ಶ್ರೀಮಂತ ಕಾರು ಖರೀದಿದಾರರಿಗೆ ಶಾಕ್ ಕೊಟ್ಟ ಬೆಂಝ್ ಕಂಪನಿ: ಜೂನ್ 1 ರಿಂದ ಸಿದ್ಧರಾಗಿ
ಐಷಾರಾಮಿ ಕಾರು ತಯಾರಕ ಕಂಪನಿ ಮರ್ಸಿಡಿಸ್- ಬೆಂಝ್ ಇಂಡಿಯಾ ಇಂದು ತನ್ನ ವಾಹನಗಳ ಮಾಡೆಲ್ ಗಳ ಎಕ್ಸ್- ಶೋರೂಂ ಬೆಲೆಗಳನ್ನು ಎರಡು ಹಂತಗಳಲ್ಲಿ ಪರಿಷ್ಕರಣೆ ಮಾಡುತ್ತಿರುವುದಾಗಿ ಘೋಷಿಸಿದೆ. ಒಂದುನೇ ಹಂತದ ದರ ಪರಿಷ್ಕರಣೆ ಮತ್ತು ಎರಡನೇ ಹಂತದ ದರ ಪರಿಷ್ಕರಣೆ ಕ್ರಮವಾಗಿ ಜೂನ್ 1 ಮತ್ತು ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದೆ. ಈ ಕ್ರಮಬದ್ಧ ದರ ಪರಿಷ್ಕರಣೆಯಿಂದ ಗ್ರಾಹಕರು ತಮ್ಮ ಆರ್ಥಿಕ ಖರ್ಚಿಗೆ ತಕ್ಕಂತೆ ಖರೀದಿ ಯೋಜನೆಯನ್ನು ಮಾಡಲು ಸಹಾಯವಾಗಲಿದೆ ಎಂದು ಮರ್ಸಿಡಿಸ್- ಬೆಂಝ್ ಇಂಡಿಯಾ ಹೇಳಿಕೊಂಡಿದೆ.
ಜನವರಿ 2025 ರಿಂದ ವಿದೇಶಿ ವಿನಿಮಯ ದರಗಳಲ್ಲಿ ತೀವ್ರ ಏರಿಕೆ ಆಗಿರುವುದರಿಂದ ಮತ್ತು ವಿದೇಶಿ ವಿನಿಮಯ ದರದ ಏರಿಕೆಯು ವಾಹನ ಘಟಕಗಳು ಮತ್ತು ಉತ್ಪನ್ನಗಳ, ಅದರಲ್ಲೂ ವಿಶೇಷವಾಗಿ ಸಿಬಿಯುಗಳ ವೆಚ್ಚದ ರಚನೆಯ ಮೇಲೆ ತೀವ್ರವಾಗಿ ಪರಿಣಾಮ ಬೀರಿರುವುದರಿಂದ ಈ ದರ ಪರಿಷ್ಕರಣೆಗೆ ಕಂಪನಿಯು ಮುಂದಾಗಿದೆ. ಮರ್ಸಿಡಿಸ್-ಬೆಂಝ್ ಇಂಡಿಯಾ ಈ ವೆಚ್ಚ ಏರಿಕೆಯ ಕೇವಲ ಕನಿಷ್ಠ ಭಾಗವನ್ನು ಮಾತ್ರ ಗ್ರಾಹಕರಿಗೆ ವರ್ಗಾಯಿಸುತ್ತಿದೆ.

ಯಾಕೆಂದರೆ ಕಂಪನಿಯು ಪ್ರಾದೇಶೀಕರಣ ಅಥವಾ ಲೋಕಲೈಸೇಷನ್ ಯೋಜನೆಗಳನ್ನು ಹೆಚ್ಚಿಸುವ ಪ್ರಯತ್ನ ಮಾಡುತ್ತಿದೆ. ಈವರೆಗೆ ಮರ್ಸಿಡಿಸ್- ಬೆಂಝ್ ಈ ತೀವ್ರ ವೆಚ್ಚ ಏರಿಕೆಯನ್ನು ಭರಿಸಿಕೊಂಡಿದ್ದರೂ, ಇದೀಗ ಕಾರ್ಯಾಚರಣೆಯ ವೆಚ್ಚಗಳ ಮೇಲಿನ ಪರಿಣಾಮವನ್ನು ಸರಿದೂಗಿಸಲು ಮತ್ತು ವ್ಯಾಪಾರದ ಸುಸ್ಥಿರತೆಯನ್ನು ಕಾಪಾಡಿಕೊಳ್ಳಲು ಕನಿಷ್ಠ ವೆಚ್ಚವನ್ನು ಮಾರುಕಟ್ಟೆ ಮೇಲೆ ವರ್ಗಾಯಿಸಲು ನಿರ್ಧರಿಸಿದೆ.
