Honda: ಪವರ್‌ಫುಲ್ ಹೋಂಡಾ ಕಾರು ಬಿಡುಗಡೆ: 18.4 ಕಿ.ಮೀ ಮೈಲೇಜ್: ಬೆಲೆಯೆಷ್ಟು?
ಪ್ರಮುಖ ಕಾರು ತಯಾರಕರಾದ ಹೋಂಡಾ, ಇಂದು ಹೊಸ ಸಿಟಿ ಸ್ಪೋರ್ಟ್ ಎಡಿಷನ್ ಅನ್ನು ಬಿಡುಗಡೆ ಮಾಡಿದೆ. ಇದು ತನ್ನ ಜನಪ್ರಿಯ ಮಧ್ಯಮ ಗಾತ್ರದ ಸೆಡಾನ್ ಹೋಂಡಾ ಸಿಟಿಗೆ ಹೊಸ ಸ್ಪೋರ್ಟಿ ಲುಕ್ ಅನ್ನು ತಂದಿದೆ. ಯುವ ಖರೀದಿದಾರರನ್ನು ಆಕರ್ಷಿಸಲು ವಿನ್ಯಾಸಗೊಳಿಸಲಾದ ಸಿಟಿ ಸ್ಪೋರ್ಟ್ ಎಡಿಷನ್, ಬ್ಲಾಕ್ ಅಕ್ಸೆಂಟ್‌ಗಳೊಂದಿಗೆ ಸ್ಪೋರ್ಟಿ ಬಾಹ್ಯ ವಿನ್ಯಾಸ, ರೆಡ್ ಹೈಲೈಟ್‌ಗಳೊಂದಿಗೆ ಪ್ರೀಮಿಯಂ ಇಂಟೀರಿಯರ್ ಪಡೆದುಕೊಂಡಿದೆ. ಜೊತೆಗೆ 'ಲೈಫ್ ಈಸ್ ಎ ಸ್ಪೋರ್ಟ್' ಎಂಬ ಟ್ಯಾಗ್‌ಲೈನ್ ನೀಡುವ ಮೂಲಕ ಹೊಸ ಸಿಟಿ ಕಾರನ್ನು ಸಂಪೂರ್ಣ ಹೊಸ ಯುಗಕ್ಕೆ ಹೊಂದಿಕೊಳ್ಳುವಂತೆ ನಿರ್ಮಿಸಲಾಗಿದೆ ಎಂದು ಕಂಪನಿ ಹೇಳಿದೆ.
ಹೊಸ ಹೋಂಡಾ ಸಿಟಿ ಸ್ಪೋರ್ಟ್ (Honda City Sport) ಕಾರುಗಳು, ಸೀಮಿತ ಸಂಖ್ಯೆಯಲ್ಲಿ ಖರೀದಿಗೆ ಲಭ್ಯವಿರಲಿದ್ದು, CVT (ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್) ನಲ್ಲಿ ರೇಡಿಯಂಟ್ ರೆಡ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್ ಮತ್ತು ಮೆಟಿಯೊರಾಯ್ಡ್ ಗ್ರೇ ಮೆಟಾಲಿಕ್ ಎಂಬ 3 ಬಣ್ಣಗಳ ಆಯ್ಕೆಗಳಲ್ಲಿ ನೀಡಲಾಗುವುದು ಎಂದು ಹೋಂಡಾ ಕಂಪನಿ ತಿಳಿಸಿದೆ.

ಹೋಂಡಾ ಸಿಟಿ ಸ್ಪೋರ್ಟ್ ಮುಖ್ಯಾಂಶಗಳು
ಡೈನಾಮಿಕ್ ಬಾಹ್ಯ ಡಿಸೈನ್ ಹೊಂದಿರುವ ಸಿಟಿ ಸ್ಪೋರ್ಟ್ ಎಡಿಷನ್ ತನ್ನ ಗಮನಾರ್ಹ ಹೊರಭಾಗದಿಂದ ಗಮನ ಸೆಳೆಯುತ್ತದೆ. ಸ್ಪೋರ್ಟಿ ಬ್ಲಾಕ್ ಗ್ರಿಲ್, ಸ್ಪೋರ್ಟಿ ಬ್ಲಾಕ್ ಟ್ರಂಕ್ ಲಿಪ್ ಸ್ಪಾಯ್ಲರ್, ಗ್ಲೋಸಿ ಬ್ಲಾಕ್ ಶಾರ್ಕ್ ಫಿನ್ ಆಂಟೆನಾ ಮತ್ತು ವಿಶೇಷ ಸ್ಪೋರ್ಟ್ ಲೋಗೋವನ್ನು ಹೊಂದಿದೆ. ಹಾಗೆಯೇ ಮಲ್ಟಿ-ಸ್ಪೋಕ್ ಸ್ಪೋರ್ಟಿ ಗ್ರೇ ಅಲಾಯ್ ವೀಲ್‌ಗಳು, ಬ್ಲಾಕ್ ORVM (ಹೊರಭಾಗದ ಹಿಂಭಾಗ-ವೀಕ್ಷಣೆ ಕನ್ನಡಿಗಳು) ಗಳನ್ನು ಅಪ್‌ಡೇಟ್ ಮಾಡಲಾಗಿದೆ.
ಸ್ಪೋರ್ಟಿ ಇಂಟೀರಿಯರ್
ಒಳಾಂಗಣದಲ್ಲಿ ಪ್ರೀಮಿಯಂ ಲೆದರ್ ನೀಡಲಾಗಿದ್ದು, ಇಮ್ಮರ್ಸಿವ್ ಮತ್ತು ಸ್ಪೋರ್ಟಿ ಬ್ಲಾಕ್ ಕ್ಯಾಬಿನ್ ಹೊಂದಿದೆ. ಬ್ಲಾಕ್ ಸೀಟ್‌ಗಳು ಮತ್ತು ಪ್ಲಶ್ ಸಾಫ್ಟ್ ಡೋರ್ ಇನ್ಸರ್ಟ್‌ಗಳು, ಸೀಟ್‌ಗಳ ಮೇಲೆ ರೆಡ್ ಹೊಲಿಗೆ, ಡೋರ್ ಇನ್ಸರ್ಟ್‌ಗಳು ಮತ್ತು ಆಕರ್ಷಕ ಸ್ಟೀರಿಂಗ್ ವೀಲ್, ಡಾರ್ಕ್ ಥೀಮ್ ಬ್ಲಾಕ್ ರೂಫ್ ಹೊಂದಿದೆ.

