ಸ್ಟೈಲಿಷ್ ಲುಕ್‌ನಲ್ಲಿ ಹೊಸ ಹೋಂಡಾ ಬ್ಲ್ಯಾಕ್ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಇಂಡಿಯಾ ತನ್ನ ಹೋಂಡಾ ಎಲಿವೇಟ್ ಬ್ಲಾಕ್ ಎಡಿಷನ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಹೋಂಡಾ ಎಲಿವೇಟ್ ಬ್ಲಾಕ್ ಎಡಿಷನ್ (Honda Elevate Black Edition) ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.15.51 ಲಕ್ಷವಾಗಿದೆ. ಈ ಹೋಂಡಾ ಎಲಿವೇಟ್ (Honda Elevate) ಮಿಡ್ ಸೈಜ್ ಎಸ್‍ಯುವಿಯು ಬ್ಲ್ಯಾಕ್ ಎಡಿಷನ್ ಮತ್ತು ಸಿಗ್ನೇಚರ್ ಬ್ಲ್ಯಾಕ್ ಎಡಿಷನ್ ಎಂಬ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ.

ಹೊಸ ಕ್ರಿಸ್ಟಲ್ ಬ್ಲ್ಯಾಕ್ ಪೇಂಟ್ ಅನ್ನು ಒಳಗೊಂಡಿರುವ ಎಲಿವೇಟ್ ಬ್ಲ್ಯಾಕ್ ಎಡಿಷನ್ ಬ್ಲ್ಯಾಕ್-ಔಟ್ ಅಲಾಯ್ ವ್ಹೀಲ್ ಗಳು ಮತ್ತು ನಟ್‌ಗಳು, ಗ್ರಿಲ್‌ಗಾಗಿ ಕ್ರೋಮ್ ಅಸ್ಸೆಂಟ್ ಗಳು ಮತ್ತು ಸ್ಕಿಡ್ ಪ್ಲೇಟ್‌ಗಳಿಗೆ ಸಿಲ್ವರ್ ಫಿನಿಶ್, ಕೆಳ ಡೋರ್ ಅಲಂಕರಣ ಮತ್ತು ರೂಫ್ ರೈಲ್‌ಗಳನ್ನು ಪಡೆಯುತ್ತದೆ. ಅದೇ ರೀತಿ, ಹೊಸ ಹೋಂಡಾ ಎಲಿವೇಟ್ ಸಿಗ್ನೇಚರ್ ಬ್ಲ್ಯಾಕ್ ಎಡಿಷನ್ ಆವೃತ್ತಿಯು ಬ್ಲ್ಯಾಕ್ ಫಿನಿಶಿಂಗ್ ಅನ್ನು ಹೊಂದಿದೆ.

Honda Elevate Black Edition

ಹೆಚ್ಚುವರಿಯಾಗಿ, ಬ್ಲಾಕ್ ಮತ್ತು ಸಿಗ್ನೇಚರ್ ಬ್ಲ್ಯಾಕ್ ಆವೃತ್ತಿಯ ಆವೃತ್ತಿಗಳು ಕ್ರಮವಾಗಿ ಟೈಲ್‌ಗೇಟ್‌ನಲ್ಲಿ 'ಬ್ಲ್ಯಾಕ್ ಎಡಿಷನ್' ಲೋಗೋವನ್ನು ಮತ್ತು ಮುಂಭಾಗದ ಫೆಂಡರ್‌ನಲ್ಲಿ 'ಸಿಗ್ನೇಚರ್ ಆವೃತ್ತಿ' ಲೋಗೋವನ್ನು ಹೊಂದಿವೆ. ಈ ಹೋಂಡಾ ಈ ಹೋಂಡಾ ಎಲಿವೇಟ್ ಬ್ಲ್ಯಾಕ್ ಎಡಿಷನ್ ಸರಣಿಯ ಒಳಭಾಗದಲ್ಲಿ ಇದೇ ರೀತಿಯ ಟ್ರೇಟ್ ಮೆಂಟ್ ಅನ್ನು ಪಡೆಯುತ್ತದೆ.