ಈ ಕುರಿತು ಮಾತನಾಡಿರುವ ಮರ್ಸಿಡಿಸ್-ಬೆಂಝ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಸಂತೋಷ್ ಅಯ್ಯರ್, "ಕಳೆದ ನಾಲ್ಕು ತಿಂಗಳುಗಳಲ್ಲಿ ಮಾರುಕಟ್ಟೆಯಲ್ಲಿ ರೂಪಾಯಿಯ ಮೌಲ್ಯವು ಕುಸಿದಿದೆ. ಯೂರೋದಿಂದ ರೂಪಾಯಿಯ ವಿನಿಮಯ ದರದಲ್ಲಿ ಸುಮಾರು ಶೇ.10 ರಷ್ಟು ಕುಸಿತವಾಗಿದ್ದು, ನಮ್ಮ ವ್ಯಾಪಾರ ಕಾರ್ಯಾಚರಣೆಗಳ ಮೇಲೆ ಹೆಚ್ಚಿನ ವೆಚ್ಚದ ಒತ್ತಡವನ್ನು ಉಂಟುಮಾಡಿದೆ.
| ಮಾಡೆಲ್ | ಪ್ರಸ್ತುತ ಎಕ್ಸ್-ಶೋರೂಂ ಬೆಲೆ [ರೂ. ಲಕ್ಷಗಳಲ್ಲಿ] | ಹೊಸ ಎಕ್ಸ್-ಶೋರೂಂ ಬೆಲೆ [ರೂ. ಲಕ್ಷಗಳಲ್ಲಿ] | ಬದಲಾವಣೆ [ರೂ. ಲಕ್ಷಗಳಲ್ಲಿ] |
| C 200 | ₹59.4 | ₹60.3 | ₹0.9 |
| GLC 300 4MATIC | ₹76.8 | ₹78.3 | ₹1.5 |
| E 200 | ₹79.5 | ₹81.5 | ₹2.0 |
| GLE 300d 4MATIC AMG Line | ₹99.0 | ₹101.5 | ₹2.5 |
| EQS SUV 450 4MATIC | ₹128.0 | ₹131.0 | ₹3.0 |
| GLS 450 4MATIC | ₹133.9 | ₹137.0 | ₹3.1 |
| Maybach S 680 | ₹347.8 | ₹360.0 | ₹12.2 |
ಯೂರೋ - ರೂಪಾಯಿ ದರದ ಈ ತೀವ್ರ ಏರಿಳಿತವು ಘಟಕಗಳು ಮತ್ತು ಸಿಬಿಯು ಕಾರುಗಳ ಆಮದು ವೆಚ್ಚದ ಮೇಲೆ ತೀವ್ರವಾದ ಪರಿಣಾಮ ಬೀರಿದೆ. ಈವರೆಗೆ ನಾವು ವಿನಿಮಯ ದರದ ವ್ಯತ್ಯಾಸದ ಹೆಚ್ಚಿನ ಭಾಗವನ್ನು ನಾವೇ ಭರಿಸಿಕೊಂಡಿದ್ದೇವೆ ಮತ್ತು ಪ್ರಾದೇಶಿಕ ಅಥವಾ ಲೋಕಲೈಸೇಷನ್ ಯೋಜನೆಗಳನ್ನು ಹೆಚ್ಚಿಸಿದ್ದೇವೆ.
