ಕಾರು ತೆಗೆದುಕೊಳ್ಳುವವರಿಗೆ ಹಬ್ಬವೋ ಹಬ್ಬ: ಜನ ಸಾಲ ಕಟ್ಟುವರು.. ಈ 5 ಹೊಸ SUVಗಳು ಬಿಡುಗಡೆಗೊಳ್ಳಲಿವೆ!
ಭಾರತದಲ್ಲಿ ಪ್ರತಿ ತಿಂಗಳು ಒಂದಿಲ್ಲೊಂದು ಕಾರುಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಈ ನವೆಂಬರ್‌ನಿಂದ 2026ರ ಜನವರಿ ತಿಂಗಳವರೆಗೆ ವಿವಿಧ ಕಾರುಗಳು ಮಾರಾಟಕ್ಕೆ ಬರಲಿವೆ. ಬಹುಮುಖ್ಯವಾಗಿ ಟಾಟಾ ಸಿಯೆರಾ, ಮಾರುತಿ ಸುಜುಕಿ ಇ ವಿಟಾರಾ, ರೆನಾಲ್ಟ್ ಡಸ್ಟರ್, ಕಿಯಾ ಸೆಲ್ಟೋಸ್ ಹಾಗೂ ಸ್ಕೋಡಾ ಕುಶಾಕ್ ಮಿಡ್-ಸೈಜ್ ಎಸ್‌ಯುವಿಗಳನ್ನು ಪರಿಚಯಿಸಲಾಗುತ್ತದೆ. ಬನ್ನಿ, ಈ ಕಾರುಗಳ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.
ಟಾಟಾ ಸಿಯೆರಾ (Tata Sierra):
ಇದೊಂದು ಎಸ್‌ಯುವಿಯಾಗಿದೆ. ಈ ತಿಂಗಳ 25 ರಂದು ಬಿಡುಗಡೆಯಾಗಲಿದೆ. ಕನಿಷ್ಠ ರೂ.11 ಲಕ್ಷ ಹಾಗೂ ಗರಿಷ್ಠ ರೂ.25 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿರಬಹುದು ಹೇಳಲಾಗಿದೆ. ಮೊದಲಿಗೆ ಐಸಿಇ (ಪೆಟ್ರೋಲ್/ಡೀಸೆಲ್), ನಂತರದಲ್ಲಿ ಎಲೆಕ್ಟ್ರಿಕ್ ಚಾಲಿತ ಪವರ್‌ಟ್ರೇನ್ ರೂಪದಲ್ಲಿ ಮಾರಾಟಕ್ಕೆ ಬರಬಹುದು ಎನ್ನಲಾಗಿದೆ. 5 ಆಸನಗಳನ್ನು ಹೊಂದಿರಲಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು.

ನೂತನ 'ಸಿಯೆರಾ' ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಬಹುಮುಖ್ಯವಾಗಿ ಟ್ರಿಪಲ್ ಸ್ಕ್ರೀನ್ ಸೆಟಪ್ (ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಟಚ್‌ಸ್ಕ್ರೀನ್ ಸೆಂಟ್ರಲ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಪ್ಯಾಸೆಂಜರ್ ಸೈಡ್ ಡಿಸ್‌ಪ್ಲೇ), ಟಚ್ ಬೇಸ್ಡ್ ಕ್ಲೇಮೇಟ್ ಕಂಟ್ರೋಲ್ ಮತ್ತು ಆಂಬಿಯೆಂಟ್ ಲೈಟಿಂಗ್‌ನ್ನು ಒಳಗೊಂಡಿರುವುದು ದೃಢಪಟ್ಟಿದೆ. ಪ್ರಯಾಣಿಯರ ರಕ್ಷಣೆಗಾಗಿ 7-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಪಡೆದಿರುವ ಸಾಧ್ಯತೆಯಿದೆ.
ಮಾರುತಿ ಸುಜುಕಿ ಇ-ವಿಟಾರಾ (Maruti Suzuki e Vitara):
ಈ ಎಲೆಕ್ಟ್ರಿಕ್ ಎಸ್‌ಯುವಿಯು ಡಿಸೆಂಬರ್ 2 ರಂದು ಅದ್ದೂರಿಯಾಗಿ ಮಾರಾಟಕ್ಕೆ ಬರಲಿದೆ. ರೂ.17 ಲಕ್ಷದಿಂದ ರೂ.22 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. 49 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 61 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿರುವ ಸಾಧ್ಯತೆಯಿದೆ. 500 ಕಿ.ಮೀವರೆಗೆ ರೇಂಜ್ (ಮೈಲೇಜ್) ನೀಡಬಹುದು ಎನ್ನಲಾಗಿದೆ.

ಹೊಸ 'ಇ-ವಿಟಾರಾ' 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಸಂಚರಿಸಬಹುದು. 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ 7-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.
ರೆನಾಲ್ಟ್ ಡಸ್ಟರ್ (Renault Duster):
ನೂತನ ತಲೆಮಾರಿನ ರೆನಾಲ್ಟ್ ಡಸ್ಟರ್ 26 ಜನವರಿ 2026 ರಂದು ಬಿಡುಗಡೆಯಾಗಲಿದೆ. ಕನಿಷ್ಠ ರೂ.8 ಲಕ್ಷ ಮತ್ತು ಗರಿಷ್ಠ ರೂ.14.25 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದುಕೊಂಡಿರುವ ನಿರೀಕ್ಷೆಯಿದೆ. 1.3-ಲೀಟರ್ ಟರ್ಬೊ ಪೆಟ್ರೋಲ್, 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನ್ನು ಹೊಂದಿರಲಿದೆ. 5 ಆಸನಗಳನ್ನು ಪಡೆದಿರಲಿದೆ. 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ 6 ಏರ್‌ಬ್ಯಾಗ್‌ಗಳನ್ನು ಪಡೆದಿರಲಿದೆ ಎಂದು ಹೇಳಲಾಗಿದೆ.

ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ (Kia Seltos Facelift):
ಒಂದಷ್ಟು ನವೀಕರಣಕ್ಕೆ ಒಳಪಟ್ಟ 'ಸೆಲ್ಟೋಸ್' ಕಾರು, ಈ ಡಿಸೆಂಬರ್ ತಿಂಗಳಲೇ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ. ರೂ.11 ಲಕ್ಷದಿಂದ ರೂ.20 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರುವ ಸಾಧ್ಯತೆಯಿದೆ. 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.5-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನ್ನು ಒಳಗೊಂಡಿರಲಿದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿರಲಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎನ್ನಲಾಗಿದೆ.
ಸ್ಕೋಡಾ ಕುಶಾಕ್ ಫೇಸ್‌ಲಿಫ್ಟ್ (Skoda Kushaq Facelift):
ವಿವಿಧ ಹೊಸತನಗಳಿಗೆ ಸಾಕ್ಷಿಯಾದ 'ಕುಶಾಕ್' ಎಸ್‌ಯುವಿಯು 2026ರ ಜನವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಕನಿಷ್ಠ ರೂ.11 ಲಕ್ಷ ಹಾಗೂ ಗರಿಷ್ಠ ರೂ.19 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿರಬಹುದು ಎಂದು ಅಂದಾಜಿಸಲಾಗಿದೆ. 1-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನ್ನು ಹೊಂದಿರಲಿದೆ. 5 ಆಸನಗಳೊಂದಿಗೆ ನಾನಾ ಬಗೆಯ ವೈಶಿಷ್ಟ್ಯಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ.


Click it and Unblock the Notifications








