ಬೈಕ್‌ನಂತೆ ಮೈಲೇಜ್.. ಹೊಸ Maruti Suzuki Victoris ವೇರಿಯೆಂಟ್‌ವಾರು ಫೀಚರ್‌ಗಳ ಕುರಿತ ವಿವರಗಳಿವು!

ಇತ್ತೀಚೆಗೆ ಹೊಚ್ಚ ಹೊಸ ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಎಸ್‌ಯುವಿಯನ್ನು ಅನಾವರಣಗೊಳಿಸಲಾಗಿತ್ತು. ಶೀಘ್ರದಲ್ಲೇ ಮಾರಾಟಕ್ಕೂ ಬರಲಿದ್ದು, ರೂ.9.70 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ದರವನ್ನು ಹೊಂದಿರುವ ಸಾಧ್ಯತೆಯಿದೆ. ಬುಕ್ಕಿಂಗ್ ಸಹ ಪ್ರಾರಂಭಗೊಂಡಿದ್ದು, ಆಸಕ್ತರು ರೂ.11,000 ಮುಂಗಡ ಹಣ ಪಾವತಿಸುವುದರೊಂದಿಗೆ ಆರ್ಡರ್ ಮಾಡಬಹುದು. ಸುರಕ್ಷತೆಗಾಗಿ ಇದೇ ಎಸ್‌ಯುವಿಯು 'ಭಾರತ್ ಎನ್‌ಸಿಎಪಿ'ಯಿಂದ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಹೊಂದುವಲ್ಲಿಯೂ ಯಶಸ್ವಿಯಾಗಿದೆ. ನಾವಿಲ್ಲಿ, ಈ ನೂತನ 'ವಿಕ್ಟೋರಿಸ್' ಕಾರಿನ ರೂಪಾಂತರವಾರು (ವೇರಿಯೆಂಟ್‌) ವೈಶಿಷ್ಟ್ಯಗಳ ಕುರಿತ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

ಎಲ್ಎಕ್ಸ್ಐ - LXi:

ಇದು ಹತ್ತಾರು ವೈಶಿಷ್ಟ್ಯಗಳಿಗೆ ಸಾಕ್ಷಿಯಾಗಿದೆ. ಬಹುಮುಖ್ಯವಾಗಿ 17-ಇಂಚಿನ ಸ್ಟೀಲ್ ವೀಲ್‌ಗಳು, ಟಿಲ್ಟ್ & ಟೆಲಿಸ್ಕೋಪಿಕ್ ಸ್ಟೀರಿಂಗ್ ವೀಲ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ರೇರ್ ಎಸಿ ವೆಂಟ್‌ಗಳು, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಕೀಲೆಸ್ ಎಂಟ್ರಿ, ಹ್ಯಾಲೊಜೆನ್ ಹೆಡ್‌ಲೈಟ್‌ಗಳು, ಸಿಲ್ವರ್-ಫಿನಿಶ್ಡ್ ಸ್ಕಿಡ್ ಪ್ಲೇಟ್‌ಗಳು ಮತ್ತು ಸ್ಟೀರಿಂಗ್-ಮೌಂಟೆಡ್ ಆಡಿಯೋವನ್ನು ಪಡೆದಿದೆ.

Maruti Suzuki Victoris Suv Variant Wise Features Details

ಜೊತೆಗೆ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಡುಯಲ್ ಸ್ಪೀಕರ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), 60:40 ಸ್ಪ್ಲಿಟ್ ಫೋಲ್ಡಿಂಗ್ ರೇರ್ ಸೀಟ್‌ಗಳು, ಶಾರ್ಕ್ ಫಿನ್ ಆಂಟೆನಾ, ಫ್ರಂಟ್ ಟೈಪ್-ಎ ಯುಎಸ್‌‍ಬಿ ಪೋರ್ಟ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಹೋಲ್ಡ್, ರೇರ್ ಡಿಫಾಗರ್ & ಟೈರ್ ರಿಪೇರಿ ಕಿಟ್, ಫ್ರಂಟ್ ಸೆಂಟರ್ ಆರ್ಮ್‌ರೆಸ್ಟ್ ಹಾಗೂ ಎಲ್ಇಡಿ ಟೈಲ್ ಲ್ಯಾಂಪ್‌ನ್ನು ಪಡೆದಿದೆ.

ವಿಎಕ್ಸ್ಐ - VXi:

ಈ ರೂಪಾಂತರವು 'ಎಲ್ಎಕ್ಸ್ಐ'ಗಿಂತ ಮೇಲಿದ್ದು, ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಕ್ರೂಸ್ ಕಂಟ್ರೋಲ್, ಡುಯಲ್ ರಿಯರ್ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ಗಳು, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್, ಕನೆಕ್ಟ್ಡ್ ಎಲ್ಇಡಿ ಟೈಲ್ ಲ್ಯಾಂಪ್‌ಗಳು, ಆಟೋ-ಹೋಲ್ಡ್‌, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಪ್ಯಾಡಲ್ ಶಿಫ್ಟರ್‌ಗಳು ಹಾಗೂ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಒಳಗೊಂಡಿದೆ.

