Tata: ಸಿಯೆರಾ ನಂತರ, ಈಗ ಟಾಟಾ 'ಗರುಡ'ದೊಂದಿಗೆ ಸದ್ದು ಮಾಡಲು ಸಿದ್ಧತೆ.. ಹೊಸ ಕಾರು ಬರುತ್ತೆ, ಯಾವುದು?
ಟಾಟಾ ಮೋಟಾರ್ಸ್ (Tata Motors), ಸಿಯೆರಾ ಎಸ್‌ಯುವಿ ಬುಕ್ಕಿಂಗ್‌ನಲ್ಲಿ ದಾಖಲೆ ಸೃಷ್ಟಿಸಿದೆ. ಮಂಗಳವಾರದಂದು ಆರ್ಡರ್ ತೆಗೆದುಕೊಳ್ಳುವುದನ್ನು ಶುರು ಮಾಡಿತ್ತು. ಮೊದಲ ದಿನವೇ 70,000ಕ್ಕೂ ಅಧಿಕ ಸಂಖ್ಯೆಯ ಗ್ರಾಹಕರು ಕಾಯ್ದಿರಿಸಿದ್ದರು. 2026ರಲ್ಲಿ ಕಂಪನಿಯು ಸಿಯೆರಾ ಇವಿ, ಹ್ಯಾರಿಯರ್, ಸಫಾರಿ ಪೆಟ್ರೋಲ್ ಮತ್ತು ಪಂಚ್ ಫೇಸ್‌ಲಿಫ್ಟ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ. ಇವುಗಳೊಂದಿಗೆ ನಂ.1 ಎಸ್‌ಯುವಿ ಎಂದೇ ಹೆಸರುವಾಸಿಯಾಗಿರುವ 'ನೆಕ್ಸಾನ್'ನ್ನು ನವೀನ ರೂಪದಲ್ಲಿ ಮಾರಾಟಕ್ಕೆ ತರಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ವರದಿಯಾಗಿದೆ.
2026ರ ಅಂತ್ಯದಲ್ಲಿ ಅಥವಾ 2027ರ ಶುರುವಿನಲ್ಲಿ ಹೊಸ ತಲೆಮಾರಿನ ಟಾಟಾ ನೆಕ್ಸಾನ್ (Tata Nexon) ಎಸ್‌ಯುವಿ ಪರಿಚಯಗೊಳ್ಳುವ ನಿರೀಕ್ಷೆಯಿದೆ. ಈ ಕಾರಿನ ಪ್ರಾಜೆಕ್ಟ್‌ಗೆ 'ಗರುಡ' ಎಂಬ ಕೋಡ್ ನೇಮ್ ಇಡಲಾಗಿದೆ. ಇದು ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯಲಿದ್ದು, ರೂ.8 ಲಕ್ಷದಿಂದ ರೂ.17 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ಇದು ನೂತನ ಪ್ಲಾಟ್‌ಫಾರ್ಮ್ ಹೊಂದಿರಲಿದ್ದು, ನೋಡುಗರ ಕಣ್ಣು ಕುಕ್ಕುವಂತಹ ವಿನ್ಯಾಸ ಒಳಗೊಂಡಿರದೆ. ಹೆಚ್ಚು ಫ್ಯೂಚರಿಸ್ಟಿಕ್ ಆಗಿರಲಿದ್ದು, ಕರ್ವ್ ಹಾಗೂ ಸಿಯೆರಾಗೂ ಹೋಲಿಕೆಯಾಗಲಿದೆ. ನವೀಕರಣಗೊಂಡ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಪ್ರೊಜೆಕ್ಟರ್ ಫಾಗ್ ಲೈಟ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಮತ್ತು ಅಲಾಯ್ ವೀಲ್‌ಗಳನ್ನು ಹೊಂದಿರಲಿದೆ. ಎನ್ನಲಾಗಿದೆ.
ಈ ಕಾರಿನ ಕ್ಯಾಬಿನ್ ವಿನ್ಯಾಸವು ಚೆನ್ನಾಗಿರಲಿದ್ದು, ಸಾಕಷ್ಟು ಪ್ರೀಮಿಯಂ ಲುಕ್‌ನ್ನು ಒಳಗೊಂಡಿರಲಿದೆ. ದೊಡ್ಡದಾದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪನೋರಮಿಕ್ ಸನ್‌ರೂಫ್, ವೆಂಟಿಲೇಟೆಡ್ ಸೀಟ್‌ಗಳು, ಲೆವೆಲ್-2 ಎಡಿಎಸ್ಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ಪಡೆದಿರುವ ಸಾಧ್ಯತೆಯಿದೆ.
ಹೊಸ 'ನೆಕ್ಸಾನ್' ಬಿಎಸ್7 ಎಮಿಷನ್ ಮಾನದಂಡಗಳ ಅನ್ವಯವಾಗಿರಲಿದೆ. 1.2-ಲೀಟರ್ ಟರ್ಬೊ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿರಲಿದೆ. 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಮಾರಾಟಕ್ಕೆ ಬರುವ ಸಾಧ್ಯತೆಯಿಲ್ಲ ಎಂದು ಹೇಳಲಾಗಿದೆ. ಜೊತೆಗೆ ಎಲೆಕ್ಟ್ರಿಕ್ ರೂಪದಲ್ಲೂ ಬಿಡುಗಡೆಯಾಗಬಹುದು. 500 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುವ ನಿರೀಕ್ಷೆಯಿದೆ.
ಸದ್ಯ ಖರೀದಿಗೆ ಲಭ್ಯವಿರುವ 'ಟಾಟಾ ನೆಕ್ಸಾನ್' ವಿಶೇಷತೆಗಳೇನು:
ಇದು ರೂ.7.32 ಲಕ್ಷದಿಂದ ರೂ.14.05 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಅತ್ಯಾಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಪ್ಯೂರ್ ಗ್ರೇ, ಗ್ರಾಸ್‌ಲ್ಯಾಂಡ್ ಬೀಜ್, ಡೇಟೋನಾ ಗ್ರೇ, ಪ್ರಿಸ್ಟೈನ್ ವೈಟ್, ಓಷನ್ ಬ್ಲೂ, ರಾಯಲ್ ಬ್ಲೂ ಮತ್ತು ಕಾರ್ಬನ್ ಬ್ಲ್ಯಾಕ್ ಬಣ್ಣಗಳೊಂದಿಗೂ ಸಿಗುತ್ತದೆ. 208 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,498 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ.
ಈ ಕಾರು 1.2-ಲೀಟರ್ ಪೆಟ್ರೋಲ್, 1.5 ಲೀಟರ್ ಡೀಸೆಲ್ ಮತ್ತು 1.2-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಮತ್ತು 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿದೆ. 17 ರಿಂದ 24 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. 180 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ.
ನೂತನ 'ನೆಕ್ಸಾನ್' 5 ಆಸನಗಳಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಹೆಚ್ಚಿನ ಲಗೇಜ್ ಕೊಂಡೊಯ್ಯಲು 350 ಲೀಟರ್‌ನಷ್ಟು ಬೂಟ್ ಸ್ಪೇನ್‌ನ್ನು ಪಡೆದಿದೆ. 12.3 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 9 ಸ್ಪೀಕರ್ ಸೌಂಡ್ ಸಿಸ್ಟಮ್, ಸನ್‌ರೂಫ್ ಹಾಗೂ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ 6 ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.


Click it and Unblock the Notifications








