Maruti: ಕಾರು ಖರೀದಿಸುವ ಪ್ಲಾನ್ ಇದೆಯೇ? ಜನವರಿಯಲ್ಲಿ 24 ಸಾವಿರ ಜನ ಖರೀದಿ... ಇದನ್ನು ಪರಿಶೀಲಿಸಿ!
ಜನವರಿಯಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾದ 10 ಕಾರುಗಳಲ್ಲಿ, ಮಾರುತಿ ಸುಜುಕಿ ಇಂಡಿಯಾದ ಆರು ಕಾರುಗಳು, ಟಾಟಾ ಮೋಟಾರ್ಸ್‌ನ ಎರಡು, ಹ್ಯುಂಡೈ ಮೋಟಾರ್ ಮತ್ತು ಮಹೀಂದ್ರಾದ ತಲಾ ಒಂದು ಕಾರುಗಳು ಇವೆ. ಪ್ರತಿ ಬಾರಿಯಂತೆ ಮಾರುತಿ ಸುಜುಕಿ 2025ರ ಜನವರಿ ತಿಂಗಳ ಮಾರಾಟದಲ್ಲಿ ಧೂಳೆಬ್ಬಿಸಿದೆ, ಇದಕ್ಕೆ ಭಾರೀ ಕೊಡುಗೆ ನೀಡಿರುವುದು ಮಾರುತಿ ವ್ಯಾಗನ್‌ಆರ್ (Maruti Suzuki Wagon R). ಈ ಪುಟ್ಟ ಕಾರು ಭರ್ಜರಿ ಮಾರಾಟ ಕಂಡಿದ್ದು, 2025ರ ಜನವರಿ ತಿಂಗಳಲ್ಲಿ ದೇಶದ ಅತೀ ಹೆಚ್ಚು ಮಾರಾಟವಾದ ಕಾರಾಗಿ ದಾಖಲೆ ನಿರ್ಮಿಸಿದೆ.
24,078 ಯುನಿಟ್ ಕಾರುಗಳೊಂದಿಗೆ, ಮಾರುತಿ ಸುಜುಕಿ ವ್ಯಾಗನ್ ಆರ್ ಜನವರಿಯಲ್ಲಿ ಅತಿ ಹೆಚ್ಚು ಮಾರಾಟವನ್ನು ದಾಖಲಿಸಿದೆ. ಮಾರುತಿ ಸುಜುಕಿ ಬಲೆನೊ 19,965 ಯುನಿಟ್ ಕಾರುಗಳ ಮಾರಾಟದೊಂದಿಗೆ ತನ್ನ ಪ್ರಭಾವಶಾಲಿ ಓಟವನ್ನು ಮುಂದುವರಿಸಿದೆ. ಒಟ್ಟಾರೆ ಎಲ್ಲಾ ಬ್ರಾಂಡ್‌ಗಳನ್ನು ಹಿಂದಿಕ್ಕಿ ಮಾರುತಿ ವ್ಯಾಗನ್‌ಆರ್ ಅಗ್ರಸ್ಥಾನವನ್ನು ದಕ್ಕಿಸಿಕೊಂಡಿದೆ. ಈ ಕಾರನ್ನು ಜನ ಮುಗಿಬಿದ್ದು ಖರೀದಿಸಲು ಅಂತಹ ವಿಶೇಷತೆಗಳು ಏನಿವೆ ಎಂಬುದನ್ನು ಇಲ್ಲಿ ನೋಡೋಣ.