ಜಡ್ಎಕ್ಸ್ಐ - ZXi:

ಇದು ವಿವಿಧ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ರೇರ್ ವೈಪರ್ & ವಾಷರ್, ಸಾಫ್ಟ್-ಟಚ್ ಡ್ಯಾಶ್‌ಬೋರ್ಡ್, ಆಟೋ-ಡಿಮ್ಮಿಂಗ್ ಐಆರ್‌ವಿಎಂ, 17ಇಂಚಿನ ಅಲಾಯ್ ವೀಲ್‌ಗಳು, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, 10.25-ಇಂಚಿನ ಫುಲ್ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು ಹಾಗೂ ಎಲ್ಇಡಿ ಫಾಗ್ ಲ್ಯಾಂಪ್‌ಗಳನ್ನು ಹೊಂದಿದೆ.

ಜಡ್ಎಕ್ಸ್ಐ (ಒ) - ZXi (O):

ವಿಶೇಷವಾಗಿ ಈ ರೂಪಾಂತರವು 'ಜಡ್ಎಕ್ಸ್ಐ'ನಂತೆ ಎಲ್ಲ ವೈಶಿಷ್ಟ್ಯಗಳನ್ನು ಪಡೆದಿದೆ. ಹೆಚ್ಚುವರಿಯಾಗಿ ಪನೋರಮಿಕ್ ಸನ್‌ರೂಫ್‌ನ್ನು ತನ್ನದಾಗಿಸಿಕೊಂಡಿದೆ. ಅದು ಬಿಟ್ಟರೆ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ.

ಜಡ್ಎಕ್ಸ್ಐ ಪ್ಲಸ್ - ZXi Plus:

ಇದು ಕೂಡ ಸಾಕಷ್ಟು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಇಂಟರ್‌ನೆಟ್ ಕನೆಕ್ಟ್ಡ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 8-ವೇ ಪವರ್ ಅಡ್ಜಸ್ಟೇಬಲ್ ಡ್ರೈವರ್ ಸೀಟ್‌ಗಳು, 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್, 8-ಸ್ಪೀಕರ್ ಇನ್ಫಿನಿಟಿ ಸೌಂಡ್ ಸಿಸ್ಟಮ್, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), 360-ಡಿಗ್ರಿ ಕ್ಯಾಮೆರಾ, ಫ್ರಂಟ್ ಪಾರ್ಕಿಂಗ್ ಸೆನ್ಸರ್ಸ್, ಹಿಲ್ ಡೀಸೆಂಟ್ ಕಂಟ್ರೋಲ್, 64-ಕಲರ್ ಆಂಬಿಯೆಂಟ್ ಲೈಟಿಂಗ್ ಹಾಗೂ 17-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ.

ಜಡ್ಎಕ್ಸ್ಐ ಪ್ಲಸ್ (ಒ) - ZXi Plus (O):

ಈ ರೂಪಾಂತರವು 'ಜಡ್ಎಕ್ಸ್ಐ ಪ್ಲಸ್'ನಂತೆಯೇ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇದರೊಂದಿಗೆ ಪನೋರಮಿಕ್ ಸನ್‌ರೂಫ್‌ನ್ನು ಪಡೆದಿದೆ.

ವಿಕ್ಟೋರಿಸ್‌ ಕಾರ್ಯಕ್ಷಮತೆ:

ನೂತನ 'ವಿಕ್ಟೋರಿಸ್‌' ಹೆಚ್ಚು ಶಕ್ತಿಯುತವಾಗಿರುವ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 1.5-ಲೀ. ಮೈಲ್ಡ್ ಹೈಬ್ರಿಡ್ ಪೆಟ್ರೋಲ್, 1.5-ಲೀ. ಸ್ಟ್ರಾಂಗ್ ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್) ಮತ್ತು 1.5-ಲೀ. ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಮತ್ತು ಇ-ಸಿವಿಟಿ ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿದೆ. 19 ರಿಂದ 28.65 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.

ಆಸನ ಆಯ್ಕೆ & ಬಣ್ಣಗಳು:

ಈ ಕಾರು 5 ಆಸನಗಳನ್ನು ಹೊಂದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಸಂಚಾರ ಮಾಡಬಹುದು. ಆರ್ಕ್ಟಿಕ್ ವೈಟ್, ಸ್ಪ್ಲೆಂಡಿಡ್ ಸಿಲ್ವರ್, ಎಟರ್ನಲ್ ಬ್ಲೂ, ಸಿಜ್ಲಿಂಗ್ ರೆಡ್, ಬ್ಲೂಯಿಶ್ ಬ್ಲ್ಯಾಕ್, ಮ್ಯಾಗ್ಮಾ ಗ್ರೇ ಹಾಗೂ ಮಿಸ್ಟಿಕ್ ಗ್ರೀನ್ ಒಳಗೊಂಡಂತೆ ಹಲವು ಬಣ್ಣಗಳೊಂದಿಗೂ ಲಭ್ಯವಿದೆ.

Image Source: Cars With Anurag

More from DriveSpark

Article Published On: Tuesday, September 9, 2025, 10:56 [IST]
English summary
New maruti suzuki victoris suv variant wise features details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+