Maruti: ಕೇವಲ ರೂ.6.49 ಲಕ್ಷ... 5-ಮಂದಿಗೆ ಆರಾಮ ಪ್ರಯಾಣ... 32.85 ಕಿ.ಮೀ‌ ಮೈಲೇಜ್

ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ (Maruti Suzuki) ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ಪ್ರತಿ ತಿಂಗಳ ಮಾರಾಟದಲ್ಲಿ ಮಾರುತಿ ಸ್ವಿಫ್ಟ್ ಬಗ್ಗೆ ಗ್ರಾಹಕರಿಗೆ ಕುತೂಹಲವಿರುತ್ತದೆ. ಈ ಕಾರು ದೇಶದಲ್ಲಿ ಅತೀಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದ್ದು, ಅಗ್ಗದ ಬೆಲೆಗೆ ಅತ್ಯುತ್ತಮ ಫಿಚರ್ಸ್, ಆಕರ್ಷಕ ಡಿಸೈನ್, ಬೆಸ್ಟ್ ಮೈಲೇಜ್ ನೀಡುವ ಕಾರಾಗಿ ಗುರ್ತಿಸಿಕೊಂಡಿದೆ. ಹಾಗಾಗಿಯೇ ಪ್ರತಿ ತಿಂಗಳ ಮಾರಾಟದಲ್ಲಿ ಟಾಪ್-10 ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುತ್ತದೆ. ಹಾಗಾದ್ರೆ ಜುಲೈ 2025 ರಲ್ಲಿ ಮಾರುತಿ ಸ್ವಿಫ್ಟ್‌ನ ಎಷ್ಟು ಯೂನಿಟ್‌ಗಳು ಮಾರಾಟವಾಗಿವೆ ಬನ್ನಿ ನೋಡೋಣ.

ಜುಲೈ 2025 ರ ಟಾಪ್-10 ಕಾರುಗಳ ಮಾರಾಟ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಮಾರುತಿ ಸುಜುಕಿ ಸ್ವಿಫ್ಟ್ ಪಡೆದುಕೊಂಡಿದೆ. ಬರೋಬ್ಬರಿ ಒಂದು ತಿಂಗಳಲ್ಲಿ 14,200 ಕಾರುಗಳನ್ನು ಮಾರಾಟ ಮಾಡಲಾಗಿದೆ. ಮೊದಲ ಸ್ಥಾನದಲ್ಲಿ ಮಾರುತಿ ಸುಜುಕಿ ಡಿಜೈರ್ ಇದೆ. ಅಂಕಿಅಂಶಗಳ ಪ್ರಕಾರ, ಮಾರುತಿ ಡಿಜೈರ್ ಜುಲೈ 2025 ರಲ್ಲಿ ಒಟ್ಟು 20,895 ಯುನಿಟ್ ವಾಹಗಳು ಮಾರಾಟವಾಗಿವೆ.

maruti-suzuki-swift-2025-july-sales-report

ಮಾರುತಿ ಸ್ವಿಫ್ಟ್ ವಿಶೇಷತೆಗಳು

ಮಾರುತಿ ಸುಜುಕಿ ಸ್ವಿಫ್ಟ್ ಬೇಸ್ ವೇರಿಯೆಂಟ್ ಬೆಲೆಯು ರೂ.6.49 ಲಕ್ಷದಿಂದ ಟಾಪ್ ವೇರಿಯೆಂಟ್ ರೂ.9.64 ಲಕ್ಷ (ಎಕ್ಸ್-ಶೋರೂಂ - ಬೆಂಗಳೂರು) ಬೆಲೆಯನ್ನು ಹೊಂದಿದೆ. ಇದರಲ್ಲಿ 5 ಆಸನಗಳಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರಿಸಬಹುದು. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 265 ಲೀ.ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿದೆ.