ಆದರೆ ಈಗ ಇದರ ಒಂದು ಚಿಕ್ಕ ಭಾಗವನ್ನು ಗ್ರಾಹಕರಿಗೆ ವರ್ಗಾಯಿಸಲು ನಾವು ಬದ್ಧರಾಗಿದ್ದೇವೆ. ವಿದೇಶಿ ವಿನಿಮಯ ಚಲನೆಯ ಪರಿಣಾಮದಿಂದ ಉಂಟಾದ ಕಾರ್ಯಾಚರಣೆ ವೆಚ್ಚಗಳ ನಿರಂತರ ಏರಿಕೆಯು ಈ ಸ್ವಲ್ಪ ಬೆಲೆ ಪರಿಷ್ಕರಣೆಯನ್ನು ಅನಿವಾರ್ಯಗೊಳಿಸಿದೆ. ಇದನ್ನು ಕಂಪನಿಯ ಮತ್ತು ನಮ್ಮ ಫ್ರಾಂಚೈಸ್ ಪಾಲುದಾರರ ಸುಸ್ಥಿರ ವ್ಯಾಪಾರಕ್ಕಾಗಿ ಮಾರುಕಟ್ಟೆಗೆ ವರ್ಗಾಯಿಸಲಾಗುವುದು" ಎಂದು ಹೇಳಿದರು.
"ಎಂಬಿಎಫ್ಎಸ್ ನಿಂದ ಒದಗಿಸಲಾದ ಮೌಲ್ಯವರ್ಧಿತ ಹಣಕಾಸು ಯೋಜನೆಗಳ ಜೊತೆಗೆ ಇದೀಗ ಅನುಸರಿಸಲಾಗಿರುವ ಈ ಕ್ರಮಬದ್ಧ ಬೆಲೆ ಪರಿಷ್ಕರಣಾ ವಿಧಾನವು ಆರ್ಥಿಕ ಭಾರವನ್ನು ಕಡಿಮೆ ಮಾಡುವುದಲ್ಲದೆ, ಗ್ರಾಹಕರಿಗೆ ತಮ್ಮ ಅಗತ್ಯಗಳಿಗೆ ತಕ್ಕಂತೆ ಖರೀದಿ ಯೋಜನೆ ಹಾಕಿಕೊಳ್ಳಲು ಒಂದು ಸೂಕ್ತವಾದ ಸೌಲಭ್ಯವನ್ನು ಒದಗಿಸುತ್ತದೆ" ಎಂದು ಹೇಳಿದರು.
ದರ ಪರಿಷ್ಕರಣೆ ಕುರಿತ ಪ್ರಮುಖ ಮಾಹಿತಿಗಳು: ಮರ್ಸಿಡಿಸ್- ಬೆಂಝ್ ತನ್ನ ಗ್ರಾಹಕರಿಗೆ ಜೂನ್ ಮತ್ತು ಸೆಪ್ಟೆಂಬರ್ 2025 ರಲ್ಲಿ ಎರಡು ಹಂತಗಳಲ್ಲಿ ದರ ಪರಿಷ್ಕರಣೆಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ. ಕಳೆದ ನಾಲ್ಕು ತಿಂಗಳುಗಳಲ್ಲಿ ವಿದೇಶಿ ವಿನಿಮಯ ದರಗಳು ಸುಮಾರು ಶೇ.10 ರಷ್ಟು ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದ್ದು, ಇದರಿಂದ ವಾಹನ ಘಟಕಗಳು ಮತ್ತು ಸಿಬಿಯು ಉತ್ಪನ್ನಗಳ ಬೆಲೆ ಏರಿಕೆ ಆಗಿದೆ.
ಮರ್ಸಿಡಿಸ್-ಬೆಂಝ್ ಇಂಡಿಯಾ ತೀವ್ರ ಬೆಲೆ ಏರಿಕೆಯ ಕೇವಲ ಕನಿಷ್ಠ ಭಾಗವನ್ನು ಮಾತ್ರ ಗ್ರಾಹಕರಿಗೆ ವರ್ಗಾಯಿಸುತ್ತಿದೆ, ಏಕೆಂದರೆ ಕಂಪನಿಯು ಅನೇಕ ಸ್ಥಳೀಕರಣ ಅಥವಾ ಲೋಕಲೈಸೇಷನ್ ಯೋಜನೆಗಳನ್ನು ಅಳವಡಿಸಿಕೊಂಡಿದೆ. ಮರ್ಸಿಡಿಸ್-ಬೆಂಝ್ ಫೈನಾನ್ಷಿಯಲ್ ಸರ್ವೀಸಸ್ (ಎಂಬಿಎಫ್ಎಸ್) ಗ್ರಾಹಕರ ಮೇಲಿನ ವೆಚ್ಚದ ಹೊರೆಯನ್ನು ಕಡಿಮೆ ಮಾಡುವ ನವೀನ ಹಣಕಾಸು ಉತ್ಪನ್ನಗಳನ್ನು ಒದಗಿಸಲು ಯೋಜನೆ ರೂಪಿಸಿದೆ.
