ಎಲೆಕ್ಟ್ರಿಕ್ ರೂಪದಲ್ಲಿ ಅನಾವರಣಗೊಂಡ ಎಸ್‍ಯುವಿಗಳ ರಾಜ ಹ್ಯುಂಡೈ ಕ್ರೆಟಾ: ನಂ.1 ಆಗುತ್ತಾ?
ಹ್ಯುಂಡೈ ಕ್ರೆಟಾ (Hyundai Creta) ಹ್ಯುಂಡೈ ಕಂಪನಿಯ ಭರ್ಜರಿ ಬೇಡಿಕೆಯಿರುವ ಮಾಡೆಲ್ ಆಗಿದೆ. ಹ್ಯುಂಡೈ ತನ್ನ ಈ ಬ್ರಹ್ಮಸ್ತ್ರವನ್ನು ಹೊಸ ಅವತಾರದಲ್ಲಿ ತರಲು ಸಜ್ಜಾಗುತ್ತಿದೆ. ಎಲೆಕ್ತ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದಕ್ಕೆ ಹ್ಯುಂಡೈ ಕಂಪನಿಯು ತನ್ನ ಪ್ರಮುಖ ಮಾಡೆಲ್ ಕ್ರೆಟಾ ಎಸ್‍ಯುವಿಯನ್ನು ಎಲೆಕ್ಟ್ರಿಕ್ ಅವತಾರದಲ್ಲಿ ಬಿಡುಗಡೆಗೊಳಿಸಲು ರೆಡಿಯಾಗಿದೆ. ಇದೀಗ ಹ್ಯುಂಡೈ ಮೋಟಾರ್ ಇಂಡಿಯಾ ಕಂಪನಿಯು ಅಧಿಕೃತವಾಗಿ ಬಹು ನಿರೀಕ್ಷಿತ ಕ್ರೆಟಾ ಎಲೆಕ್ಟ್ರಿಕ್ ಅನ್ನು ಅನಾವರಣಗೊಳಿಸಿದೆ. ಜನವರಿ 17 ರಂದು ದೆಹಲಿಯಲ್ಲಿ ನಡೆಯಲ್ಲಿರುವ ಭಾರತ್ ಎಕ್ಸ್‌ಪೋದಲ್ಲಿ ಈ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಎಸ್‍ಯುವಿಯು ಬಿಡುಗಡೆಯಾಗಲಿದೆ.
ಹ್ಯುಂಡೈ ಇಂಡಿಯಾದ ಬ್ರಾಂಡ್ ರಾಯಭಾರಿಯಾಗಿರುವ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ನಟಿಸಿದ ಆಕರ್ಷಕ ಟಿವಿ ಜಾಹೀರಾತನ್ನು ಬಿಡುಗಡೆಗೊಳಿಸಿದೆ. ಈ ಟಿವಿಸಿ ಕೆಲವು ಪ್ರಮುಖ ವಿವರಗಳನ್ನು ಹೈಲೈಟ್ ಮಾಡಿದೆ. ಈ ಹೊಸ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಎಸ್‍ಯುವಿಯು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪ್ರಾಯೋಗಿಕತೆಗೆ ಹ್ಯುಂಡೈನ ಬದ್ಧತೆಯನ್ನು ಪ್ರದರ್ಶಿಸಿದೆ. ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ (Hyundai Creta Electric) ದೇಶದಲ್ಲಿ ಕಂಪನಿಯ ಮೂರನೇ ಎಲೆಕ್ಟ್ರಿಕ್ ವಾಹನವಾಗಿದೆ.

ಪ್ರಸ್ತುತ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಪ್ರಾಬಲ್ಯ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಗೆ ಸೆಡ್ಡು ಹೊಡೆಯಲು ಹ್ಯುಂಡೈ ಕಂಪನಿಯು ಸಜ್ಜಾಗಿದೆ. ಹ್ಯುಂಡೈ ಕಂಪನಿಯ ಕೋನಾ ಎಲೆಕ್ಟ್ರಿಕ್ ಸ್ಥಗಿತಗೊಂಡ ನಂತರ ಪ್ರಸ್ತುತ Ioniq 5 ಅನ್ನು ತನ್ನ ಏಕೈಕ ಎಲೆಕ್ಟ್ರಿಕ್ ವಾಹನವಾಗಿ ಮಾರಾಟ ಮಾಡುತ್ತಿದೆ. ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಎಸ್‍ಯುವಿಯು ಎಕ್ಸಿಕ್ಯುಟಿವ್, ಸ್ಮಾರ್ಟ್, ಪ್ರೀಮಿಯಂ ಮತ್ತು ಎಕ್ಸಲೆನ್ಸ್ ಎಂಬ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿರುತ್ತದೆ.
ಈ ಹೊಸ ಕ್ರೆಟಾ ಇವಿಯು ಎಂಟು ಮೊನೊಟೋನ್ ಮತ್ತು 3 ಮ್ಯಾಟ್ ಬಣ್ಣಗಳನ್ನು ಒಳಗೊಂಡಂತೆ ಎರಡು ಡ್ಯುಯಲ್-ಟೋನ್ ಬಣ್ಣದ ಆಯ್ಕೆಗಳೊಂದಿಗೆ ಬರುತ್ತದೆ. ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ SUV 2024 ಹ್ಯುಂಡೈ ಕ್ರೆಟಾದಂತೆಯೇ ಬಹುತೇಕ ಅದೇ ವಿನ್ಯಾಸವನ್ನು ಹೊಂದಿದೆ. ಆದರೆ ಕೆಲವು ಸಣ್ಣ ಬದಲಾವಣೆಗಳೊಂದಿಗೆ ಬರುತ್ತದೆ. ಈ ಎಲೆಕ್ಟ್ರಿಕ್ ಎಸ್‍ಯುವಿಯು ಮುಂಭಾಗದಲ್ಲಿ, ಕ್ರೆಟಾ ಎಲೆಕ್ಟ್ರಿಕ್ ಕವರ್ ಫ್ರಂಟ್ ಫೇಸ್ ಮತ್ತು ಸೆಂಟರ್ ಮೌಂಟೆಡ್ ಚಾರ್ಜಿಂಗ್ ಪೋರ್ಟ್‌ನೊಂದಿಗೆ ಬರುತ್ತದೆ.