ಇವಿಷ್ಟೆ ಅಲ್ಲದೆ ಇದರ ಸ್ಪೋರ್ಟಿ ಡಾರ್ಕ್ ರೆಡ್ ಡ್ಯಾಶ್ ಬೋರ್ಡ್ ಕ್ಯಾಬಿನ್ ಅನುಭವವನ್ನು ಮತ್ತೊಂದು ಹಂತಕ್ಕೆ ಕೊಂಡೊಯುತ್ತದೆ. ಹಾಗೆಯೇ 7 - ಕಲರ್ ರಿದಮಿಕ್ ಆಂಬಿಯೆಂಟ್ ನೀಡುವ ಸ್ಪೋರ್ಟಿ ಕ್ಯಾಬಿನ್ ಅನ್ನು ಡಿಸೈನ್ ಮಾಡಲಾಗಿದೆ. ಪವರ್ - ಫುಲ್ ಡ್ರೈವ್‌ನ ಸೌಂದರ್ಯಕ್ಕೆ ಹೊಂದಿಕೆಯಾಗುವಂತೆ ಸಂಕೀರ್ಣವಾಗಿ ಈ ಬೆಳಕನ್ನು ಇರಿಸಲಾಗಿದೆ.
ಹೊಸ ಹೋಂಡಾ ಸಿಟಿ ಸ್ಪೋರ್ಟ್ ಎಡಿಷನ್ ಸಿವಿಟಿ ಮತ್ತು ಪ್ಯಾಡಲ್ ಶಿಫ್ಟ್ ಜೊತೆಗೆ 121PS ಪವರ್, 145NM ಟಾರ್ಕ್ ಮತ್ತು 18.4 ಕಿಮೀ/ಲೀ ಮೈಲೇಜ್ ನೀಡುವ ಹೋಂಡಾದ ಸಂಸ್ಕರಿಸಿದ 1.5L i-VTEC ಪೆಟ್ರೋಲ್ ಎಂಜಿನ್ [E20 ಕಂಪ್ಲೈಂಟ್] ನೀಡಲಾಗಿದೆ. ಸಿಟಿ ಸ್ಪೋರ್ಟ್, ಆಕರ್ಷಕ ಡ್ರೈವ್‌ನೊಂದಿಗೆ ಸಂಪೂರ್ಣವಾಗಿ ಸಮತೋಲನಗೊಳಿಸುವ ಪರ್ಫಾಮೆನ್ಸ್ ನೀಡುತ್ತದೆ.
ಇದು ಸ್ಮಾರ್ಟ್ ಮತ್ತು ಅರ್ಥಗರ್ಭಿತವಾದ ಸುಧಾರಿತ ಸುರಕ್ಷತೆಯನ್ನು ನೀಡುವ ಹೋಂಡಾ ಸೆನ್ಸಿಂಗ್ (ADAS) ನೊಂದಿಗೆ ಬರುತ್ತದೆ. ಒಟ್ಟಾರೆ ಇಷ್ಟೆಲ್ಲಾ ಅಪ್‌ಡೇಟ್‌ಗಳೊಂದಿಗೆ ಸಜ್ಜುಗೊಂಡಿರುವ ಹೊಸ ಹೋಂಡಾ ಸಿಟಿ ಸ್ಪೋರ್ಟ್ ಕಾರು ಭಾರತದಲ್ಲಿ 14,88,900 (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
ಮಾರ್ಕೆಟಿಂಗ್ ಮತ್ತು ಆಂಪ್ಲಿಫಯರ್‌ಗಳ ಉಪಾಧ್ಯಕ್ಷ ಕುನಾಲ್ ಬೆಹ್ಲ್ ಮಾತನಾಡಿ, "ಹೊಸ ಸಿಟಿ ಸ್ಪೋರ್ಟ್ ಅನ್ನು ಉತ್ಸಾಹಭರಿತ ಚಾಲನಾ ಅನುಭವ ಬಯಸುವ ಯುವ ಖರೀದಿದಾರರಿಗಾಗಿ ನಿರ್ಮಿಸಲಾಗಿದೆ. ಇದು ಸ್ಪೋರ್ಟಿ ಬಾಹ್ಯ ಮತ್ತು ಒಳಾಂಗಣದ ಡಿಸೈನ್, ಚಾಲನೆ ಮಾಡಲು ಪವರ್‌ಫುಲ್ ಪರ್ಫಾಮೆನ್ಸ್ ಮಿಶ್ರಣವನ್ನು ಹೊಂದಿದ್ದು, ಆಕರ್ಷಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ ಎಂದರು.


Click it and Unblock the Notifications








