ಬಿಡುಗಡೆಯಾಗಿ 1 ತಿಂಗಳು ಆಗಿಲ್ಲ... ಬುಕಿಂಗ್ಸ್ ನೋಡಿ ಕಂಪನಿಯೇ ಶಾಕ್... ಈಗ ಡೆಲಿವರಿ ಚಿಂತೆ?

ಕಳೆದ ತಿಂಗಳು ಹುಂಡೈ ತನ್ನ ಹೊಸ ತಲೆಮಾರಿನ 'ವೆನ್ಯೂ' ಎಸ್‌ಯುವಿಯನ್ನು ರೂ. 7.90 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿತು. ಈ ಕಾರು ಭಾರತದಲ್ಲಿ ಸಖತ್ ಡಿಮ್ಯಾಂಡ್ ಪಡೆದುಕೊಳ್ಳುತ್ತಿದೆ, ಬಿಡುಗಡೆಯಾದ ಕೆಲವೇ ವಾರಗಳಲ್ಲಿ ಬರೋಬ್ಬರಿ 32,000 ಕ್ಕೂ ಹೆಚ್ಚು ಬುಕಿಂಗ್‌ಗಳು ಹರಿದುಬಂದಿವೆ. ಹಳೆಯ ಮಾಡಲ್‌ಗೆ ಹೋಲಿಸಿದರೆ, ಹೊಸ ತಲೆಮಾರಿನ ವೆನ್ಯೂ ಹೆಚ್ಚು ಆಧುನಿಕವಾಗಿದೆ. ಈ SUV ಈಗ ಗಾತ್ರದಲ್ಲೂ ದೊಡ್ಡದಾಗಿದೆ ಮತ್ತು ಸ್ಪೋರ್ಟಿ ಲುಕ್ ಪಡೆದುಕೊಂಡಿದೆ. ಜನ ಇಷ್ಟೊಂದು ಇಷ್ಟ ಪಟ್ಟು ಖರೀದಿಸಲು ಕಾರಲ್ಲಿ ಅಂತಹದೇನಿದೆ ನೋಡೋಣ ಬನ್ನಿ.

ಬಹು ಪವರ್‌ಟ್ರೇನ್ ಆಯ್ಕೆ, ಸಾಕಷ್ಟು ಹೊಸ ಫೀಚರ್ಸ್, ರಗಡ್ ಡಿಸೈನ್‌ನೊಂದಿಗೆ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಸುಧಾರಿತ ತಂತ್ರಜ್ಞಾನ ಮತ್ತು ರೋಮಾಂಚಕಾರಿ ಪರ್ಫಾಮೆನ್ಸ್ ನೀಡುವುದಾಗಿ ಹ್ಯುಂಡೈ ಹೇಳಿದೆ. ಗ್ರಾಹಕರು ಈಗ ಬೇಸ್‌ ವೇರಿಯೆಂಟ್ ಅನ್ನು ರೂ. 7,89,900 (ಎಕ್ಸ್‌-ಶೋರೂಂ) ಆರಂಭಿಕ ಬೆಲೆಗಳೊಂದಿಗೆ, ಹೊಚ್ಚ ಹೊಸ ಹುಂಡೈ ವೆನ್ಯೂವನ್ನು ಖರೀದಿಸಬಹುದಾಗಿದೆ.

new-gen-hyundai-venue-got-32000-bookings-in-one-month

ಆಧುನಿಕ ಫೀಚರ್ಸ್: ವೈರ್‌ಲೆಸ್ ಆಂಡ್ರಾಯ್ಡ್ ಆಟೋ/ಆಪಲ್ ಕಾರ್‌ಪ್ಲೇ, ಮುಂದಿನ ಸಾಲಿನ ವೆಂಟಿಲೇಟೆಡ್ ಸೀಟುಗಳು, ಸರೌಂಡ್ ವ್ಯೂ ಮಾನಿಟರ್ (SVM), ಬ್ಲೈಂಡ್ ಸ್ಪಾಟ್ ವ್ಯೂ ಮಾನಿಟರ್ (BVM), ಧ್ವನಿ ಸಕ್ರಿಯಗೊಳಿಸಿದ ಸ್ಮಾರ್ಟ್ ಎಲೆಕ್ಟ್ರಿಕ್ ಸನ್‌ರೂಫ್, ಬೋಸ್ ಪ್ರೀಮಿಯಂ ಸೌಂಡ್ 8 ಸ್ಪೀಕರ್ ಸಿಸ್ಟಮ್, ಓವರ್-ದಿ-ಏರ್ (OTA) ನವೀಕರಣ, 70 ಹುಂಡೈ ಬ್ಲೂ ಲಿಂಕ್ ಕನೆಕ್ಟ್ ನಂತಹ ಆಧುನಿಕ ಫಿಚರ್ಸ್ ನೀಡಲಾಗಿದೆ.

