ಡಾಕ್ಟರ್ & ಎಂಜಿನಿಯರ್‌ಗಳು ಮೆಚ್ಚಿಕೊಂಡಿದ್ದಾರೆ: 5 ಲಕ್ಷ, 34 ಕಿ.ಮೀ ಮೈಲೇಜ್.. ಈ Maruti Car ಭಾರೀ ಸಂಖ್ಯೆಯಲ್ಲಿ ಮಾರಾಟ!

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ವಿಶ್ವಾಸಾರ್ಹ ಹ್ಯಾಚ್‌ಬ್ಯಾಕ್ ಆಗಿದೆ. ಇದು ಹೆಚ್ಚಿನ ಇಂಧನ ದಕ್ಷತೆ ಹಾಗೂ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿದೆ. ಅತ್ಯಾಧುನಿಕವಾದ ವಿನ್ಯಾಸ & ವಿಶಾಲವಾದ ಒಳಾಂಗಣವನ್ನು ಪಡೆದಿದ್ದು, ನಗರ ಪ್ರವೇಶದ ಚಾಲನೆಗೆ ಹೇಳಿ ಮಾಡಿಸಿದ ರೀತಿಯಲ್ಲಿದೆ. ಡಾಕ್ಟರ್ & ಎಂಜಿನಿಯರ್‌ಗಳು ಸೇರಿದಂತೆ ಎಲ್ಲ ವರ್ಗದ ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳುತ್ತಿದ್ದಾರೆ. ಈ ಜುಲೈ ತಿಂಗಳು 'ವ್ಯಾಗನ್ಆರ್' ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗಿದೆ. ಒಟ್ಟು 14,710 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ.

ಈ ವರ್ಷದ ಮೊದಲ 6 ತಿಂಗಳಲ್ಲೂ 'ಮಾರುತಿ ಸುಜುಕಿ ವ್ಯಾಗನ್ಆರ್' ಕಾರು ಭಾರೀ ಪ್ರಮಾಣದಲ್ಲಿ ಮಾರಾಟ ಮಾಡಲಾಗಿದೆ. ಸರಿ ಸುಮಾರು 77,346 ಯುನಿಟ್‌ಗಳನ್ನು ಮಾರಲಾಗಿದೆ. ಈ ಅಂಕಿ ಸಂಖ್ಯೆಯನ್ನು ಲೆಕ್ಕ ಹಾಕಿದಾಗ, ಮಾಸಿಕ 13,000 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ.

Maruti Suzuki WagonR July 2025 Sales Report

ಮಾರುತಿ ಸುಜುಕಿ ವ್ಯಾಗನ್ಆರ್ ವಿಶೇಷತೆಗಳೇನು:

ಇದೊಂದು ಹ್ಯಾಚ್‌ಬ್ಯಾಕ್ ಆಗಿದೆ. ಬಜೆಟ್ ಬೆಲೆಯಲ್ಲಿಯೂ ಲಭ್ಯವಿದೆ. ಕನಿಷ್ಠ ರೂ.5.79 ಲಕ್ಷ ಹಾಗೂ ಗರಿಷ್ಠ ರೂ.7.62 ಲಕ್ಷ (ಎಕ್ಸ್-ಶೋರೂಂ - ಬೆಂಗಳೂರು) ದರವನ್ನು ಪಡೆದಿದೆ. ಎಲ್ಎಕ್ಸ್ಐ, ವಿಎಕ್ಸ್ಐ, ಜಡ್ಎಕ್ಸ್ಐ ಮತ್ತು ಜಡ್ಎಕ್ಸ್ಐ ಪ್ಲಸ್ ಒಳಗೊಂಡಂತೆ ಹಲವು ರೂಪಾಂತರಗಳೊಂದಿಗೂ (ವೇರಿಯೆಂಟ್) ಸಿಗುತ್ತದೆ.

ಈ ಕಾರು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಉತ್ತಮವಾಗಿರುವ ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ಗಳು, ಡಿಆರ್‌ಎಲ್‌ಗ‌ಳು ಹಾಗೂ 15-ಇಂಚಿನ ಡುಯಲ್ ಟೋನ್ ಅಲಾಯ್ ವೀಲ್‌ಗಳನ್ನು ಪಡೆದಿದೆ. ಸುಪೀರಿಯರ್ ವೈಟ್, ಮೆಟಾಲಿಕ್ ಮ್ಯಾಗ್ಮಾ ಗ್ರೇ, ಮೆಟಾಲಿಕ್ ಸಿಲ್ಕಿ ಸಿಲ್ವರ್, ಪರ್ಲ್ ಮೆಟಾಲಿಕ್ ಗ್ಯಾಲಂಟ್ ರೆಡ್, ಪರ್ಲ್ ಬ್ಲೂಯಿಶ್ ಬ್ಲ್ಯಾಕ್, ಮಿಡ್‌ನೈಟ್ ಬ್ಲ್ಯಾಕ್ ಹಾಗೂ ಗ್ಯಾಲಂಟ್ ರೆಡ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

Maruti Suzuki WagonR July 2025 Sales Report

ನೂತನ ವ್ಯಾಗನ್ಆರ್ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದಿದೆ. ಇದರ 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 67 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 89 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

ಇನ್ನೊಂದು 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 90 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 113 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ.

Maruti Suzuki WagonR July 2025 Sales Report

ಮತ್ತೊಂದು 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್/ಸಿಎನ್‌ಜಿ ಎಂಜಿನ್, 57 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 82 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಕೇವಲ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಮಾತ್ರ ಹೊಂದಿದೆ. ಈ ಕಾರು 23 ರಿಂದ 34 ಕಿ.ಮೀ ವರೆಗೆ ಮೈಲೇಜ್ ನೀಡಬಲ್ಲದು.

ಇದು 3665 ಎಂಎಂ ಉದ್ದ, 1620 ಎಂಎಂ ಅಗಲ & 1675 ಎಂಎಂ ಎತ್ತರ ಕೂಡ ಇದೆ..165 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2435 ಎಂಎಂ ವೀಲ್‌ಬೇಸ್‌ನ್ನು ತನ್ನದಾಗಿಸಿಕೊಂಡಿದೆ. 5 ಆಸನಗಳನ್ನು ಒಳಗೊಂಡಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಓಡಾಡಬಹುದು. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು 341 ಲೀಟರ್‌ ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

ಈ ಕಾರಿನ ಕ್ಯಾಬಿನ್ ವಿನ್ಯಾಸವು ಅಚ್ಚುಕಟ್ಟಾಗಿದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ, 4-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್, ಫೋನ್ ಕಂಟ್ರೋಲ್ ಹಾಗೂ ಸ್ಟೀರಿಂಗ್ ಮೌಂಟೆಡ್ ಆಡಿಯೋ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ರೇರ್ ಪಾರ್ಕಿಂಗ್ ಸೆನ್ಸರ್ಸ್, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಸೀಟ್ ಬೆಲ್ಟ್ ವಾರ್ನಿಂಗ್ ಅನ್ನು ಪಡೆದಿದೆ.

Article Published On: Wednesday, August 6, 2025, 7:30 [IST]
English summary
Maruti suzuki wagonr july 2025 sales report
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+