ಹೊಸ ವರ್ಷಕ್ಕೆ ಎಂಟ್ರಿ: ಇದೇ ತಿಂಗಳು ಬಿಡುಗಡೆಗೆ ಸಜ್ಜಾಗಿರುವ ಹೊಸ ಕಾರುಗಳಿವು!
2025 ರಲ್ಲಿ ಭಾರೀ ನಿರೀಕ್ಷೆಗಳೊಂದಿಗೆ ಭಾರತೀಯ ಮಾರುಕಟ್ಟೆಗೆ ಎಂಟ್ರಿಕೊಡಲು ಸಜ್ಜಾಗಿರುವ ಕಾರುಗಳಾಗಿವೆ. ಮುಖ್ಯವಾಗಿ 2025 ರ ಜನವರಿ 17 ರಿಂದ 22 ರ ನಡುವೆ ನಡೆಯಲಿರುವ ಭಾರತ್ ಮೊಬಿಲಿಟಿ ಎಕ್ಸ್ ಪೋದಲ್ಲಿ ಬಹುತೇಕ ಕಂಪನಿಗಳು ತಮ್ಮ ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ಇದರಲ್ಲಿ ಎಲೆಕ್ಟ್ರಿಕ್ ಕಾರುಗಳು ಕೂಡ ಇವೆ, ಇಂಧನ ಚಾಲಿತ ಕಾರುಗಳಿಗೆ ಹೋಲಿಸಿಕೊಂಡರೆ 2025 ರಲ್ಲಿ ಕಡಿಮೆ ಇವಿ ವಾಹನಗಳು ಬಿಡುಗಡೆಯಾಗಲಿವೆ. ಯಾವೆಲ್ಲಾ ಬ್ರಾಂಡ್‌ಗಳು ತಮ್ಮ ವಾಹನಗಳನ್ನು ಪರಿಚಯಿಸಲಿವೆ ಎಂಬುದರ ಮಾಹಿತಿ ಇಲ್ಲಿದೆ.
ಟಾಟಾ ಕರ್ವ್ ಸ್ಪೆಷಲ್ ಎಡಿಷನ್: ಟಾಟಾ ಮೋಟಾರ್ಸ್ ತನ್ನ ಬಹುನಿರೀಕ್ಷಿತ ಹಾಗೂ ಹೊಸ ಡಿಸೈನ್‌ನಲ್ಲಿ ಪರಿಚಯಿಸಿದ ಎಸ್‌ಯುವಿ ಕೂಪೆಯಾದ ಕರ್ವ್ ಕಾರು, ಜನವರಿಯಲ್ಲಿ ಗ್ರಾಹಕರಿಗೆ ಹೊಸ ವೈಶಿಷ್ಟ್ಯಗಳೊಂದಿಗೆ ಲಭ್ಯವಾಗಲಿದೆ. ತನ್ನ ಡಾರ್ಕ್ ಎಡಿಷನ್ ಮತ್ತು ಇವಿ, ಐಸಿಇ ಆವೃತ್ತಿಗಳನ್ನು ಮುಂದಿನ ತಿಂಗಳಲ್ಲಿ ಬಿಡುಗಡೆ ಮಾಡಲಿದೆ. ಕಂಪನಿಯು ಇದನ್ನು ವಿಶೇಷ ಆವೃತ್ತಿಗಳ ಅಡಿಯಲ್ಲಿ ಪರಿಚಯಿಸಲು ಸಜ್ಜಾಗುತ್ತಿದೆ.