ಕ್ಯಾಬಿನ್ ಎಂಟು ಸ್ಪೀಕರ್‌ಗಳನ್ನು ಹೊಂದಿರುವ ಬೋಸ್ ಸರೌಂಡ್ ಸೌಂಡ್ ಸಿಸ್ಟಮ್ ಅನ್ನು ಪಡೆದಿದೆ. ಕ್ಲೈಮೆಟ್ ಕಂಟ್ರೋಲ್‌ ಸೆಟ್ಟಿಂಗ್‌ಗಳಿಗಾಗಿ ಒಂದು ಸಣ್ಣ ಸ್ಕ್ರೀನ್ ಕೂಡ ಇದೆ. ಡ್ಯಾಶ್‌ಬೋರ್ಡ್ 12.3-ಇಂಚಿನ ಕರ್ವ್ಡ್ ಟಚ್‌ಸ್ಕ್ರೀನ್ ಡಿಸ್ಪ್ಲೇ ನೀಡಲಾಗಿದ್ದು, ಇದು ಮುಖ್ಯ ಇನ್ಫೋಟೈನ್‌ಮೆಂಟ್ ಹಬ್ ಆಗಿ ಕಾರ್ಯನಿರ್ವಹಿಸುತ್ತದೆ. ಸ್ಟೋರೇಜ್ ಆಯ್ಕೆಗಳಲ್ಲಿ ಡೋರ್ ಪಾಕೆಟ್‌ಗಳು, ಕಬ್ಬಿ ಹೋಲ್ ಮತ್ತು ಸೆಂಟರ್ ಕನ್ಸೋಲ್ ಸೇರಿವೆ.

new-gen-hyundai-venue-got-32000-bookings-in-one-month

ಮುಂಭಾಗ ಮತ್ತು ಹಿಂಭಾಗದ ಪ್ರಯಾಣಿಕರಿಬ್ಬರಿಗೂ ವಿಶಾಲವಾದ ಸ್ಥಳಾವಕಾಶವನ್ನು ನೀಡುತ್ತದೆ. ಹಿಂಭಾಗದ ವಿಂಡೋ ಸನ್‌ಶೇಡ್, VENUE ಬ್ರ್ಯಾಂಡಿಂಗ್‌ನೊಂದಿಗೆ ಡ್ಯುಯಲ್ ಟೋನ್ ಲೆದರ್ ಸೀಟುಗಳನ್ನು ಒದಗಿಸಲಾಗಿದೆ. ಒಟ್ಟಾರೆ ಸ್ಟೈಲಿಶ್ ಮತ್ತು ವಿಶಾಲವಾದ ಒಳಾಂಗಣವನ್ನು ಹೊಂದಿದ್ದು, ಆಧುನಿಕ ವಿನ್ಯಾಸ ಮತ್ತು ಪ್ರೀಮಿಯಂ ವಸ್ತುಗಳ ಮಿಶ್ರಣವನ್ನು ಪಡೆದಿದೆ.

