Ventilated Seats: ಭಾರತದಲ್ಲಿ ಲಭ್ಯವಿರುವ ಕೈಗೆಟುಕುವ ವೆಂಟಿಲೇಟೆಡ್ ಸೀಟುಗಳ ಕಾರುಗಳು

ಹೊಸ ಸಮೀಕ್ಷೆಯೊಂದು ವೆಂಟಿಲೇಟೆಡ್ ಸೀಟ್‌ಗಳು (Ventilated Seats) ಹೆಚ್ಚು ಅಪೇಕ್ಷಿತ ವೈಶಿಷ್ಟ್ಯವಾಗಿದೆ ಎಂದು ಬಹಿರಂಗಪಡಿಸಿದೆ. ಹಾಗಾಗಿ ಜನರ ಆಸಕ್ತಿ ಮೇರೆಗೆ ಭಾರತದಲ್ಲಿ ರೂ.15 ಲಕ್ಷಕ್ಕಿಂತ ಕಡಿಮೆ ಬೆಲೆಯ (ಎಕ್ಸ್-ಶೋರೂಂ) ವೆಂಟಿಲೇಟೆಡ್ ಸೀಟುಗಳನ್ನು ಹೊಂದಿರುವ ಟಾಪ್ 5 ಅತ್ಯಂತ ಕೈಗೆಟುಕುವ ಕಾರುಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ. ಈ ಪಟ್ಟಿಯು ಇತ್ತೀಚಿನ 2025 ರಲ್ಲಿ ನಮಗೆ ಲಭ್ಯವಿರುವ ಕಾರುಗಳನ್ನು ಒಳಗೊಂಡಿದೆ. ವೆಂಟಿಲೇಟೆಡ್ ಸೀಟ್‌ಗಳಂತಹ ಪ್ರೀಮಿಯಂ ಫೀಚರ್ಸ್‌ಗಳಲ್ಲಿ ರಾಜಿ ಮಾಡಿಕೊಳ್ಳದೆ ಬಜೆಟ್ - ಪ್ರಜ್ಞೆಯ ಖರೀದಿದಾರರಿಗೆ ಸೌಕರ್ಯವನ್ನು ಹೆಚ್ಚಿಸುವ ಎಲೆಕ್ಟ್ರಿಕ್, ಕಾಂಪ್ಯಾಕ್ಟ್ SUV ಗಳು ಮತ್ತು ಸೆಡಾನ್‌ಗಳ ಒಟ್ಟಾರೆ ವಿವರ ಇಲ್ಲಿದೆ.

ದೇಶಿಯ ಮಾರುಕಟ್ಟೆಯಲ್ಲಿ ಫ್ರಂಟ್ ವೆಂಟಿಲೇಟೆಡ್ ಸೀಟುಗಳನ್ನು ಹೊಂದಿರುವ ಅತ್ಯಂತ ಕೈಗೆಟುಕುವ ಕಾರು ಪಂಚ್ ಇವಿಯಾಗಿದ್ದು, ಇದರ ಎಂಪವರ್ಡ್ + ವೇರಿಯೆಂಟ್‌ನಲ್ಲಿ ವೆಂಟಿಲೇಟೆಡ್ ಸೀಟುಗಳನ್ನು ನೋಡಬಹುದು. ಇದರ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.12.84 ಲಕ್ಷಗಳಾಗಿದೆ. ಇದರಲ್ಲಿ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಹಲವಾರು ಡ್ರೈವ್ ಮೋಡ್ ಗಳು (ಸಿಟಿ, ಸ್ಪೋರ್ಟ್ ಮತ್ತು ಇಕೋ), ಡಿಸ್ಕ್ ಬ್ರೇಕ್ ಗಳು, ಹಿಲ್ ಹೋಲ್ಡ್ ಕಂಟ್ರೋಲ್ ನಂತಹ ಬೆಸ್ಟ್ ಫೀಚರ್ಸ್ ಹೊಂದಿದೆ.