ಹ್ಯುಂಡೈ ಕ್ರೆಟಾ ಇವಿ: ಹ್ಯುಂಡೈ ಕ್ರೆಟಾ ಇವಿ 60 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ನೊಂದಿಗೆ, 500 ಕಿ.ಮೀ ರೇಂಜ್ ಒದಗಿಸುವ ಹೊಸ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ. 2025 ರ ಭಾರತ್ ಮೊಬಿಲಿಟಿ ಎಕ್ಸ್ ಪೋದಲ್ಲಿ (ಜನವರಿ 17 ರಿಂದ 22 ರ ನಡುವೆ) ಬಿಡುಗಡೆ ಆಗಲಿದೆ. ಇದು ಮುಂಭಾಗದ ಚಕ್ರಗಳಿಗೆ ಶಕ್ತಿ ನೀಡುವ ಸಿಂಗಲ್ ಎಲೆಕ್ಟ್ರಿಕ್ ಮೋಟರ್ ಮೂಲಕ ಕಾರ್ಯನಿರ್ವಹಿಸುತ್ತದೆ.
MG ಸೈಬರ್ ಸ್ಟರ್: MG ಸೈಬರ್ ಸ್ಟರ್ ರೂ. 60 ರಿಂದ 70 ಲಕ್ಷ ಬೆಲೆಯಲ್ಲಿ 2025 ರ ಭಾರತದ ಎಂಜಿಯ ಹ್ಯಾಲೋ ಉತ್ಪನ್ನವಾಗಿ ಮಾರುಕಟ್ಟೆಗೆ ಬರಲಿದೆ. ಇದು 510 BH ಪವರ್ ಮತ್ತು 725 Nm ಟಾರ್ಕ್ ಉತ್ಪಾದಿಸುವ ಈ ಕಾರು, 3.2 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪಬಲ್ಲದು. ಹಾಗೆಯೇ 77 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹಾಗೂ 510 ಕಿ.ಮೀ ರೇಂಜ್ ಒದಗಿಸುತ್ತದೆ.

ಕಿಯಾ ಸೈರಸ್: ಕೊರಿಯಾ ಮೂಲದ ಕಿಯಾ ಕಂಪನಿಯು ತನ್ನ ಬಹುನಿರೀಕ್ಷಿತ ಸೈರಸ್ ಎಸ್‌ಯುವಿ ಅನ್ನು 2025ರ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಬಿಡುಗಡೆ ಮಾಡಲಿದೆ. ಇದು 1.0 ಲೀಟರ್ ಟರ್ಬೋ - ಪೆಟ್ರೋಲ್ ಎಂಜಿನ್ ಮತ್ತು 1.5 - ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಈ ಕಾರು 6-ಸ್ಪೀಡ್ ಮ್ಯಾನ್ಯುಯಲ್ ಮತ್ತು 7-ಸ್ಪೀಡ್ ಡಿಸಿಟಿ ಘಟಕಗಳೊಂದಿಗೆ ಬರಲಿದೆ.
ಮರ್ಸಿಡಿಸ್ ಬೆಂಝ್ ಇಕ್ಯೂಎಸ್ ಎಸ್‌ಯುವಿ 450: ಮರ್ಸಿಡಿಸ್ ಬೆಂಝ್ ಜನವರಿ 9 ರಂದು ತನ್ನ ಹೊಸ ಎಲೆಕ್ಟ್ರಿಕ್ ಕಾರು 5 ಆಸನಗಳೊಂದಿಗೆ ಬಿಡುಗಡೆಯಾಗಲಿದೆ. ಈ ಇಕ್ಯೂಎಸ್ ಎಸ್‌ಯುವಿ 450 ಅನ್ನು ಭಾರತದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಇದು 122 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಜೊತೆಗೆ ಎರಡು ಎಲೆಕ್ಟ್ರಿಕ್ ಮೋಟರ್‌ಗಳೊಂದಿಗೆ ಬರಲಿದೆ.

ಒಟ್ಟಾರೆ ಭಾರತದಲ್ಲಿ ಜನವರಿ 2025 ರಲ್ಲಿ ಕುತೂಹಲ ಹೆಚ್ಚಿಸಿ ಬಿಡುಗಡೆ ಆಗಲಿರುವ ಕಾರುಗಳ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಮೊದಲ ತಿಂಗಳಲ್ಲೇ (2025 ಜನವರಿ) ಭಾರತದಲ್ಲಿ ಹಲವು ಪ್ರಮುಖ ಕಾರುಗಳು ಎಂಟ್ರಿಕೊಡುತ್ತಿವೆ. ಟಾಟಾ, ಮಹೀಂದ್ರಾ, ಬೆಂಝ್, ಕಿಯಾ, ಎಂಜಿ ಬ್ರಾಂಡ್‌ಗಳಿಂದ ಪ್ರಮುಖ ಕಾರುಗಳು ಮುಂದಿನ ಜನವರಿಯಲ್ಲಿ ಬಿಡುಗಡೆಗೆಯಾಗಲಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications