ತನ್ನ ವಿಭಾಗದಲ್ಲಿಯೇ ದೊಡ್ಡದು... ಅನಾವರಣಗೊಂಡ ಹೊಸ ಕಿಯಾ ಸೆಲ್ಟೋಸ್: ಪ್ರತಿಸ್ಪರ್ಧಿಗಳಿಗೆ ನಡುಕ!
ದೊಡ್ಡ ಆಯಾಮಗಳು, ವರ್ಧಿತ ಸುರಕ್ಷತೆ ಮತ್ತು ಅತ್ಯಾಧುನಿಕ ನಾವೀನ್ಯತೆಯೊಂದಿಗೆ ಕಿಯಾ ಇಂಡಿಯಾ ಇಂದು ಹೊಸ ಪೀಳಿಗೆಯ ಕಿಯಾ ಸೆಲ್ಟೋಸ್ (New gen Kia Seltos) ಅನ್ನು ಅನಾವರಣಗೊಳಸಿದೆ. ಹೊಸ ಸ್ಟೈಲಿಂಗ್, ಪ್ರೀಮಿಯಂ ಒಳಾಂಗಣದ ಜೊತೆಗೆ ವೈವಿಧ್ಯಮಯ ಗ್ರಾಹಕರ ಅಗತ್ಯಗಳಿಗೆ ಸರಿಹೊಂದುವಂತೆ ಹಲವು ಟ್ರಿಮ್‌ಗಳು ಮತ್ತು ಪವರ್‌ಟ್ರೇನ್‌ಗಳನ್ನು ಒಳಗೊಂಡಿದೆ. ಡಿಸೆಂಬರ್ 11 ರಂದು ದೇಶಾದ್ಯಂತ ಬುಕಿಂಗ್‌ಗಳು ಪ್ರಾರಂಭವಾಗಲಿದ್ದು, ಗ್ರಾಹಕರು ಹೊಸ ಕಿಯಾ ಸೆಲ್ಟೋಸ್ SUV ಅನ್ನು ರೂ. 25,000 ಆರಂಭಿಕ ಮೊತ್ತದೊಂದಿಗೆ ಬುಕ್ ಮಾಡಬಹುದು ಎಂದು ಕಿಯಾ ಹೇಳಿದೆ.
ಹೊಸ ಸೆಲ್ಟೋಸ್ ವಿನ್ಯಾಸ, ತಂತ್ರಜ್ಞಾನ ಮತ್ತು ಸುರಕ್ಷತೆಯಲ್ಲಿ ಪ್ರಮುಖ ನವೀಕರಣಗಳೊಂದಿಗೆ ತುಂಬಿದ್ದು, ಟಾಟಾ ಸಿಯೆರಾ, ಹುಂಡೈ ಕ್ರೆಟಾ, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮತ್ತು ಮಾರುತಿ ಸುಜುಕಿ ವಿಕ್ಟೋರಿಸ್ ನಂತಹ ಪ್ರತಿಸ್ಪರ್ಧಿಗಳನ್ನು ನೇರವಾಗಿ ಗುರಿಯಾಗಿಸಿಕೊಂಡು ಮಧ್ಯಮ ಗಾತ್ರದ SUV ವಿಭಾಗದಲ್ಲಿ ತೀವ್ರ ಸ್ಪರ್ಧೆಯನ್ನು ನೀಡುವ ನಿರೀಕ್ಷೆಯಿದೆ. ಹೊಸ ಸೆಲ್ಟೋಸ್ ಯಾವೆಲ್ಲಾ ವಿಷಯಗಳಲ್ಲಿ ಸರಿಯಾದ ಪೈಪೋಟಿ ನೀಡಲಿದೆ ಇಲ್ಲಿ ನೋಡೋಣ.

ಕಿಯಾ ಸೆಲ್ಟೋಸ್ ದೊಡ್ಡದು: ಮಿಡ್ ಸೈಜ್-ಎಸ್‌ಯುವಿ ವಿಭಾಗದಲ್ಲಿ ಪ್ರತಿಸ್ಪರ್ಧಿಗಳಿಗಿಂತ ಭಿನ್ನವಾಗಿ, ಹೊಸ ಸೆಲ್ಟೋಸ್ ಕಾರಿನಲ್ಲಿ ಹೆಚ್ಚಿನ ಸ್ಥಳ, ಸೌಕರ್ಯ ವರ್ಧಿತ ಆಯಾಮಗಳೊಂದಿಗೆ ಈಗ 4,460 ಮಿ.ಮೀ ಉದ್ದ ಮತ್ತು 1,830 ಮಿ.ಮೀ ಅಗಲವನ್ನು ಹೊಂದಿದೆ. 2,690 ಎಂಎಂ ವೀಲ್‌ಬೇಸ್‌ನೊಂದಿಗೆ ದೊಡ್ಡ ಕ್ಯಾಬಿನ್ ಸ್ಥಳವನ್ನು ಪಡೆದುಕೊಂಡಿದೆ. ಒಟ್ಟಾರೆ ಹೊಸ ಸೆಲ್ಟೋಸ್ ಈಗ ಅದರ ವಿಭಾಗದಲ್ಲಿ ಅತಿ ಉದ್ದವಾದ ಎಸ್‌ಯುವಿಯಾಗಿದೆ.
ಪ್ರೀಮಿಯಂ ಕ್ಯಾಬಿನ್ ಮತ್ತು ಡ್ಯುಯಲ್ 30-ಇಂಚಿನ ಕರ್ವ್ ಡಿಸ್ಪ್ಲೇ: ಹೊಸ ಡ್ಯಾಶ್ ಲೇಔಟ್ ಡ್ಯುಯಲ್-ಟೋನ್ ಅಂಶಗಳು, ಐಷಾರಾಮಿ ಲೆಥೆರೆಟ್ ಅಪ್ಹೋಲ್ಸ್ಟರಿ, ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಹೆಡ್ಸ್-ಅಪ್ ಡಿಸ್ಪ್ಲೇ (HUD), ಎಂಟು-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಆಂಡ್ರಾಯ್ಡ್ ಆಟೋ - ಆಪಲ್ ಕಾರ್‌ಪ್ಲೇಗಾಗಿ ವೈರ್‌ಲೆಸ್ ಸಂಪರ್ಕ ನೀಡಲಾಗಿದೆ.

ಇಂಟೀರಿಯರ್‌ನಲ್ಲಿ ಪ್ರೀಮಿಯಂ ಮತ್ತು ತಂತ್ರಜ್ಞಾನ-ಕೇಂದ್ರಿತ ಅನುಭವಕ್ಕಾಗಿ ಕ್ಯಾಬಿನ್ ಅನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ. ಹೊಸ 30-ಇಂಚಿನ ಇಂಟಿಗ್ರೇಟೆಡ್ ಡ್ಯುಯಲ್-ಸ್ಕ್ರೀನ್ ಸೆಟಪ್ ಆಗಿದೆ. ಇದು ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ಮುಖ್ಯ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಎರಡನ್ನೂ ಒಳಗೊಂಡಿರುವ ಸಿಂಗಲ್ ಕರ್ವ್ಡ್ ಡಿಸ್ಪ್ಲೇ ಆಗಿದೆ. ಒಟ್ಟಾರೆ ತನ್ನ ಪ್ರತಿಸ್ಪರ್ಧಿಗಳಿಗಿಂತ ವೈಶಿಷ್ಟ್ಯಗಳ ಪಟ್ಟಿ ವಿಸ್ತಾರವಾಗಿದೆ.
ಕಿಯಾ EV9-ಪ್ರೇರಿತ ವಿನ್ಯಾಸ: ಪ್ರಮುಖ ಬಾಹ್ಯ ಬದಲಾವಣೆಗಳಲ್ಲಿ ಮರುವಿನ್ಯಾಸಗೊಳಿಸಲಾದ 'ಟೈಗರ್ ನೋಸ್' ಗ್ರಿಲ್, ಗನ್‌ಮೆಟಲ್ ಫಿನಿಶ್ ಸ್ಕಿಡ್ ಪ್ಲೇಟ್‌ಗಳೊಂದಿಗೆ ಮರುವಿನ್ಯಾಸಗೊಳಿಸಲಾದ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು ಸೇರಿವೆ. ಈ SUV ಈಗ ಹೊಸ 18-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದುಕೊಂಡಿದೆ. ಹಿಂಭಾಗದ ಟೈಲ್‌ಗೇಟ್‌ನಾದ್ಯಂತ ವಿಶಿಷ್ಟವಾದ ಟೈಲ್‌ಲೈಟ್ ವಿನ್ಯಾಸವನ್ನು ಹೊಂದಿದೆ.

ಲೆವೆಲ್ 2 ADAS: ಈ ವಿಭಾಗಕ್ಕೆ ಗಮನಾರ್ಹವಾದ ಅಪ್‌ಗ್ರೇಡ್‌ನಲ್ಲಿ, 2026 ಸೆಲ್ಟೋಸ್ ಈಗ ಲೆವೆಲ್ 2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಪಡೆದುಕೊಂಡಿದೆ. ತನ್ನ ವಿಭಾಗದಲ್ಲಿಯೇ ಅತ್ಯಂತ ಹೆಚ್ಚು ಸೇಫ್ಟಿ ಫೀಚರ್ಸ್ ಆಗಿರುವ ಫಾರ್ವರ್ಡ್ ಕೊಲಿಷನ್ ವಾರ್ನಿಂಗ್, ಲೇನ್ ಕೀಪಿಂಗ್ ಅಸಿಸ್ಟ್ ಮತ್ತು ಸ್ಟಾಪ್ & ಗೋ ಜೊತೆಗೆ ಸ್ಮಾರ್ಟ್ ಕ್ರೂಸ್ ಕಂಟ್ರೋಲ್ ಸೇರಿದಂತೆ 21 ಸ್ವಾಯತ್ತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ADAS ಲೆವೆಲ್ 2 ಸೂಟ್ ನೀಡಲಾಗಿದೆ.
ಜೊತೆಗೆ 6 ಏರ್‌ಬ್ಯಾಗ್‌ಗಳು, ಆಂಟಿ - ಲಾಕ್ ಬ್ರೇಕ್ ಸಿಸ್ಟಮ್ (ABS), ಹಿಲ್ - ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ರೋಲ್‌ಓವರ್ ಸೆನ್ಸರ್ ಮತ್ತು ರಿಯರ್ ಆಕ್ಯುಪೆಂಟ್ ಅಲರ್ಟ್ ಸೇರಿದಂತೆ ದೃಢವಾದ 24 ಸ್ಟ್ಯಾಂಡರ್ಡ್ ಸುರಕ್ಷತಾ ಪ್ಯಾಕ್ ಅನ್ನು ಒಳಗೊಂಡಿದೆ.


Click it and Unblock the Notifications