ಇನ್ನು ಡ್ಯಾಶ್‌ಬೋರ್ಡ್, ಲೆಥೆರೆಟ್ ಸೀಟ್‌ಗಳು ಮತ್ತು ಹೊಲಿಗೆ, ಡೋರ್ ಪ್ಯಾಡ್‌ಗಳು, ಆರ್ಮ್‌ರೆಸ್ಟ್ ಮತ್ತು ಬ್ಲ್ಯಾಕ್ ಬಣ್ಣದ ಫಿನಿಶಿಂಗ್ ಅನ್ನು ಹೊಂದಿದೆ. ಇನ್ನು ಸಿಗ್ನೇಚರ್ ಬ್ಲ್ಯಾಕ್ ಎಡಿಷನ್ ಆವೃತ್ತಿಯೊಂದಿಗೆ ನೀಡಲಾಗುವ ಏಳು-ಬಣ್ಣದ ಅಂಬೈಟ್ ಲೈಟ್ ಮಾತ್ರ ಎರಡರ ನಡುವಿನ ಎದ್ದುಕಾಣುವ ವೈಶಿಷ್ಟ್ಯವಾಗಿದೆ. ಟಾಪ್-ಸ್ಪೆಕ್ ZX ರೂಪಾಂತರಗಳನ್ನು ಆಧರಿಸಿ, ಹೊಸ ಎಲಿವೇಟ್ ಸ್ಟ್ಯಾಂಡರ್ಡ್ ಆವೃತ್ತಿಗಳೊಂದಿಗೆ ನೀಡಲಾದ ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ.

Honda Elevate Black Edition

ಈ ಹೋಂಡಾ ಎಲಿವೇಟ್ ಎಸ್‌ಯುವಿಯಲ್ಲಿ 1.5-ಲೀಟರ್, ಡಿಒಹೆಚ್‌ಸಿ, 4-ಸಿಲಿಂಡರ್, ನ್ಯಾಚುರಲ್ ಆಸ್ಪೈರ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇದೇ ಎಂಜಿನ್ 5ನೇ ತಲೆಮಾರಿನ ಹೋಂಡಾ ಸಿಟಿಯಲ್ಲಿ ಲಭ್ಯವಿದೆ. ಹೋಂಡಾ ಎಲಿವೇಟ್ ಎಸ್‍ಯುವಿ ಈ ಎಂಜಿನ್ 6,600rpm ನಲ್ಲಿ 119.4 bhp ಪವರ್ ಮತ್ತು 4,300rpm ನಲ್ಲಿ 145 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ 1.5-ಲೀಟರ್ ಎಂಜಿನ್ ಹೊಂದಿರುವ ಟ್ರಾನ್ಸ್‌ಮಿಷನ್ ಆಯ್ಕೆಗಳು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು ಸಿವಿಟಿ ಗೇರ್‌ಬಾಕ್ಸ್ ಅನ್ನು ಒಳಗೊಂಡಿವೆ. ಈ ಎಸ್‍ಯುವಿಯಲ್ಲಿ ಅನಲಾಗ್ ಸ್ಪೀಡೋದ ಪಕ್ಕದಲ್ಲಿ 7-ಇಂಚಿನ ಡಿಜಿಟಲ್ ಡಿಸ್ಪ್ಲೇ, ಸಿಂಗಲ್ ಪೇನ್ ಸನ್‌ರೂಫ್, ಪ್ಲಶ್ ಸೀಟಿಂಗ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಹೊಂದಿದೆ.

Honda Elevate Black Edition

ಹೋಂಡಾ ಆರ್&ಡಿ ಏಷ್ಯಾ ಪೆಸಿಫಿಕ್, ಥೈಲ್ಯಾಂಡ್ ಅಭಿವೃದ್ಧಿಪಡಿಸಿದೆ. ಈ ಎಸ್‍ಯುವಿಯು ಅತ್ಯಾಧುನಿಕ ಸೌಕರ್ಯ ಮತ್ತು ತಂತ್ರಜ್ಞಾನದ ಜೊತೆಗೆ ಸ್ಥಿತಿ ಮತ್ತು ಹೆಚ್ಚು ವಿಶೇಷವಾದ ಖರೀದಿದಾರರನ್ನು ಆಕರ್ಷಿಸಿಸುವಂತೆ ವಿನ್ಯಾಸಗೊಳಿಸಿದೆ. ಹೊಂಡಾ ಎಲಿವೇಟ್ ಎಸ್‍ಯುವಿಯನ್ನು ಆರು ಏರ್‌ಬ್ಯಾಗ್‌ಗಳು, ಮೂರು-ಪಾಯಿಂಟ್ ELR ಸೀಟ್ ಬೆಲ್ಟ್‌ಗಳು ಮತ್ತು ಸೀಟ್ ಬೆಲ್ಟ್ ರಿಮೈಂಡರ್‌ಗಳು ಸೇರಿದಂತೆ ಎಲ್ಲಾ ಸ್ಟ್ಯಾಂಡರ್ಡ್ ಆಗಿ ಹೆಚ್ಚುವರಿ ಸುರಕ್ಷತಾ ತಂತ್ರಜ್ಞಾನದೊಂದಿಗೆ ಎಸ್‍ಯುವಿಯನ್ನು ನವೀಕರಿಸಲಾಗಿತ್ತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, January 10, 2025, 16:52 [IST]
English summary
New honda elevate black edition launched in india prices details
Read more on honda india new launches
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+