9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಮತ್ತು ಅರ್ಕಾಮಿಸ್-ಟ್ಯೂನ್ಡ್ ಸೌಂಡ್ ಸಿಸ್ಟಮ್‌ನಂತಹ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳು, ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಹಾಗೂ 3 ಪಾಯಿಂಟ್ ಸೀಟ್‌ಬೆಲ್ಟ್‌, ಟಿಸಿಎಸ್ (ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್), ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ.

maruti-suzuki-swift-2025-july-sales-report

ಈ ಕಾರು 1.2-ಲೀ. 3-ಸಿಲಿಂಡರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 5 - ಸ್ಪೀಡ್ ಮ್ಯಾನುವಲ್ ಮತ್ತು ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. ಪೆಟ್ರೋಲ್ ಚಾಲಿತ ಕಾರು ಪ್ರತಿ ಲೀಟರ್‌ಗೆ 24.80 ಕಿಮೀ. ಮೈಲೇಜ್ ಹಾಗೂ ಸಿಎನ್‌ಜಿನಲ್ಲಿ ಬರೋಬ್ಬರಿ 32.85 ಕಿ.ಮೀ‌ವರೆಗೆ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಈ ಕಾರು ಹೆಚ್ಚು ಆಕರ್ಷಕವಾದ ವಿನ್ಯಾಸವನ್ನು ಹೊಂದಿದ್ದು, ಸಿಜ್ಲಿಂಗ್ ರೆಡ್, ನಾವೆಲ್ ಆರೆಂಜ್, ಮ್ಯಾಗ್ಮಾ ಗ್ರೇ ಹಾಗೂ ಸ್ಪ್ಲೆಂಡಿಡ್ ಸಿಲ್ವರ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ದೊರೆಯುತ್ತದೆ. ಕ್ಯಾಬಿನ್ ಗುಣಮಟ್ಟದಲ್ಲಿಯೂ ಅದರ ಬೆಲೆಗೆ ತಕ್ಕ ಮೌಲ್ಯದೊಂದಿಗೆ ಇದು ಐದು ಪ್ರಯಾಣಿಕರಿಗೆ ಉತ್ತಮ ಸ್ಥಳಾವಕಾಶವನ್ನು ನೀಡುತ್ತದೆ.

maruti-suzuki-swift-2025-july-sales-report

ನಿಮ್ಮದು ಚಿಕ್ಕ ಕುಟುಂಬವಾಗಿದ್ದರೆ ಅಥವಾ ನೀವು ಸ್ಪೋರ್ಟಿ ಹ್ಯಾಚ್‌ಬ್ಯಾಕ್ ಹುಡುಕುತ್ತಿದ್ದರೆ ಮಾರುತಿ ಸ್ವಿಫ್ಟ್ ನಿಮಗೆ ಸೂಕ್ತವಾಗಿರುತ್ತದೆ. ಇದು ಉತ್ತಮ ಪ್ಯಾಕೇಜ್ ಅನ್ನು ನೀಡಲಿದ್ದು, ನಿಮ್ಮ ಬಹುತೇಕ ಎಲ್ಲಾ ಅಗತ್ಯಗಳನ್ನು ಪೂರೈಸುತ್ತದೆ. ಸ್ವಿಫ್ಟ್ ಯಾವಾಗಲೂ ತುಂಬಾ ಆರಾಮದಾಯಕ ಕಾರಾಗಿದ್ದು, ಅದರ ಪ್ರಸ್ತುತ ಆವೃತ್ತಿಯಲ್ಲಿ ಉತ್ತಮ ಸವಾರಿ ಸೌಕರ್ಯವನ್ನು ನೀಡುತ್ತಿದೆ.

ಒಟ್ಟಾರೆ ಮಾರುತಿ ಸ್ವಿಫ್ಟ್ ಭಾರತದಲ್ಲಿ ಮಧ್ಯಮ ಗಾತ್ರದ ಹ್ಯಾಚ್‌ಬ್ಯಾಕ್ ವಿಭಾಗದ ಬೆಸ್ಟ್ ಕಾರಾಗಿದ್ದು, ಉತ್ತಮ ವೈಶಿಷ್ಟ್ಯಗಳು, ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಯ ಸಮತೋಲನವನ್ನು ನೀಡುತ್ತದೆ. ಜೊತೆಗೆ ಆಧುನಿಕ ವಿನ್ಯಾಸ, ಪ್ರೀಮಿಯಂ ಲುಕ್ ಹೊಂದಿರುವ ಕ್ಯಾಬಿನ್, ಉತ್ತಮ ವೈಶಿಷ್ಟ್ಯಗಳು, ಉತ್ತಮ ಮೈಲೇಜ್, ನಗರದಲ್ಲಿ ಆರಾಮದಾಯಕ ಮತ್ತು ಸುಗಮ ಡ್ರೈವ್ ಅನುಭವವನ್ನು ನೀಡುತ್ತದೆ.

Article Published On: Thursday, August 7, 2025, 12:55 [IST]
English summary
Maruti suzuki swift 2025 july sales report
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+