ಬಡವರ ಅಂಬಾರಿ.. 34 ಕಿ.ಮೀ ಮೈಲೇಜ್, 4.99 ಲಕ್ಷ.. ಈ ಮಾರುತಿ ಕಾರಿಗೆ ಮನಸೋತ ಗ್ರಾಹಕರು!
ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಜಗಮೆಚ್ಚಿದ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ಇದು ನೋಡುಗರ ಕಣ್ಣು ಕುಕ್ಕುವಂತಹ ವಿನ್ಯಾಸ ಹೊಂದಿದ್ದು, ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಕೊಂಡುಕೊಳ್ಳುತ್ತಿದ್ದಾರೆ. ಈ ಸೆಪ್ಟೆಂಬರ್ ತಿಂಗಳಲ್ಲೂ 'ವ್ಯಾಗನ್ಆರ್' ಬೃಹತ್ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 15,388 ಯುನಿಟ್‌ಗಳನ್ನು ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿವಲ್ಲಿ 13,359 ಯುನಿಟ್‌ಗಳನ್ನು ಮಾರಾಟ ಮಾಡಲಾಗತ್ತು. ಈ ಅಂಕಿಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 15% ಪ್ರಗತಿಯಾಗಿದೆ.
ಈ ವರ್ಷದ ಜೂನ್‌ನಿಂದ ಆಗಸ್ಟ್‌ವರೆಗೂ 'ಮಾರುತಿ ವ್ಯಾಗನ್ಆರ್' ಉತ್ತಮವಾಗಿಯೇ ಮಾರಾಟವಾಗಿದೆ. ಒಟ್ಟು 42,192 ಯುನಿಟ್‌ಗಳನ್ನು ಗ್ರಾಹಕರು ಕೊಂಡುಕೊಂಡಿದ್ದಾರೆ. ಸೆಪ್ಟೆಂಬರ್‌ನಲ್ಲಿ 'ವ್ಯಾಗನ್ಆರ್' ಮಾರಾಟ ಸಂಖ್ಯೆ ಅಧಿಕಗೊಳ್ಳಲು ಹಲವು ಕಾರಣಗಳಿವೆ. ಪರಿಷ್ಕೃತ ಜಿಎಸ್‌ಟಿ ತೆರಿಗೆ ದರಗಳು ಜಾರಿಗೊಂಡಿದೆ. ಇದರ ಲಾಭವು ಹೊಚ್ಚ ಹೊಸ 'ವ್ಯಾಗನ್ಆರ್' ಕಾರಿಗೂ ಸಿಗುತ್ತಿದ್ದು, ರೂ.79,600 ವರೆಗೆ ಬೆಲೆ ಇಳಿಕೆಯಾಗಿದೆ. ಜೊತೆಗಿದು ಎಸ್‌ಯುವಿಗಳಿಗೆ ಸವಾಲೆಸೆಯುವ ರೀತಿಯಲ್ಲಿದೆ. ಹೀಗಾಗಿ, ದೊಡ್ಡ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ ಎನ್ನಲಾಗಿದೆ.

ಮಾರುತಿ ಸುಜುಕಿ ವ್ಯಾಗನ್ಆರ್ ವಿಶೇಷತೆಗಳೇನು:
ಇದು ಕನಿಷ್ಠ ರೂ.4.99 ಲಕ್ಷ ಹಾಗೂ ಗರಿಷ್ಠ ರೂ.6.95 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದ್ದು, ಎಲ್ಲ ವರ್ಗದ ಗ್ರಾಹಕರು ಸುಲಭವಾಗಿ ಮನೆಗೆ ತರಬಹುದು. ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ ಹಾಗೂ ಝಡ್ಎಕ್ಸ್ಐ ಪ್ಲಸ್ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ದೊರೆಯುತ್ತದೆ.
ನೂತನ 'ಮಾರುತಿ ಸುಜುಕಿ ವ್ಯಾಗನ್ಆರ್' ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿದೆ. ಉತ್ತಮವಾದ ಎಲ್ಇಡಿ ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಮತ್ತು 15 ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ. ಮೆಟಾಲಿಕ್ ಮ್ಯಾಗ್ಮಾ ಗ್ರೇ, ಮೆಟಾಲಿಕ್ ಸಿಲ್ಕಿ ಸಿಲ್ವರ್, ಸುಪೀರಿಯರ್ ವೈಟ್, ಪರ್ಲ್ ಬ್ಲೂಯಿಶ್ ಬ್ಲ್ಯಾಕ್ ಹಾಗೂ ಮಿಡ್‌ನೈಟ್ ಬ್ಲ್ಯಾಕ್ ಒಳಗೊಂಡಂತೆ ಹಲವು ಬಣ್ಣಗಳೊಂದಿಗೂ ಸಿಗುತ್ತದೆ.

ಈ ಕಾರು 'ಹ್ಯಾಚ್‌ಬ್ಯಾಕ್' ಆಗಿದ್ದರೂ ವಿಶಾಲ ಗಾತ್ರದಲ್ಲಿದೆ. 3,665 ಮಿ.ಮೀ ಉದ್ದ, 1620 ಮಿ.ಮೀ ಅಗಲ ಹಾಗೂ 1675 ಮಿ.ಮೀ ಎತ್ತರವಿದೆ. 165 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2435 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 850 ಕೆಜಿ ತೂಕವಿದೆ.
ಇದು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. 1-ಲೀ. ಪೆಟ್ರೋಲ್, 1.2-ಲೀ. ಪೆಟ್ರೋಲ್ ಮತ್ತು 1-ಲೀ. ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ತನ್ನದಾಗಿಸಿಕೊಂಡಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. ಸಾಮಾನ್ಯ ಬೈಕ್‌ಗೂ ಕಮ್ಮಿಯಿಲ್ಲದಂತೆ 23 ರಿಂದ 34 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ.

ಹೊಸ 'ವ್ಯಾಗನ್ಆರ್' 5 ಆಸನಗಳನ್ನು ಹೊಂದಿದೆ. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 341 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ. 140 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. 12.4 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.
ಈ ಕಾರಿನ ಕ್ಯಾಬಿನ್ ವಿನ್ಯಾಸವು ಚೆನ್ನಾಗಿದೆ. ದೊಡ್ಡ ಗಾತ್ರದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಮ್ಯೂಸಿಕ್ ಸಿಸ್ಟಮ್, ಕೀಲೆಸ್ ಎಂಟ್ರಿ, ಪವರ್ ವಿಂಡೋಗಳು, ಟಿಲ್ಟ್ ಅಡ್ಜಸ್ಟೇಬಲ್ ಸ್ಟೇರಿಂಗ್ ವೀಲ್, ಐಡಲ್ ಸ್ಟಾರ್ಟ್/ ಸ್ಟಾಪ್ ಸಿಸ್ಟಮ್ ಹಾಗೂ ಸ್ಟೀರಿಂಗ್ ಮೌಂಟೆಡ್ ಕಂಟೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.
ಇದು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರಿಗೆ ಹೆಚ್ಚಿನ ರಕ್ಷಣೆ ಒದಗಿಸಬಲ್ಲದು. 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಸೀಟ್ ಬೆಲ್ಟ್ ವಾರ್ನಿಂಗ್, ಹಿಲ್ ಹೋಲ್ಡ್ ಅಸಿಸ್ಟ್, ರೇರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್‌ನ್ನು ಪಡೆದಿದೆ.


Click it and Unblock the Notifications