ಮಾರುತಿ ವ್ಯಾಗನ್‍ಆರ್ ಕಡಿಮೆ ಬೆಲೆಗೆ ಲಭ್ಯವಿರುವುದು ಮತ್ತು ಹೆಚ್ಚಿನ ಮೈಲೇಜ್ ನೀಡುತ್ತಿರುವುದು ಗ್ರಾಹಕರಲ್ಲಿ ಭಾರೀ ಸ್ವೀಕಾರ ಪಡೆಯುತ್ತಿರುವುದಕ್ಕೆ ಪ್ರಮುಖ ಕಾರಣಗಳಾಗಿವೆ. ಹೊಸ ಮಾರುತಿ ವ್ಯಾಗನ್‍ಆರ್ ಹ್ಯಾಚ್‌ಬ್ಯಾಕ್ ಮಾದರಿಯ ಪ್ರಾರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 5,54,500 ಇದೆ. ಹಾಗೆಯೇ LXi, VXi, ZXi ಮತ್ತು ZXi ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.
ಮಾರುತಿ ಸುಜುಕಿ ವ್ಯಾಗನ್‍ಆರ್ ಕಾರು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೆ ಕನೆಕ್ಟಿವಿಯೊಂದಿಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫ್ರಂಟ್ ಫಾಗ್ ಲ್ಯಾಂಪ್‌ಗಳು ಮತ್ತು 4 ಸ್ಪೀಕರ್‌ಗಳು, ಟ್ಯಾಕೋಮೀಟರ್, ವಿಂಗ್ ಮಿರರ್‌ಗಳಲ್ಲಿ ಟರ್ನ್ ಇಂಡಿಕೇಟರ್, ಫ್ರಂಟ್ ಪ್ಯಾಸೆಂಜರ್ ಸೈಡ್ ಸೀಟ್ ಅಂಡರ್ ಟ್ರೇ, ಎಲೆಕ್ಟ್ರಿಕಲ್ ಫೋಲ್ಡಿಂಗ್ ವಿಂಗ್ ಮಿರರ್‌ಗಳನ್ನು ಹೊಂದಿದೆ.

ಇವಿಷ್ಟೆ ಅಲ್ಲದೆ ರಿಯರ್ ವೈಪರ್, ವಾಷರ್ ಮತ್ತು ಡಿಫೊಗರ್ ಮತ್ತು 14-ಇಂಚಿನ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿದೆ. ಮಾರುತಿ ಸುಜುಕಿ ವ್ಯಾಗನ್‍ಆರ್ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ, EBD ಜೊತೆಗೆ ABS, ಸ್ಪೀಡ್ ಅಲರ್ಟ್‌ಗಳು, ಡ್ಯುಯಲ್ ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸರ್ ಮತ್ತು ಸೀಟ್‌ಬೆಲ್ಟ್ ರಿಮೈಂಡರ್ ಹೊಂದಿದೆ.
ಹೊಸ ಮಾರುತಿ ಸುಜುಕಿ ವ್ಯಾಗನ್‍ಆರ್ ಕಾರಿನಲ್ಲಿ 1.0 ಲೀಟರ್ ಮತ್ತು 1.2 ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಎರಡೂ ಎಂಜಿನ್‌ಗಳು ಡ್ಯುಯಲ್‌ಜೆಟ್, ಡ್ಯುಯಲ್ ವಿವಿಟಿ, ಐಎಸ್‌ಎಸ್ (ಐಡಲ್ ಸ್ಟಾರ್ಟ್ ಸ್ಟಾಪ್) ತಂತ್ರಜ್ಞಾನ ಮತ್ತು ಕೂಲ್ಡ್ ಇಜಿಆರ್ (ಎಕ್ಸಾಸ್ಟ್ ಗ್ಯಾಸ್ ರಿಸರ್ಕ್ಯುಲೇಷನ್) ಅನ್ನು ಹೊಂದಿವೆ.

ಮಾರುತಿ ಸುಜುಕಿ ಕಂಪನಿಯು ಟಾಲ್ - ಬಾಯ್ ಹ್ಯಾಚ್‌ಬ್ಯಾಕ್‌ನ ಫ್ಲೆಕ್ಸ್ - ಫ್ಯೂಯಲ್ ಆವೃತ್ತಿಯಲ್ಲಿ ಕೆಲಸ ಮಾಡುತ್ತಿದೆ, ಇದರ ಉತ್ಪಾದನೆಯು 2025 ರ ಮದ್ಯಾರ್ಧದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಇಷ್ಟೆಲ್ಲಾ ಅಂಶಗಳನ್ನು ಹೊಂದಿರುವ ಈ ಕಾರು ಅತ್ಯಂತ ಅಗ್ಗದ ಬೆಲೆಗೆ ಸಿಗುವುದರಿಂದ ಗ್ರಾಹಕರು ಹೆಚ್ಚಾಗಿ ಖರೀದಿಸುತ್ತಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications