ಜನರೇ ರೆಡಿಯಾಗಿ.. ಅತಿ ಶೀಘ್ರದಲ್ಲೇ ಕಲ್ಲುಬಂಡೆಯಂತಹ 4 ಹೊಸ TATA ಕಾರುಗಳು ಬಿಡುಗಡೆ, ಯಾವುವು?

ಟಾಟಾ ಮೋಟಾರ್ಸ್ (Tata Motors), ಸುರಕ್ಷಿತ ವಾಹನ ತಯಾರಿಕೆಗೆ ಹೆಸರುವಾಸಿಯಾಗಿರುವ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯವಾಗಿ ಟಿಯಾಗೊ, ಆಲ್ಟ್ರೋಜ್, ಹ್ಯಾರಿಯರ್, ಸಫಾರಿ ಸೇರಿದಂತೆ ವಿವಿಧ ಹ್ಯಾಚ್‌ಬ್ಯಾಕ್ ಹಾಗೂ ಎಸ್‌ಯುವಿಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಮುಂಬರುವ ತಿಂಗಳಲ್ಲಿ ಹೊಸ ಕಾರು ಮತ್ತು ಹಳೆಯ ಕಾರುಗಳ ಲೈನ್ಅಪ್‌ನ ವಿಸ್ತೃತ ಮಾಡೆಲ್‌ಗಳನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಟಾಟಾ ಪಂಚ್ (Tata Punch):

ಟಾಟಾ ಕಂಪನಿಯು ಜನಪ್ರಿಯ ಮೈಕ್ರೋ ಎಸ್‌ಯುವಿ 'ಪಂಚ್‌'ನ್ನು ನವೀಕರಿಸಲು ಮುಂದಾಗಿದೆ ಎಂದು ವರದಿಯಾಗಿದೆ. ನವೆಂಬರ್‌ನಲ್ಲಿ ಫೇಸ್‌ಲಿಫ್ಟ್ ಮಾಡೆಲ್‌ನ್ನು ಹೊರತರಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹೊಸ ಕಾರು ನವೀನವಾದ ಬಂಪರ್‌ಗಳು ಹಾಗೂ ಗ್ರಿಲ್‌ಗಳನ್ನು ಹೊಂದಿರಲಿದೆ. ಇದರೊಂದಿಗೆ 16 ಇಂಚಿನ ಅಲಾಯ್ ವೀಲ್‌ಗಳು, ಟಾಟಾ ಲೋಗೋವಿರುವ 2-ಸ್ಪೋಕ್ ಸ್ಟೀರಿಂಗ್ ವೀಲ್ ಹಾಗೂ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ.

New 4 Tata Cars Launch Soon Punch Harrier Safari And Sierra Detail

ಹೊಸ ಟಾಟಾ ಪಂಚ್‌ ಫೇಸ್‌ಲಿಫ್ಟ್ 5 ಆಸನಗಳನ್ನು ಪಡೆದಿರಲಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಇದರ ಪವರ್‌ಟ್ರೇನ್‌ನಲ್ಲೂ ಯಾವುದೇ ಬದಲಾವಣೆಗಳಿರುವುದಿಲ್ಲ ಎನ್ನಲಾಗಿದೆ. ಈಗಿರುವಂತೆ 1.2-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ನ್ನು ಪಡೆದಿರಲಿದ್ದು, 18.8 ರಿಂದ 26.99 ಕಿ.ಮೀ ವರೆಗೆ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ.

ಟಾಟಾ ಹ್ಯಾರಿಯರ್ (Tata Harrier):

ಎಲ್ಲವು ಅಂದುಕೊಂಡಂತೆ ನಡೆದರೆ, ಇದೇ ನವೆಂಬರ್‌ನಲ್ಲಿ ಹೊಚ್ಚ ಹೊಸ ಪೆಟ್ರೋಲ್ ಚಾಲಿತ ಹ್ಯಾರಿಯರ್ ಎಸ್‌ಯುವಿ ಬಿಡುಗಡೆಗೊಳ್ಳಲಿದೆ. ಪ್ರಸ್ತುತ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಸಿಗುತ್ತದೆ. 5 ಆಯ್ಕೆ ವ್ಯವಸ್ಥೆಯನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಸಂಚಾರ ಮಾಡಬಹುದು.

New 4 Tata Cars Launch Soon Punch Harrier Safari And Sierra Detail

ಇದು 1.5-ಲೀಟರ್ ಟರ್ಬೋಚಾರ್ಜ್ಡ್ ಡೈರೆಕ್ಟ್ ಇಂಜೆಕ್ಷನ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿರಲಿದೆ. 168 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 280 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಒಳಗೊಂಡಿರಲಿದೆ. ಜೊತೆಗೆ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿರುವ ನಿರೀಕ್ಷೆಯಿದೆ.

ಟಾಟಾ ಸಫಾರಿ (Tata Safari):

ಈ ಫ್ಯಾಮಿಲಿ ಎಸ್‌ಯುವಿಯು ನವೆಂಬರ್‌ ತಿಂಗಳಲ್ಲೇ ಪೆಟ್ರೋಲ್ ಚಾಲಿತ ರೂಪದಲ್ಲಿ ಮಾರಾಟಕ್ಕೆ ಬರುವ ಎಲ್ಲ ಲಕ್ಷಣಗಳಿವೆ. ಜೊತೆಗೆ ವೈಶಿಷ್ಟ್ಯದಲ್ಲೂ ಒಂದಷ್ಟು ಬದಲಾವಣೆಗಳನ್ನು ಪಡೆದುಕೊಂಡಿರುವ ನಿರೀಕ್ಷೆಯಿದೆ. ಪ್ರಸ್ತುತ ಗ್ರಾಹಕರ ಖರೀದಿಗೆ ದೊರೆಯುತ್ತಿರುವ 'ಸಫಾರಿ' 2-ಲೀಟರ್ ಡೀಸೆಲ್ ಎಂಜಿನ್‌ನ್ನು ಹೊಂದಿದೆ. 14 ರಿಂದ 16 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.

New 4 Tata Cars Launch Soon Punch Harrier Safari And Sierra Detail

ಇದು ಕನಿಷ್ಠ ರೂ.15.50 ಲಕ್ಷ ಹಾಗೂ ಗರಿಷ್ಠ ರೂ.27.25 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 6/7 ಆಸನಗಳನ್ನು ಹೊಂದಿದೆ. 12.3 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಹಾಗೂ 10-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 7 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.

ಟಾಟಾ ಸಿಯೆರಾ (Tata Sierra):

ನೂತನ 'ಸಿಯೆರಾ' ಎಸ್‌ಯುವಿಯು ಇಂಧನ (ಪೆಟ್ರೋಲ್/ಡೀಸೆಲ್) ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್‌ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ. ಮೊದಲಿಗೆ ಡಿಸೆಂಬರ್‌ನಲ್ಲಿ ಇಂಧನ ಚಾಲಿತ ರೂಪದಲ್ಲಿ ಮಾರಾಟಕ್ಕೆ ಬರಲಿದೆ. ಆ ಬಳಿಕ 2026ರ ಆಗಸ್ಟ್‌ನಲ್ಲಿ ಎಲೆಕ್ಟ್ರಿಕ್ ರೂಪದಲ್ಲಿ ಪರಿಚಯಿಸುವ ನಿರೀಕ್ಷೆಯಿದೆ. ಕೈಗೆಟುಕುವ ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

New 4 Tata Cars Launch Soon Punch Harrier Safari And Sierra Details

ಈ ಕಾರಿನ ಇಂಧನ ಚಾಲಿತ ಮಾಡೆಲ್ 1.5-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2-ಲೀಟರ್ ಡೀಸೆಲ್ ಎಂಜಿನ್‌ನ್ನು ಹೊಂದಿರಲಿದೆ. ಅದೇ ರೀತಿಯಲ್ಲಿ 65 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 75 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದುಕೊಂಡಿರಲಿದೆ. ಭರ್ತಿ ಚಾರ್ಜ್‌ನಲ್ಲಿ 538 ರಿಂದ 627 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುವ ಸಾಧ್ಯತೆಯಿದೆ. 14.5 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ 10.25 ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿರಬಹುದು ಎನ್ನಲಾಗಿದೆ.

More from DriveSpark

Article Published On: Monday, September 15, 2025, 11:26 [IST]
English summary
New 4 tata cars launch soon punch harrier safari and sierra details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+