Auto Expo 2025: ಹೊಸ 'Hyundai Staria' ಭಾರತಕ್ಕೆ ಎಂಟ್ರಿ... ಎರಡು ಕುಟುಂಬಕ್ಕೆ ಆರಾಮ ಪ್ರಯಾಣ!
ದೆಹಲಿಯಲ್ಲಿ ನಡೆಯುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 (Auto Expo 2025) ರಲ್ಲಿ ಮೊದಲ ಬಾರಿಗೆ ಹ್ಯುಂಡೈ ಕಂಪನಿಯು ಹ್ಯುಂಡೈ ಸ್ಟಾರಿಯಾ (Hyundai Staria) ವನ್ನು ಭಾರತದಲ್ಲಿ ಪ್ರದರ್ಶಿಸಲಾಗಿದೆ. ಹ್ಯುಂಡೈ ಕಂಪನಿಯು ಭಾರತದಲ್ಲಿ ಸ್ಟಾರಿಯಾ ಎಂಪಿವಿ ಬಿಡುಗಡೆಯನ್ನು ಇನ್ನೂ ದೃಢಪಡಿಸಿಲ್ಲ, ಒಂದು ವೇಳೆ ಬಿಡುಗಡೆಯಾದಲ್ಲಿ ಇದರ ಬೆಲೆಯು ರೂ.65 ಲಕ್ಷಕ್ಕಿಂತ (ಎಕ್ಸ್ ಶೋರೂಂ) ಹೆಚ್ಚಿರುವ ನಿರೀಕ್ಷೆಯಿದೆ. ಪ್ರೀಮಿಯಂ ಒಳಾಂಗಣ ಸೇರಿದಂತೆ 11 ಮಂದಿ ಪ್ರಯಾಣಿಕರಿಗೆ ಆರಾಮವಾದ ಸ್ಥಳಾವಕಾಶ ಕಲ್ಪಿಸುವ ಈ ಕಾರು, ಭಾರತದಲ್ಲಿ ಕಿಯಾ ಕಾರ್ನಿವಲ್‌ಗೆ ಪರ್ಯಾಯ ಆಯ್ಕೆಯಾಗಲಿದೆ.
ಸ್ಟಾರಿಯಾ ಒಂದು ದೊಡ್ಡ ಎಂಪಿವಿಯಾಗಿದ್ದು, ಇದು ಬಹುತೇಕ ವ್ಯಾನ್ ತರಹದ ಪ್ರೀಮಿಯಂ ವಾಹನವಾಗಿದೆ. ಇದು 2021 ರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ. ಇದು ವಿವಿಧ ಆಸನ ಸಂರಚನೆಗಳನ್ನು ಹೊಂದಿದ್ದು, 11 ಜನರಿಗೆ ಕುಳಿತುಕೊಳ್ಳುವ ನಾಲ್ಕು ಸಾಲುಗಳನ್ನು ಸಹ ಒಳಗೊಂಡಿದೆ. ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾದ ಮಾದರಿಯು ಹೆಚ್ಚು ಪ್ರೀಮಿಯಂ 7-ಸೀಟರ್ ಆವೃತ್ತಿಯಾಗಿದೆ.