ಸುರಕ್ಷತೆ ಬಗ್ಗೆ ಹೇಳುವುದಾದ್ರೆ ಹೊಸ ಹುಂಡೈ ವೆನ್ಯೂನಲ್ಲಿ ಎಲ್ಲಾ 4-ಡಿಸ್ಕ್ ಬ್ರೇಕ್‌ಗಳು, ರೋಲ್‌ಓವರ್ ಸೆನ್ಸರ್, ಟೈರ್ ಒತ್ತಡ ಮೇಲ್ವಿಚಾರಣಾ ವ್ಯವಸ್ಥೆ (tpms) - ಹೈಲೈನ್, 6 ಏರ್‌ಬ್ಯಾಗ್‌ಗಳು, ಎಲ್ಲಾ ಸೀಟುಗಳಿಗೆ ರಿಮೈಂಡರ್‌ನೊಂದಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ಟೆಲಿಮ್ಯಾಟಿಕ್ಸ್ ಸ್ವಿಚ್‌ಗಳೊಂದಿಗೆ ಎಲೆಕ್ಟ್ರೋ ಕ್ರೋಮಿಕ್ ಮಿರರ್ (ECM) ನೀಡುವ ಮೂಲಕ ಈಗ ಹೊಸ ವೆನ್ಯೂ ಅತ್ಯಂತ ಸುರಕ್ಷಿತ ವಾಹನಗಳಲ್ಲಿ ಒಂದಾಗಿದೆ.

new-gen-hyundai-venue-got-32000-bookings-in-one-month

ಇದು ಮಾತ್ರವಲ್ಲದೆ ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಸರೌಂಡ್ ವ್ಯೂ ಮಾನಿಟರ್ (SVM), ಎಲೆಕ್ಟ್ರಾನಿಕ್ ಸ್ಥಿರತೆ ನಿಯಂತ್ರಣ (ESC), ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC) ನೀಡಲಾಗಿದೆ. ಜೊತೆಗೆ ಎಲ್ಲಾ ವೇರಿಯೆಂಟ್‌ಗಳಲ್ಲಿ 33 ಸುರಕ್ಷತಾ ವೈಶಿಷ್ಟ್ಯಗಳನ್ನು ಪ್ರಮಾಣಿತವಾಗಿ ಒಳಗೊಂಡಂತೆ 65 ಕ್ಕೂ ಹೆಚ್ಚು ಸುಧಾರಿತ ಸೇಫ್ಟಿ ಫೀಚರ್ಸ್ ನೀಡಲಾಗಿದೆ.

ಬದಿಯಲ್ಲಿ, Venue 16-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್ಹ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ. ಬಾಡಿ ಕ್ಲಾಡಿಂಗ್, ಸೈಡ್-ಮೌಂಟೆಡ್ ಸೆನ್ಸರ್‌ಗಳು ಮತ್ತು ಡೋರ್ ಹ್ಯಾಂಡಲ್‌ಗಳಲ್ಲಿ ಡಾರ್ಕ್ ಕ್ರೋಮ್ ಫಿನಿಶ್ ಅದರ ದೃಶ್ಯ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಗ್ರೌಂಡ್ ಕ್ಲಿಯರೆನ್ಸ್ 195 mm ಇದ್ದು, ಕಾರಿನ ವೀಲ್ ಬೇಸ್ 20 mm ವರೆಗೆ ವಿಸ್ತರಿಸಿದೆ.

ಹೊಸ ಹ್ಯುಂಡೈ ವೆನ್ಯೂನಲ್ಲಿ ಕಪ್ಪಾ 1.2 l MPi ಪೆಟ್ರೋಲ್, ಕಪ್ಪಾ 1.0 l ಟರ್ಬೊ GDi ಪೆಟ್ರೋಲ್ ಮತ್ತು U2 1.5 l CRDi ಡೀಸೆಲ್ ಎಂಬ ಮೂರು ಪವರ್‌ಟ್ರೇನ್ ಆಯ್ಕೆಗಳನ್ನು ನೀಡಲಾಗಿದೆ. U2 1.5 ಲೀಟರ್ CRDi ಡೀಸೆಲ್ ಎಂಜಿನ್ ರಾಜಿ ಇಲ್ಲದೆ ಕಾರ್ಯಕ್ಷಮತೆಯನ್ನು ಬಯಸುವವರಿಗಾಗಿ ವಿನ್ಯಾಸಗೊಳಿಸಲಾಗಿದೆ.

More from DriveSpark

Article Published On: Wednesday, December 3, 2025, 16:18 [IST]
English summary
New gen hyundai venue got 32000 bookings in one month
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+