most-affordable-cars-with-ventilated-seats-in-india

ಚಮತ್ಕಾರಿ ಡಿಸೈನ್ ಹೊಂದಿರುವ ಕಿಯಾದ ಇತ್ತೀಚಿನ ಮಾಡಲ್, ಸೈರಸ್ ಇನ್ನೂ ಹೆಚ್ಚು ಸಮಂಜಸವಾದ ಬೆಲೆಯನ್ನು ಹೊಂದಿದೆ. ರೂ.13.30 ಲಕ್ಷ (ಎಕ್ಸ್‌ ಶೊರೂಂ) ಗಳಿಂದ ಪ್ರಾರಂಭವಾಗುವ HTX, HTX+ ಮತ್ತು HTX+ (0) ಮಾಡಲ್‌ಗಳು ಫ್ರಂಟ್ ವೆಂಟಿಲೇಟೆಡ್ ಸೀಟುಗಳನ್ನು ಹೊಂದಿವೆ. ಈ ವಿಭಾಗದಲ್ಲಿ ಮುಂಭಾಗ ಮತ್ತು ಹಿಂಭಾಗದ ಆಸನಗಳಲ್ಲಿ ವೆಂಟಿಲೇಷನ್ ಹೊಂದಿರುವ ಏಕೈಕ ಕಾರು ಇದಾಗಿದೆ.

ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯಾದ ಸ್ಕೋಡಾ ಕೈಲಾಕ್‌ನ ಪ್ರೆಸ್ಟೀಜ್ ವೇರಿಯೆಂಟ್‌ನಲ್ಲಿ ಮುಂಭಾಗದ ವೆಂಟಿಲೇಟೆಡ್ ಸೀಟುಗಳನ್ನು ನೀಡಲಾಗಿದೆ. ಪ್ರೆಸ್ಟೀಜ್ ಆವೃತ್ತಿಯ ಎಕ್ಸ್ ಶೋರೂಂ ಬೆಲೆಯು ರೂ.12.89 ಲಕ್ಷಗಳಾಗಿದೆ. ಕೇವಲ ಒಂದು ಎಂಜಿನ್ ಆಯ್ಕೆ ಹೊಂದಿರುವ ಈ ಕಾರು, 1-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 6-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್ ಬಾಕ್ಸ್ ಅಥವಾ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.

most-affordable-cars-with-ventilated-seats-in-india

15 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಫ್ರಂಟ್ ವೆಂಟಿಲೇಟೆಡ್ ಸೀಟುಗಳನ್ನು ಹೊಂದಿರುವ ನಮ್ಮ ಪಟ್ಟಿಯಲ್ಲಿರುವ ಏಕೈಕ ಎಂಪಿವಿ XL6 ಆಗಿದೆ. ಇದರ ಪ್ರಮುಖ ಮಾದರಿಯಾದ ಆಲ್ಫಾ X ವೇರಿಯೆಂಟ್ ಬೆಲೆಯು ಶೋರೂಂ ಪ್ರಕಾರ ರೂ.13.31 ಲಕ್ಷಗಳಿಂದ ಪ್ರಾರಂಭವಾಗುತ್ತದೆ. 1.5-ಲೀಟರ್ NA ಎಂಜಿನ್, 6-ಸ್ಪೀಡ್ ಆಟೋಮೇಟೆಡ್ ಟಾರ್ಕ್ ಕನ್ವರ್ಟರ್ ಅಥವಾ 5-ಸ್ಪೀಡ್ ಮ್ಯಾನುವಲ್ ಟಾರ್ಕ್ ಕನ್ವರ್ಟರ್ ಆಯ್ಕೆಯನ್ನು ಹೊಂದಿದೆ.

ಟಾಟಾ ಮೋಟಾರ್ಸ್‌ನ ನೆಕ್ಸಾನ್ 1.5-ಲೀಟರ್ ಡೀಸೆಲ್ ಚಾಲಿತ ನೆಕ್ಸಾನ್ ಎಎಂಟಿ ರೂಪಾಂತರದಲ್ಲಿ ಮಾತ್ರ ಮುಂಭಾಗದ ವೆಂಟಿಲೇಟೆಡ್ ಸೀಟುಗಳನ್ನು ಪಡೆಯುತ್ತದೆ. ಹಾಗೆಯೇ ನೆಕ್ಸಾನ್ ಫ್ರಂಟ್ ವೆಂಟಿಲೇಟೆಡ್ ಸೀಟುಗಳನ್ನು ಹೊಂದಿರುವ ಏಕೈಕ ಸಿಎನ್‌ಜಿ ಕಾರು ಆಗಿದ್ದು, ಫಿಯರ್ ಲೆಸ್ + ಪಿಎಸ್‌ಡಿಟಿ ಸಿಎನ್‌ಜಿ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.14.30 ಲಕ್ಷಗಳಾಗಿದೆ.

most-affordable-cars-with-ventilated-seats-in-india

ಹುಂಡೈ ವೆರ್ನಾ ಮತ್ತು ಮಾರುತಿ ಸುಜುಕಿ ಸಿಯಾಜ್ ನಂತಹ ಸೆಡಾನ್‌ಗಳು ವೆಂಟಿಲೇಟೆಡ್ ಸೀಟುಗಳೊಂದಿಗೆ ಸೌಕರ್ಯಕ್ಕಾಗಿ ಬಲವಾದ ಆಯ್ಕೆಗಳಾಗಿವೆ. ಇವುಗಳ ಟಾಪ್ ವೇರಿಯೆಂಟ್‌ಳಲ್ಲಿ ವೆಂಟಿಲೇಟೆಡ್ ಸೀಟುಗಳನ್ನು ಒದಗಿಸಲಾಗುತ್ತಿದ್ದು, ರೂ.12 ಲಕ್ಷ (ಎಕ್ಸ್‌ ಶೊರೂಂ) ಬೆಲೆಯನ್ನು ಹೊಂದಿವೆ. MG ಆಸ್ಟರ್ ಮತ್ತು ಫೋಕ್ಸ್‌ವ್ಯಾಗನ್ ಟೈಗನ್ ಕೂಡ ಲಭ್ಯವಿದೆ. ಆದರೆ ರೂ.15 ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಬೆಲೆಯಿದೆ.

ಇನ್ನು ಸ್ಕೋಡಾ ಕುಶಾಕ್ ತನ್ನ ಪ್ರೀಮಿಯಂ (ಶೈಲಿ) ಟ್ರಿಮ್‌ನಲ್ಲಿ ಈ ವೈಶಿಷ್ಟ್ಯವನ್ನು ಒದಗಿಸುತ್ತದೆ. ಆದರೆ ಇದು ಕೂಡ ರೂ.15 ಲಕ್ಷವನ್ನು ದಾಟುತ್ತದೆ. ಈ ಪಟ್ಟಿಯಲ್ಲಿ ಟಾಟಾ ಪಂಚ್ ಇವಿ ವೆಂಟಿಲೇಟೆಡ್ ಸೀಟುಗಳನ್ನು ಹೊಂದಿರುವ ಅತ್ಯಂತ ಕೈಗೆಟುಕುವ ಕಾರಾಗಿದೆ. ಟಾಟಾ ನೆಕ್ಸಾನ್ ಬಹು ಪವರ್‌ಟ್ರೇನ್‌ಗಳು ಮತ್ತು ವೇರಿಯೆಂಟ್‌ಗಳಲ್ಲಿಯೂ ವೆಂಟಿಲೇಟೆಡ್ ಸೀಟುಗಳನ್ನು ನೀಡುತ್ತಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ಡೀಲರ್ ಅನ್ನು ಸಂಪರ್ಕಿಸಿ.

Article Published On: Wednesday, July 30, 2025, 11:34 [IST]
English summary
Most affordable cars with ventilated seats in india
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+