ಅಲ್ಲದೇ 9 ಸೀಟರ್ ಕಾನ್ಫಿಗರೇಶನ್ ಗಳಲ್ಲಿಯೂ ನೀಡಲಾಗುತ್ತದೆ. ಇದರಲ್ಲಿ 7-ಸೀಟರ್ ಆವೃತ್ತಿಯು ಎರಡು 'ವಿಶ್ರಾಂತಿ' ಆಸನಗಳನ್ನು ('Relaxation' seats) ಹೊಂದಿರುತ್ತದೆ. ಇದು ವಿದ್ಯುನ್ಮಾನವಾಗಿ ಮಲಗಬಹುದು ಮತ್ತು ಹೆಚ್ಚಿನ ಸರಕು ಸ್ಥಳವನ್ನು ಪಡೆಯಲು ಸೀಟ್ ಮುಂದಕ್ಕೆ ಚಲಿಸುವಂತೆ ಮಾಡಬಹುದು, ಎರಡನೆಯದು ತನ್ನ ಎರಡನೇ ಸಾಲಿನ ಆಸನಗಳಿಗೆ ಸ್ವಿವೆಲ್ ಕಾರ್ಯಕ್ಷಮತೆಯನ್ನು ಪಡೆಯುತ್ತದೆ.
ಇನ್ನು ಇದರ ಡಿಸೈನ್ ವಿಷಯಕ್ಕೆ ಬಂದರೆ ಫ್ಯೂಚರಿಸ್ಟಿಕ್ ವಿನ್ಯಾಸ ಹೊಂದಿರುವ ದೊಡ್ಡ ವಾಹನವು, ಆಕರ್ಷಕ ಎಲ್ಇಡಿ ಡಿಆರ್ಎಲ್ ಸ್ಟ್ರಿಪ್, ಬಂಪರ್‌ನಲ್ಲಿ ದೊಡ್ಡ ಗ್ರಿಲ್, ಪಿಕ್ಸಲೇಟೆಡ್ ಪ್ಯಾಟರ್ನ್ ಹೆಡ್‌ಲೈಟ್‌ಗಳನ್ನು ಹೊಂದಿದೆ. ವಿಂಡೋ ಪ್ಯಾನೆಲ್‌ಗಳು ದೊಡ್ಡದಾಗಿದ್ದು, ಸ್ಲೈಡಿಂಗ್ ಡೋರ್‌ಗಳು, ಹಿಂಭಾಗದಲ್ಲಿ ಲಂಬವಾಗಿ ಜೋಡಿಸಲಾದ ಟೈಲ್ ಲೈಟ್‌ಗಳನ್ನು ಹೊಂದಿದೆ.

ಇಂಟೀರಿಯರ್ ವಿಷಯಕ್ಕೆ ಬಂದರೆ ಡ್ಯಾಶ್ ಬೋರ್ಡ್ ಕನಿಷ್ಠ ಆಕರ್ಷಕ ವಿನ್ಯಾಸದೊಂದಿಗೆ ಹ್ಯುಂಡೈ ಕ್ರೆಟಾದಂತೆಯೇ ಸ್ಟೀರಿಂಗ್ ವೀಲ್ ಹೊಂದಿದೆ. 10.25-ಇಂಚಿನ ಟಚ್ ಸ್ಕ್ರೀನ್ ಸಿಸ್ಟಮ್ ಹಾಗೂ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 64-ಕಲರ್ ಆಂಬಿಯೆಂಟ್ ಲೈಟಿಂಗ್, ಬೋಸ್ ಸೌಂಡ್ ಸಿಸ್ಟಮ್ ಫೀಚರ್‌ಗಳನ್ನು ಹೊಂದಿದೆ. ಸುರಕ್ಷತೆಗಾಗಿ 7 ಏರ್ ಬ್ಯಾಗ್‌ಗಳು, ರಿವರ್ಸಿಂಗ್ ಕ್ಯಾಮೆರಾ, ಬಹು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಒಳಗೊಂಡಿದೆ.
ಎಂಜಿನ್ ಮತ್ತು ಟ್ರಾನ್ಸ್ ಮಿಷನ್: ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. ಆದರೆ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ವಾಹನವು 3.5-ಲೀಟರ್ ವಿ6 ಎಂಜಿನ್ 272 ಬಿಹೆಚ್ ಪವರ್ ಮತ್ತು 331 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೀಡಲಾಗಿದ್ದು, ಫ್ರಂಟ್ ವೀಲ್ ಡ್ರೈವ್ ಹೊಂದಿದೆ.

ಇಂಟೀರಿಯರ್‌ನಲ್ಲಿ ಫ್ಯಾನಲ್‌ನಲ್ಲಿ ಸಾಕಷ್ಟು ಫಿಸಿಕಲ್ ಬಟನ್‌ಗಳನ್ನು ನೀಡಲಾಗಿದ್ದು, ಫ್ರೀ-ಸ್ಟ್ಯಾಂಡಿಂಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 4-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ಫ್ಲಾಟ್ ಫ್ಲೋರ್ ಸಹ ಇದೆ. ಈ ಮೂಲಕ ಕ್ಯಾಬಿನ್ ಒಳಗೆ ಆರಾಮ ಸಂಚಾರಕ್ಕೆ ಸಹಾಯ ಮಾಡುತ್ತದೆ. ಒಟ್ಟಾರೆ ವಾಹನದಲ್ಲಿ ಆಕರ್ಷಕ ಪ್ರೀಮಿಯಂ ಡಿಸೈನ್ ಎಂತವರನ್ನು ಸೆಳೆಯುವಂತಿದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








