ಬಡವರಿಗೆ ಬೆಸ್ಟ್ ಕಾರಿದು.. 5 ಲಕ್ಷ, 34 Km ಮೈಲೇಜ್.. ಈ ಮಾರುತಿ ಹ್ಯಾಚ್‌ಬ್ಯಾಕ್ ಭಾರೀ ಸಂಖ್ಯೆಯಲ್ಲಿ ಮಾರಾಟ!
ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಜನಮೆಚ್ಚಿದ ಹ್ಯಾಚ್‌ಬ್ಯಾಕ್ ಎಂದೇ ಮನೆ ಮಾತಾಗಿದೆ. ಹೆಚ್ಚು ಅತ್ಯಾಧುನಿಕವಾಗಿದ್ದು, ಉತ್ತಮವಾದ ಕಾರ್ಯಕ್ಷಮತೆಗೂ ಹೆಸರುವಾಗಿದೆ. ಈಚೆಗೆ ಈ ಜೂನ್ ತಿಂಗಳು ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಕಾರುಗಳ ಪಟ್ಟಿ ಪ್ರಕಟಗೊಂಡಿದೆ. ಅದರಲ್ಲೂ ಇದೇ 'ವ್ಯಾಗನ್ಆರ್' 6ನೇ ಸ್ಥಾನದಲ್ಲಿದೆ. ಒಟ್ಟು 12,930 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಹ್ಯುಂಡೈ ಕ್ರೆಟಾ (15,786 ಯುನಿಟ್), ಮಾರುತಿ ಡಿಜೈರ್ (15,484 ಯುನಿಟ್), ಮಾರುತಿ ಬ್ರೆಝಾ (14,507 ಯುನಿಟ್), ಮಾರುತಿ ಎರ್ಟಿಗಾ (14,151 ಯುನಿಟ್) ಹಾಗೂ ಮಾರುತಿ ಸ್ವಿಫ್ಟ್ (13,275 ಯುನಿಟ್) ಕಾರುಗಳು ಕ್ರಮವಾಗಿ ಮೊದಲ 5 ಸ್ಥಾನದಲ್ಲಿವೆ.
ಈ ವರ್ಷದ ಮೊದಲ 5 ತಿಂಗಳಲ್ಲೂ 'ಮಾರುತಿ ಸುಜುಕಿ ವ್ಯಾಗನ್ಆರ್' ಹ್ಯಾಚ್‌ಬ್ಯಾಕ್ ಭಾರೀ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಗ್ರಾಹಕರು ಕೂಡ ತುಂಬಾ ಇಷ್ಟಪಟ್ಟು ಖರೀದಿ ಮಾಡಿದ್ದಾರೆ. ಮೇನಲ್ಲಿ 13,949, ಏಪ್ರಿಲ್‌ನಲ್ಲಿ 13,413, ಮಾರ್ಚ್‌ನಲ್ಲಿ 17,175, ಫೆಬ್ರವರಿಯಲ್ಲಿ 19,879 ಮತ್ತು ಜನವರಿಯಲ್ಲಿ 24,078 ಯುನಿಟ್‌ಗಳನ್ನು ಮಾರಲಾಗಿದೆ.

ಮಾರುತಿ ಸುಜುಕಿ ವ್ಯಾಗನ್ಆರ್ ವಿಶೇಷತೆಗಳೇನು:
ಇದೊಂದು ಹ್ಯಾಚ್‌ಬ್ಯಾಕ್ ಆಗಿದ್ದು, ಅತಿ ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಮಧ್ಯಮ ವರ್ಗದ ಗ್ರಾಹಕರು ಕೂಡ ಸುಲಭವಾಗಿ ಖರೀದಿ ಮಾಡಬಹುದು. ಅದಕ್ಕೆ ಅನುಗುಣವಾಗಿ ರೂ.5.54 ಲಕ್ಷದಿಂದ ರೂ.7.62 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಎಲ್ಎಕ್ಸ್ಐ, ವಿಎಕ್ಸ್ಐ & ಝಡ್ಎಕ್ಸ್ಐ ಸೇರಿದಂತೆ ವಿವಿಧ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.
ಈ ಕಾರು ಹೊರಭಾಗದಲ್ಲಿ ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಹೊಂದಿದೆ. ಇದು ನೋಡುಗರ ಕಣ್ಣು ಕುಕ್ಕುವಂತಿದೆ. ಗ್ಯಾಲಂಟ್ ರೆಡ್, ಪೂಲ್ಸೈಡ್ ಬ್ಲೂ, ಸುಪೀರಿಯರ್ ವೈಟ್, ಸಿಲ್ಕಿ ಸಿಲ್ವರ್ ಹಾಗೂ ಮ್ಯಾಗ್ಮಾ ಗ್ರೇ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. ಜೊತೆಗೆ 3665 ಎಂಎಂ ಉದ್ದ, 1620 ಎಂಎಂ ಅಗಲ ಹಾಗೂ 1675 ಎಂಎಂ ಎತ್ತರವು ಇದೆ. 165 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2435 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.

ನೂತನ ವ್ಯಾಗನ್ಆರ್ ಹೆಚ್ಚು ಶಕ್ತಿಯುತವಾದ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದೆ. 1.2-ಲೀ. ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಯಾವುದೇ ಸ್ಕೂಟರ್ ಹಾಗೂ ಮೋಟಾರ್‌ಸೈಕಲ್‌ಗೆ ಕಮ್ಮಿಯಿಲ್ಲ ಎಂಬಂತೆ 23 ರಿಂದ 34 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಇದರಲ್ಲಿ 5 ಆಸನ ಆಯ್ಕೆ ವ್ಯವಸ್ಥೆಯಿದೆ. ಪ್ರಯಾಣಿಕರು ಸುಲಭವಾಗಿ ದೂರದ ಊರುಗಳಿಗೆ ಸಂಚಾರ ಮಾಡಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಪ್ರವಾಸಕ್ಕೆ ಹೋಗುವ ಮುಂತಾದ ಸಮಯದಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು 341 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಹೊಂದಿದೆ. 32 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ.

ಈ ಕಾರಿನ ಕ್ಯಾಬಿನ್ ವಿನ್ಯಾಸವು ಅತ್ಯಾಕರ್ಷಕವಾಗಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ವಿಶೇಷವಾಗಿ 7-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 4-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್ ಫೋನ್ ಕಂಟ್ರೋಲ್ ಮತ್ತು ಸ್ಟೀರಿಂಗ್ ಮೌಂಟೆಡ್ ಆಡಿಯೋವನ್ನು ಪಡೆದಿದೆ.
ಇದು ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ರೇರ್ ಪಾರ್ಕಿಂಗ್ ಸೆನ್ಸರ್ಸ್, ಸೀಟ್ ಬೆಲ್ಟ್ ವಾರ್ನಿಂಗ್, ಹಿಲ್ ಹೋಲ್ಡ್ ಅಸಿಸ್ಟ್, ಚೈಲ್ಡ್ ಲಾಕ್, ಓವರ್‌ಸ್ಪೀಡ್ ವಾರ್ನಿಂಗ್ ಹಾಗೂ ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್ ಆಯ್ಕೆಯನ್ನು ಒಳಗೊಂಡಿದೆ.


Click it and Unblock the Notifications