ಸಿ-ಕ್ಲಾಸ್‌ಗೆ 90,000 ರೂ.ಗಳಿಂದ ಬೆಲೆ ಪರಿಷ್ಕರಣೆಯು ಆರಂಭವಾಗಲಿದ್ದು, ಮರ್ಸಿಡಿಸ್-ಮೇಬ್ಯಾಕ್ ಎಸ್ 680ಗೆ 12.2 ಲಕ್ಷ ರೂ.ಗಳವರೆಗೆ ದರ ಪರಿಷ್ಕರಣೆ ಆಗಲಿದೆ. ಎರಡನೇ ಹಂತದ ಬೆಲೆ ಪರಿಷ್ಕರಣೆಯಲ್ಲಿ ಶೇ1.5 ರಷ್ಟು ಏರಿಕೆಯಾಗಲಿದ್ದು, ಈ ಪರಿಷ್ಕೃತ ದರವು 1 ಸೆಪ್ಟೆಂಬರ್ 2025 ರಿಂದ ಜಾರಿಗೆ ಬರಲಿದೆ. ಮರ್ಸಿಡಿಸ್-ಬೆಂಝ್ ಫೈನಾನ್ಷಿಯಲ್ ಸರ್ವೀಸಸ್‌ನ ನವೀನ ಯೋಜನೆಗಳು ಬೆಲೆ ಪರಿಷ್ಕರಣೆಯ ಹೊರತಾಗಿಯೂ ಗ್ರಾಹಕರ ಮಾಸಿಕ ಇಎಂಐ ಖರ್ಚು ದೊಡ್ಡ ಮಟ್ಟಿಗೆ ಬದಲಾಗದಂತೆ ನೋಡಿಕೊಳ್ಳುತ್ತವೆ.
ಗ್ರಾಹಕರ ಮೇಲಿನ ಹೊರೆಯನ್ನು ಕಡಿಮೆ ಮಾಡುವುದು: ಈ ಎರಡು ಹಂತಗಳ ಬೆಲೆ ಪರಿಷ್ಕರಣೆಯಿಂದ ಮತ್ತು ಪ್ರಸ್ತುತ ಮಾರುಕಟ್ಟೆಯ ಬೆಲೆ ಸವಾಲುಗಳಿಂದ ಗ್ರಾಹಕರು ಎದುರಿಸಬಹುದಾದ ತೀವ್ರ ರೀತಿಯ ಬೆಲೆ ಏರಿಕೆಯ ಹೊರೆಯನ್ನು ಕಡಿಮೆ ಮಾಡಲು ಕಂಪನಿಯು ತಮ್ಮ ಖರೀದಿ ಮತ್ತು ಹಣಕಾಸು ಯೋಜನೆಗಳನ್ನು ತಮ್ಮ ಅಗತ್ಯಗಳಿಗೆ ತಕ್ಕಂತೆ ಪ್ಲಾನ್ ಮಾಡಲು ಅನುವು ಮಾಡಿಕೊಡುತ್ತದೆ.
