maruti: 26 ಕಿ.ಮೀ ಮೈಲೇಜ್ ನೀಡುವ ಅಗ್ಗದ ಬೆಲೆಯ ದೊಡ್ಡ ಫ್ಯಾಮಿಲಿ ಕಾರಿಗೆ ಫುಲ್ ಡಿಮ್ಯಾಂಡ್!

ಹೊಸ ಮಾರುತಿ ಸುಜುಕಿ XL6 ಕಾರು ಭಾರತದಲ್ಲಿ ಅಗ್ಗದ ಬೆಲೆಗೆ ಸಿಗುವ ಬೆಸ್ಟ್ ಪ್ರೀಮಿಯಂ ಫ್ಯಾಮಿಲಿ ಕಾರಾಗಿದೆ. ಕಿಯಾ ಕಾರೆನ್ಸ್, ಟೊಯೊಟಾ ಇನ್ನೋವಾ ಕ್ರಿಸ್ಟಾದಂತಹ ಕಾರುಗಳು ಪೈಪೋಟಿ ನೀಡುವ ಈ ಕಾರು, ಬೆಸ್ಟ್ ಇನ್‌ಸೆಗ್ಮಿಂಟ್ ಫೀಚರ್ಸ್ ಜೊತೆಗೆ ಬರುತ್ತದೆ. ಈ ವಿಭಾಗದಲ್ಲಿ ಬಹುತೇಕ ಕಂಪನಿಗಳು ದೊಡ್ಡ ಫ್ಯಾಮಿಲಿ ಮಾಡಲ್‌ಗಳನ್ನು ನೀಡುತಿದ್ದರೂ, ಮಾರುತಿ XL6 ಮಾತ್ರ ದೇಶದ ಮದ್ಯಮ ವರ್ಗದ ಟಾಪ್ ಆಯ್ಕೆಯಾಗಿದೆ. ಹಾಗೆಯೇ ಇದು ಪ್ರೀಮಿಯಂ MPV ಆಗಿರುವ ಕಾರಣ ಕೇವಲ 6-ಸೀಟರ್ ಸಂರಚನೆಯಲ್ಲಿ ಮಾತ್ರ ನೀಡಲಾಗುತ್ತದೆ.

ಭಾರತದಲ್ಲಿ ಹೊಸ ಮಾರುತಿ ಸುಜುಕಿ XL6 ಕಾರನ್ನು ಝೀಟಾ, ಆಲ್ಫಾ ಮತ್ತು ಆಲ್ಫಾ+ ಸೇರಿದಂತೆ ಇದರ CNG ಆವೃತ್ತಿಯು ಝೀಟಾ ಟ್ರಿಮ್‌ನಲ್ಲಿ ಮಾತ್ರ ಲಭ್ಯವಿದೆ. ಇದರ ಬೆಲೆಯು ಬೇಸ್‌ ವೇರಿಯೆಂಟ್ ರೂ. 11.61 ಲಕ್ಷದಿಂದ (ಎಕ್ಸ್ ಶೋ ರೂಂ) ಆರಂಭವಾಗಿ ಟಾಪ್‌ ಎಂಡ್ ವೇರಿಯೆಂಟ್ ಬೆಲೆಯು ರೂ. 14.77 ಲಕ್ಷ (ಎಕ್ಸ್ ಶೋ ರೂಂ) ವಿದೆ.

maruti-suzuki-xl6-top-things-you-should-know

ಭಾರತೀಯ ಆಟೋ ಉದ್ಯಮದಲ್ಲಿ ಅಗ್ಗದ ಬೆಲೆಯ ದೊಡ್ಡ ಫ್ಯಾಮಿಲಿ ಕಾರುಗಳಿಗೆ ಇತ್ತೀಚೆಗೆ ಬೇಡಿಕೆ ಹೆಚ್ಚಾಗಿರುವುದರಿಂದ ಈ ವಿಭಾಗದಲ್ಲಿ ಕೈಗೆಟುಕುವ ಬೆಲೆಯ ಬೆಸ್ಟ್ ಕರು ಇದಾಗಿದೆ. ಈ ವಿಭಾಗದಲ್ಲಿ ಸದ್ಯ ಅಗ್ಗದ ಬೆಲೆಗೆ ಪ್ರೀಮಿಯಂ ಆಗಿ ಸಿಗುವ ಏಕೈಕ ಕಾರು ಮಾರುತಿ XL6 ಆಗಿದೆ. ಈ ಕಾರಿನ ಎಂಜಿನ್‌, ಮೈಲೇಜ್, ಸುರಕ್ಷತಾ ಫೀಚರ್ಸ್ ಸೇರಿದಂತೆ ಎಲ್ಲದಕ್ಕೂ ಆದ್ಯತೆ ನೀಡಲಾಗಿದೆ.

