್ಟದ ಬೇಡಿಕೆಗೆ ಕಾರಾಣವಾಗಿರುವ ಪ್ರಮುಖಾಂಶಗಳು ಇಲ್ಲಿವೆ.

maruti-suzuki-sold-16140-unit-ertiga-mpvs-in-may-2025

ಕೈಗೆಟುಕುವ ಬೆಲೆ: ಮಾರುತಿ ಸುಜುಕಿ ಎರ್ಟಿಗಾ ಬೇಸ್‌ ವೇರಿಯೆಂಟ್ ರೂ.8.84 ಲಕ್ಷದಿಂದ ಟಾಪ್ ವೇರಿಯೆಂಟ್ ರೂ.13.13 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಎಲ್ಎಕ್ಸ್ಐ (LXI), ವಿಎಕ್ಸ್ಐ (VXI), ಝಡ್ಎಕ್ಸ್ಐ (ZXI) ಮತ್ತು ಝಡ್ಎಕ್ಸ್ಐ ಪ್ಲಸ್ ( ZXI+) ಎಂಬ ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. VXi ಮತ್ತು ZXi ಟ್ರಿಮ್‌ಗಳು ಸಿಎನ್‌ಜಿ ಕಿಟ್‌ ಆಯ್ಕೆಯೊಂದಿಗೆ ಬರುತ್ತವೆ.

ಹೊಸ ಮಾರುತಿ ಎರ್ಟಿಗಾ ಕಾರು 1.5-ಲೀ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿದೆ. ಇದರ ಪೆಟ್ರೋಲ್ ಎಂಜಿನ್ ಪ್ರತಿ ಲೀಟರ್‌ಗೆ 20 ಕಿ.ಮೀ ಹಾಗೂ ಸಿಎನ್‌ಜಿನಲ್ಲಿ 26.11 ಕಿ.ಮೀ ಮೈಲೇಜ್ ನೀಡುತ್ತದೆ. ಇದರ 1.5-ಲೀಟರ್ ಪೆಟ್ರೋಲ್ ಎಂಜಿನ್ 103 ಪಿಎಸ್ ಪವರ್ ಹಾಗೂ 137 ಎನ್ಎಂ ಟಾರ್ಕ್ ಉತ್ಪಾದಿಸಿದರೇ, ಸಿಎನ್‌ಜಿಯು 88 ಪಿಎಸ್ ಪವರ್ ಹಾಗೂ 121.5 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

maruti-suzuki-sold-16140-unit-ertiga-mpvs-in-may-2025

ಇದು 7-ಸೀಟರ್ ಆಗಿರುವುದರಿಂದ ದೊಡ್ಡ ಫ್ಯಾಮಿಲಿಯ 7 ಮಂದಿ ಪ್ರಯಾಣಿಕರು ಆರಾಮವಾಗಿ ಪ್ರಯಾಣಿಸಬಹುದು. ಅಲ್ಲದೇ ಪ್ರಯಾಣಿಕರ ಲಗ್ಗೇಜ್ ಸಾಗಿಸಲು ಬೃಹತ್ 209 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಹೊಂದಿದೆ. ಸುರಕ್ಷತೆಗಾಗಿ 4 ಏರ್‌ಬ್ಯಾಗ್‌, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ರೇರ್ ಪಾರ್ಕಿಂಗ್ ಸೇನಾರ್ಸ್ ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ಅನ್ನು ಹೊಂದಿದೆ.

ಫೀಚರ್ಸ್ ವಿಷಯಕ್ಕೆ ಬಂದರೆ ಮಾರುತಿ ಸುಜುಕಿ ಎರ್ಟಿಗಾದಲ್ಲಿ ಅರ್ಕಾಮಿಸ್ ಸರೌಂಡ್ ಸೆನ್ಸ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 17.78 cm (7 - inch) ಸ್ಮಾರ್ಟ್‌ ಪ್ರೋ ಟಚ್ ಸ್ಕ್ರೀನ್ ಇನ್‌ ಫೋಟೈನ್ಮೆಂಟ್ ಸಿಸ್ಟಮ್‌ನಂತಹ ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

maruti-suzuki-sold-16140-unit-ertiga-mpvs-in-may-2025

ಎರ್ಟಿಗಾದ ಟಾಪ್-ಎಂಡ್ ವೇರಿಯೆಂಟ್‌ಗಳಲ್ಲಿ MID ಜೊತೆಗೆ ಟರ್ನ್ - ಬೈ - ಟರ್ನ್ ನ್ಯಾವಿಗೇಶನ್, ಸುಜುಕಿ ಕನೆಕ್ಟ್ 40+ ವೈಶಿಷ್ಟ್ಯಗಳೊಂದಿಗೆ ರಿಮೋಟ್ A/C, ಆಟೋ ಹೆಡ್‌ಲ್ಯಾಂಪ್‌ಗಳು, ಕ್ರೂಸ್ ಕಂಟ್ರೋಲ್ ಮತ್ತು ಮೆಷಿನ್ಡ್ ಟು-ಟೋನ್ ಅಲಾಯ್ ವೀಲ್‌ಗಳು ಸೇರಿದಂತೆ ಅನೇಕ ವೈಶಿಷ್ಟ್ಯಗಳು ಸಿಗುತ್ತವೆ. ಹಿಂಬದಿಯ ಪ್ರಯಾಣಿಕರಿಗೆ ಅಡ್ಜಸ್ಟಬಲ್ ಏರ್ ವೆಂಟ್‌ಗಳು ಮತ್ತು 3-ಸ್ಟೆಪ್ ಸ್ಪೀಡ್ ಕಂಟ್ರೋಲ್‌ನೊಂದಿಗೆ ಎರಡನೇ-ಸಾಲಿನ ರೂಫ್-ಮೌಂಟೆಡ್ ಎಸಿ ಸಿಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, June 10, 2025, 14:41 [IST]
English summary
Maruti suzuki sold 16140 unit ertiga mpvs in may 2025
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+