ಇದರ ಜೊತೆಗೆ, ಮರ್ಸಿಡಿಸ್- ಬೆಂಝ್ ಫೈನಾನ್ಷಿಯಲ್ ಸರ್ವೀಸಸ್ ನಿಂದ ಕಡಿಮೆ ಇಎಂಐ, ಸ್ಟಾರ್ ಎಜಿಲಿಟಿ ಮೂಲಕ ಭಾಗಶಃ ಮಾಲೀಕತ್ವದಂತಹ ಹೊಸ ಮತ್ತು ಮೌಲ್ಯವರ್ಧಿತ ಸೇವೆಗಳನ್ನು ಒದಗಿಸುತ್ತದೆ. ಈ ಮೂಲಕ ಗ್ರಾಹಕರ ನಗದು ಹರಿವಿನ ಮೇಲೆ ಯಾವುದೇ ಗಣನೀಯ ಪರಿಣಾಮ ಉಂಟಾಗದಂತೆ ನೋಡಿಕೊಳ್ಳುತ್ತದೆ.
ಜೊತೆಗೆ ಗ್ರಾಹಕರ ಮಾಲೀಕತ್ವದ ಅನುಭವವನ್ನು ಉನ್ನತೀಕರಿಸಲಿದೆ. ಈ ಯೋಜನೆಗಳು ಕನಿಷ್ಠ ಬೆಲೆ ಪರಿಷ್ಕರಣೆಯ ಹೊರತಾಗಿಯೂ ಮರ್ಸಿಡಿಸ್ - ಬೆಂಝ್ ಗ್ರಾಹಕರ ಮಾಸಿಕ ಇಎಂಐ ಖರ್ಚು ದೊಡ್ಡ ಮಟ್ಟಿಗೆ ಬದಲಾಗದಂತೆ ಖಾತರಿಪಡಿಸುತ್ತವೆ. ಇದರಿಂದ ಅವರ ವೆಚ್ಚಗಳ ಹೊರೆಯನ್ನು ಕಡಿಮೆ ಮಾಡುತ್ತದೆ. ಜಿಎಲ್ಎ ಮತ್ತು ಜಿಎಲ್‌ಸಿ ಮಾಡೆಲ್ ಗಳಿಗೆ ಇಎಂಐ ವ್ಯತ್ಯಾಸವು 2,000 ರೂ.ಗಿಂತ ಕಡಿಮೆ ಇರಲಿದೆ.
ಕಂಪನಿಯು ಪ್ರಾದೇಶಿಕ ಯೋಜನೆಗಳನ್ನು ಜಾಸ್ತಿ ಮಾಡಿರುವುದರಿಂದ ವಿದೇಶಿ ವಿನಿಮಯ ದರಗಳಲ್ಲಿ ತೀವ್ರ ಏರಿಕೆ ಉಂಟಾಗಿರುವುದರಿಂದ ದೊರೆಯುವ ಗಣನೀಯ ಭಾಗವನ್ನು ಬಳಸಿಕೊಳ್ಳಲು ಮಾಡುತ್ತಿರುವ ನಿರಂತರ ಪ್ರಯತ್ನಗಳ ಭಾಗವಾಗಿ ಈ ದರ ಪರಿಷ್ಕರಣೆಯು ಮೂಡಿ ಬಂದಿದೆ. ಈ ಮೂಲಕ ಅವರು ಸುಲಭವಾಗಿ ಖರೀದಿ ಯೋಜನೆ ಹಾಕಿಕೊಳ್ಳಲು ನೆರವು ಒದಗಿಸುತ್ತಿದೆ.
ಕಡಿಮೆ ಬಡ್ಡಿ ದರಗಳು ಇರುವುದರಿಂದ ಗ್ರಾಹಕರಿಗೆ ಅವರ ಸಮಾನ ಮಾಸಿಕ ಕಂತುಗಳ (ಐಎಂಐ)ಲ್ಲಿ ಕನಿಷ್ಠ ಏರಿಕೆ ಮಾತ್ರವೇ ಉಂಟಾಗುವಂತೆ ಕಂಪನಿಯು ನೋಡಿಕೊಳ್ಳುತ್ತದೆ. 1 ಜೂನ್ 2025 ರಿಂದ ಮೊದಲ ಹಂತದ ದರ ಪರಿಷ್ಕರಣೆಯು ಜಾರಿಗೆ ಬರಲಿದ್ದು, ನಂತರ 1 ಸೆಪ್ಟೆಂಬರ್ 2025 ರಿಂದ ಶೇ.1.5ರಷ್ಟು ನಾಮಮಾತ್ರ ಏರಿಕೆ ಜಾರಿಗೆ ಬರಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