ಇನ್ನು ಈ ಎಲೆಕ್ಟ್ರಿಕ್ ಎಸ್‍ಯುವಿಯು ಪರಿಷ್ಕೃತ ಮುಂಭಾಗದ ಬಂಪರ್ ಅನ್ನು ಸಹ ಪಡೆಯುತ್ತದೆ. ಇನ್ನು ಈ ಎಲೆಕ್ಟ್ರಿಕ್ ಎಸ್‍ಯುವಿಯು 17 ಇಂಚಿನ ಏರೋ ಅಲಾಯ್ ವ್ಹೀಲ್ ಗಳ ಹೊಸ ಸೆಟ್ ಅನ್ನು ಪಡೆಯುತ್ತದೆ. ಹಿಂಭಾಗದಲ್ಲಿ, ಅದೇ ಟೈಲ್ ಲೈಟ್‌ಗಳನ್ನು ಉಳಿಸಿಕೊಂಡು, ಕ್ರೆಟಾ ಎಲೆಕ್ಟ್ರಿಕ್ ಮರುವಿನ್ಯಾಸಗೊಳಿಸಲಾದ ಬಂಪರ್ ಅನ್ನು ಪಡೆಯುತ್ತದೆ.
ಈ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಎಸ್‍ಯುವಿಯು 51.4 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಈ ಮಾದರಿಯು 473 ಕಿ.ಮೀ ರೇಂಜ್ ಅನ್ನು ನೀಡುತ್ತದೆ ಎಂದು ಹುಂಡೈ ಬಹಿರಂಗಪಡಿಸಿದೆ. ಈ ಇವಿ ಮಾದರಿಯು ಪೂರ್ಣ ಚಾರ್ಜ್‌ನಲ್ಲಿ ಕ್ರೆಟಾ ಎಲೆಕ್ಟ್ರಿಕ್ ಸಾಮಾನ್ಯ ಮೋಡ್‌ನಲ್ಲಿ 392 ಕಿಮೀಗಳನ್ನು ಕ್ರಮಿಸಬಲ್ಲದು ಎಂದು ಟೀಸರ್ ತೋರಿಸುತ್ತದೆ. 42 kWh ಬ್ಯಾಟರಿ ಪ್ಯಾಕ್ ರೂಪಾಂತರವು ARAI ಪ್ರಮಾಣೀಕೃತ ರೇಂಜ್ ಒಂದೇ ಚಾರ್ಜ್‌ನಲ್ಲಿ 390 ಕಿ.ಮೀ ನೀಡುತ್ತದೆ.

ಕ್ರೆಟಾ ಎಲೆಕ್ಟ್ರಿಕ್ ಡಿಸಿ ಚಾರ್ಜಿಂಗ್ ಬಳಸಿಕೊಂಡು 58 ನಿಮಿಷಗಳಲ್ಲಿ ಶೇಕಡಾ 10 ರಿಂದ 80 ರಷ್ಟು ಚಾರ್ಜ್ ಮಾಡಬಹುದು ಎಂದು ಹ್ಯುಂಡೈ ಹೇಳಿಕೊಂಡಿದೆ. ಆದರೆ 11kW ಸ್ಮಾರ್ಟ್ ಕನೆಕ್ಟೆಡ್ ವಾಲ್ ಬಾಕ್ಸ್ ಚಾರ್ಜರ್ ಎಸಿ ಹೋಮ್ ಚಾರ್ಜಿಂಗ್ ಬಳಸಿ 4 ಗಂಟೆಗಳಲ್ಲಿ 10 ರಿಂದ 100 ಪ್ರತಿಶತದವರೆಗೆ ಚಾರ್ಜ್ ಮಾಡಬಹುದಾಗಿದೆ. ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಎಸ್‍ಯುವಿಯು ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ಸ್ ಎಂಬ ಮೂರು ಡ್ರೈವಿಂಗ್ ಮೋಡ್‌ಗಳನ್ನು ಒಳಗೊಂಡಿದೆ
ಕ್ರೆಟಾ ಎಲೆಕ್ಟ್ರಿಕ್ ಎಸ್‍ಯುವಿಯು 7.9 ಸೆಕೆಂಡುಗಳಲ್ಲಿ 100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಸ್ಟ್ಯಾಂಡರ್ಡ್ ಮಾದರಿಯಂತೆಯೇ ಫೀಚರ್ಸ್ ಅನ್ನು ಹೊಂದಿರಲಿದೆ. ಇನ್ಫೋಟೈನ್‌ಮೆಂಟ್ ಮತ್ತು ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಡ್ಯುಯಲ್‌ಸ್ಕ್ರೀನ್ ಸೆಟಪ್ ಅನ್ನು ಒಳಗೊಂಡಿರುವ ಲೆಥೆರೆಟ್ ಡ್ಯಾಶ್‌ಬೋರ್ಡ್ ಮುಂದುವರೆಯುತ್ತದೆ. ಇದು Apple CarPlay ಮತ್ತು Android Auto ಮೂಲಕ ವೈರ್‌ಲೆಸ್ ಸಂಪರ್ಕವನ್ನು ಹೊಂದಿರುತ್ತದೆ.


Click it and Unblock the Notifications








