29 ಕಿ.ಮೀ ಮೈಲೇಜ್.. ಹೊಸ ಮಾರುತಿ ಕಾರಿಗೆ ಫುಲ್ ಡಿಮ್ಯಾಂಡ್, ಸದ್ದಿಲ್ಲದೇ ಬೆಲೆ ಏರಿಕೆ!

ಸೆ.16 ರಂದು ಹೊಚ್ಚ ಹೊಸ ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಕಾರನ್ನು ಮಾರಾಟಕ್ಕೆ ತರಲಾಯಿತು. ಇದು ಎಸ್‌ಯುವಿಯಾಗಿದ್ದು, ಗ್ರಾಹಕರು ಕೂಡ ಮನಸೊತ್ತಿದ್ದಾರೆ. ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ 25,000 ಬುಕ್ಕಿಂಗ್‌ಗಳನ್ನು ಪಡೆದುಕೊಳ್ಳುವಲ್ಲಿಯೂ ಯಶಸ್ವಿಯಾಗಿದೆ. ಬಿಡುಗಡೆಗೊಂಡ ಮೊದಲ ತಿಂಗಳೇ ಸರಿ ಸುಮಾರು 4,261 ಯುನಿಟ್‌ಗಳು ಕೂಡ ಮಾರಾಟಗೊಂಡಿವೆ. ಇದೀಗ ಸದ್ದಿಲ್ಲದೇ 'ವಿಕ್ಟೋರಿಸ್' ಬೆಲೆಯು ಏರಿಕೆಯಾಗಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

'ಮಾರುತಿ ವಿಕ್ಟೋರಿಸ್' ಕಾರಿನ ಆಯ್ದ ರೂಪಾಂತರಗಳ (ವೇರಿಯೆಂಟ್) ದರವು ರೂ.15,400 ವರೆಗೆ ಹೆಚ್ಚಳವಾಗಿದೆ. ಅಂದರೆ ಶೇಕಡ 1.13% ವರೆಗೆ ಅಧಿಕಗೊಂಡಿದೆ. ವಿಶೇಷವಾಗಿ ಎಲ್ಎಕ್ಸ್ಐ ಹಾಗೂ ವಿಎಕ್ಸ್ಐ ರೂಪಾಂತರಗಳು ಯಾವುದೇ ರೀತಿಯಲ್ಲಿ ದರ ಏರಿಕೆಗೆ ಒಳಗಾಗಿಲ್ಲ. ಉಳಿದ ಜಡ್ಎಕ್ಸ್ಐ, ಜಡ್ಎಕ್ಸ್ಐ (ಒ), ಜಡ್ಎಕ್ಸ್ಐ ಪ್ಲಸ್ ಮತ್ತು ಜಡ್ಎಕ್ಸ್ಐ (ಒ) ಪ್ಲಸ್ ರೂಪಾಂತರಗಳಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಇದರ ಹೊರತಾಗಿಯೂ ಈ ಕಾರು, ರೂ.10.50 ಲಕ್ಷದಿಂದ ರೂ.19.99 ಲಕ್ಷ (ಎಕ್ಸ್-ಶೋರೂಂ - ಬೆಂಗಳೂರು) ದರವನ್ನು ಪಡೆದಿದೆ.

Maruti Suzuki Victoris Suv Price Hike Details

ನೂತನ 'ವಿಕ್ಟೋರಿಸ್' ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಶಾರ್ಕ್ ಫಿನ್ ಆಂಟೆನಾ, ಎಲ್ಇಡಿ ಟೈಲ್‌ಲ್ಯಾಂಪ್‌ಗಳು & ಅಲಾಯ್ ವೀಲ್‌ಗಳನ್ನು ಪಡೆದಿದೆ. ಸಿಜ್ಲಿಂಗ್ ರೆಡ್, ಮಿಸ್ಟಿಕ್ ಗ್ರೀನ್, ಬ್ಲ್ಯೂಯಿಸ್ ಬ್ಲ್ಯಾಕ್, ಮ್ಯಾಗ್ಮಾ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್ ಮತ್ತು ಪರ್ಲ್ ಆರ್ಕ್ಟಿಕ್ ವೈಟ್ ಎಂಬ ಹಲವು ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ಈ ಕಾರು 'ಗ್ರ್ಯಾಂಡ್ ವಿಟಾರಾ' ಎಸ್‌ಯುವಿ ಪ್ಲಾಟ್‌ಫಾರ್ಮ್‌ನ್ನು ಆಧರಿಸಿದ್ದು, ಹೆಚ್ಚು ವಿಶಾಲ ಗಾತ್ರದಲ್ಲಿದೆ. 4,360 ಮಿ.ಮೀ ಉದ್ದ, 1,655 ಮಿ.ಮೀ ಅಗಲ ಮತ್ತು 1,795 ಮಿ.ಮೀ ಎತ್ತರವಿದೆ. ಜೊತೆಗಿದು 210 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ & 2,600 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ.

ಇದು 5 ಆಸನಗಳನ್ನು ಒಳಗೊಂಡಿದ್ದು, ಪ್ರಯಾಣಿಕರು ಆರಾಮಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ಬಹುಮುಖ್ಯವಾಗಿ ವಾರಾಂತ್ಯ ಹಾಗೂ ರಜಾದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಕ್ಕೆ ತೆರಳುವಾಗ ಜಾಸ್ತಿ ಲಗೇಜ್ ಸಾಗಿಸಲು 373 ಲೀ.ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ.

ಹೊಸ 'ವಿಕ್ಟೋರಿಸ್' ಶಕ್ತಿಶಾಲಿಯಾದ 3 ಪವರ್‌ಟ್ರೇನ್‌ನ್ನು ತನ್ನದಾಗಿಸಿಕೊಂಡಿದೆ. 1.5-ಲೀ. ಮೈಲ್ಡ್ ಹೈಬ್ರಿಡ್ ಪೆಟ್ರೋಲ್, 1.5-ಲೀ. ಸ್ಟ್ರಾಂಗ್ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) & 1.5-ಲೀ. ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. ರೂಪಾಂತರಗಳಿಗೆ ಅನುಗುಣವಾಗಿ 21 ರಿಂದ 28.65 ಕಿ.ಮೀ ವರಗೆ ಮೈಲೇಜ್ ನೀಡುತ್ತದೆ. 180 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. 14.17 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.

ಈ ಕಾರಿನ ಕ್ಯಾಬಿನ್ ವಿನ್ಯಾಸವು ಉತ್ತಮವಾಗಿದೆ. ಅದಕ್ಕೆ ತಕ್ಕಂತೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (10.1 ಇಂಚು), ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಕಪ್ ಹೋಲ್ಡರ್‌ಗಳು, 64 ಕಲರ್ ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜರ್ & ಆಟೋ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ನೂತನ 'ವಿಕ್ಟೋರಿಸ್' ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ಸಲುವಾಗಿ 6 ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಟಿಪಿಎಂಎಸ್ (ಟೈರ್ - ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

More from DriveSpark

Article Published On: Friday, October 17, 2025, 8:30 [IST]
English summary
Maruti suzuki victoris suv price hike details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+