ಸುರಕ್ಷತೆಯ ವಿಷಯದಲ್ಲಿ, ಇದು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ಸೇರಿದಂತೆ ನಾಲ್ಕು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ. ಬೆಲೆ ಹೆಚ್ಚಾದರೂ ಚಿಂತೆಯಿಲ್ಲ ಎಂದುಕೊಳ್ಳುವವರು ಮಾರುತಿ XL6 ಪ್ರತಿಸ್ಪರ್ಧಿಗಳಾದ ಕಿಯಾ ಕಾರೆನ್ಸ್, ಟೊಯೊಟಾ ಇನ್ನೋವಾ ಕ್ರಿಸ್ಟಾ 6 - ಆಸನಗಳ ಕಾರುಗಳನ್ನು ಪರ್ಯಾಯವಾಗಿ ಖರೀದಿಸಬಹುದು.

maruti-suzuki-xl6-top-things-you-should-know

ಮಾರುತಿ ಸುಜುಕಿ XL6 ಫೀಚರ್ಸ್ ವಿಷಯಕ್ಕೆ ಬಂದರೆ ಪ್ಯಾಡಲ್ ಶಿಫ್ಟರ್‌ಗಳು, ಇದು ಕ್ರೂಸ್ ಕಂಟ್ರೋಲ್, ಆಟೋ ಎಸಿ ಮತ್ತು ಎತ್ತರ-ಹೊಂದಾಣಿಕೆ ಡ್ರೈವರ್ ಸೀಟ್ ಕೂಡ ಹೊಂದಿದೆ. ಜೊತೆಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 7-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 6-ಸ್ಪೀಕರ್ ARKAMYS-ಟ್ಯೂನ್ ಸಿಸ್ಟಮ್ (2 ಟ್ವೀಟರ್‌ಗಳನ್ನು ಒಳಗೊಂಡಂತೆ), ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾ ನೀಡಲಾಗಿದೆ.

ಎಂಜಿನ್ ವಿಷಯಕ್ಕೆ ಬಂದರೆ ಮಾರುತಿ XL6 ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಈ ಎಂಜಿನ್ 103 PS ಪವರ್ ಮತ್ತು 137 Nm ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಯಾಗಿ ಬರುತ್ತದೆ. CNG ಆಯ್ಕೆಯನ್ನು ಕೇವಲ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ನೀಡಲಾಗುತ್ತದೆ.

maruti-suzuki-xl6-top-things-you-should-know

ಇದರ 1.5-ಲೀಟರ್ ಆಟೋಮ್ಯಾಟಿಕ್ ಟ್ರಿಮ್‌ನಲ್ಲಿ 20.27 ಕಿ.ಮೀ ಮೈಲೇಜ್, 1.5-ಲೀಟರ್ ಮ್ಯಾನುವಲ್ ಟ್ರಿಮ್‌ನಲ್ಲಿ 20.97 ಕಿ.ಮೀ ಮೈಲೇಜ್, 1.5-ಲೀಟರ್ ಮ್ಯಾನುವಲ್ CNG ಟ್ರಿಮ್‌ನಲ್ಲಿ 26.32 ಕಿ.ಮೀ/ಕೆ.ಜಿ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಹಾಗೆಯೇ ಗ್ರಾಹಕರು ಈ ಕಾರನ್ನು ಮೂರು ಡ್ಯುಯಲ್-ಟೋನ್ ಮತ್ತು ಏಳು ಮೊನೊಟೋನ್ ಬಣ್ಣಗಳಲ್ಲಿ ಪಡೆಯಬಹುದು.

ಬಣ್ಣಗಳನ್ನು ವಿವರವಾಗಿ ನೋಡುವುದಾದ್ರೆ, ಪರ್ಲ್ ಮಿಡ್‌ನೈಟ್‌ ಬ್ಲಾಕ್, ಬ್ರೇವ್ ಖಾಕಿ, ಗ್ರ್ಯಾಂಡ್ಯೂರ್ ಗ್ರೇ, ನೆಕ್ಸಾ ಬ್ಲೂ, ಒಪ್ಯುಲೆಂಟ್ ರೆಡ್, ಆರ್ಕ್ಟಿಕ್ ವೈಟ್, ಸ್ಪ್ಲೆಂಡಿಡ್ ಸಿಲ್ವರ್, ಬ್ರೇವ್ ಮಿಡ್‌ನೈಟ್ ಬ್ಲ್ಯಾಕ್ ರೂಫ್‌ನೊಂದಿಗೆ ಖಾಕಿ, ಒಪ್ಯುಲೆಂಟ್ ರೆಡ್ ವಿತ್ ಮಿಡ್ನೈಟ್ ಬ್ಲ್ಯಾಕ್ ರೂಫ್ ಮತ್ತು ಮಿಡ್‌ನೈಟ್ ಬ್ಲ್ಯಾಕ್ ರೂಫ್‌ನೊಂದಿಗೆ ಸ್ಪ್ಲೆಂಡಿಡ್ ಸಿಲ್ವರ್ ಬಣ್ಣಗಳು ಸಿಗಲಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, January 12, 2025, 1:00 [IST]
English summary
Maruti suzuki xl6 top things you should know
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+